ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್!

ದೇಶವನ್ನು ಉದ್ದೇಶಿಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣ

ಪ್ರಧಾನಿ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ.

ಸರ್ಕಾರವನ್ನು ಉರುಳಿಸಲು ವಿದೇಶಿ ಶಕ್ತಿಗಳ ಪ್ರಯತ್ನ

Pakistan Prime Minister Imran Khan reduced to a minority in the assembly and fighting to remain in power today refused to resign san

ನವದೆಹಲಿ (ಮಾ. 31): ಅಸೆಂಬ್ಲಿಯಲ್ಲಿ (assembly) ಅಲ್ಪಮತಕ್ಕೆ (minority )  ಇಳಿದು ಅಧಿಕಾರ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Pakistan Prime Minister Imran Khan0, ಗುರುವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ  (refused to resign) ಮಾತನ್ನು ನಿರಾಕರಿಸಿದರು. ತಮ್ಮ ಸರ್ಕಾರದ ವಿರುದ್ಧ ವಿದೇಶಿ ಪಿತೂರಿ ಕೆಲಸ ಮಾಡುತ್ತಿದೆ ( foreign conspiracy working against his government.) ಎಂದು ಆರೋಪಿಸಿದ್ದಾರೆ. ದೇಶದೊಳಗೆ ಅವರಿಗೆ ಸಹಕರಿಸುವ ಶತ್ರುಗಳಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಎರಡು ಪ್ರಮುಖ ಮಿತ್ರಪಕ್ಷಗಳ ಪಕ್ಷಾಂತರದ ನಂತರ 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ( National Assembly) ಬಹುಮತವನ್ನು (lost majority ) ಕಳೆದುಕೊಂಡಿರುವ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಈಗಾಗಲೇ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿದೆ. ಏಪ್ರಿಲ್ 3 ರಂದು ಪಾಕಿಸ್ತಾನದ ಸಂಸತ್ ನಲ್ಲಿ ಇಮ್ರಾನ್ ಖಾನ್ ತಮ್ಮ ಬಹುಮತವನ್ನು ಸಾಬೀತುಪಡಿಸಬೇಕಿದೆ.

"ನಮಗೆ ಕೆಲವು ವಿದೇಶಗಳಿಂದ ಸಂದೇಶಗಳು ಬರುತ್ತಿವೆ... ಇಮ್ರಾನ್ ಖಾನ್ ಹೋದರೆ ಪಾಕಿಸ್ತಾನವನ್ನು ಕ್ಷಮಿಸುತ್ತೇವೆ ಎಂದು ಅವರು ಹೇಳಿದ್ದಾರೆ" ಎಂದು ಇಮ್ರಾನ್ ಖಾನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ದೇಶದ ಅಧ್ಯಕ್ಷ ಹಾಗೂ ಜಂಟಿ ವಿರೋಧಪಕ್ಷಗಳ ನೆರವಿನಿಂದ  ಕೆಳಮನೆಯನ್ನು ವಿಸರ್ಜಿಸುವ ಹಿಂಬಾಗಿಲ ಪ್ರಯತ್ನ ನಡೆಸಲು ಒಪ್ಪಂದ ಏರ್ಪಟ್ಟಿದೆ ಎನ್ನುವ ಗುಸುಗುಸುಗಳೂ ಕೇಳಿಬಂದಿವೆ.

69 ವರ್ಷದ ಇಮ್ರಾನ್ ಖಾನ್, "ಕೊನೆಯ ಎಸೆತದವರೆಗೂ ತಾನು ಹೋರಾಡುತ್ತೇನೆ ಎಂದು ಹೇಳುವ ಮೂಲಕ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಅಥವಾ ಒಪ್ಪಂದಕ್ಕೆ ಒಳಪಡಲು ನಿರಾಕರಿಸಿದ್ದಾರೆ. ಭಾನುವಾರ ನಡೆಯಲಿರುವ ವಿಶ್ವಾಸ ಮತವನ್ನು ಉಲ್ಲೇಖಿಸಿದ ಅವರು, "ದೇಶದ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ" ಎಂದು ಹೇಳಿದರು.

ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ಅವರನ್ನು ಕೆಳಗಿಳಿಸುವ ಪ್ರತಿಪಕ್ಷಗಳ ಪ್ರಯತ್ನವನ್ನು ವಿಫಲಗೊಳಿಸಲು 342 ಸದಸ್ಯರ ಕೆಳಮನೆಯಲ್ಲಿ 172 ಮತಗಳ ಅಗತ್ಯವಿದೆ. ತನಗೆ 175 ಶಾಸಕರ ಬೆಂಬಲವಿದ್ದು, ಪ್ರಧಾನಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಭಾನುವಾರದ ಮತದಾನದಲ್ಲಿ ಬಹುಮತ ಸಾಬೀತುಪಡಿಸಲು ಇಮ್ರಾನ್ ಖಾನ್‌ಗೆ ಸಾಧ್ಯವಾಗದಿದ್ದರೆ, ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಂಡ ದೇಶದ ಮೊದಲ ಪ್ರಧಾನಿ ಎಂಬ ಕುಖ್ಯಾತಿಗೆ ಪಾತ್ರರಾಗಲಿದ್ದಾರೆ.

