ಇನ್ಮುಂದೆ ಪುರುಷ ಸರ್ಕಾರಿ ನೌಕರರು ಗಡ್ಡ ಇಲ್ಲದೇ ಕಚೇರಿಗೆ ಹೋಗುವಂತಿಲ್ಲ

By Anusha Kb  |  First Published Apr 1, 2022, 10:19 PM IST
  • ಸರ್ಕಾರಿ ನೌಕರರಿಗೆ ಹೊಸ ಡ್ರೆಸ್ ಕೋಡ್ ಜಾರಿ
  • ಗಡ್ಡ ಇಲ್ಲದೇ ಆಫೀಸ್‌ ಹೋಗುವಂತಿಲ್ಲ
  • ತಾಲಿಬಾನ್ ಆಡಳಿತದಿಂದ ಹೊಸ ರೂಲ್ಸ್‌
     

ಕಾಬೂಲ್‌(ಏ.1): ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿ ತಾಲಿಬಾನ್‌ ಉಗ್ರರು ಅಧಿಕಾರ ವಹಿಸಿಕೊಂಡ ಅನೇಕ ಚಿತ್ರ ವಿಚಿತ್ರ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಈಗ ಪುರುಷ ಸರ್ಕಾರಿ ನೌಕರರು ಗಡ್ಡವಿಲ್ಲದೆ ಕಚೇರಿಗೆ ಬರುವಂತಿಲ್ಲ ಎಂಬ ಹೊಸ ಆದೇಶವನ್ನು ನೀಡಿದೆ. ಅಫ್ಘಾನಿಸ್ತಾನದಲ್ಲಿ, ತಾಲಿಬಾನ್ ಆಡಳಿತವೂ ಸರ್ಕಾರಿ ನೌಕರರಿಗೆ ಹೊಸ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಪುರುಷ ಸರ್ಕಾರಿ ನೌಕರರು ಗಡ್ಡವಿಲ್ಲದೆ ಕಚೇರಿಗೆ ಬರುವಂತಿಲ್ಲ.

ಅಲ್ಲದೇ ಅವರು ಪಾಶ್ಚಾತ್ಯ ಸೂಟ್‌ಗಳನ್ನು ಧರಿಸಬಾರದು ಎಂದು ಹೇಳಲಾಗಿದೆ. ಬದಲಿಗೆ, ಪುರುಷರು ತಮ್ಮ ತಲೆಯನ್ನು ಮುಚ್ಚಲು ಟೋಪಿ ಅಥವಾ ಪೇಟದ ಜೊತೆಗೆ ಸಾಂಪ್ರದಾಯಿಕ ಉದ್ದನೆಯ ಟಾಪ್ಸ್ ಮತ್ತು ಪ್ಯಾಂಟ್ ಅನ್ನು ಧರಿಸಬೇಕು ಎಂದು ತಾಲಿಬಾನ್ ಆದೇಶ ಹೊರಡಿಸಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.

Tap to resize

Latest Videos

ಸಂಗೀತ ಉಪಕರಣಕ್ಕೆ ಬೆಂಕಿ ಇಟ್ಟ ತಾಲಿಬಾನ್‌... ಅಳುತ್ತಾ ನಿಂತ ಸಂಗೀತಗಾರ

ಇಸ್ಲಾಮಿಕ್ ಕಾನೂನಿನ ಪ್ರಕಾರ ಮುಂಜಾನೆ ಮತ್ತು ಮುಸ್ಸಂಜೆಯ ನಡುವೆ ಆರು ಬಾರಿ ಸರಿಯಾದ ಸಮಯದಲ್ಲಿ ಧಾರ್ಮಿಕ ಪ್ರಾರ್ಥನೆ ಮಾಡಲು ಅವರಿಗೆ ಹೇಳಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕಾರ್ಮಿಕರನ್ನು ತಮ್ಮ ಕಚೇರಿಗಳಿಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಮತ್ತು ಅಂತಿಮವಾಗಿ ವಜಾ ಮಾಡಲಾಗುವುದು ಎಂದು ತಾಲಿಬಾನ್ ಹೇಳಿದೆ. ಈ ವಾರದ ಆರಂಭದಲ್ಲಿ, ಸದ್ಗುಣಗಳ ಪ್ರಚಾರ ಮತ್ತು ದುರಾಚಾರಗಳ ತಡೆಗಟ್ಟುವಿಕೆಗಾಗಿ ತಾಲಿಬಾನ್‌ ಸಚಿವಾಲಯದ (Ministry) ಅಧಿಕಾರಿಗಳು, ಸರ್ಕಾರಿ ಕಚೇರಿಗಳನ್ನು ಪ್ರವೇಶಿಸಿಸುವ ವೇಳೆ ಉದ್ಯೋಗಿಗಳ ತಪಾಸಣೆ ನಡೆಸಿದ್ದರು. ಈ ಹೊಸ ಮಾರ್ಗಸೂಚಿಗಳು ಮಂಗಳವಾರದಿಂದ ಜಾರಿಗೆ ಬಂದಿವೆ.

Afghanistan: ತಾಲಿಬಾನ್‌ ಆಡಳಿತದಿಂದ ಆಫ್ಘನ್‌ನಲ್ಲಿ ಭೀಕರ ಸ್ಥಿತಿ: ಆಹಾರ ಖರೀದಿಸಲು ಕಿಡ್ನಿ ಮಾರಾಟ..!

