ಪ್ರತಿಭಟನೆಗೆ ಬೆಚ್ಚಿ ಬಂಕರಲ್ಲಿ ಅಡಗಿದ ಡೊನಾಲ್ಡ್‌ ಟ್ರಂಪ್‌!

By Kannadaprabha News  |  First Published Jun 2, 2020, 7:12 AM IST

ಕಪ್ಪು ವರ್ಣೀಯನ ಸಾವು: ಅಮೆರಿಕದಲ್ಲಿ ಹಿಂಸಾಚಾರ| ಶ್ವೇತಭವನದತ್ತ ನುಗ್ಗಿದ ಭಾರಿ ಸಂಖ್ಯೆಯ ಜನರು| ವೈಟ್‌ಹೌಸ್‌ ಪಕ್ಕದ ಪಾರ್ಕ್ಗೆ ಬೆಂಕಿ, ಅಶ್ರುವಾಯು| 1 ತಾಸು ಟ್ರಂಪ್‌ರನ್ನು ಬಂಕರ್‌ನಲ್ಲಿಟ್ಟ ಭದ್ರತಾಪಡೆ| ಹಿಂಸಾಚಾರ ತೀವ್ರ, 40 ನಗರಗಳಲ್ಲಿ ಕರ್ಫ್ಯೂ| ಪ್ರತಿಭಟನೆಗೆ ಬೆಚ್ಚಿ ಬಂಕರಲ್ಲಿ ಅಡಗಿದ ಡೊನಾಲ್ಡ್‌ ಟ್ರಂಪ್‌!| 


ವಾಷಿಂಗ್ಟನ್(ಜೂ.02): ಕಪ್ಪುವರ್ಣೀಯ ವ್ಯಕ್ತಿಯೊಬ್ಬ ಪೊಲೀಸ್‌ ದೌರ್ಜನ್ಯಕ್ಕೆ ಬಲಿಯಾದ ಬಳಿಕ ಅಮೆರಿಕದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮತ್ತಷ್ಟುನಗರಗಳಿಗೆ ವ್ಯಾಪಿಸಿದೆ. ಅಧ್ಯಕ್ಷರ ಅಧಿಕೃತ ನಿವಾಸ ಹಾಗೂ ಕಚೇರಿಯಾಗಿರುವ ‘ಶ್ವೇತಭವನ’ದ ಬಳಿ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಶ್ವೇತಭವನದ ಕೆಳಗಿನ ಬಂಕರ್‌ನಲ್ಲಿ ಭದ್ರತಾ ಸಿಬ್ಬಂದಿ ರಕ್ಷಿಸಿಟ್ಟ ಅಪರೂಪದ ಘಟನೆ ನಡೆದಿದೆ.

ಅಮೆರಿಕದಲ್ಲಿ ಈಗ ಸಿಕ್ಕ ಸಿಕ್ಕ ಅಂಗಡಿ ಲೂಟಿ: ಆ್ಯಪಲ್‌ ಸ್ಟೋರ್‌ ಕೆಲ ನಿಮಿಷದಲ್ಲೇ ಖಾಲಿ!

Tap to resize

Latest Videos

ಕಳೆದ ಶುಕ್ರವಾರ ಏಕಾಏಕಿ ಶ್ವೇತಭವನದ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಭಟನಾಕಾರರು ಆಗಮಿಸಿದ ಹಿನ್ನೆಲೆಯಲ್ಲಿ ಬೇಹುಗಾರಿಕಾ ಪಡೆ ಮತ್ತು ಇತರೆ ಭದ್ರತಾ ಪಡೆಗಳು ಮುನ್ನೆಚ್ಚರಿಕಾ ಕ್ರಮವಾಗಿ ಟ್ರಂಪ್‌ರನ್ನು ಬಂಕರ್‌ಗೆ ಕರೆದೊಯ್ದು ರಕ್ಷಣೆ ಒದಗಿಸಿದ್ದರು. ಒಂದು ತಾಸು ಬಂಕರ್‌ನಲ್ಲಿದ್ದ ಟ್ರಂಪ್‌ ಅವರನ್ನು ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಮೇಲಕ್ಕೆ ಕರೆತರಲಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ‘ದ ನ್ಯೂಯಾರ್ಕ್ ಟೈಮ್ಸ್‌’ ಪತ್ರಿಕೆ ವರದಿ ಮಾಡಿದೆ. ಈ ವೇಳೆ ಟ್ರಂಪ್‌ರ ಪತ್ನಿ ಮೆಲಾನಿಯಾ ಇದ್ದರೇ ಎಂಬುದರ ಬಗ್ಗೆ ಖಚಿತಪಟ್ಟಿಲ್ಲ. ಅಮೆರಿಕ ಅಧ್ಯಕ್ಷರಂತಹ ಟ್ರಂಪ್‌ ಅವರೇ ಬಂಕರ್‌ನಲ್ಲಿ ಅಡಗುವಂತೆ ಮಾಡಿದ ಪ್ರತಿಭಟನೆ ಈಗ ಜಗತ್ತಿನಾದ್ಯಂತ ಚರ್ಚೆಗೂ ಕಾರಣವಾಗಿದೆ.

