ಚಲಿಸುವ ಹೂವಿದು... ಕೀಟಗಳ ಅದ್ಭುತ ಲೋಕ : ವಿಡಿಯೋ ವೈರಲ್

Published : Dec 30, 2022, 07:15 PM ISTUpdated : Dec 30, 2022, 07:16 PM IST
ಚಲಿಸುವ ಹೂವಿದು... ಕೀಟಗಳ ಅದ್ಭುತ ಲೋಕ : ವಿಡಿಯೋ ವೈರಲ್

ಸಾರಾಂಶ

ಪ್ರಕೃತಿಯ ವಿವಿಧ ವೈಚಿತ್ರ ವೈವಿಧ್ಯತೆಯನ್ನು ನೀವು ಈಗಾಗಲೇ ನೋಡಿರಬಹುದು. ಅದರಲ್ಲೂ ಕೀಟಗಳ ಲೋಕ ಒಂದು ಅದ್ಭುತವಾದ ಕುತೂಹಲಕಾರಿ ಪ್ರಪಂಚವಾಗಿದೆ. ಮರದಂತೆ ಕಾಣುತ್ತೆ ಆದರೆ ಮರವಲ್ಲ, ಎಲೆಯಂತೆ ಕಾಣುತ್ತೆ ಆದರೆ ಎಲೆಯಲ್ಲ. ಹೂವಿನಂತೆ ಕಾಣುತ್ತೆ ಆದರೆ ಹೂವಲ್ಲ, ಇಂತಹ ಪ್ರಕೃತಿಯೊಂದಿಗೆ ಮಿಳಿತವಾದ ಕೀಟಗಳನ್ನು ನೀವು ನೋಡಿರಬಹುದು.

ದಕ್ಷಿಣ ಆಫ್ರಿಕಾ: ಪ್ರಕೃತಿಯ ವಿವಿಧ ವೈಚಿತ್ರ ವೈವಿಧ್ಯತೆಯನ್ನು ನೀವು ಈಗಾಗಲೇ ನೋಡಿರಬಹುದು. ಅದರಲ್ಲೂ ಕೀಟಗಳ ಲೋಕ ಒಂದು ಅದ್ಭುತವಾದ ಕುತೂಹಲಕಾರಿ ಪ್ರಪಂಚವಾಗಿದೆ. ಮರದಂತೆ ಕಾಣುತ್ತೆ ಆದರೆ ಮರವಲ್ಲ, ಎಲೆಯಂತೆ ಕಾಣುತ್ತೆ ಆದರೆ ಎಲೆಯಲ್ಲ. ಹೂವಿನಂತೆ ಕಾಣುತ್ತೆ ಆದರೆ ಹೂವಲ್ಲ, ಇಂತಹ ಪ್ರಕೃತಿಯೊಂದಿಗೆ ಮಿಳಿತವಾದ ಕೀಟಗಳನ್ನು ನೀವು ನೋಡಿರಬಹುದು. ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಇದೆಲ್ಲವೂ ಗಮನಕ್ಕೆ ಬರುತ್ತದೆ. ಹೂಗಳ ಮಧ್ಯೆ ಅದು ಹೂಗಳಂತೆ ಕಾಣುತ್ತಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರಷ್ಟೇ ಅಲ್ಲಿ ಹೂವಿನಂತೆ ಕಾಣುವ ಕೀಟವೊಂದು ಕಾಣಬಹುದು. ಅದೇ ರೀತಿ ಹಸಿರೆಲೆಗಳ ಮಧ್ಯೆ ಎಲೆಯಂತೆ ಕಾಣುವ ಮಿಡತೆಯಂತಹ ಕೀಟವನ್ನು ನೀವು ನೋಡಿರಬಹುದು. ತುಂಬಾ ಸೂಕ್ಷ್ಮವಾಗಿ ಗಮನಿಸಿದರಷ್ಟೇ ಅವೆಲ್ಲವೂ ಬರಿಗಣ್ಣಿಗೆ ಕಾಣಿಸುವವು.

ಅದೇ ರೀತಿ ಇಲ್ಲೊಂದು ಸೊಗಸಾದ ಕೀಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ಇದನ್ನು ಗಮನಿಸಿ ಫೇಸ್‌ಬುಕ್‌ನಲ್ಲಿ ಇದರ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. Waterfall Retreat & Environmental Centre ಎಂಬ ಫೇಸ್‌ಬುಕ್ ಪೇಜ್ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಸುಂದರವಾದ ಹೂವುಗಳನ್ನೇ ಹೋಲುವ ಈ ಕೀಟಗಳು ನಮ್ಮ ಕಣ್ಣುಗಳನನ್ನು ನಂಬಲಾಗದ ರೀತಿಯಲ್ಲಿ ಮೋಸಗೊಳಿಸುತ್ತವೆ. ಹೀಗಾಗಿ ಹೂವೆಂದು ಅವುಗಳನ್ನು ಮುಟ್ಟುವ ಮುನ್ನ ಕಾಳಜಿ ವಹಿಸುವುದೊಳಿತು ಏಕೆಂದರೆ ಅಲ್ಲಿ ಹೂಗಳ ಬದಲು ಕೀಟಗಳಿರುತ್ತವೆ. 

