ಇಡೀ ನಗರದ ಕರೆಂಟ್‌ ತೆಗೆದು, 150 ವರ್ಷದ ಹಿಂದಿನ ಹಿಂದೂ ದೇವಸ್ಥಾನ ಧ್ವಂಸ ಮಾಡಿದ ಪಾಕಿಸ್ತಾನ!

By Santosh NaikFirst Published Jul 16, 2023, 7:12 PM IST
Highlights

ಇಡೀ ನಗರದ ಕರೆಂಟ್‌ ತೆಗೆದು, ಸ್ಥಳೀಯ ಜನರಿಗೂ ಗೊತ್ತಾಗದಂತೆ ಒಂದೂವರೆ ಶತಮಾನದ ಹಿಂದಿನ ಹಿಂದು ದೇವಸ್ಥಾನವನ್ನು ಪಾಕಿಸ್ತಾನದ ಕರಾಚಿಯ ನಗರಪಾಲಿಕೆ ಧ್ವಂಸ ಮಾಡಿದೆ.

ಕರಾಚಿ (ಜು.16): ರಾತ್ರಿ ಬೆಳಗಾಗುವುದರ ಒಳಗಾಗಿ ಪಾಕಿಸ್ತಾನದ ಕರಾಚಿಯಲ್ಲಿ ಒಂದೂವರೆ ಶತಮಾನಗಳಷ್ಟು ಹಿಂದಿನ ಪುರಾತನ ಹಿಂದೂ ದೇವಸ್ಥಾನವನ್ನು ನಗರಪಾಲಿಕೆಯೇ ಕೆಡವಿ ಹಾಕಿದೆ. ಶನಿವಾರ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದ ಭಕ್ತಾದಿಗಳಿಗೆ ಸೋಲ್ಜರ್‌ ಬಜಾರ್‌ ರಸ್ತೆಯಲ್ಲಿ 150 ವರ್ಷಗಳ ಹಿಂದಿನಿಂದಲೂ ಇದ್ದ ಮಾರಿ ಮಾತಾ ದೇವಸ್ಥಾನ ಧ್ವಂಸವಾಗಿರುವುದು ಗೊತ್ತಾಗಿದೆ. ದೇವಸ್ಥಾನದ ಹೊರ ಆವರಣ ಗೋಡೆಗಳು ಎಂದಿನಂತೆಯೇ ಇದ್ದು, ಒಳ ಆವರಣದ ಎಲ್ಲಾ ನಿರ್ಮಾಣಗಳನ್ನು ಕೆಡವಿಹಾಕಲಾಗಿದೆ. ಶುಕ್ರವಾರ ರಾತ್ರಿ ನಡೀ ನಗರಕ್ಕೆ ವಿದ್ಯುತ್‌ ಸಂಪರ್ಕ ತಪ್ಪಿಸಿ ಈ ಕೆಲಸವನ್ನು ಮಾಡಲಾಗುದೆ. ವಿದ್ಯುತ್‌ ಇಲ್ಲದ ಸಂದರ್ಣದಲ್ಲಿ ಡಿಗ್ಗರ್‌ಗಳು ಹಾಗೂ ಬುಲ್ಡೋಜರ್‌ಗಳು ದೇವಸ್ಥಾನದ ಒಳ ಆವರಣ ಪ್ರವೇಶಿಸಿದ್ದವು. ಇದರಿಂದಾಗಿ ದೇವಸ್ಥಾನದ ಹೊರ ಆವರಣ, ಪ್ರಧಾನ ಗೇಟ್‌ಗಳಿಗೆ ಯಾವುದೇ ಹಾನಿಯಾಗಿಲ್ಲ. ಒಳ ಆವರಣದಲ್ಲಿದ್ದ ಎಲ್ಲಾ ನಿರ್ಮಾಣಗಳನ್ನು ಧ್ವಂಸ ಮಾಡಲಾಗಿದೆ. ಯಂತ್ರಗಳನ್ನು ನಿರ್ವಹಿಸುವ ವ್ಯಕ್ತಿಗಳಿಗೆ ‘ಕವರ್’ ನೀಡಲು ಅಲ್ಲಿ ಪೊಲೀಸರ ತುಕಡಿಗಳು ಕೂಡ ಇದ್ದವು ಎಂದು ಸ್ಥಳೀಯ ಜನರು ತಿಳಿಸಿದ್ದಾರೆ.

ಸೋಲ್ಜರ್ ಬಜಾರ್ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಮುಖಿ ಚೋಯಿತ್ರಂ ರಸ್ತೆಯಲ್ಲಿ ಮಾರಿ ಮಾತಾ ದೇವಾಲಯವಿತ್ತು. "ಇದು ಬಹಳ ಹಳೆಯ ಮಂದಿರವಾಗಿತ್ತ" ಎಂದು ಹತ್ತಿರದ ಮತ್ತೊಂದು ಅತ್ಯಂತ ಹಳೆಯ ದೇವಾಲಯವಾಗಿರುವ ಶ್ರೀ ಪಂಚಮುಖಿ ಹನುಮಾನ್ ಮಂದಿರದ ರಾಮ್ ನಾಥ್ ಮಿಶ್ರಾ ಮಹರಾಜ್ ತಿಳಿಸಿದ್ದಾರೆ.

