ಕೊಲಂಬೋದ ಸೇನಾ ಆಸ್ಪತ್ರೆಯಲ್ಲಿ ಈ ತಿಂಗಳ ಆರಂಭದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸೇನೆಯು ಮಂಗಳವಾರ ತಿಳಿಸಿದೆ. ಈ ಮೂಲಕ 13 ಸೆ.ಮೀ ಗಾತ್ರದ ಕಿಡ್ನಿ ಸ್ಟೋನ್ ಹೊರತೆಗೆದಿದ್ದ ಭಾರತದ ದಾಖಲೆಯನ್ನು ಮುರಿದಂತಾಗಿದೆ.
ಕೊಲಂಬೋ (ಜೂನ್ 15, 2023): ಪ್ರಪಂಚದ ಅತಿ ದೊಡ್ಡ ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಅನ್ನು ಹೊರತೆಗೆಯುವ ಮೂಲಕ ಶ್ರೀಲಂಕಾ ಸೇನಾ ವೈದ್ಯರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸುಮಾರು 801 ಗ್ರಾಂ ತೂಕವಿರುವ 13.372 ಸೆ.ಮೀ (5.264 ಇಂಚು) ಉದ್ದವಿರುವ ಕಿಡ್ನಿ ಸ್ಟೋನ್ ಹೊರತೆಗೆಯಲಾಗಿದ್ದು ಇದು ಪ್ರಪಂಚದಲ್ಲಿ ಈವರೆಗೆ ಓರ್ವ ವ್ಯಕ್ತಿಯ ಮೂತ್ರಪಿಂಡದಿಂದ ಹೊರತೆಗೆಯಲಾದ ಅತಿ ದೊಡ್ಡ ಕಲ್ಲಾಗಿದೆ.
ಕೊಲಂಬೋದ ಸೇನಾ ಆಸ್ಪತ್ರೆಯಲ್ಲಿ ಈ ತಿಂಗಳ ಆರಂಭದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸೇನೆಯು ಮಂಗಳವಾರ ತಿಳಿಸಿದೆ. ಈ ಮೂಲಕ 13 ಸೆ.ಮೀ ಗಾತ್ರದ ಕಿಡ್ನಿ ಸ್ಟೋನ್ ಹೊರತೆಗೆದಿದ್ದ ಭಾರತದ ದಾಖಲೆಯನ್ನು ಮುರಿದಂತಾಗಿದೆ.
undefined
ಇದನ್ನು ಓದಿ: ಇದೇ ವಿಶ್ವದ ದುಬಾರಿ ಐಸ್‌ಕ್ರೀಂ: ಈ ಬೆಲೆಯಲ್ಲಿ ಒಂದು ಕಾರೇ ತಗೋಬೋದು!
ಮಾಜಿ ಸರ್ಜೆಂಟ್ ಕ್ಯಾನಿಸ್ಟಸ್ ಕೂಂಗೆ ಅವರಿಂದ ತೆಗೆದ ಕಲ್ಲು 801 ಗ್ರಾಂ (28.25 ಔನ್ಸ್) ತೂಕವನ್ನು ಹೊಂದಿದ್ದು, ಸರಾಸರಿ ಪುರುಷ ಮೂತ್ರಪಿಂಡದ ತೂಕಕ್ಕಿಂತ ಐದು ಪಟ್ಟು ಹೆಚ್ಚು ಎಂದು ಸೇನೆ ಹೇಳಿದೆ. ಸರಾಸರಿ ಮೂತ್ರಪಿಂಡವು ಸುಮಾರು 10 ರಿಂದ 12 ಸೆಂಟಿಮೀಟರ್ ಉದ್ದವಾಗಿದೆ.. "ಜೂನ್ 1 ರಂದು ಕೊಲಂಮೋ ಆರ್ಮಿ ಆಸ್ಪತ್ರೆಯಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆಯ ಮೂಲಕ ವಿಶ್ವದ ಅತಿದೊಡ್ಡ ಮತ್ತು ಭಾರವಾದ ಮೂತ್ರಪಿಂಡದ ಕಲ್ಲನ್ನು ತೆಗೆದುಹಾಕಲಾಯಿತು" ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು, ‘’ತನಗೆ 2020 ರಿಂದ ಹೊಟ್ಟೆ ನೋವು ಇದೆ ಮತ್ತು ಮೌಖಿಕ ಔಷಧವು ಸಹಾಯ ಮಾಡಲಿಲ್ಲ. ಇತ್ತೀಚೆಗೆ ಸ್ಕ್ಯಾನ್ ಮಾಡಿದ ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿತ್ತು. ನಾನು ಈಗ ಸಾಮಾನ್ಯ ಎಂದು ಭಾವಿಸುತ್ತೇನೆ’’ ಎಂದು ಮಾಜಿ ಸರ್ಜೆಂಟ್ ಕ್ಯಾನಿಸ್ಟಸ್ ಕೂಂಗೆ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: 3 ದಿನದಲ್ಲಿ 7 ಖಂಡ ಸುತ್ತಿ ಗಿನ್ನೆಸ್ ದಾಖಲೆ: ಭಾರತೀಯ ಅಲಿ ಇರಾನಿ, ಸುಜೋಯ್ ಕುಮಾರ್ ಮಿತ್ರಾ ಸಾಹಸ
2008 ರಲ್ಲಿ ಪಾಕಿಸ್ತಾನದ ರೋಗಿಯೊಬ್ಬರಲ್ಲಿ 620 ಗ್ರಾಂಗಳಷ್ಟು ತೂಕದ ಮೂತ್ರಪಿಂಡ ಕಲ್ಲು ಪತ್ತೆಯಾಗಿತ್ತು. ಇದು ಸಹ ಗಿನ್ನೆಸ್ ದಾಖಲೆ ಪುಟಕ್ಕೆ ಸೇರಿತ್ತು.
ಇಷ್ಟು ದೊಡ್ಡ ಕಲ್ಲಿನ ಹೊರತಾಗಿಯೂ ಮೂತ್ರಪಿಂಡವು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನಮಗೆ ಅತ್ಯಂತ ಮುಖ್ಯವಾದ ವಿಷಯವಾಗಿದೆ ಎಂದು ಸೇನಾ ಶಸ್ತ್ರಚಿಕಿತ್ಸಕ ಕೆ.ಸುದರ್ಶನ್ ಹೇಳಿದರು. ಮೂತ್ರಪಿಂಡದಲ್ಲಿ ಖನಿಜಗಳು ಮತ್ತು ಲವಣಗಳು ರಕ್ತವನ್ನು ಶೋಧಿಸುವಾಗ ಸ್ಫಟಿಕೀಕರಣಗೊಂಡಾಗ ಕಲ್ಲುಗಳು ಉಂಟಾಗುತ್ತವೆ.
ಇದನ್ನೂ ಓದಿ: ಕಚೇರಿಯಲ್ಲೇ ಕೆಲಸದ ನಡುವೆ ಅಲ್ಪಾವಧಿಯ ಯೋಗ ಮಾಡಿ: ಸಿಬ್ಬಂದಿಗೆ ಕೇಂದ್ರ ಸರ್ಕಾರ ಸಲಹೆ
ಈ ಕಿಡ್ನಿ ಸ್ಟೋನ್‌ಗಳು ವ್ಯಕ್ತಿಯಲ್ಲಿ ಸಿಕ್ಕಾಪಟ್ಟೆ ನೋವನ್ನು ಉಂಟುಮಾಡಬಹುದು. ಅವು ತುಂಬಾ ದೊಡ್ಡದಾಗಿದ್ದರೆ ಮತ್ತು ಸಿಲುಕಿಕೊಂಡರೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.
ಇದನ್ನೂ ಓದಿ: 40 ದಿನ ಬೀಜ, ಬೇರು, ಸಸ್ಯ ತಿಂದು ಬದುಕಿದ್ದ ಕಾಡಿನ ಮಕ್ಕಳು: ಅಮೆಜಾನ್ ಅರಣ್ಯದಲ್ಲಿ ನಾಪತ್ತೆಯಾಗಿದ್ದ ನಾಲ್ವರ ರೋಚಕ ಕತೆ