ಮೃತದೇಹದ ಅಂಗಾಂಗ ಕದ್ದು ಮಾರಾಟ: ಮೆಡಿಕಲ್ ಕಾಲೇಜು ಆಸ್ಪತ್ರೆ ಶವಾಗಾರದ ಮುಖ್ಯಸ್ಥ ಅಂದರ್

Published : Jun 15, 2023, 01:38 PM ISTUpdated : Jun 15, 2023, 01:41 PM IST
ಮೃತದೇಹದ ಅಂಗಾಂಗ ಕದ್ದು ಮಾರಾಟ: ಮೆಡಿಕಲ್ ಕಾಲೇಜು ಆಸ್ಪತ್ರೆ ಶವಾಗಾರದ ಮುಖ್ಯಸ್ಥ ಅಂದರ್

ಸಾರಾಂಶ

ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸುಲಭವಾಗಲಿ ಎಂದು ಮೃತರ ಕುಟುಂಬಸ್ಥರು ಶವಗಳನ್ನು ಮೆಡಿಕಲ್ ಕಾಲೇಜುಗಳಿಗೆ ದಾನ ಮಾಡುತ್ತಾರೆ. ಆದರೆ ಹೀಗೆ ದಾನ ನೀಡಿದ ಶವಗಳ ಭಾಗಗಳನ್ನು ಶವಾಗಾರದ ಮುಖ್ಯಸ್ಥರು ಕದ್ದು ಮಾರಾಟ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

ನ್ಯೂಯಾರ್ಕ್‌: ಪ್ರಪಂಚದಲ್ಲಿ ಎಂತೆಂಥಾ ಮನುಷ್ಯರೆಲ್ಲಾ ಇರ್ತಾರೆ ನೋಡಿ, ಹಣ ಸಿಗುತ್ತೆ ಅಂದ್ರೆ  ಇಂಥವರು ಎಂಥಾ ಹೇಯ ಕೃತ್ಯ ಮಾಡಲು ಕೂಡ ರೆಡಿ ಇರ್ತಾರೆ. ಇವರು ಸತ್ತವರನ್ನು ಕೂಡ ನೆಮ್ಮದಿ ಆಗಿ ಇರೋಕೆ ಬಿಡಲ್ಲ ನೋಡಿ, ಹೌದು ಅಮೆರಿಕಾ ಪ್ರತಿಷ್ಠಿತ ಹಾರ್ವರ್ಡ್‌ ಮೆಡಿಕಲ್ ಕಾಲೇಜಿನಲ್ಲಿ ಹೇಯ ಕೃತ್ಯವೊಂದು ನಡೆದಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸುಲಭವಾಗಲಿ ಎಂದು ಮೃತರ ಕುಟುಂಬಸ್ಥರು ಶವಗಳನ್ನು ಮೆಡಿಕಲ್ ಕಾಲೇಜುಗಳಿಗೆ ದಾನ ಮಾಡುತ್ತಾರೆ. ಅಂತಹವರ ಒಳ್ಳೆಯ ಮನಸ್ಥಿತಿಯಿಂದಲೇ ಅನೇಕ ವಿದ್ಯಾರ್ಥಿಗಳು ಉತ್ತಮ ವೈದ್ಯರಾಗಿ ಸಮಾಜಕ್ಕೆ ಕೊಡುಗೆ ನೀಡುತ್ತಾರೆ. ಆದರೆ ಹೀಗೆ ದಾನ ನೀಡಿದ ಶವಗಳ ಭಾಗಗಳನ್ನು ಶವಾಗಾರದ ಮುಖ್ಯಸ್ಥರು ಕದ್ದು ಮಾರಾಟ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