ಪಾಕ್ ಪ್ರಧಾನಿ ರಾಜಿನಾಮೆಗೆ ಕ್ಷಣಗಣನೆ, ಅವಮಾನದಿಂದ ಪಾರಾಗೋಕೆ ಇಮ್ರಾನ್ ತಂತ್ರಗಾರಿಕೆ!

ಮೂರು ದಿನಗಳ ಹಿಂದೆ ತಾವೇ ಪ್ರಸ್ತಾಪಿಸಿದ್ದ ಪಿತೂರಿಗಳ ಬಗ್ಗೆ ಮಾತನಾಡಿದ ಇಮ್ರಾನ್ ಖಾನ್,  "ನನ್ನನ್ನು ಹೊರಹಾಕಲು ವಿಫಲವಾದರೆ, ಪಾಕಿಸ್ತಾನವು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ" ಎಂದು ಸಂದೇಶಗಳಿವೆ ಎಂದು ಆರೋಪಿಸಿದರು. "ಮೂರು ಪಿತೂರಿಕಾರರು ಇಲ್ಲಿ ವಿದೇಶಿ ಶಕ್ತಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಬೇಕೆಂದು ಬಯಸುತ್ತಾರೆ ಮತ್ತು ಈ ನಿರ್ದಿಷ್ಟ ವ್ಯಕ್ತಿಯನ್ನು ಈ ಸ್ಥಳವನ್ನು ತೆಗೆದುಕೊಳ್ಳಬೇಕೆಂದು ಅವರು ಬಯಸುತ್ತಾರೆ ಆಗ ಎಲ್ಲವೂ ಸರಿಯಾಗುತ್ತದೆ" ಎಂದು ಅವರು ಹೇಳಿದರು. "ನಿಮ್ಮ ಸಂಚು ಯಶಸ್ವಿಯಾಗುತ್ತದೆ ಎಂದು ನೀವು ಭಾವಿಸಿದರೆ, ನಾನು ಇದರೊಂದಿಗೆ ಹೋರಾಡುತ್ತೇನೆ ಎಂದು ಹೇಳಲು ಬಯಸುತ್ತೇನೆ, ಆದರೆ, ಒಂದಂತೂ ಸತ್ಯ ನಿಮಗೆ ಏನೂ ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ರಾಜೀನಾಮೆ ನೀಡದ ಇಮ್ರಾನ್‌: ಇಂದು ಕ್ಲೈಮ್ಯಾಕ್ಸ್‌ ಸಾಧ್ಯತೆ!
"ನನ್ನ ಸ್ವಂತ ಖರ್ಚನ್ನು ನಾನು ಭರಿಸುತ್ತೇನೆ, ನಾನು ನನ್ನ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೇನೆ, ನನಗೆ ಯಾವುದೇ ಕಾರ್ಖಾನೆಗಳಿಲ್ಲ" ಎಂದು ಅವರು ರಾಜಕೀಯ ಎದುರಾಳಿ ನವಾಜ್ ಷರೀಫ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಲು ವಿದೇಶಿ ಶಕ್ತಿಗಳ ಬಗ್ಗೆ ವಿಶಾಲವಾದ ಸುಳಿವು ಕೂಡ ಇತ್ತು. "ನಾವು ಯುಎಸ್‌ನ ಸಹಯೋಗಿಗಳು ಎಂದು ಹೇಳಲಾಯಿತು. ಎಷ್ಟೋ ಪಾಕಿಸ್ತಾನಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅದಕ್ಕಾಗಿ ಯಾರಾದರೂ ನಮಗೆ ಧನ್ಯವಾದ ಹೇಳಿದ್ದೀರಾ? ನಾವು ಅಮೆರಿಕವನ್ನು ಬೆಂಬಲಿಸದಿದ್ದರೆ ಅವರು ಗಾಯಗೊಂಡ ಕರಡಿಯಂತೆ ನಮ್ಮ ಮೇಲೆ ತಿರುಗುತ್ತಾರೆ ಎಂದು ನಮಗೆ ಹೇಳಲಾಯಿತು. 9/11 ಸಮಯದಲ್ಲಿ ನಾವು ಯುಎಸ್ ನಲ್ಲಿ ಭಯೋತ್ಪಾದಕ ಘಟನೆಯಾಗಿದ್ದರೆ,  ಅವರಿಗೆ ಸಹಾಯ ಮಾಡಬೇಕು ಎನ್ನಲಾಯಿತು. ಆದರೆ, ಅಲ್ಲಿ ಹೋರಾಡಲು ಅದು ನಮ್ಮ ಯುದ್ಧವಲ್ಲ ಎಂದು ಅವರು ಹೇಳಿದರು.

ಪಾಕಿಸ್ತಾನದ ಯಾವ ಪ್ರಧಾನಿಯೂ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ. ಮತ್ತೊಂದೆಡೆ, ಅವಿಶ್ವಾಸ ನಿರ್ಣಯದ ಮೂಲಕ ಯಾರನ್ನೂ ಪದಚ್ಯುತಗೊಳಿಸಿಲ್ಲ. ಈ ಸವಾಲನ್ನು ಎದುರಿಸಿದ ಮೂರನೇ ಪ್ರಧಾನಿ ಇಮ್ರಾನ್ ಖಾನ್ ಆಗಿದ್ದಾರೆ.

Latest Videos
Follow Us:
Download App:
  • android
  • ios