ಇದು ಚಿನ್ನದ ನೆಕ್ಲೇಸ್ ಅಲ್ಲ: ಸಮುದ್ರ ಚಿರತೆಯ ಸಿಟಿಸ್ಕ್ಯಾನ್ ಫೋಟೋ

ಈ ಅಪರೂಪದ ಕೀಟದ ವಿಡಿಯೋವನ್ನು ದಕ್ಷಿಣ ಆಫ್ರಿಕಾದಲ್ಲಿ (South Africa) ಸೆರೆ ಹಿಡಿಯಲಾಗಿದೆ. ಲ್ಯಾವೆಂಡರ್ ಮತ್ತು ಬಿಳಿ ಮಿಶ್ರಿತ ಬಣ್ಣದ ಆರ್ಕಿಡ್‌ನಂತೆ ಕಾಣುವ ಈ ಕೀಟವನ್ನು ಸಮೀಪ ಹೋದರಷ್ಟೇ ಕೀಟ ಎಂದು ತಿಳಿಯಲು ಸಾಧ್ಯ. ಫಾರ್ಮ್ ಒಂದರ ಮಾಲೀಕ ಮಾರ್ಗರೆಟ್ ನೆವಿಲ್ಲೆ (Margaret Neville) ಎಂಬುವವರು ಈ ಅಪರೂಪದ ಕೀಟದ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ತಮ್ಮ ತೋಟದಲ್ಲಿ ಅಡ್ಡಾಡುತ್ತಿದ್ದ ವೇಳೆ ಅವರಿಗೆ  ಲ್ಯಾವೆಂಡರ್ (Lavender) ಪೊದೆಯ ಮೇಲೆ ಹೂವೊಂದು ಚಲಿಸುತ್ತಿರುವಂತೆ ಕಾಣಿಸಿದೆ. ಕೂಡಲೇ ಮತ್ತಷ್ಟು ಸಮೀಪ ಹೋದಾಗ ಅದೂ ಹಿಂದೆಂದೂ ತಾನು ಕಂಡಿರದಂತಹ ಆಕರ್ಷಕ ಕೀಟ ಎಂಬುದು ಆಕೆಗೆ ತಿಳಿದಿದೆ. 

ಈ ತುಂಬಾ ಸೂಕ್ಷ್ಮವೆನಿಸುವ ಈ ಜೀವಿಯನ್ನು ಸ್ಪೈನಿ ಫ್ಲವರ್ ಮ್ಯಾಂಟಿಸ್ (spiny flower mantis) ಅಥವಾ ಸ್ಯೂಡೋಕ್ರೆಬೊಟ್ರಾ ವಾಲ್ಬರ್ಗಿ (Pseudocreobotra wahlbergii) ಎಂದು ಕರೆಯಲಾಗುತ್ತದೆ. ಇದು ಸಹರನ್ ಅಫ್ರಿಕಾದಲ್ಲಿ ಕಂಡು ಬರುವ ಮಂಟೀಸ್ ಎಂಬ ಜಾತಿಯ ಜೀವಿಯಾಗಿದೆ. ಇದು ನೋಡುಗರ ಕಣ್ಣಿಗೆ ಚಲಿಸುವ ಹೂವಿನಂತೆ ಕಾಣುತ್ತದೆ. ಈ ಕೀಟದ ಬಿಳಿ ಮತ್ತು ಹಸಿರು ಬಣ್ಣದ ರೆಕ್ಕೆಗಳು ಮೇಲಿರುವ ಕಣ್ಣಿನಂತೆ ಕಾಣುವ ಸುಳಿಯಾಕಾರದ ಕಲಾಕೃತಿ ಎದ್ದು ಕಾಣುತ್ತಿದ್ದು, ಅವುಗಳ ದೇಹದ ಉಳಿದ ಭಾಗವು ಸಣ್ಣ ನೇರಳೆ ಬಣ್ಣದ ಹೂವಿನಂತೆ ಕಾಣಿಸುತ್ತದೆ. 

ಮಂಜುಗಡ್ಡೆಯಾಗಿ ಬದಲಾದ ನಯಾಗಾರ ಫಾಲ್ಸ್: ಫೋಟೋಸ್ ವೈರಲ್

ಈ ಹೂವನ್ನು ಗಮನಿಸಿದ ಆಕೆ ಕೂಡಲೇ ತನ್ನ ಸ್ನೇಹಿತ ಕೆರ್ರಿ ಕಮಾರ್ಟಿನಾಗ್ಲಿಯಾ ಜೊತೆ ಈ ವಿಚಾರವನ್ನು ಫೋಟೋದೊಂದಿಗೆ ತಿಳಿಸಿದ್ದು, ಇದನ್ನು ನೋಡಿದ ಅವರು ಇದನ್ನು ನಾನು ಮೊದಲು ಸೊಗಸಾದ ಕಲಾಕೃತಿ ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಹೀಗೂ ಒಂದು ಕೀಟ ಇದೆ ಎಂಬುದನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. ಇತ್ತ ಲ್ಯಾವೆಂಡರ್ ಪೊದೆಯಲ್ಲಿದ್ದ ಈ ಕೀಟಕ್ಕೆ ಮಹಿಳೆ ಮಿಸ್ ಫ್ರಿಲ್ಲಿ ಪ್ಯಾಂಟ್ಸ್ ಎಂದು ಹೆಸರಿಟ್ಟಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