ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ಸಂಭೋಗ ಸೇರಿ 16 ಷರಿಯಾ ಕಾನೂನುಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

By Suvarna NewsFirst Published Feb 10, 2024, 1:26 PM IST
Highlights

ಲೈಂಗಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ನಡುವೆ ಸಂಭೋಗ ಸೇರಿದಂತೆ ಕೆಲಾಂಟನ್ ರಾಜ್ಯದ 16 ಷರಿಯಾ ಕಾನೂನುಗಳನ್ನು  ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

 ಲೈಂಗಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ನಡುವೆ ಸಂಭೋಗ ಸೇರಿದಂತೆ ಕೆಲಾಂಟನ್ ರಾಜ್ಯದ 16 ಷರಿಯಾ ಕಾನೂನುಗಳನ್ನು ಮಲೇಷ್ಯಾ ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ಮುಸ್ಲಿಂ ಬಹುಸಂಖ್ಯಾತ ದೇಶದ ಇತರ ಭಾಗಗಳಲ್ಲಿ ಇದೇ ರೀತಿಯ ಷರಿಯಾ ಕಾನೂನುಗಳ ಮೇಲೆ ಪರಿಣಾಮ ಬೀರುವ ಮಹತ್ವದ ನಿರ್ಧಾರದಲ್ಲಿ ಮಲೇಷ್ಯಾದ ಸರ್ಮೋಚ್ಚ ನ್ಯಾಯಾಲಯವು ಕೆಲಾಂಟನ್ ರಾಜ್ಯವು ಜಾರಿಗೊಳಿಸಿದ ಒಂದು ಡಜನ್‌ಗಿಂತಲೂ ಹೆಚ್ಚು ಕ್ರಿಮಿನಲ್‌ ಇಸ್ಲಾಮಿಕ್ ಕಾನೂನುಗಳು ಅಸಂವಿಧಾನಿಕ ಎಂದು  ಹೇಳಿದೆ.

ರಕ್ತಸಂಬಂಧಿಗಳ ನಡುವಿನ ಸಂಭೋಗ, ಸಹಜವಲ್ಲದ ಲೈಂಗಿಕ ಕ್ರಿಯೆಗಳು, ವಿಭಿನ್ನ ಲಿಂಗದವರಿಗೆ ಸಂಬಂಧಿಸಿದ ಬಟ್ಟೆಗಳನ್ನು ಧರಿಸುವುದು (ಕ್ರಾಸ್-ಡ್ರೆಸ್ಸಿಂಗ್), ಧಾರ್ಮಿಕ ಪೂಜಾ ಸ್ಥಳಗಳನ್ನು ಅಪವಿತ್ರ ಅಥವಾ ವಿನಾಶ ಮಾಡುವುದು. ಹೀಗೆ ಹಲವಾರು ಅಪರಾಧಗಳ ಕುರಿತ ಶಿಕ್ಷೆಗಳ ಷರಿಯಾ ಕಾನೂನುಗಳನ್ನು ಮಲೇಷ್ಯಾ ಕೋರ್ಟ್ ಸಂವಿಧಾನಿಕವಾದುದಲ್ಲ ಎಂದು ರದ್ದು ಮಾಡಿದೆ.

ಬರೋಬ್ಬರಿ ಒಂಬತ್ತು ನ್ಯಾಯಮೂರ್ತಿಗಳನ್ನೊಳಗಂಡ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿತು. ಲೈಂಗಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ನಡುವೆ ಸಂಭೋಗ ನಡೆಸುವವರಿಗೆ ಸೇರಿದಂತೆ ಹಲವು ವಿಚಾರಗಳಲ್ಲಿ ಶಿಕ್ಷೆ ವಿಧಿಸಲು ಷರಿಯಾ ಕಾನೂನು ರೂಪಿಸಿದ್ದ ಒಟ್ಟು 16 ಕಾನೂನುಗಳನ್ನು ಕೋರ್ಟ್ ರದ್ದು ಮಾಡಿದೆ.

ಶೇ 97ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಮಲೇಷ್ಯಾದ ಕೆಲಾಂಟನ್ನದ ಇಬ್ಬರು ಮುಸ್ಲಿಂ ಮಹಿಳೆಯರು 2020ರಲ್ಲಿ ಷರಿಯಾ ಕಾನೂನುಗಳನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಸಂಪ್ರದಾಯವಾದಿ ಪ್ಯಾನ್-ಮಲೇಶಿಯನ್ ಇಸ್ಲಾಮಿಕ್ ಪಾರ್ಟಿ ಈ ರಾಜ್ಯವನ್ನು ಆಳುತ್ತಿದೆ. ಮಲೇಷ್ಯಾವು ಎರಡು ರೀತಿಯ ಕಾನೂನು ವ್ಯವಸ್ಥೆಗಳನ್ನು ಹೊಂದಿದೆ. ಒಂದು ಷರಿಯಾ ನಾಗರಿಕ ಕಾನೂನು ಇದು ಮುಸ್ಲಿಮರ ವೈಯಕ್ತಿಕ ಮತ್ತು ಕೌಟುಂಬಿಕ ವಿಷಯಗಳ ಮೇಲೆ ನಿಂತಿದೆ. ಎರಡನೆಯದು  ಸರ್ಕಾರಿ ಕಾನೂನುಗಳು ಮತ್ತು ಶರಿಯಾ ಕಾನೂನು. ಇದು ಇಸ್ಲಾಮಿಕ್ ಕಾನೂನು ಕುರಾನ್ ಮತ್ತು ಹದೀಸ್ ಎಂದು ಕರೆಯಲ್ಪಡುವ ಗ್ರಂಥದ ಮೇಲೆ ನಿಂತಿದೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ  ಮುಕ್ಕಾಲು ಭಾಗದಷ್ಟಿರುವ ಮಲೆಯಾ ಜನಾಂಗದವರಿಗೆ ಪ್ರತ್ಯೇಕ ಕಾನೂನು ಇದೆ. ಇಲ್ಲಿ ಚೀನಾ ಮತ್ತು ಭಾರತೀಯ ಮೂಲದವರು ಅಲ್ಪಸಂಖ್ಯಾತರಾಗಿದ್ದು, ಇವರಿಗೆ ಬೇರೆಯೇ ಕಾನೂನು ರೂಪಿಸಲಾಗಿದೆ ಎಂದು ಹೇಳಲಾಗುತ್ತೆ. 

ಇನ್ನು ಮಲೇಷ್ಯಾ ಸುಪ್ರೀಂ ಕೋರ್ಟ್ ನೀಡಿರುವ ಈ ಮಹತ್ವದ ತೀರ್ಪನ್ನು ಮೂಲಭೂತವಾದಿಗಳು ವಿರೋಧಿಸಿದ್ದಾರೆ. ಈ ತೀರ್ಪು ದೇಶಲ್ಲಿರುವ ಧಾರ್ಮಿಕ ನ್ಯಾಯಾಲಯಗಳನ್ನು ದುರ್ಬಲಗೊಳಿಸಲಿದೆ.  ಕೋರ್ಟ್ ತೀರ್ಪಿನಿಂದಾಗಿ ಬೇಸರವಾಗಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ.

click me!