ಮತ್ತೆ ಭಾರತ ಹೊಗಳಿದ ಇಮ್ರಾನ್‌ ಖಾನ್‌: ಪಾಕಿಸ್ತಾನದ ಸಮಸ್ಯೆಗೆಲ್ಲಾ ಅಮೆರಿಕವೇ ಕಾರಣ

Published : Apr 02, 2022, 03:35 AM IST
ಮತ್ತೆ ಭಾರತ ಹೊಗಳಿದ ಇಮ್ರಾನ್‌ ಖಾನ್‌: ಪಾಕಿಸ್ತಾನದ ಸಮಸ್ಯೆಗೆಲ್ಲಾ ಅಮೆರಿಕವೇ ಕಾರಣ

ಸಾರಾಂಶ

ಭಾರತವನ್ನು ಮತ್ತೆ ಹೊಗಳಿದ ಪಾಕ್ ಪ್ರಧಾನಿ ಭಾರತದ ವಿದೇಶಾಂಗ ನೀತಿಗೆ ಶ್ಲಾಘನೆ ಪಾಕಿಸ್ತಾನದ ಸಮಸ್ಯೆಗೆಲ್ಲಾ ಅಮೆರಿಕವೇ ಕಾರಣ ಎಂದ ಇಮ್ರಾನ್ ಖಾನ್

ಇಸ್ಲಾಮಾಬಾದ್‌: ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಪಾಕಿಸ್ತಾನ ಪ್ರಧಾನಿ (Pakistani Prime Minister) ಇಮ್ರಾನ್‌ ಖಾನ್‌ (Imran Khan), ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸಿದ್ದಕ್ಕಾಗಿ ಭಾರತವನ್ನು ಮತ್ತೊಮ್ಮೆ ಹೊಗಳಿದ್ದಾರೆ. ಆದರೆ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಹಸ್ತಕ್ಷೇಪ ನಡೆಸುತ್ತಿದೆ ಎಂದು ಅಮೆರಿಕದ ಮೇಲೆ ಪದೇ ಪದೇ ದಾಳಿ ನಡೆಸಿದ್ದಾರೆ.

‘ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಸದಾ ಸ್ವತಂತ್ರ ವಿದೇಶಾಂಗ ನೀತಿ (independent foreign policy) ಯನ್ನು ಅನುಸರಿಸುತ್ತಿದೆ. ಇದನ್ನು ನಾನು ಶ್ಲಾಘಿಸುತ್ತೇನೆ. ಯುದ್ಧ ಆರಂಭವಾದಾಗಿನಿಂದ ಭಾರತ ರಷ್ಯಾದಿಂದ ನೇರವಾಗಿ ಇಂಧನ ಖರೀದಿಸುತ್ತಿರುವುದು ಭಾರತದ ವಿದೇಶಾಂಗ ನೀತಿಯಾಗಿದೆ. ಹಾಗಾಗಿ ಈ ವಿಷಯದಲ್ಲಿ ಅಮೆರಿಕ (United States), ಭಾರತ (India)ವನ್ನು ಖಂಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್!

ಇದೇ ವೇಳೆ ಪಾಕಿಸ್ತಾನದ (Pakistan) ಇಂದಿನ ಪರಿಸ್ಥಿತಿಗೆ ಅಮೆರಿಕವೇ ಕಾರಣ. ನನ್ನ ರಷ್ಯಾ (Russia) ಭೇಟಿಯಿಂದ ಕೆಲ ಶಕ್ತಿಶಾಲಿ ದೇಶಗಳು ಕೋಪಗೊಂಡಿವೆ. ಮತ್ತೊಂದೆಡೆ ತಮ್ಮ ಹಣವನ್ನು ಅಮೆರಿಕ ಬ್ಯಾಂಕ್‌ಗಳಲ್ಲಿ (US banks) ಅಡಗಿಸಿಟ್ಟಿರುವ ವಿಪಕ್ಷ ನಾಯಕರು, ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎಂದು ಇಮ್ರಾನ್‌ ಕಿಡಿಕಾರಿದರು. ಮಿತ್ರಪಕ್ಷಗಳು ಬೆಂಬಲ ಹಿಂಪಡೆದಿರುವುದರಿಂದ ಅಧಿಕಾರ ಕಳೆದುಕೊಳ್ಳುವ ಸ್ಥಿತಿಗೆ ತಲುಪಿರುವ ಇಮ್ರಾನ್‌, ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಶುಕ್ರವಾರ ಕಾನೂನು ತಜ್ಞರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗುರುವಾರವೂ ಸಹ ಹಿರಿಯ ಅಧಿಕಾರಿಗಳು, ಮಿಲಿಟರಿ ಮುಖ್ಯಸ್ಥರೊಡನೆ ಇಮ್ರಾನ್‌ ಸಭೆ ನಡೆಸಿದ್ದರು.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದಲ್ಲಿ ಬರ್ಖಾ ದತ್ ಹೆಸರು ಉಲ್ಲೇಖ!

