ಪಾಕ್‌ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ: ಮೊದಲ ಹಿಂದೂ ಮಹಿಳಾ ಶಾಸಕಿಯಾಗ್ತಾರಾ ಸವೀರಾ ಪ್ರಕಾಶ್?

By BK Ashwin  |  First Published Dec 26, 2023, 11:11 AM IST

ಹಿಂದೂ ಸದಸ್ಯೆ, ಶ್ರೀಮತಿ ಸವೀರಾ ಪ್ರಕಾಶ್ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಶಾವಾದವನ್ನು ಹೊಂದಿದ್ದಾರೆ.


ಇಸ್ಲಾಮಾಬಾದ್‌ (ಡಿಸೆಂಬರ್  26, 2023): ಮೊದಲ ಬಾರಿಗೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬುನೇರ್ ಜಿಲ್ಲೆಯ ಹಿಂದೂ ಮಹಿಳೆಯೊಬ್ಬರು ಪಾಕ್‌ನ ಮುಂಬರುವ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ. 16ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು ಫೆಬ್ರವರಿ 8, 2024 ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.

ಈ ವೇಳೆ ಸವೀರಾ ಪ್ರಕಾಶ್ ಬುನೇರ್ ಜಿಲ್ಲೆಯ PK-25 ರ ಸಾಮಾನ್ಯ ಸ್ಥಾನಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಹಿಂದೂ ಸದಸ್ಯೆ, ಶ್ರೀಮತಿ ಸವೀರಾ ಪ್ರಕಾಶ್ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಶಾವಾದವನ್ನು ಹೊಂದಿದ್ದಾರೆ. ಕಳೆದ 35 ವರ್ಷಗಳಿಂದ ಪಿಪಿಪಿಯ ಸಮರ್ಪಿತ ಸದಸ್ಯರಾಗಿರುವ ತಂದೆ ಹಾಗೂ ನಿವೃತ್ತ ವೈದ್ಯ ಓಂ ಪ್ರಕಾಶ್‌ ಅವರ ಹೆಜ್ಜೆಗಳನ್ನು ಅನುಸರಿಸಲು ಮಗಳು ಮುಂದಾಗಿದ್ದಾಳೆ.

Tap to resize

Latest Videos

ಪಾಕ್ ಚುನಾವಣೆ; ಎಲ್ಲಾ ಸ್ಥಾನಕ್ಕೆ ಸ್ಪರ್ಧಿಸುತ್ತಿದೆ ಮುಂಬೈ ದಾಳಿಕೋರ ಹಫೀಜ್ ಪಕ್ಷ!

ಕ್ವಾಮಿ ವತನ್ ಪಾರ್ಟಿಯೊಂದಿಗೆ ಸಂಬಂಧ ಹೊಂದಿರುವ ಸ್ಥಳೀಯ ರಾಜಕಾರಣಿ ಸಲೀಮ್ ಖಾನ್ ಮಾಹಿತಿ ನೀಡಿದಂತೆ ಮುಂಬರುವ ಚುನಾವಣೆಗೆ ಬುನೇರ್‌ನಿಂದ ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸವೀರಾ ಪ್ರಕಾಶ್ ಮೊದಲ ಮಹಿಳೆ ಎಂದು ಸೋಮವಾರ ಡಾನ್‌ ವರದಿ ಮಾಡಿದೆ. 

2022 ರಲ್ಲಿ ಅಬೋಟಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನ ಪದವೀಧರರಾದ ಸವೀರಾ ಪ್ರಕಾಶ್ ಬುನೇರ್‌ನಲ್ಲಿ PPP ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮುದಾಯದ ಕಲ್ಯಾಣಕ್ಕಾಗಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದ ಅವರು, ಮಹಿಳೆಯರ ಸುಧಾರಣೆಗಾಗಿ ಕೆಲಸ ಮಾಡುವ, ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸುವ ಮತ್ತು ಅವರ ಹಕ್ಕುಗಳಿಗಾಗಿ ಪ್ರತಿಪಾದಿಸುವ ಬಯಕೆಯ ಬಗ್ಗೆ ಹೇಳಿದ್ದಾರೆ.

ಭಾರತದೊಳಗೆ ಉಗ್ರರ ನುಸುಳಿಸಲು ತನ್ನದೇ ಪೋಸ್ಟ್‌ಗೆ ಬೆಂಕಿ ಹಚ್ಚಿ ನಾಟಕವಾಡಿದ ಪಾಕ್!

ಅಲ್ಲದೆ, ಅಭಿವೃದ್ಧಿ ವಲಯದಲ್ಲಿ ಮಹಿಳೆಯರ ಐತಿಹಾಸಿಕ ನಿರ್ಲಕ್ಷ್ಯ ಹಾಗೂ ಚುನಾಯಿತವಾದರೆ ಈ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿದ್ದೇನೆ ಎಂದೂ ಹೇಳಿದರು. ಡಾನ್‌ಗೆ ನೀಡಿದ ಸಂದರ್ಶನದಲ್ಲಿ, ಸವೀರಾ ಪ್ರಕಾಶ್‌ ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸಲು ತಮ್ಮ ಆಕಾಂಕ್ಷೆಗಳ ಬಗ್ಗೆ ಮಾತನಾಡಿದರು.. ಅವರಂತೆ ಪ್ರದೇಶದ ಹಿಂದುಳಿದವರಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಡಿಸೆಂಬರ್ 23 ರಂದು ನಾಮಪತ್ರವನ್ನು ಸಲ್ಲಿಸಿದ್ದು, PPP ಯ ಹಿರಿಯ ನಾಯಕತ್ವವು ತಮ್ಮ ಉಮೇದುವಾರಿಕೆಯನ್ನು ಅನುಮೋದಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ವೈದ್ಯಕೀಯ ಹಿನ್ನೆಲೆ ಹೊಂದಿರುವ ಸವಿರಾ ಪ್ರಕಾಶ್‌, ಮಾನವೀಯತೆಗೆ ಸೇವೆ ಸಲ್ಲಿಸುವ ತನ್ನ ಬದ್ಧತೆ ನನ್ನ ರಕ್ತದಲ್ಲಿದೆ ಎಂದು ಹೇಳಿದರು. ಚುನಾಯಿತ ಶಾಸಕಿಯಾಗುವ ಅವರ ಕನಸು ತನ್ನ ವೈದ್ಯಕೀಯ ವೃತ್ತಿಜೀವನದ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಕಳಪೆ ನಿರ್ವಹಣೆ ಮತ್ತು ಅಸಹಾಯಕತೆಯ ನೇರ ಅನುಭವಗಳಿಂದ ಹುಟ್ಟಿಕೊಂಡಿದೆ ಎಂದೂ ಹೇಳಿದರು.

ಪಾಕ್‌ ಉಗ್ರ ಸಂಘಟನೆ ಎಲ್‌ಇಟಿಗೆ ಹಣಕಾಸು ನೆರವು ನೀಡ್ತಿದ್ದ ಮೂವರ ಹತ್ಯೆ: ಮತ್ತೆ ಸದ್ದು ಮಾಡಿದ ‘ಅಪರಿಚಿತ ವ್ಯಕ್ತಿ’!

ಪಾಕಿಸ್ತಾನದ ಚುನಾವಣಾ ಆಯೋಗದ (ECP) ಇತ್ತೀಚಿನ ತಿದ್ದುಪಡಿಗಳು ಸಾಮಾನ್ಯ ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ ಐದರಷ್ಟು ಮೀಸಲಾತಿ ನೀಡಿದೆ ಎಂದೂ ಡಾನ್ ವರದಿ ಮಾಡಿದೆ.

click me!