ಜನರೇಷನ್ Z ಮಕ್ಕಳೇ ಅದೃಷ್ಟವಂತರು, ಯಾಕೆಂದ್ರೆ? OpenAI CEO ಸ್ಯಾಮ್ ಅಲ್ಟ್‌ಮ್ಯಾನ್ ಹೇಳಿದ್ದು ಹೀಗೆ

Published : Aug 13, 2025, 04:22 PM IST
OpenAI CEO Sam Altman

ಸಾರಾಂಶ

ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್, ಜೆನ್-ಝಡ್ ಮಕ್ಕಳು ತಂತ್ರಜ್ಞಾನದ ಯುಗದಲ್ಲಿ ಅದೃಷ್ಟವಂತರು ಎಂದು ಹೇಳಿದ್ದಾರೆ. AI ಯಿಂದ ಉದ್ಯೋಗ ನಷ್ಟದ ಬಗ್ಗೆಯೂ ಮಾತನಾಡಿದ್ದಾರೆ. 

ನವದೆಹಲಿ: ಓಪನ್ ಎಐ, ಸಿಇಒ ಸ್ಯಾಮ್ ಅಲ್ಟ್‌ಮ್ಯಾನ್ (OpenAI CEO Sam Altman) ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಜನರೇಷನ್ Z ಮಕ್ಕಳೇ ( Generation Z Kids) ಅದೃಷ್ಟವಂತರು (Luckiest Kids) ಎಂದು ಹೇಳಿಕೆಯನ್ನು ನೀಡಿದ್ದಾರೆ. ಈ ಪಾಡ್‌ಕಾಸ್ಟ್‌ನಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (Artificial intelligence) (AI) ಭವಿಷ್ಯದಲ್ಲಿ ಹೇಗೆ ಪರಿಣಾಮ ಬೀರುತ್ತೆ? ಇದು ಯಾವೆಲ್ಲಾ ಬದಲಾವಣೆಗಳನ್ನುಂಟು ಮಾಡಲಿದೆ ಮತ್ತು ಯಾವ ಜನರು ಉದ್ಯೋಗ (Losing Jobs) ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಸ್ಯಾಮ್ ಅಲ್ಟ್‌ಮ್ಯಾನ್ ಮಾತನಾಡಿದ್ದಾರೆ.

ಫಾರ್ಚೂನ್ ವರದಿ (Fortune report) ಪ್ರಕಾರ, ಭವಿಷ್ಯದಲ್ಲಿ ಕೆಲವೊಂದು ಉದ್ಯೋಗಗಳು ಸಂಪೂರ್ಣವಾಗಿ ಮಾಯವಾಗಲಿವೆ ಎಂದು ಸ್ಯಾಮ್ ಭವಿಷ್ಯ ನುಡಿದಿದ್ದಾರೆ. ನನ್ನ ಪ್ರಕಾರ ಇತಿಹಾಸದಲ್ಲಿ ಜೆನ್-ಜಿ ಮಕ್ಕಳು ತುಂಬಾ ಲಕ್ಕಿ. ಅವರಿಗೆ ಎಲ್ಲವನ್ನು ಕಲಿಯುವ ಅವಕಾಶ ಲಭ್ಯವಾಗಲಿದೆ ಎಂದು ಕ್ಲಿಯೋ ಅಬ್ರಾಹಂ ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಸ್ಯಾಮ್ (Cleo Abram on the Huge If True podcast) ಹೇಳಿಕೆ ನೀಡಿದ್ದಾರೆ. AI ಉದ್ಯೋಗ ಸ್ಥಳಾಂತರ ಅಥವಾ ಕಣ್ಮರೆಗೆ ಕಾರಣವಾಗುತ್ತಾ ಪ್ರಶ್ನೆಗೆ ಉತ್ತರಿಸಿದ ಸ್ಯಾಮ್, ಇದನ್ನು ಆವರ್ತಕ ಅಥವಾ ಬದಲಾವಣೆ ಪ್ರಕ್ರಿಯೆಯ ಆರಂಭ ಎಂದು ಕರೆದಿದ್ದಾರೆ.