ತಾನು ಕೆಲಸ ಮಾಡುತ್ತಿದ್ದ ಹಾರ್ವರ್ಡ್‌ ಮೆಡಿಕಲ್ ಕಾಲೇಜಿನ ಶವಾಗಾರದಿಂದ ಆತ ಯಾವುದೇ ಅನುಮತಿ ಪಡೆಯದೇ ಶವಗಳ ದೇಹದಿಂದ ಕೆಲವು ಭಾಗಗಳನ್ನು ಕದ್ದು ಮಾರಾಟ ಮಾಡಿದ್ದಾನೆ. 55 ವರ್ಷದ ಸೆಡ್ರಿಕ್ ಲಾಡ್ಜ್ ಎಂಬಾತನೇ ಈ ಶವ ಬಿಡಿಭಾಗಗಳ ಕಳ್ಳಸಾಗಣೆಯ ದಂಧೆಗಿಳಿದ ಪ್ರಮುಖ ಆರೋಪಿ. ಈತ ವಿಶ್ವವಿದ್ಯಾನಿಲಯದ ಶವಾಗಾರದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ ಎಂದು  ಅಮೆರಿಕಾದ ಪ್ರಾಸಿಕ್ಯೂಟರ್ ಹೇಳಿದ್ದಾರೆ. 

55 ವರ್ಷದ ಸೆಡ್ರಿಕ್ ಲಾಡ್ಜ್ ವಿರುದ್ಧ ಮಾನವ ಅವಶೇಷಗಳ ಕಳ್ಳಸಾಗಣೆ ಮಾಡಿದ ಆರೋಪ ಹೊರಿಸಲಾಗಿದೆ ಎಂದು ಪೆನ್ಸಿಲ್ವೇನಿಯಾದ ಮಧ್ಯ ಜಿಲ್ಲೆಗೆ  ಅಟಾರ್ನಿಯಾಗಿರುವ ರಾರ್ಡ್ ಕರಮ್ ಅವರು ಹೇಳಿದ್ದಾರೆ. ಕೆಲವು ಅಪರಾಧಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವೈದ್ಯಕೀಯ ಶಿಕ್ಷಣ ಪಡೆಯುವವರಿಗೆ ನೆರವಾಗಲಿ ಹಾಗೂ ವಿಜ್ಞಾನ ಹಾಗೂ ಕಾಯಿಲೆಯ ಗುಣಪಡಿಸುವಿಕೆಯಲ್ಲಿ ಮತ್ತಷ್ಟು ಸಂಶೋಧನೆಗಳಾಗಲಿ ಎಂಬ ಕಾರಣಕ್ಕೆ ಇಲ್ಲಿ ಅನೇಕರು ತಮ್ಮವರ ಮೃತದೇಹಗಳನ್ನು ಬಿಟ್ಟು ಹೋಗಿದ್ದಾರೆ. ಅಂತಹವರೇ ಈ ಪ್ರಕರಣದ ಸಂತ್ರಸ್ತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. 

Necrophilia: ಶವಾಗಾರದಲ್ಲೂ ಮಹಿಳಾ ಶವದ ಮೇಲೆ ನಡೆಯೋತ್ತಾ ಸಂಭೋಗ?

ಇತ್ತ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಸೆಡ್ರಿಕ್ ಲಾಡ್ಜ್  ಜೊತೆ ಆತನ ಪತ್ನಿಯನ್ನು ಕೂಡ ಬಂಧಿಸಲಾಗಿದೆ, ಸೆಡ್ರಿಕ್ ಪತ್ನಿ 63 ವರ್ಷದ ಡೆನಿಸ್ ಲಾಡ್ಜ್ ಅಲ್ಲದೇ ಇತರ ಐವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಇವರು ಮಾನವ ದೇಹದ ಭಾಗಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ರಾಷ್ಟ್ರವ್ಯಾಪಿ ಜಾಲವನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. 2018 ರಿಂದ 2022 ರವರೆಗೆ ಸೆಡ್ರಿಕ್ ಲಾಡ್ಜ್  ಅವರು, 'ನಿಗದಿತ ಶವಸಂಸ್ಕಾರದ ಮೊದಲು ವೈದ್ಯಕೀಯ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ದಾನ ಮಾಡಿದ ಶವಗಳ ಹಲವು ಅಂಗಗಳನ್ನು ಕದ್ದಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. 

