Covid-19 Variant: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ!

By Kannadaprabha News  |  First Published Nov 29, 2021, 8:40 AM IST

*ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಮತ್ತಷ್ಟು ಕಠಿಣ ತಪಾಸಣೆ
*14 ದಿನಗಳ ಪ್ರವಾಹ ಇತಿಹಾಸ, ನೆಗೆಟಿವ್‌ ವರದಿ ಕಡ್ಡಾಯ
*ವಿಮಾನ ಸಂಚಾರ ಪುನಾರಂಭವೂ ಮುಂದೂಡಿಕೆ ಸಾಧ್ಯತೆ


ನವದೆಹಲಿ(ನ.29): ಹೊಸ ರೂಪಾಂತರಿ ಕೊರೋನಾ ವೈರಸ್‌ ಪತ್ತೆ (Covid New Variant) ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ (International Travel) ವಿಧಿಸಲಾಗಿದ್ದ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿ ಕೇಂದ್ರ ಸರ್ಕಾರ (Union Health Ministry) ನಿರ್ಧಾರ ಕೈಗೊಂಡಿದೆ. ಪರಿಷ್ಕೃತ ಮಾರ್ಗ ಸೂಚಿ ಡಿ.1ರಿಂದಲೇ ಜಾರಿಗೆ ಬರಲಿದೆ. ಇದೇ ವೇಳೆ ಹೊಸ ವೈರಸ್‌ ಪತ್ತೆ ಹಿನ್ನೆಲೆಯಲ್ಲಿ ಡಿ.15ರಿಂದ ಪುನಾರಂಭಿಸಲು ನಿರ್ಧರಿಸಲಾಗಿದ್ದ ಅಂತಾರಾಷ್ಟ್ರೀಯ ವಿಮಾನಗಳ ಸೇವೆಗಳು ಕೂಡಾ ರದ್ದಾಗುವ ಸಾಧ್ಯತೆ ಇದೆ. ಈ ವಿಷಯವನ್ನು ಮರು ಪರಿಶೀಲಿಸಲಾಗುವುದು ಎಂದು ಸರ್ಕಾರ ಭಾನುವಾರ ಮಾಹಿತಿ ನೀಡಿದೆ.

"

Latest Videos

undefined

*14 ದಿನಗಳ ಪ್ರವಾಸ ಇತಿಹಾಸದ ಪೂರ್ಣ ಮಾಹಿತಿ ನೀಡಬೇಕು

*72 ಗಂಟೆಗಳ ಮೊದಲ ಕೋವಿಡ್‌ ನೆಗೆಟಿವ್‌ ವರದಿ ಸಲ್ಲಿಸಬೇಕು

*ಮಾಹಿತಿ ಖಚಿತ ಎಂದು ಪ್ರಯಾಣಿಕರು ಸ್ವಯಂ ಧೃಢೀಕರಿಸಬೇಕು

*12 ಅಪಾಯಕಾರಿ ದೇಶಗಳ ಪ್ರಯಾಣಿಕರಿಗೆ ಇನ್ನಷ್ಟುಕಠಿಣ ನಿಯಮ

*ಭಾರತಕ್ಕೆ ಆಗಮನಕ್ಕೆ ಮೊದಲು, ಬಂದ ಬಳಿಕ ಪರೀಕ್ಷೆಗೆ ಒಳಪಡಬೇಕು

*ಪರೀಕ್ಷೆ ವರದಿ ಬರುವವರೆಗೂ ಏರ್‌ಪೋರ್ಟ್‌ನಿಂದ ತೆರಳುವಂತಿಲ್ಲ

*ನೆಗೆಟಿವ್‌ ಬಂದರೂ 7 ದಿನ ಹೋಮ್‌ ಕ್ವಾರಂಟೈನ್‌ ಮಾಡಬೇಕು

*8ನೇ ದಿನ ಮತ್ತೆ ಪರೀಕ್ಷೆ ನಡೆಸಿ ಮತ್ತೆ 7 ದಿನ ಸ್ವಯಂ ಕಣ್ಗಾವಲು ಇಡಬೇಕು

ರಾಜ್ಯಗಳಿಗೆ ಕೇಂದ್ರದಿಂದ ಮತ್ತಷ್ಟು ಮಾರ್ಗಸೂಚಿ ಪ್ರಕಟ

ಜಾಗತಿಕ ತಲ್ಲಣ ಮೂಡಿಸಿರುವ ‘ಒಮಿಕ್ರೋನ್‌’ ರೂಪಾಂತರಿ (Omicron Varient) ತಳಿಯು ಭಾರತಕ್ಕೂ ವ್ಯಾಪಿಸುವ ಭೀತಿಯಿದೆ. ಹೀಗಾಗಿ ಈ ವೈರಸ್‌ ನಿಯಂತ್ರಣಕ್ಕೆ ರಾಜ್ಯಗಳು ಪಾಲಿಸಲೇಬೇಕಿರುವ ಮತ್ತಷ್ಟು ಮಾರ್ಗಸೂಚಿಗಳನ್ನು (Guidlines) ಕೇಂದ್ರ ಸರ್ಕಾರ ಭಾನುವಾರ ಬಿಡುಗಡೆ ಮಾಡಿದೆ. ಈ ಪ್ರಕಾರ ಕೋವಿಡ್‌ ಹಾಟ್‌ಸ್ಪಾಟ್‌ಗಳನ್ನು ತ್ವರಿತವಾಗಿ ಗುರುತಿಸಬೇಕು. ಕಂಟೇನ್ಮೆಂಟ್‌ ಬಗ್ಗೆ ಹೆಚ್ಚಿನ ನಿಗಾ ಇಡಬೇಕು. ಕೋವಿಡ್‌ ತಪಾಸಣೆ (Covid Testing)ಮತ್ತು ಪರಿಶೀಲನೆಯನ್ನು ತೀವ್ರಗೊಳಿಸಬೇಕು. ಅಲ್ಲದೆ ಲಸಿಕಾಕರಣದ ಅಭಿಯಾನಕ್ಕೆ (Vaccination Campaign) ಮತ್ತಷ್ಟು ಚುರುಕು ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

Covid Crisis: ರಾಷ್ಟ್ರಪತಿ ಕೋವಿಂದ್ VVIP ಡ್ಯೂಟಿ ಮಾಡುತ್ತಿದ್ದ 19 ಪೊಲೀಸರಿಗೆ ಕೊರೋನಾ, ಭಾರೀ ಆತಂಕ!

ಅಲ್ಲದೆ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು, ಕೋವಿಡ್‌ (Coronavirus) ದೃಢಪಟ್ಟ ಮಾದರಿಗಳನ್ನು ‘ಜಿನೊಮ್‌ ಸೀಕ್ವೆನ್ಸಿಂಗ್‌’ಗಾಗಿ ಐಎನ್‌ಎಸ್‌ಎಸಿಒಜಿ ಸಂಸ್ಥೆಗೆ ಕಳುಹಿಸಿಕೊಡಬೇಕು. ಜತೆಗೆ ಮುಖಕ್ಕೆ ಮಾಸ್ಕ್‌, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್‌ ಸೇರಿದಂತೆ ಇನ್ನಿತರ ಕೋವಿಡ್‌ ನಿಯಂತ್ರಣದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಒತ್ತಿ ಹೇಳಿದರು.

ಚಿಕಿತ್ಸೆಯಲ್ಲಿ ರಾಜಿ ಬೇಡ:

ತರಬೇತಿ ಹೊಂದಿದ ಮಾನವ ಸಂಪನ್ಮೂಲ, ಮೂಲಭೂತ ಸೌಕರ್ಯಗಳು, ಕೋವಿಡ್‌ ಲಸಿಕೆ ಮತ್ತು ಔಷಧಗಳ ಸಾಗಣೆಯನ್ನು ಹೆಚ್ಚಿಸಿ ಸೋಂಕಿತರ ಶೀಘ್ರ ಗುಣಮುಖಕ್ಕೆ ರಾಜ್ಯಗಳು ಕ್ರಮ ಕೈಗೊಳ್ಳಬೇಕು. ರೋಗಿಗಳಿಗೆ ಉತ್ತಮ ಗುಣಮಟ್ಟದ ಮತ್ತು ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ತಿಳಿಸಲಾಗಿದೆ.

ಪರೀಕ್ಷೆ ಹೆಚ್ಚಿಸಲೇಬೇಕು:

ಬೋಟ್ಸ್‌ವಾನಾ ವೈರಸ್‌ ಕಂಡುಬಂದಿರುವ ದಕ್ಷಿಣ ಆಫ್ರಿಕಾದ ದೇಶಗಳನ್ನು ಈಗಾಗಲೇ ರಿಸ್ಕ್‌ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. ಹೀಗಾಗಿ ರಿಸ್ಕ್‌ ರಾಷ್ಟ್ರಗಳ ಪಟ್ಟಿಯಲ್ಲಿರುವ ದೇಶಗಳು ಸೇರಿದಂತೆ ಇನ್ನಿತರ ಯಾವುದೇ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಅವರ ಕೋವಿಡ್‌ ಪರೀಕ್ಷಾ ವರದಿಯ ಹೆಚ್ಚಿನ ಪರಿಶೀಲನೆಗಾಗಿ ಐಎನ್‌ಎಸ್‌ಎಸಿಒಜಿ ಪ್ರಯೋಗಾಲಯಗಳಿಗೆ ರವಾನಿಸಬೇಕು. ಕೆಲವು ರಾಜ್ಯಗಳಲ್ಲಿ ಈಗಾಗಲೇ ಆರ್‌ಟಿಪಿಸಿಆರ್‌ ಮತ್ತು ಇತರೆ ಕೋವಿಡ್‌ ಪರೀಕ್ಷೆ ಕುಸಿತವಾಗಿರುವುದು ಗಮನಕ್ಕೆ ಬಂದಿದೆ. ಆದರೆ ಅಗತ್ಯವಿರುವಷ್ಟುಪರೀಕ್ಷೆ ನಡೆಯದಿದ್ದರೆ, ವೈರಸ್‌ ಹರಡುವಿಕೆ ಪ್ರಮಾಣ ಎಷ್ಟಿದೆ ಎಂಬ ನಿಖರ ಮಾಹಿತಿ ಲಭ್ಯವಾಗದು. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳು ಕೋವಿಡ್‌ ಪರೀಕ್ಷಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸೂಚಿಸಲಾಗಿದೆ.

click me!