ಎರಡು ಪ್ರಮುಖ ಮಿತ್ರಪಕ್ಷಗಳ ಪಕ್ಷಾಂತರದ ನಂತರ 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ( National Assembly) ಬಹುಮತವನ್ನು (lost majority ) ಕಳೆದುಕೊಂಡಿರುವ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಈಗಾಗಲೇ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿದೆ. ಏಪ್ರಿಲ್ 3 ರಂದು ಅಂದರೆ ನಾಳೆ ಪಾಕಿಸ್ತಾನದ ಸಂಸತ್ ನಲ್ಲಿ ಇಮ್ರಾನ್ ಖಾನ್ ತಮ್ಮ ಬಹುಮತವನ್ನು ಸಾಬೀತುಪಡಿಸಬೇಕಿದೆ.

ಗುರುವಾರ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ  (refused to resign) ಮಾತನ್ನು ನಿರಾಕರಿಸಿದರು. ತಮ್ಮ ಸರ್ಕಾರದ ವಿರುದ್ಧ ವಿದೇಶಿ ಪಿತೂರಿ ಕೆಲಸ ಮಾಡುತ್ತಿದೆ ( foreign conspiracy working against his government.) ಎಂದು ಆರೋಪಿಸಿದ್ದಾರೆ. ದೇಶದೊಳಗೆ ಅವರಿಗೆ ಸಹಕರಿಸುವ ಶತ್ರುಗಳಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ನಮಗೆ ಕೆಲವು ವಿದೇಶಗಳಿಂದ ಸಂದೇಶಗಳು ಬರುತ್ತಿವೆ. ಇಮ್ರಾನ್ ಖಾನ್ ಹೋದರೆ ಪಾಕಿಸ್ತಾನವನ್ನು ಕ್ಷಮಿಸುತ್ತೇವೆ ಎಂದು ಅವರು ಹೇಳಿದ್ದಾರೆ" ಎಂದು ಇಮ್ರಾನ್ ಖಾನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ದೇಶದ ಅಧ್ಯಕ್ಷ ಹಾಗೂ ಜಂಟಿ ವಿರೋಧಪಕ್ಷಗಳ ನೆರವಿನಿಂದ  ಕೆಳಮನೆಯನ್ನು ವಿಸರ್ಜಿಸುವ ಹಿಂಬಾಗಿಲ ಪ್ರಯತ್ನ ನಡೆಸಲು ಒಪ್ಪಂದ ಏರ್ಪಟ್ಟಿದೆ ಎನ್ನುವ ಗುಸುಗುಸುಗಳೂ ಕೇಳಿಬಂದಿವೆ.

69 ವರ್ಷದ ಇಮ್ರಾನ್ ಖಾನ್, "ಕೊನೆಯ ಎಸೆತದವರೆಗೂ ತಾನು ಹೋರಾಡುತ್ತೇನೆ ಎಂದು ಹೇಳುವ ಮೂಲಕ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಅಥವಾ ಒಪ್ಪಂದಕ್ಕೆ ಒಳಪಡಲು ನಿರಾಕರಿಸಿದ್ದಾರೆ. ಭಾನುವಾರ ನಡೆಯಲಿರುವ ವಿಶ್ವಾಸ ಮತವನ್ನು ಉಲ್ಲೇಖಿಸಿದ ಅವರು, "ದೇಶದ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ" ಎಂದು ಹೇಳಿದರು.
ಭಾನುವಾರದ ಮತದಾನದಲ್ಲಿ ಬಹುಮತ ಸಾಬೀತುಪಡಿಸಲು ಇಮ್ರಾನ್ ಖಾನ್‌ಗೆ ಸಾಧ್ಯವಾಗದಿದ್ದರೆ, ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಂಡ ದೇಶದ ಮೊದಲ ಪ್ರಧಾನಿ ಎಂಬ ಕುಖ್ಯಾತಿಗೆ ಪಾತ್ರರಾಗಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್