Omicron Variant: ಮತ್ತಷ್ಟು ದೇಶಗಳಿಗ ವ್ಯಾಪಿಸಿದ ಒಮಿಕ್ರೋನ್‌: ಆಸ್ಪ್ರೇಲಿಯಾ, ನೆದರ್‌ಲೆಂಡ್‌ನಲ್ಲಿ ಪತ್ತೆ!

By Kannadaprabha News  |  First Published Nov 29, 2021, 8:20 AM IST

*ಆಸ್ಪ್ರೇಲಿಯಾ, ನೆದರ್‌ಲೆಂಡ್‌ನಲ್ಲಿ ಪತ್ತೆ
*ಅಮೆರಿಕ, ರಷ್ಯಾಗೂ ವ್ಯಾಪಿಸಿದ ಶಂಕೆ
*ಆಫ್ರಿಕಾ ದೇಶಗಳ ವಿಮಾನ ಸಂಚಾರ ನಿರ್ಬಂಧ


ನವದೆಹಲಿ(ನ.29): ಜಗತ್ತಿನ ನಿದ್ದೆಗೆಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ ‘ಒಮಿಕ್ರೋನ್‌’ (Omicron) ತಣ್ಣಗೆ ಇನ್ನಷ್ಟುದೇಶಗಳಿವೆ ವ್ಯಾಪಿಸಿರುವುದು ಖಚಿತಪಟ್ಟಿದೆ. ಹೀಗಾಗಿ ಡೆಲ್ಟಾಗಿಂತಾ (Delta) ವೇಗಿ, ಲಸಿಕೆಯ ಕುಣಿಕೆಯನ್ನೂ ತಪ್ಪಿಸಬಲ್ಲದು ಎಂಬ ಕುಖ್ಯಾತಿ ಹೊಂದಿರುವ ಈ ವೈರಸ್‌ ಜಗತ್ತಿನ ಕಣ್ಣಿಗೆ ಮತ್ತಷ್ಟುಭಯಂಕರವಾಗಿ ಕಾಣಿಸಿಕೊಂಡಿದೆ. ಭಾನುವಾರ ಆಸ್ಪ್ರೇಲಿಯಾ (Australia) ಮತ್ತು ನೆದರ್‌ಲೆಂಡ್‌ (Netherlands) ದೇಶಗಳು, ತಮ್ಮ ದೇಶದಲ್ಲೂ ಒಮಿಕ್ರೋನ್‌ ವೈರಸ್‌ ಪತ್ತೆಯಾಗಿದೆ ಎಂದು ಘೋಷಿಸಿಕೊಂಡಿವೆ. ಆಸ್ಪ್ರೇಲಿಯಾದಲ್ಲಿ 2 ಮತ್ತು ನೆದರ್‌ಲೆಂಡ್‌ನಲ್ಲಿ 13 ಪ್ರಕರಣಗ ಖಚಿತಪಟ್ಟಿವೆ. ಹೀಗಾಗಿ ವೈರಸ್‌ ಪ್ರವೇಶ ಖಚಿಪಟ್ಟದೇಶಗಳ ಸಂಖ್ಯೆ 11ಕ್ಕೆ ಏರಿದೆ.