ಬೋಸ್ಟನ್‌ನ ಹಾರ್ವರ್ಡ್ ವಿವಿಯ ಶವಾಗಾರದಿಂದ ಈ ಖದೀಮರು ನ್ಯೂ ಹ್ಯಾಂಪ್‌ಶೈರ್‌ನ ಗೋಫ್‌ಸ್ಟೌನ್‌ನಲ್ಲಿರುವ ಅವರ ಮನೆಗೆ ಮೃತದೇಹದ ಅವಶೇಷಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿ ಸೆಡ್ರಿಕ್ ಹಾಗೂ ಆತನ ಪತ್ನಿ ಅದನ್ನು ಇತರ ಆರೋಪಿಗಳಾದ 44 ವರ್ಷದ ಕತ್ರಿನಾ ಮ್ಯಾಕ್ಲೀನ್ (Katrina Maclean) ಮತ್ತು 46 ವರ್ಷದ ಜೋಶುವಾ ಟೇಲರ್‌ಗೆ (Joshua Taylor)ಮಾರಾಟ ಮಾಡುತ್ತಿದ್ದರು. 

ಇಷ್ಟು ಮಾತ್ರವಲ್ಲದೇ ಕೆಲವೊಮ್ಮೆ, ಲಾಡ್ಜ್  ಇತರ ಆರೋಪಿಗಳಾದ ಮ್ಯಾಕ್ಲೀನ್ ಮತ್ತು ಟೇಲರ್‌ಗೆ ಮೆಡಿಕಲ್ ಕಾಲೇಜಿನ ಶವಾಗಾರವನ್ನು ಪ್ರವೇಶಿಸುವುದಕ್ಕೂ ಅವಕಾಶ ಮಾಡಿಕೊಟ್ಟು ದೇಹದ ಯಾವ ಭಾಗ ನಿಮಗೆ ಬೇಕು ಎಂದು ಮೃತದೇಹ ಪರೀಕ್ಷಿಸಿ ಆಯ್ಕೆ ಮಾಡಿ ಹೇಳಿದ್ದ.  ಮ್ಯಾಸಚೂಸೆಟ್ಸ್ (Massachusetts) ಬಳಿಯ ಸೇಲಂನ ನಿವಾಸಿಯಾದ ಕತ್ರೀನಾ ಮ್ಯಾಕ್ಲೀನ್ ಮತ್ತು ಪೆನ್ಸಿಲ್ವೇನಿಯಾದ (Pennsylvania) ವೆಸ್ಟ್ ಲಾನ್‌ನ ನಿವಾಸಿಯಾದ ಜೋಶುವಾ ಟೇಲರ್  ನಂತರ ಲಾಭಕ್ಕಾಗಿ ಮೃತದೇಹದ ಅಂಗಾಂಗಗಳನ್ನು ಮರುಮಾರಾಟ ಮಾಡಿದ್ದರು. ಎಂದು ವಕೀಲರು ಆರೋಪಿಸಿದ್ದಾರೆ.  ಆರೋಪಿಗಳಲ್ಲಿ ಕತ್ರಿನಾ ಮ್ಯಾಕ್ಲಿನ್, ಮತ್ತೊಬ್ಬ ಆರೋಪಿ  ಟೇಲರ್‌ಗೆ ಮಾನವ ಚರ್ಮವನ್ನು ರವಾನಿಸಿ ಅದನ್ನು ಟ್ಯಾನ್ ಮಾಡಿ ಲೆದರ್ ಮಾಡಲು ಹೇಳಿದ್ದಳು ಎಂದು ಬೋಸ್ಟನ್ ಗ್ಲೋಬ್ ವರದಿ ಮಾಡಿದೆ.