"ಇದು 150 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಹೇಳಲಾಗಿತ್ತು. ಇದರ ಅಂಗಳದಲ್ಲಿ ಹಳೆ ಒಡವೆಗಳನ್ನು ಹೂತಿಟ್ಟಿರುವ ಕಥೆಗಳನ್ನೂ ಕೇಳಿದ್ದೇವೆ’ ಎಂದು ಹೇಳಿದ ಅವರು, ಸುಮಾರು 400ರಿಂದ 500 ಚದರ ಗಜಗಳಷ್ಟು ವಿಸ್ತೀರ್ಣ ಹೊಂದಿದ್ದು, ಕೆಲ ದಿನಗಳಿಂದ ಭೂಗಳ್ಳರ ಕಣ್ಣು ಇದರ ಮೇಲೆ ಬಿದ್ದಿದೆ ಎಂಬ ಮಾತು ಕೇಳಿಬರುತ್ತಿದೆ ಎಂದಿದ್ದಾರೆ. "ಮಂದಿರವು ಕರಾಚಿಯ ಮದ್ರಾಸಿ ಹಿಂದೂ ಸಮುದಾಯದ ನಿರ್ವಹಣೆಯಲ್ಲಿತ್ತು. ಇದು ಅತೀ ಹಳೆಯ ದೇವಸ್ಥಾನವಾಗಿದ್ದು, ಯಾವಾಗ ಬೇಕಾದರೂ ಉರುಳಿ ಹೋಗುವ ಅಪಾಯದಲ್ಲಿತ್ತು. ಇದರಿಂದಾಗಿ ಮಂದಿರವನ್ನು ಖಾಲಿ ಮಾಡುವಂತೆ ಮಂಡಳಿಯ ಮೇಲೆ ಒತ್ತಡ ಹೇರಲಾಗುತ್ತಿತ್ತು. ನವೀಕರಣ ಕಾರ್ಯ ಪೂರ್ಣವಾಗುವವರೆಗೆ ಒಳಚರಂಡಿಯ ಬಳಿ ಇರುವ ಸಣ್ಣ ಕೋಣೆಗೆ ದೇವರ ವಿಗ್ರಹಗಳನ್ನು ಸ್ಥಳಾಂತರ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಆದರೆ, ಶುಕ್ರವಾರ ರಾತ್ರಿ ಯಾವುದೇ ಸೂಚನೆ ನೀಡದೆ ಮಾರಿ ಮಾತಾ ದೇವಸ್ಥಾನವನ್ನು ಧರಗೆ ಉರುಳಿಸಲಾಗಿದೆ.

Latest Videos

Viral Video: ಸಮುದ್ರದ ದೈತ್ಯ ಅಲೆಗಳ ಮುಂದೆ ಫೋಟೋ ಪೋಸ್‌, ನೀರುಪಾಲಾದ ಪತ್ನಿ!

ಇಮ್ರಾನ್ ಹಶ್ಮಿ ಮತ್ತು ರೇಖಾ ಎಕೆಎ ನಾಗಿನ್ ಬಾಯಿ ಎಂಬ ಇಬ್ಬರು ವ್ಯಕ್ತಿಗಳು ತಮ್ಮನ್ನು ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮದ್ರಾಸಿ ಹಿಂದೂ ಸಮುದಾಯದ ಸದಸ್ಯರೊಬ್ಬರು ಇದೇ ವೇಳೆ ಹೇಳಿದರು. ದೇವಸ್ಥಾನವನ್ನು 70 ಮಿಲಿಯನ್ ರೂಪಾಯಿಗಳಿಗೆ ಬೇರೆ ಪಕ್ಷಕ್ಕೆ ಹೆಸರಿಸಿದ ಇಬ್ಬರು ಮಾರಾಟ ಮಾಡಿದ್ದಾರೆ ಮತ್ತು ಖರೀದಿದಾರರು ಅಲ್ಲಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲು ನೋಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದೆ. ‘ನವೈದ್’ ಎಂಬ ವ್ಯಕ್ತಿಯ ಹೆಸರಿನಲ್ಲಿ ಕೆಲವು ನಕಲಿ ದಾಖಲೆಗಳ ಉಲ್ಲೇಖವೂ ಇತ್ತು, ಈ ದೇವಸ್ಥಾನದ ಜಾಗದ ಗುತ್ತಿಗೆಯನ್ನು ವಾಣಿಜ್ಯ ಸಂಕೀರ್ಣಕ್ಕೆ ಇದು ಅವಕಾಶ ಮಾಡಿಕೊಟ್ಟಿದೆ.

ಹರ್ಯಾಣಿ ಸಾಂಗ್‌ಗೆ ಡಾನ್ಸ್‌ ಮಾಡಿದ ಸೋನಿಯಾ ಗಾಂಧಿ, ವಿಡಿಯೋ ವೈರಲ್‌!

ಸಮುದಾಯವು ಪಾಕಿಸ್ತಾನ-ಹಿಂದೂ ಕೌನ್ಸಿಲ್, ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ ಮತ್ತು ಸಿಂಧ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅವರ ಗಮನಕ್ಕೆ ತೆಗೆದುಕೊಂಡು ತುರ್ತು ಆಧಾರದ ಮೇಲೆ ವಿಷಯವನ್ನು ಪರಿಶೀಲಿಸುವಂತೆ ಮನವಿ ಮಾಡಿದೆ.

click me!