ಈ ನಡುವೆ ಅಮೆರಿಕ ಖ್ಯಾತ ಸಾಂಕ್ರಾಮಿ ರೋಗ ತಜ್ಞ ಡಾ. ಆ್ಯಂಥೋನಿ ಫೌಸಿ, ಅಮೆರಿಕದಲ್ಲಿ ಇದುವರೆಗೆ ಹೊಸ ವೈರಸ್‌ ಪತ್ತೆಯಾಗದೇ ಇರಬಹುದು. ಆದರೆ ಅದು ಈಗಾಗಲೇ ದೇಶವನ್ನು ಪ್ರವೇಶಿರುವ ಎಲ್ಲಾ ಸಾಧ್ಯತೆಗಳಿವೆ ಎಂದಿದ್ದಾರೆ. ಮತ್ತೊಂದೆಡೆ ರಷ್ಯಾದ ಸಚಿವರೊಬ್ಬರು ಕೂಡಾ, ಈಗಾಗಲೇ ಹೊಸ ವೈರಸ್‌ ತಮ್ಮ ದೇಶ ಪ್ರವೇಶ ಮಾಡಿರುವುದು ಖಚಿತ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಹೊಸ ಹೊಸ ವೈರಸ್‌ ದಿನೇ ದಿನೇ ಮತ್ತಷ್ಟುದೇಶಗಳಿಗೆ ಹಬ್ಬಿರುವುದು ಖಚಿತಪಡುತ್ತಲೇ, ವಿಶ್ವದ ಹಲವು ದೇಶಗಳು ಆಫ್ರಿಕಾ ದೇಶಗಳ ಮೇಲೆ ವಿಮಾನ ಮತ್ತು ಜನರ ಸಂಚಾರದ ಮೇಲೆ ನಿಷೇಧ ಹೇರಿವೆ. ಜೊತೆಗೆ ಇತರೆ ದೇಶಗಳ ಪ್ರಯಾಣಿಕರ ಮೇಲೂ ನಿರ್ಬಂಧಗಳನ್ನು ಕಠಿಣಗೊಳಿಸಿವೆ.

Tap to resize

Latest Videos

ಪ್ರಯಾಣ ನಿಷೇಧ ತೆರವುಗೊಳಿಸಿದರೆ ಚೀನಾದಲ್ಲಿ ನಿತ್ಯ 6.3 ಲಕ್ಷ ಕೇಸ್‌!

ಕಠಿಣ ಪ್ರಯಾಣ ನಿರ್ಬಂಧಗಳು ಜಾರಿಯಲ್ಲಿರುವ ಚೀನಾದಲ್ಲಿ (China) ಅಮೆರಿಕದಂತೆ ನಿರ್ಬಂಧಗಳನ್ನು ತೆರವುಗೊಳಿಸಿದರೆ ನಿತ್ಯ 6.3 ಲಕ್ಷ ಕೋವಿಡ್‌ ಕೇಸ್‌ಗಳು ವರದಿಯಾಗಲಿವೆ ಎಂದು ಪೀಕಿಂಗ್‌ ವಿಶ್ವವಿದ್ಯಾಲಯದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಚೀನಾದಲ್ಲಿ ಭಾನುವಾರ 23 ಕೋವಿಡ್‌ ಕೇಸುಗಳು ಪತ್ತೆಯಾಗಿವೆ. ಅವುಗಳಲ್ಲಿ 20 ಕೇಸುಗಳು ಹೊರದೇಶದಿಂದ ಬಂದವರದು. ಇದರ ನಡುವೆ, ಪೀಕಿಂಗ್‌ ವಿಶ್ವವಿದ್ಯಾಲಯದ ತಜ್ಞರು ಆಫ್ರಿಕಾ ಮುಂತಾದ ದೇಶಗಳಲ್ಲಿ ಹರಡುತ್ತಿರುವ ಒಮಿಕ್ರೋನ್‌ ತಳಿಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನವೊಂದನ್ನು ನಡೆಸಿ, ಅದರ ವರದಿ ಬಿಡುಗಡೆ ಮಾಡಿದ್ದಾರೆ. ಆ ವರದಿಯ ಪ್ರಕಾರ ಚೀನಾದಲ್ಲಿ ಅಮೆರಿಕದಂತೆ ನಿರ್ಬಂಧಗಳನ್ನು ತೆರವುಗೊಳಿಸಿದರೆ ನಿತ್ಯ 6.3 ಲಕ್ಷ ಕೇಸ್‌ಗಳು, ಬ್ರಿಟನ್‌ನಂತೆ ನಿರ್ಬಂಧ ತೆರವುಗೊಳಿಸಿದರೆ ನಿತ್ಯ 2.7 ಲಕ್ಷ ಕೇಸ್‌ಗಳು ಹಾಗೂ ಫ್ರಾನ್ಸ್‌ನಂತೆ ನಿರ್ಬಂಧ ತೆರವುಗೊಳಿಸಿದರೆ 4.5 ಲಕ್ಷ ಕೇಸ್‌ಗಳು ವರದಿಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