ಒಡಿಶಾ ತ್ರಿವಳಿ ರೈಲು ದುರಂತ: ತುಂಬಿ ತುಳುಕುತ್ತಿರುವ ಶವಾಗಾರಗಳು: ಮೃತರ ಗುರುತು ಪತ್ತೆ ಆಗದೆ ಸಂಕಟ

ಹಾರ್ವರ್ಡ್‌ ವಿಶ್ವವಿದ್ಯಾಲಯದ 'ಅಂಗರಚನಾಶಾಸ್ತ್ರದ ಉಡುಗೊರೆಗಳ ಕಾರ್ಯಕ್ರಮ'ಕ್ಕಾಗಿ (anatomical gifts program) ಪ್ರಮುಖ ಆರೋಪಿ ಸೆಡ್ರಿಕ್ ಲಾಡ್ಜ್ ಶವಾಗಾರವನ್ನು ನಿರ್ವಹಿಸುತ್ತಿದ್ದರು. ಆದರೆ ಈ ವಿಚಾರ ಬೆಳಕಿಗೆ ಬಂದ ಬಳಿಕ ಮೇ 6 ರಂದು ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ' ಎಂದು ಮೆಡಿಕಲ್ ಕಾಲೇಜು ತನ್ನ ಹೇಳಿಕೆಯಲ್ಲಿ ತಿಳಿಸಿದೆ.  ಘಟನೆ ಬೆಳಕಿಗೆ ಬಂದ ಬಳಿಕ, 'ನಮ್ಮ ಕ್ಯಾಂಪಸ್‌ನಲ್ಲಿಇಂತಹ ಘಟನೆ ನಡೆದಿದೆ ಎಂಬುದು ತಿಳಿದು ನಮಗೆ ದಿಗ್ಭ್ರಮೆಯಾಗಿದೆ' ಎಂದು  ಹಾರ್ವರ್ಡ್ ವಿಶ್ವವಿದ್ಯಾಲಯದ ಔಷಧ ವಿಭಾಗದ ಡೀನ್ ಜಾರ್ಜ್ ಡೇಲಿ (George Daley) ಮತ್ತು ವೈದ್ಯಕೀಯ ಶಿಕ್ಷಣದ ಡೀನ್ ಎಡ್ವರ್ಡ್ ಹಂಡರ್ಟ್ (Edward Hundert) ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬರು ತಾನು ಕೆಲಸ ಮಾಡುತ್ತಿದ್ದ  ಅರ್ಕಾನ್ಸಾಸ್‌ನಲ್ಲಿನ ಶವಾಗಾರದಿಂದಲೂ ಮೃತದೇಹದ ಅಂಗಾಂಗಗಳನ್ನು ಕದ್ದಿದ್ದಳು. ಇತರ ಇಬ್ಬರು ಆರೋಪಿಗಳು ಒಂದು ಲಕ್ಷ ಡಾಲರ್‌ಗಿಂಲೂ ಹೆಚ್ಚು ಹಣ ಆನ್‌ಲೈನ್‌ನಲ್ಲಿ ಪಾವತಿ ಮಾಡಿ ಪರಸ್ಪರ ಮೃತದೇಹಗಳ ಅಂಗಾಂಗಗಳನ್ನು ಖರೀದಿಸಿ ಮಾರಾಟ ಮಾಡಿದ್ದಾರೆ ಎಂಬ ಆರೋಪವನ್ನು ವಕೀಲರು ಮಾಡಿದ್ದು, ವಿಚಾರಣೆ ಮುಂದುವರೆದಿದೆ.  ಎಂಥಾ ಕಾಲ ಬಂತು ನೋಡಿ, ಸತ್ತವರನ್ನು ದೇವರ ಸಮಾನರೆಂದು ಭಾವಿಸಿ ಅವರ ನೆನಪುಗಳಲ್ಲೇ ಅವರ ಪ್ರೀತಿಪಾತ್ರರು ಕುಟುಂಬದವರು ಜೀವನ ಮಾಡುತ್ತಾರೆ. ಆದರೆ ದುಷ್ಕರ್ಮಿಗಳು ಸತ್ತವರನ್ನು ಬಿಡದೇ ಹಣಕ್ಕೆ ದಾರಿ ಮಾಡಿಕೊಂಡಿದ್ದು, ವಿಪರ್ಯಾಸವೇ ಸರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