4 ರಾಷ್ಟ್ರಗಳಿಂದ ಭಾರತಕ್ಕೆ ಶಸ್ತ್ರಾಸ್ತ್ರ: ಚೀನಾಕ್ಕೀಗ ನಡುಕ!

By Kannadaprabha News  |  First Published Jun 30, 2020, 7:42 AM IST

ಭಾರತಕ್ಕೆ ಮಿತ್ರರ ಶಸ್ತ್ರಾಸ್ತ್ರ ಬಲ| ದೇಶಕ್ಕೆ ತುರ್ತಾಗಿ ಬೇಕಾಗಿರುವ ವಿಮಾನ, ಶಸ್ತ್ರಾಸ್ತ್ರ ಕಳಿಸಲು ಮುಂದೆ ಬಂದ ಮಿತ್ರರು| ಫ್ರಾನ್ಸ್‌, ಇಸ್ರೇಲ್‌, ಅಮೆರಿಕ, ರಷ್ಯಾದಿಂದ ಭಾರತಕ್ಕೆ ಅಭಯ| ಚೀನಾಕ್ಕೀಗ ನಡುಕ


ನವದೆಹಲಿ(ಜೂ.30):  ಚೀನಾ ಗಡಿಯಲ್ಲಿ ಯುದ್ಧ ರೀತಿಯ ಉದ್ವಿಗ್ನ ವಾತಾವರಣ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ನೆರವಿಗೆ ಹಲವು ದೇಶಗಳು ಮುಂದೆ ಬಂದಿವೆ. ದೇಶಕ್ಕೆ ತುರ್ತು ಅಗತ್ಯವಿರುವ ಶಸ್ತಾ್ರಸ್ತ್ರ ಹಾಗೂ ಇನ್ನಿತರೆ ಯುದ್ಧ ಸಲಕರಣೆಗಳನ್ನು ನೀಡಲು ಫ್ರಾನ್ಸ್‌, ಇಸ್ರೇಲ್‌, ಅಮೆರಿಕ ಹಾಗೂ ರಷ್ಯಾ ಬದ್ಧತೆ ವ್ಯಕ್ತಪಡಿಸಿವೆ. ಇದರಿಂದಾಗಿ, ಮೆರೆಯುತ್ತಿರುವ ಚೀನಾಕ್ಕೆ ತಕ್ಕ ಬುದ್ಧಿ ಕಲಿಸಲು ಭಾರತಕ್ಕೆ ಮತ್ತಷ್ಟುಶಕ್ತಿ ಸಿಕ್ಕಂತಾಗಿದ್ದು, ನೆರೆ ದೇಶ ನಡುಗುವಂತಾಗಿದೆ.

ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಈ ಎಲ್ಲ ದೇಶಗಳು ಭಾರತಕ್ಕೆ ಶಸ್ತಾ್ರಸ್ತ್ರ ನೀಡುವ ಬದ್ಧತೆ ವ್ಯಕ್ತಪಡಿಸಿವೆ. ಇದೇ ವೇಳೆ, ಪೂರ್ವ ಲಡಾಖ್‌ನಲ್ಲಿ ಸುದೀರ್ಘ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳಿಗೆ ತುರ್ತು ಹಣಕಾಸು ಶಕ್ತಿ ಒದಗಿಸಲು ಸರ್ಕಾರ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

Latest Videos

undefined

ಆತ್ಮನಿರ್ಭರ ಭಾರತವೇ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವ: ಮೋದಿ ಮನ್‌ ಕೀ ಬಾತ್

ಮಿತ್ರರಿಂದ ಏನೇನು ಸಿಗುತ್ತೆ?:

ವಿಶ್ವದಲ್ಲೇ ಅತ್ಯುತ್ತಮವಾದ, ದೀರ್ಘ ದೂರ ಕ್ರಮಿಸುವ, ಆಗಸದಲ್ಲೇ ದಾಳಿ ನಡೆಸುವ ಕ್ಷಿಪಣಿ ವ್ಯವಸ್ಥೆ ಹೊಂದಿರುವ ರಫೇಲ್‌ ಯುದ್ಧ ವಿಮಾನಗಳು ಜು.27ರಂದು ಭಾರತಕ್ಕೆ ಬರಲಿವೆ. ಫ್ರಾನ್ಸ್‌ನಿಂದ 36 ವಿಮಾನಗಳನ್ನು 59 ಸಾವಿರ ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಭಾರತ ನಿರ್ಧರಿಸಿದೆ. ಈ ಪೈಕಿ ಮೊದಲ ಹಂತದಲ್ಲಿ 4 ವಿಮಾನಗಳು ಜು.27ರಂದು ಭಾರತಕ್ಕೆ ಬರಬೇಕಿತ್ತು. ಆದರೆ ಇದೀಗ ಪರಿಸ್ಥಿತಿ ಬೇರೆಯದೇ ರೀತಿ ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ವಿಮಾನಗಳನ್ನು ಫ್ರಾನ್ಸ್‌ ಕಳುಹಿಸಿಕೊಡುತ್ತಿದೆ. ಅಲ್ಲಿಂದ ಬರುವ ವಿಮಾನಗಳ ಸಂಖ್ಯೆ 6ರಿಂದ 8ರಷ್ಟಿರುವ ಸಾಧ್ಯತೆ ಇದೆ. ಫ್ರಾನ್ಸ್‌ನಲ್ಲಿ ತರಬೇತಿ ಪಡೆದಿರುವ ಭಾರತೀಯ ಪೈಲಟ್‌ಗಳು ಈ ವಿಮಾನವನ್ನು ಹಾರಿಸಿಕೊಂಡು ಬರಲಿದ್ದಾರೆ. ಈ ಎಲ್ಲ ವಿಮಾನಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಲಿವೆ. ತಕ್ಷಣವೇ ಬಳಕೆಗೆ ಸಿಗಲಿವೆ.

ಭಾರತದ ನೆರವಿಗೆ ಬಂದ ಇಸ್ರೇಲ್‌:

ಕಾರ್ಗಿಲ್‌ ಸಮರದ ಸಂದರ್ಭದಲ್ಲಿ ಭಾರತದ ಜತೆ ನಿಂತಿದ್ದ ಇಸ್ರೇಲ್‌ ಇದೀಗ ಚೀನಾ ಸಂಘರ್ಷ ಸೃಷ್ಟಿಯಾಗಿರುವ ಸಂದರ್ಭದಲ್ಲೂ ಭಾರತಕ್ಕೆ ನೆರವಾಗಲು ಮುಂದೆ ಬಂದಿದೆ. ಎದುರಾಳಿ ದೇಶಗಳ ಕ್ಷಿಪಣಿ ಹಾಗೂ ವಿಮಾನಗಳನ್ನು ಹೊಡೆದುರುಳಿಸಲು ಬಳಸುವ ವಾಯು ರಕ್ಷಣಾ ವ್ಯವಸ್ಥೆಯನ್ನು ರವಾನಿಸುವುದಾಗಿ ಹೇಳಿದೆ. ವಿಶೇಷವೆಂದರೆ, ಇದು ಈಗಾಗಲೇ ಇಸ್ರೇಲ್‌ ಸೇನೆಯಲ್ಲಿದೆ. ಅದನ್ನೇ ಭಾರತಕ್ಕೆ ನೀಡಲು ಮುಂದೆ ಬಂದಿರುವುದು ಗಮನಾರ್ಹ. ಈ ವ್ಯವಸ್ಥೆಯನ್ನು ಲಡಾಖ್‌ ಗಡಿಯಲ್ಲಿ ನಿಯೋಜಿಸಲಾಗುತ್ತದೆ ಎಂದು ಹೇಳಲಾಗಿದೆ.

ಭಾರತ ಜೊತೆ ಸಂಘರ್ಷ: ಮಡಿದ ಸೈನಿಕರಿಗೆ ಚೀನಾ ಪತ್ರಿಕೆ ಕಂಬನಿ!