"

ಈ ನಡುವೆ ಭಾನುವಾರ ಕೂಡ ಶ್ವೇತಭವನದ ಸಮೀಪ ಧಾವಿಸಿದ ಪ್ರತಿಭಟನಾಕಾರರು ಪಾರ್ಕ್ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆಶ್ರುವಾಯು, ಶೆಲ್‌, ಪೆಪ್ಪರ್‌ಸ್ಪ್ರೇ ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸುವ ಯತ್ನ ಮಾಡಿದ್ದಾರೆ.

ಅಮೆರಿಕದಲ್ಲಿ ಜನಾಂಗೀಯ ಕಿಚ್ಚು ಧಗಧಗ!

40 ನಗರಗಳಲ್ಲಿ ಕರ್ಫ್ಯೂ:

ಪ್ರತಿಭಟನೆ ಮತ್ತು ಹಿಂಸಾಚಾರ ವ್ಯಾಪಕವಾದ ಹಿನ್ನೆಲೆಯಲ್ಲಿ ಅಮೆರಿಕದ 40ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಕಫ್ರ್ಯೂ ಹೇರಲಾಗಿದೆ. ಮತ್ತೊಂದೆಡೆ ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯನಿರತ ಪತ್ರಕರ್ತರ ಮೇಲೆ ಪ್ರತಿಭಟನಾಕಾರರು ಮತ್ತು ಪೊಲೀಸರಿಂದ ಹಲ್ಲೆಗಳು ನಡೆದಿವೆ. ಹಲವು ಕಡೆ ಪತ್ರಕರ್ತರನ್ನು ವಿನಾಕಾರಣ ಬಂಧಿಸಿದ ಆರೋಪವು ಕೇಳಿಬಂದಿದೆ.

ಅಮೆರಿಕದಲ್ಲಿ ಸರ್ಕಾರ ಮತ್ತು ಪೊಲೀಸರ ವಿರುದ್ಧ ನಡೆಯುತ್ತಿರುವ ಹೋರಾಟ ಬೆಂಬಲಿಸಿ, ಬ್ರಿಟನ್‌, ಕೆನಡಾ, ನ್ಯೂಜಿಲೆಂಡ್‌ ಸೇರಿದಂತೆ ಹಲವು ದೇಶಗಳಲ್ಲಿನ ವಿವಿಧ ಸಂಘಟನೆಗಳು, ತಾವು ಪ್ರತಿಭಟನೆ ನಡೆಸಿ ಬೆಂಬಲ ವ್ಯಕ್ತಪಡಿಸಿವೆ.

ಲೈವ್‌ ಚಾಟ್‌ ವೇಳೆಯೇ ಅಮೆರಿಕ ಪತ್ರಕರ್ತ ಅರೆಸ್ಟ್‌!

ಲೂಟಿ:

ಈ ನಡುವೆ ಪ್ರತಿಭಟನೆ ನಡುವೆಯೇ ಲೂಟಿ ನಡೆಸುವ ಪ್ರಕರಣಗಳು ಮತ್ತಷ್ಟುವ್ಯಾಪಕವಾಗಿದೆ. ಮತ್ತೊಂದೆಡೆ ಲೂಟಿ ಮಾಡಿಕೊಂಡು ಬಂದವರಿಂದಲೇ ದುಷ್ಕರ್ಮಿಗಳ ತಂಡ ಲೂಟಿ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಂತ್ಯಸಂಸ್ಕಾರ:

ಇದೇ ವೇಳೆ ಪೊಲೀಸ್‌ ದೌರ್ಜನ್ಯಕ್ಕೆ ಬಲಿಯಾದ ಜಾಜ್‌ ಫ್ಲೋಯ್ಡ್‌ ಅಂತ್ಯಸಂಸ್ಕಾರವನ್ನು ಮಿನ್ನೆಸೋಟಾ ಬದಲು ಅವರ ತವರು ರಾಜ್ಯ ಹೂಸ್ಟನ್‌ನಲ್ಲೇ ನಡೆಸಲಾಗುವುದು ಎಂದು ಹೂಸ್ಟನ್‌ನ ಮೇಯರ್‌ ಘೋಷಿಸಿದ್ದಾರೆ. ಶನಿವಾರ ಅಂತ್ಯಸಂಸ್ಕಾರ ನಡೆವ ಸಾಧ್ಯತೆ ಇದೆ.

click me!