ಕಳೆದ ಹತ್ತು ದಿನಗಳಲ್ಲಿ ತಾಲಿಬಾನಿಗರ ಆಡಳಿತವನ್ನು  1990 ರ ದಶಕದ ಹಿಂದಿನ ಆಡಳಿತಕ್ಕೆ ಹೋಲಿಸಿದರೆ, ಅವರು ಭರವಸೆ ನೀಡಿದಂತೆ ಹೆಚ್ಚಿನ ಪ್ರಗತಿ ಸಾಧಿಸುವ ಬಗ್ಗೆ ಯಾವುದೇ ಉದ್ದೇಶ ತಾಲಿಬಾನಿಗರಿಗೆ ಇಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಒಂಬತ್ತು ತಿಂಗಳ ನಂತರ ಕಳೆದ ವಾರವಷ್ಟೇ  ಅಫ್ಘಾನಿಸ್ತಾನದಲ್ಲಿ ತರಗತಿಗಳು ಪುನರಾರಂಭಗೊಳ್ಳುತ್ತಿದ್ದಂತೆ ತಾಲಿಬಾನಿಗರು, ಪ್ರೌಢಶಾಲೆಗೆ ಹಾಜರಾಗಲು ಹುಡುಗಿಯರಿಗೆ ಅನುಮತಿ ನೀಡಿಲ್ಲ. ಇದರೊಂದಿಗೆ ಪುರುಷರು ಅಥವಾ ಕುಟುಂಬದ ಸದಸ್ಯರಿಲ್ಲದೆ ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.

ಇದಲ್ಲದೆ, ತಾಲಿಬಾನ್ ದೇಶದಲ್ಲಿರುವ ಉದ್ಯಾನವನಗಳ (parks) ಬಳಕೆಗೂ ಲಿಂಗದ ಆಧಾರದ ಮೇಲೆ ಪ್ರತ್ಯೇಕಿಸಲು ನಿರ್ಧರಿಸಿದೆ. ದಂಪತಿಗಳು (couples)  ಅಥವಾ ಕುಟುಂಬಗಳು ಒಟ್ಟಿಗೆ ಪಾರ್ಕ್‌ಗೆ ಭೇಟಿ ನೀಡುವುದನ್ನೂ ಇದು ನಿಷೇಧಿಸುತ್ತದೆ. ಇದಷ್ಟೇ ಅಲ್ಲದೇ ವಿದೇಶಿ ನಾಟಕ ಪ್ರದರ್ಶನಗಳು ಮತ್ತು ಅಂತರರಾಷ್ಟ್ರೀಯ ಮಾಧ್ಯಮ ಪ್ರಸಾರಗಳನ್ನು ಸಹ ದೇಶದಲ್ಲಿ ನಿಷೇಧಿಸಿದೆ.

1996 ರಿಂದ 2001 ರವರೆಗಿನ ಅವರ ಹಿಂದಿನ ಆಡಳಿತದಲ್ಲಿ, ತಾಲಿಬಾನ್ (Taliban)  ಮಹಿಳೆಯರು (women)ಕುಟುಂಬದ ಪುರುಷ  ಸದಸ್ಯರಿಲ್ಲದೆ ತಮ್ಮ ಮನೆಯಿಂದ ಹೊರಬರುವುದನ್ನು ನಿಷೇಧಿಸಿತ್ತು. ಎಲ್ಲಾ ಪುರುಷರಿಗೂ ಗಡ್ಡ ಬೆಳೆಸುವಂತೆ ಸಂಸ್ಥೆ ಕೇಳಿಕೊಂಡಿತ್ತು. ಅಶ್ರಫ್ ಘನಿ (Ashraf Ghani)ನೇತೃತ್ವದ ಆಡಳಿತವನ್ನು ಉರುಳಿಸಿದ ತಾಲಿಬಾನ್ ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದ (Afghanistan)  ಮೇಲೆ ಮತ್ತೆ ಹಿಡಿತ ಸಾಧಿಸಿತ್ತು. 

ಅಪ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಿ ತಾಲಿಬಾನಿಗಳು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ  ಅಪ್ಘಾನಿಸ್ತಾನದಾದ್ಯಂತ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಅಮೆರಿಕಾದ ಯುದ್ಧ ವಿಮಾನವೊಂದು ಅಲ್ಲಿನ ಪ್ರಜೆಗಳನ್ನು ಏರ್‌ಲಿಫ್ಟ್ ಮಾಡಿತ್ತು. ಈ ವೇಳೆ ವಿಮಾನ ಹತ್ತಲಾಗದ ವ್ಯಕ್ತಿಯೊಬ್ಬರು ಹಾಲುಗಲ್ಲದ ಮಗುವನ್ನು ಅಮೆರಿಕಾ ಸೈನಿಕನ ಕೈಗಿತ್ತಿದ್ದರು.  ಈ ದೃಶ್ಯ ಹಾಗೂ ಫೋಟೋಗಳು ಜಾಗತಿಕ ಮಟ್ಟದಲ್ಲಿ ಅಫ್ಘಾನಿಸ್ತಾನದ ದುಸ್ಥಿತಿಯನ್ನು ಎತ್ತಿ ಹಿಡಿದಿತ್ತಲ್ಲದೇ ಮಗು ಹಾಗೂ ತಾಯಿಯ ಬೇರ್ಪಡುವಿಕೆಗೆ ಅನೇಕರು ಮರುಗಿದ್ದರು. ಇದಾದ ಹಲವು ತಿಂಗಳ ಬಳಿಕ ಮಗು ಮತ್ತೆ ಪೋಷಕರ ಮಡಿಲು ಸೇರಿತ್ತು.
 

click me!