ಕೊರೋನಾ ಲಸಿಕೆ ಎಲ್ಲಿಗೆ ಬಂತು?| 120 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿ| 10 ಲಸಿಕೆಗಳು ಮಾನವ ಪ್ರಯೋಗ ಹಂತಕ್ಕೆ
ನವದೆಹಲಿ(ಜೂ.01): ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯಲು ಅಮೆರಿಕ, ಚೀನಾ, ರಷ್ಯಾ ಸೇರಿದಂತೆ ವಿಶ್ವದ ಪ್ರಮುಖ ದೇಶಗಳ ಔಷಧ ತಯಾರಿಕಾ ಕಂಪನಿಗಳು ಹಗಲಿರುಳು ಶ್ರಮಿಸುತ್ತಿವೆ. ಒಂದು ವೇಳೆ ಈ ಪ್ರಯತ್ನ ಯಶಸ್ವಿಯಾದರೆ ಈ ವರ್ಷದ ಅಂತ್ಯದೊಳಗೆ ಕೊರೋನಾ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ.
ಪ್ರಸ್ತುತ ವಿಶ್ವದೆಲ್ಲೆಡೆ ಸುಮಾರು 120 ಲಸಿಕೆಗಳು ಅಭಿವೃದ್ಧಿಯ ಹಂತದಲ್ಲಿವೆ. ಅವುಗಳ ಪೈಕಿ 10 ಲಸಿಕೆಗಳು ಮಾನವನ ಪ್ರಯೋಗ ಹಂತ ತಲುಪಿವೆ. ಚೀನಾದ ಕ್ಯಾನ್ಸಿನೊ ಅಡೆನೊ ವೈರಸ್ ಲಸಿಕೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಡೆನೊವೈರಸ್ ವ್ಯಾಕ್ಸಿನ್, ಮೊಡೆರ್ನಾದ ಎಂಆರ್‌ಎನ್‌ಎ ಲಸಿಕೆ, ಮತ್ತು ನೊವಾವಾಕ್ಸ್ ಲಸಿಕೆಗಳು ಕೊರೋನಾಕ್ಕೆ ಪರಿಣಾಮಕಾರಿ ಆಗಬಲ್ಲ ಭರವಸೆ ಮೂಡಿಸಿವೆ.
undefined
ಎಲ್ಲಿ ಯಾವ ಹಂತ?
ಚೀನಾದಲ್ಲಿ ಕೊರೋನಾವ್ಯಾಕ್
ಚೀನಾದ ಔಷಧ ಕಂಪನಿಗಳು 5 ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು, ಮಾನವನ ಮೇಲೆ ಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಚೀನಾದ ಸಿನೊವ್ಯಾಕ್ ಬಯೋಟೆಕ್ ಕಂಪನಿ ಕೊರೋನಾವ್ಯಾಕ್ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ವೈರಸ್ ವಿರುದ್ಧ ಶೇ.99ರಷ್ಟುಪರಿಣಾಮಕಾರಿಯಾಗಬಲ್ಲದು ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಈಗಾಗಲೇ ಈ ಲಸಿಕೆಯನ್ನು 1000 ಸ್ವಯಂಸೇವಕರ ಮೇಲೆ ಪ್ರಯೋಗಕ್ಕೆ ಒಳಪಡಿಸಲಾಗಿದೆ.
ಅಮೆರಿಕದಲ್ಲಿ ಎಂಆರ್‌ಎನ್‌ಎ
ಅಮೆರಿಕದ ಮೊಡೆರ್ನಾ ಐಎನ್‌ಸಿ ಸಂಸ್ಥೆ ಕೊರೋನಾಕ್ಕೆ ಎಂಆರ್‌ಎನ್‌ಎ ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, 600 ರೋಗಿಗಳ ಮೇಲೆ ಪರೀಕ್ಷೆ ನಡೆಸಿದೆ. ಜುಲೈನಲ್ಲಿ ಕೊನೆಯ ಹಂತದ ಪರೀಕ್ಷೆ ನಡೆಸಲು ಸಂಸ್ಥೆ ಉದ್ದೇಶಿಸಿದೆ.
ಅಮೆರಿಕದಲ್ಲಿ ಫೈಜರ್
ಅಮೆರಿಕದ ಪ್ರಮುಖ ಔಷಧ ತಯಾರಿಕಾ ಸಂಸ್ಥೆಗಳಲ್ಲಿ ಒಂದಾ ಫೈಜರ್ ಕಂಪನಿಯು ಜರ್ಮನಿಯ ಸಂಶೋಧಕರ ಜೊತೆಗೂಡಿ ಬಿಎನ್‌ಟಿ 162 ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಅಕ್ಟೋಬರ್ ವೇಳೆಗೆ ಮಾರುಟ್ಟೆಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಈ ಲಸಿಕೆಯನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ರಷ್ಯಾದಲ್ಲಿ ಲಸಿಕೆ ಪ್ರಯೋಗ
ದೇ ವೇಳೆ ರಷ್ಯಾದ ಸಂಶೋಧಕರು ಕೊರೋನಾಕ್ಕೆ ಸುಮಾರು 50 ಲಸಿಕೆಗಳನ್ನು ಅಭಿವೃದ್ಧಿಪಡಿಸುವತ್ತ ಕಾರ್ಯನಿರತರಾಗಿದ್ದಾರೆ. ಈ ಪೈಕಿ ಸೈಬೀರಿಯಾದ ಸರ್ಕಾರಿ ಸ್ವಾಮ್ಯದ ವೆಕ್ಟರ್ ಇನ್ಸ್‌ಸ್ಟಿಟ್ಯೂಟ್ ಪ್ರಾಣಿಗಳ ಮೇಲೆ ನಡೆಸಿದ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ.