
ಕ್ಯಾನ್‌ಬೆರಾ(ನ.29): ನೀವು ಎಂದಾದರೂ ರೆಸ್ಟೋರೆಂಟ್‌ನಿಂದ (Restaurant) ಆಹಾರವನ್ನು ಆರ್ಡರ್ (Food Order) ಮಾಡಿದ್ದೀರಾ? ಅದರಲ್ಲೂ ಕ್ಷಮಿಸಿ ಎಂಬ ನೋಟ್ ಜೊತೆ ಆಹಾರ ಆರ್ಡರ್ ಮಾಡಿದ್ದೀರಾ? ಅರೇ ಇದೇನಿದು ವಿಚಿತ್ರ? ಎಂದೆನಿಸಬಹುದು.. ಆದರೆ ಇಂತಹುದ್ದೊಂದು ಘಟನೆ ವಾಸ್ತವವಾಗಿ ಸಂಭವಿಸಿದೆ. ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಿದ ನಂತರ ವ್ಯಕ್ತಿಯೊಬ್ಬರು ಕ್ಷಮಿಸಿ ಎಂಬ ಟಿಪ್ಪಣಿಯನ್ನು ಕಳುಹಿಸಿದ್ದಾರೆ. ವಾಸ್ತವವಾಗಿ, ಈ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತು ಅವನು ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡುವುದು ಕೂಡಾ ಬಹಳ ತಡವಾಗಿತ್ತು, ವಾಸ್ತವವಾಗಿ ರೆಸ್ಟೋರೆಂಟ್ ಮುಚ್ಚುವ ಸಮಯವಾಗಿತ್ತು. ಹೀಗಿರುವಾಗ ರಾತ್ರಿ ವೇಳೆ ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡುವವರಿಗೆ ಆಹಾರ ತಯಾರಿಸಿ ವಿತರಿಸಲು ಯಾವುದೇ ತೊಂದರೆಯಾಗುತ್ತದೆ ಎಂದು ಮುಂಚಿತವಾಗೇ ವ್ಯಕ್ತಿಯೊಬ್ಬರು ಕ್ಷಮೆಯಾಚಿಸಿ ಪತ್ರ ಬರೆದಿದ್ದಾರೆ. ಹೀಗಿರುವಾಗ ವ್ಯಕ್ತಿ ಬರೆದ ಈ Sorry ನೋಟ್ ಹಾಗೂ ರೆಸ್ಟೋರೆಂಟ್ ಕೊಟ್ಟ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಗ್ರಾಹಕ ತಮ್ಮ ಟಿಪ್ಪಣಿಯಲ್ಲಿ ರೆಸ್ಟೋರೆಂಟ್ ಸಿಬ್ಬಂದಿಗೆ, ನಾನು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನನ್ನ ಕಣ್ಣುಗಳು ಈಗಷ್ಟೇ ತೆರೆದವು ಮತ್ತು ನಾನು ಹಸಿದಿದ್ದರಿಂದ ನಾನು ಆಹಾರವನ್ನು ಆರ್ಡರ್ ಮಾಡಿದೆ. ಸಮಯ ಕಳೆದಿದೆ ಎಂದು ನನಗೆ ತಿಳಿದಿದೆ. ಈ ಆರ್ಡರ್ ಅನ್ನು ಪೂರ್ಣಗೊಳಿಸಲು ನಿಮಗೆ ಯಾವುದೇ ಸಮಸ್ಯೆ ಇದ್ದರೆ, ನೀವು ಅದನ್ನು ರದ್ದುಗೊಳಿಸಬಹುದು ಎಂಬ ನೋಟ್ ಕಳುಹಿಸಿದ್ದಾರೆ.
ವ್ಯಕ್ತಿಯ ಈ ಟಿಪ್ಪಣಿಯನ್ನು ಓದಿದ ನಂತರ, ರೆಸ್ಟೋರೆಂಟ್ ಅವನಿಗೆ ಆಹಾರವನ್ನು ಕಳುಹಿಸಿದ್ದಲ್ಲದೆ, ಉಚಿತ ಗಾರ್ಲಿಕ್ ಬ್ರೆಡ್ ಅನ್ನು ಸಹ ನೀಡಿದೆ. ವ್ಯಕ್ತಿಯ ಸಂದೇಶಕ್ಕೆ ಉತ್ತರಿಸಿದ ರೆಸ್ಟೋರೆಂಟ್, 'ಇಂತಹ ಟಿಪ್ಪಣಿಗೆ ಧನ್ಯವಾದಗಳು, ತಡವಾಗಿ ಆರ್ಡರ್ ಮಾಡಿದ್ದಕ್ಕೆ ಬೇಸರಗೊಳ್ಳದಿರಿ, ನಮಗೆ ಈ ಬಗ್ಗೆ ಯೌವುದೇ ಅಭ್ಯಂತರವಿಲ್ಲ. ನಿಮ್ಮ ಆರೋಗ್ಯ ಮತ್ತಷ್ಟು ಸುಧಾರಿಸಲು ಸಹಾಯ ಮಾಡಲು ಉಚಿತ ಬೆಳ್ಳುಳ್ಳಿ ಬ್ರೆಡ್ ಇಲ್ಲಿದೆ. ನಿಮ್ಮಂತಹ ಸಂದೇಶಗಳು ನಿಜವಾಗಿಯೂ ನನ್ನ/ನಮ್ಮ ದಿನವನ್ನು ಉತ್ತಮಗೊಳಿಸುತ್ತವೆ. ಧನ್ಯವಾದಗಳು.' ಎಂದು ಸಿಹಿಯುತ್ತರ ಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