ಕಿಮ್ ಜಾಂಗ್ ಉನ್ ಕಚೇರಿಯಲ್ಲೇ ನಡೆಯುತ್ತೆ ಈ ದಂಧೆ: ಬಯಲಾಯ್ತು ಶಾಕಿಂಗ್ ಮಾಹಿತಿ!

By Kannadaprabha News  |  First Published Jun 29, 2020, 7:33 AM IST

ಕೊರಿಯಾ ಸರ್ವಾಧಿಕಾರಿ ಕಿಮ್‌ ಅಕ್ರಮ ದಂಧೆ!| ಇದೇ ಈತನ ಐಷಾರಾಮಿ ಜೀವನದ ರಹಸ್ಯ|  ಕಚೇರಿ ಮೂಲಕವೇ ಅಕ್ರಮ ವಹಿವಾಟು


ಸೋಲ್(ಜೂ.29)‌: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನ ವೈಭವೋಪೇತ ಜೀವನದ ರಹಸ್ಯ ಈಗ ಹೊರಬಿದ್ದಿದೆ.

ಉತ್ತರ ಕೊರಿಯಾ ರಾಜಧಾನಿಯಲ್ಲಿ ‘ಆಫೀಸ್‌ 39’ ಎಂಬ ಕಚೇರಿ ಇದೆ. ಅಲ್ಲಿ ಮಾದಕ ವಸ್ತು ಕಳ್ಳಸಾಗಣೆ, ನಕಲಿ ನೋಟು ಮುದ್ರಣ, ಚಿನ್ನ ಕಳ್ಳಸಾಗಣೆ, ಶಸ್ತಾ್ರಸ್ತ್ರ ವ್ಯವಹಾರ- ಇತ್ಯಾದಿ ಡೀಲ್‌ಗಳು ಇದೇ ಕಚೇರಿಯ ಮೂಲಕವೇ ನಡೆಯುತ್ತವೆ. ಇದಕ್ಕೆ ಕಿಮ್‌ನ ಸೋದರಿ ಯೊ ಜಾಂಗ್‌ಳ ಗಂಡ ಚೋ ಸಾಂಗ್‌ ಉಸ್ತುವಾರಿ. ಈ ಡೀಲ್‌ಗಳಿಂದ ಭಾರಿ ಪ್ರಮಾಣದ ಹಣ ಹರಿದುಬರುತ್ತಿದೆ’ ಎಂದು ಮಾಧ್ಯಮ ವರದಿಗಳು ಹೇಳಿವೆ.

Tap to resize

Latest Videos

ಸಾವಿನ ವದಂತಿಗೆ ಬ್ರೇಕ್: ಕೋಟೆಯಿಂದ ಹೊರಬಂದ ಕಿಮ್ ಹೇಗಿದ್ದಾರೆ? ಇಲ್ಲಿದೆ ಫೋಟೋಸ್

ಈ ರೀತಿ ಬರುವ ಅಪಾರ ದುಡ್ಡಿನಿಂದ ಕಿಮ್‌, ಮರ್ಸಿಡಿಸ್‌ ಕಾರು, ರೋಲೆಕ್ಸ್‌ ವಾಚಿನಂತಹ ಐಷಾರಾಮಿ ವಸ್ತುಗಳನ್ನು ಖರೀದಿಸುತ್ತಿದ್ದಾನೆ ಎಂದು ಅಮೆರಿಕದ ನಿವೃತ್ತ ಸೇನಾಧಿಕಾರಿ ಡೇವಿಡ್‌ ಮ್ಯಾಕ್ಸ್‌ವೆಲ್‌ ಹೇಳಿದ್ದಾರೆ,

ಉತ್ತರ ಕೊರಿಯಾ ಮೇಲೆ ಪ್ರಪಂಚದ ಬಹುತೇಕ ದೇಶಗಳು ದಿಗ್ಬಂಧನ ವಿಧಿಸಿದ್ದರೂ ಕಿಮ್‌ನ ಐಷಾರಾಮಿ ಜೀವನದ ಗುಟ್ಟೇ ‘ಆಫೀಸ್‌ 39’ ಮೂಲಕ ನಡೆಯುವ ಕಳ್ಳ ವ್ಯವಹಾರ ಎಂದು ಮಾಧ್ಯಮ ವರದಿ ಹೇಳಿದೆ.

click me!