ಚೀನಾಕ್ಕೆ ಭರ್ಜರಿ ತೆರಿಗೆ: ಸೋಲಾರ್‌ ಉಪಕರಣಗಳ ದರ ಭಾರಿ ಏರಿಕೆ?

By Kannadaprabha News  |  First Published Jun 29, 2020, 7:44 AM IST

ಚೀನಾಕ್ಕೆ ತೆರಿಗೆ: ಸೋಲಾರ್‌ ಉಪಕರಣಗಳ ದರ ಭಾರಿ ಏರಿಕೆ?| ಶೇ.25ರಷ್ಟುಆಮದು ಸುಂಕ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು| ಸದ್ಯ ಆಮದು ಸೋಲಾರ್‌ ಮಾಡ್ಯೂಲ್‌ಗಳ ಮೇಲೆ ಆಮದು ಸುಂಕ ಶೇ.15 ಇದೆ


ನವದೆಹಲಿ(ಜೂ.29): ಚೀನಾದಿಂದ ಆಮದು ಮಾಡಿಕೊಳ್ಳುವ ಸೋಲಾರ್‌ ಉಪಕರಣಗಳಿಗೆ ಭಾರಿ ಪ್ರಮಾಣದಲ್ಲಿ ತೆರಿಗೆ ವಿಧಿಸಲು ಕೇಂದ್ರ ಇಂಧನ ಸಚಿವಾಲಯ ಮುಂದಾಗಿದೆ. ಅದರಂತೆ, ಆಗಸ್ಟ್‌ ತಿಂಗಳಿನಿಂದ ಆ ದೇಶದಿಂದ ಆಮದಾಗುವ ಸೋಲಾರ್‌ ಮಾಡ್ಯೂಲ್‌ಗಳಿಗೆ ಶೇ.25ರಷ್ಟುಆಮದು ಸುಂಕ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಚೀನಾದಿಂದ ಬರುವ ವಿದ್ಯುತ್‌ ಉಪಕರಣಗಳಲ್ಲಿ ವೈರಸ್‌?

Latest Videos

undefined

ಸದ್ಯ ಆಮದು ಸೋಲಾರ್‌ ಮಾಡ್ಯೂಲ್‌ಗಳ ಮೇಲೆ ಆಮದು ಸುಂಕ ಶೇ.15 ಇದೆ. ಭಾರತದಲ್ಲಿ ಬಳಕೆಯಾಗುವ ಶೇ.80ರಷ್ಟುಸೋಲಾರ್‌ ಉಪಕರಣಗಳು ಚೀನಾದಿಂದಲೇ ಆಮದಾಗುವುದರಿಂದ ಸುಂಕ ಏರಿಸಿದರೆ ಎಲ್ಲ ರೀತಿಯ ಸೋಲಾರ್‌ ಉತ್ಪನ್ನಗಳ ಬೆಲೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಈ ಸುಂಕವನ್ನು ಏಪ್ರಿಲ್‌ 2022ಕ್ಕೆ ಶೇ.40ಕ್ಕೆ ಏರಿಸಬೇಕು ಎಂದೂ ಇಂಧನ ಸಚಿವಾಲಯ ಶಿಫಾರಸು ಮಾಡಿದೆ.

ಚೀನಾದಂತೆ ಭಾರತ ಜಾಗತಿಕ ಉತ್ಪಾದನಾ ಕೇಂದ್ರ ಆಗೋದು ಹೇಗೆ?

ಇನ್ನು, ಸೋಲಾರ್‌ ಸೆಲ್‌ಗಳ ಮೇಲೆ ಶೇ.15 ಹಾಗೂ ಸೋಲಾರ್‌ ಇನ್ವರ್ಟರ್‌ಗಳ ಮೇಲೆ ಶೇ.20ರಷ್ಟುಆಮದು ಸುಂಕ ವಿಧಿಸುವಂತೆಯೂ ಶಿಫಾರಸು ಮಾಡಲಾಗಿದೆ. ಚೀನಾದಿಂದ ಆಮದನ್ನು ತಗ್ಗಿಸುವುದು ಹಾಗೂ ಮೇಕ್‌ ಇನ್‌ ಇಂಡಿಯಾ ಮೂಲಕ ಸೋಲಾರ್‌ ಹಾಗೂ ವಿದ್ಯುತ್‌ ಉಪಕರಣ ಉತ್ಪಾದಿಸುವುದನ್ನು ಹೆಚ್ಚಿಸುವುದನ್ನು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.

click me!