ಭಾರತಕ್ಕೆ ಬೇಕಾಗಿರುವ ಅಗತ್ಯ ಶಸ್ತಾ್ರಸ್ತ್ರಗಳನ್ನು ಒದಗಿಸುವುದಾಗಿ ಇತ್ತೀಚೆಗೆ ರಷ್ಯಾ ಪ್ರವಾಸ ಕೈಗೊಂಡಿದ್ದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್‌ ಅವರಿಗೆ ಆ ದೇಶದಿಂದ ಭರವಸೆ ದೊರೆತಿದೆ. ತನಗೆ ಯಾವೆಲ್ಲಾ ಶಸ್ತಾ್ರಸ್ತ್ರಗಳು ಬೇಕು ಎಂಬ ಪಟ್ಟಿಯನ್ನೇ ರಷ್ಯಾಗೆ ಭಾರತ ನೀಡಿದೆ. ಅದರ ಮೊತ್ತ 7500 ಕೋಟಿ ರು. ಆಗುತ್ತದೆ. ಕೆಲವೇ ವಾರದಲ್ಲಿ ಆ ಶಸ್ತಾ್ರಸ್ತ್ರಗಳು ಭಾರತಕ್ಕೆ ದೊರೆಯಲಿವೆ.

ಈ ನಡುವೆ, ಮಹತ್ವದ ಗುಪ್ತಚರ ಮಾಹಿತಿ ಹಾಗೂ ಉಪಗ್ರಹ ಚಿತ್ರಗಳನ್ನು ನೀಡುವುದರ ಜತೆಗೆ ಫಿರಂಗಿಗಳಿಗೆ ಬೇಕಾದ, ನಿಖರವಾಗಿ ದಾಳಿ ಮಾಡುವ ಮದ್ದು- ಗುಂಡು ಒದಗಿಸುವುದಾಗಿ ತಿಳಿಸಿದೆ. ಅಲ್ಲದೆ ನಿಮಗೆ ಏನೇನು ಅಗತ್ಯವಿದೆಯೋ ಅದೆಲ್ಲವನ್ನೂ ಪಟ್ಟಿಮಾಡಿ ಕೊಡಿ ಎಂದೂ ತಿಳಿಸಿದೆ ಎಂದು ವರದಿಗಳು ಹೇಳಿವೆ.

ಗಡಿ ಯಥಾಸ್ಥಿತಿ ಬದಲಿಸಿದರೆ ಹುಷಾರ್‌: ಚೀನಾಕ್ಕೆ ಭಾರತದ ಕಟು ಎಚ್ಚರಿಕೆ!

ಯಾವ ದೇಶದಿಂದ ಏನೇನು ಭರವಸೆ?

ಫ್ರಾನ್ಸ್‌: 4 ರಫೇಲ್‌ ಯುದ್ಧ ವಿಮಾನದ ಜತೆಗೆ ಹೆಚ್ಚುವರಿ ವಿಮಾನಗಳು ಜು.27ಕ್ಕೆ ಭಾರತಕ್ಕೆ ಹಸ್ತಾಂತರ

ಇಸ್ರೇಲ್‌: ಕ್ಷಿಪಣಿ, ವಿಮಾನ ಹೊಡೆದುರುಳಿಸಲು ತನ್ನ ಸೇನೆಯಲ್ಲಿರುವ ವಾಯು ರಕ್ಷಣಾ ವ್ಯವಸ್ಥೆ ನೀಡುವ ಭರವಸೆ

ರಷ್ಯಾ: 7500 ಕೋಟಿ ರು. ಮೊತ್ತದ ಯುದ್ಧ ಸಲಕರಣೆಗಳನ್ನು ಕೆಲವೇ ವಾರದಲ್ಲಿ ಪೂರೈಸುವ ಆಶ್ವಾಸನೆ

ಅಮೆರಿಕ: ಗುಪ್ತಚರ ಮಾಹಿತಿ, ಉಪಗ್ರಹ ಚಿತ್ರ ಜತೆಗೆ ಫಿರಂಗಿಗಳಿಗೆ ಮದ್ದು- ಗುಂಡು. ಇನ್ನೂ ಏನೇನು ಬೇಕೆಂದು ಪಟ್ಟಿಕೇಳಿದ ‘ದೊಡ್ಡಣ್ಣ’

click me!