Omicron variant ರಾಜ್ಯಗಳಿಗೆ ಕೇಂದ್ರದಿಂದ ಮತ್ತಷ್ಟು ಮಾರ್ಗಸೂಚಿ ಪ್ರಕಟ

ದೇಶದಲ್ಲಿ ಶೇ.76.8ರಷ್ಟುಜನರಿಗೆ ಲಸಿಕೆ ಲಭಿಸಿದೆ. ಆದರೂ ಈ ಹಂತದಲ್ಲಿ ಪ್ರಯಾಣ ನಿರ್ಬಂಧ ತೆರವುಗೊಳಿಸಿದರೆ ಭಾರಿ ಪ್ರಮಾಣದಲ್ಲಿ ಕೋವಿಡ್‌ ಹರಡಲಿದ್ದು, ದೇಶದ ಆರೋಗ್ಯ ವ್ಯವಸ್ಥೆ ಬುಡಮೇಲಾಗಲಿದೆ. ಹೀಗಾಗಿ ಆರೋಗ್ಯ ವ್ಯವಸ್ಥೆ ಮತ್ತು ಲಸಿಕಾಕರಣವನ್ನು ಇನ್ನಷ್ಟುವಿಸ್ತರಿಸಿದ ನಂತರ ಬೇಕಾದರೆ ಪ್ರಯಾಣ ನಿರ್ಬಂಧ ತೆರವುಗೊಳಿಸಬಹುದು ಎಂದು ತಜ್ಞರು ಹೇಳಿದ್ದಾರೆ.ಸದ್ಯ ಚೀನಾ ಸರ್ಕಾರವು ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳ ವಿಮಾನಗಳಿಗೂ ನಿಷೇಧ ಹೇರಿದೆ. ಅನಿವಾರ್ಯ ಸಂದರ್ಭದಲ್ಲಿ ಚೀನಾಕ್ಕೆ ವಿದೇಶಿಗರು ತೆರಳಿದರೆ ಕಡ್ಡಾಯವಾಗಿ 21 ದಿನ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

Omicron variant ರಾಜ್ಯಗಳಿಗೆ ಕೇಂದ್ರದಿಂದ ಮತ್ತಷ್ಟು ಮಾರ್ಗಸೂಚಿ ಪ್ರಕಟ

ಜಾಗತಿಕ ತಲ್ಲಣ ಮೂಡಿಸಿರುವ ‘ಒಮಿಕ್ರೋನ್‌’ ರೂಪಾಂತರಿ (Omicron Varient) ತಳಿಯು ಭಾರತಕ್ಕೂ ವ್ಯಾಪಿಸುವ ಭೀತಿಯಿದೆ. ಹೀಗಾಗಿ ಈ ವೈರಸ್‌ ನಿಯಂತ್ರಣಕ್ಕೆ ರಾಜ್ಯಗಳು ಪಾಲಿಸಲೇಬೇಕಿರುವ ಮತ್ತಷ್ಟು ಮಾರ್ಗಸೂಚಿಗಳನ್ನು (Guidlines) ಕೇಂದ್ರ ಸರ್ಕಾರ ಭಾನುವಾರ ಬಿಡುಗಡೆ ಮಾಡಿದೆ. ಈ ಪ್ರಕಾರ ಕೋವಿಡ್‌ ಹಾಟ್‌ಸ್ಪಾಟ್‌ಗಳನ್ನು ತ್ವರಿತವಾಗಿ ಗುರುತಿಸಬೇಕು. ಕಂಟೇನ್ಮೆಂಟ್‌ ಬಗ್ಗೆ ಹೆಚ್ಚಿನ ನಿಗಾ ಇಡಬೇಕು. ಕೋವಿಡ್‌ ತಪಾಸಣೆ (Covid Testing)ಮತ್ತು ಪರಿಶೀಲನೆಯನ್ನು ತೀವ್ರಗೊಳಿಸಬೇಕು. ಅಲ್ಲದೆ ಲಸಿಕಾಕರಣದ ಅಭಿಯಾನಕ್ಕೆ (Vaccination Campaign) ಮತ್ತಷ್ಟು ಚುರುಕು ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

click me!