AIನಿಂದಾಗಿ ಮರುತರಬೇತಿ ಅಥವಾ ಮರುಕೌಶಲ್ಯ ಜೀವನದಲ್ಲಿ ಅತ್ಯಗತ್ಯ

ಇಂದಿನ ಯುವ ಸಮುದಾಯ ಬದಲಾವಣೆಗೆ ಬೇಗ ತನ್ನನ್ನು ಬದಲಿಸಿಕೊಳ್ಳುತ್ತೆ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಿರುತ್ತಾರೆ. ನಮಗೆ 22 ವರ್ಷದ ಸಮುದಾಯದ ಬಗ್ಗೆ ಯಾವುದೇ ಆತಂಕವಿಲ್ಲ. ಆದರೆ 62 ವರ್ಷದವರ ಭವಿಷ್ಯದ ಬಗ್ಗೆ ಚಿಂತೆ ಇದೆ. ಮರುತರಬೇತಿ ಅಥವಾ ಮರುಕೌಶಲ್ಯಯನ್ನು ಅಳವಡಿಸಿಕೊಳ್ಳಲು ಇವರು ಒಪ್ಪಿಕೊಳ್ಳಲ್ಲ ಎಂದು ಓಪನ್ ಎಐ, ಸಿಇಒ ಸ್ಯಾಮ್ ಅಲ್ಟ್‌ಮ್ಯಾನ್ ಹೇಳುತ್ತಾರೆ.

ಆಲೋಚನೆಗಳನ್ನು ತ್ವರಿತವಾಗಿ ಜೀವಂತಗೊಳಿಸುತ್ತೆ AI

AI ಯುಗವು (AI era) ಯುವ ಸೃಷ್ಟಿಕರ್ತರಿಗೆ ಸಬಲೀಕರಣ ನೀಡುತ್ತದೆ. ಯುವ ಸಮುದಾಯದ (Young People) ಆಲೋಚನೆಗಳನ್ನು ತ್ವರಿತವಾಗಿ ಜೀವಂತಗೊಳಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅನುವು ಮಾಡಿಕೊಡುತ್ತದೆ. ಯುವಜನರು ಬದಲಾಗುತ್ತಿರುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಯುವ ಸಮುದಾಯವನ್ನು ಸಂಪೂರ್ಣವಾಗಿ ಆಕರ್ಷಿಸುತ್ತದೆ ಎಂದು ಸ್ಯಾಮ್ ಅಲ್ಟಮ್ಯಾನ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

 

 

AI ಕೆಲಸಗಳನ್ನು ಕಿತ್ತುಕೊಳ್ಳಲಿದೆಯಾ? AI to take away jobs

ಇತ್ತೀಚೆಗೆ ಗೂಗಲ್ ಸಂಸ್ಥೆಯ ಮಾಜಿ ಉನ್ನತ ಕಾರ್ಯನಿರ್ವಾಹಕ ಅಧಿಕಾರಿ, ಅಲ್ಟ್‌ಮ್ಯಾನ್ ಅವರ ಈ ಯೋಜನೆ ಆಶಾವಾದಿ ದೃಷ್ಟಿಕೋನ ಹೊಂದಿರಬಹುದು. ಆದ್ದರೆ AI ತಂತ್ರಜ್ಞಾನ ಭವಿಷ್ಯದಲ್ಲಿ ಉದ್ಯೋಗಗಳನ್ನು ಕಬಳಿಸುತ್ತದೆ. ಈ ತಂತ್ರಜ್ಞಾನ ಸಾಮಾಜಿಕ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳಿಸಲು ಕಾರಣವಾಗುತ್ತದೆ. ಈ ಕಾರಣದಲ್ಲಿ ಸಮಾಜದಲ್ಲಿ ಮಧ್ಯಮ ವರ್ಗ ಇಲ್ಲದಂತಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದರು. AI ವೈಟ್-ಕಾಲರ್ ಉದ್ಯೋಗಗಳನ್ನು (White-collar jobs) ತೆಗೆದುಹಾಕುತ್ತದೆ. ಇದರಿಂದ 2027ರ ವೇಳೆಗೆ ಉದ್ಯೋಗ ಸಂಕಷ್ಟಕ್ಕೆ ಕಾರಣವಾಗಬಹುದು. ಸಾಫ್ಟ್‌ವೇರ್ ಡೆವಲಪರ್‌ಗಳು, ಸಿಇಒಗಳು ಮತ್ತು ಪಾಡ್‌ಕ್ಯಾಸ್ಟರ್‌ಗಳು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದ್ದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!