
ಬೀಜಿಂಗ್: ಸಾಮಾನ್ಯವಾಗಿ 6, 3 ಮತ್ತು 12 ತಿಂಗಳ ಜಿಮ್ ಸದಸ್ಯತ್ವವನ್ನು ಪಡೆದುಕೊಳ್ಳಲಾಗುತ್ತದೆ. ಆದ್ರೆ ಎಷ್ಟೋ ಜನರು ಪಾವತಿಸಿದ ಹಣಕ್ಕೆ ಇಡೀ ಕೋರ್ಸ್ ಕಂಪ್ಲೀಟ್ ಮಾಡಲ್ಲ. ಸ್ವಲ್ಪ ಸಮಯದ ಬಳಿಕ ಜಿಮ್‌ಗೆ ಹೋಗುವುದನ್ನೇ ಬಿಡ್ತಾರೆ. ಆದರೆ ಇಲ್ಲಿ ಯುವಕನೋರ್ವ 300 ವರ್ಷದ ಜಿಮ ಸದಸ್ಯತ್ವ ಪಡೆದುಕೊಂಡು 1 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾನೆ. ಜಿಮ್ ಮ್ಯಾನೇಜ್‌ಮೆಂಟ್ ಈ ಹಣದೊಂದಿಗೆ ಪರಾರಿಯಾದಾಗ ತಾನು ಮೋಸ ಹೋಗಿರೋದು ಯುವಕನಿಗೆ ಗೊತ್ತಾಗಿದೆ. ಚೀನಾದ ಜಿನ್ ಹಣ ಕಳೆದುಕೊಂಡ ಯುವಕನಾಗಿದ್ದು, ಸ್ಥಳೀಯ ಮಾಧ್ಯಮದ ಸಹಾಯದೊಂದಿಗೆ ಜಿಮ್ ಸಿಬ್ಬಂದಿ ತನಗೆ ಹೇಗೆ ಮೋಸ ಮಾಡಿದ್ದಾರೆ ಎಂದು ವಿವರಿಸಿದ್ದಾನೆ.
ಚೀನಾದ ಜಿನ್ ಕಳೆದ ಮೂರು ವರ್ಷಗಳಿಂದ ಜಿಮ್‌ಗೆ ಹೋಗುತ್ತಿದ್ದನು. ಜಿನ್ 8,70,000 ಯುವಾನ್ (1,06,16,262 ರೂಪಾಯಿ) ನೀಡಿ 300 ವರ್ಷದ ಜಿಮ್ ಸದಸ್ಯತ್ವ ಪಡೆದುಕೊಂಡಿದ್ದಾರೆ. ಇದೀಗ ಜಿಮ್ ಮ್ಯಾನೇಜ್‌ಮೆಂಟ್ ವಿರುದ್ದ ಜಿನ್ ದೂರು ದಾಖಲಿಸಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಝೆಜಿಯಾಂಗ್ ಪ್ರಾಂತ್ಯದ ಹಾಂಗ್‌ಝೌನಲ್ಲಿರುವ ರಾನ್ಯಾನ್ ಜಿಮ್ ವಿರುದ್ಧ ಒಬ್ಬರು ದೂರು ನೀಡಿದ್ದಾರೆ. ಜಿನ್ ಅನ್ನೋ ಯುವಕ ಈ ಜಿಮ್‌ನ ಮೋಸವನ್ನು ಬಯಲು ಮಾಡಲು ಸ್ಥಳೀಯ ಟಿವಿ ಚಾನೆಲ್‌ನ ಸಹಾಯ ಪಡೆದುಕೊಂಡಿದ್ದಾನೆ. ಜಿಮ್ ಸದಸ್ಯತ್ವ ಮತ್ತು ಪರ್ಸನಲ್ ಟ್ರೈನಿಂಗ್‌ಗಾಗಿ ಜಿಮ್‌ನೊಂದಿಗೆ ಮಾಡಿಕೊಂಡ 26 ಒಪ್ಪಂದಗಳನ್ನು ಜಿನ್ ತೋರಿಸಿದ್ದಾನೆ.
ವರದಿ ಪ್ರಕಾರ, ಮೇ 10 ರಿಂದ ಜುಲೈ 9 ರವೆರೆಗೆ 300 ವರ್ಷಗಳ ವ್ಯಾಲಿಡಿಟಿ ಹೊಂದಿರುವ 12000 ಲೆಸನ್ಸ್ ಮತ್ತು ಮೆಂಬರ್‌ಶಿಪ್ ಕಾರ್ಡ್ ಖರೀದಿಸೋದಿರೋದಾಗಿ ಹೇಳಿಕೊಂಡಿದ್ದಾನೆ. ಈ ಸದಸ್ಯತ್ವ ಪಡೆದುಕೊಳ್ಳಲು 871,273 ಯುವಾನ್ ಖರ್ಚು ಮಾಡಿದ್ದೇನೆ. ಇದೇ ಜಿಮ್‌ಗೆ ಕಳೆದ ಮೂರು ವರ್ಷಗಳಿಂದ ಹೋಗುತ್ತಿದ್ದೆ. ಆಗ ಅಲ್ಲಿನ ಹಳೆಯ ಸದಸ್ಯರಿಗೆ ವಿಶೇಷ ಆಫರ್ ನೀಡಲಾಗುತ್ತಿದೆ ಎಂದು ಅಲ್ಲಿಯ ಸೇಲ್ಸ್ ಮ್ಯಾನ್ ಹೇಳಿದರು. 8,888 ಯುವಾನ್‌ಗೆ 1 ವರ್ಷ ಸದಸ್ಯತ್ವದ ಕಾರ್ಡ್ ತೆಗೆದುಕೊಳ್ಳಿ. ಜಿಮ್ ಅದನ್ನ ಹೊಸ ಯೂಸರ್‌ಗಳಿಗೆ 16,666 ಯುವಾನ್‌ಗೆ ಮಾರುತ್ತದೆ. ಶೇ.10ರಷ್ಟು ಲಾಭ ಜಿಮ್‌ಗೆ ಹೋಗುತ್ತೆ ಮತ್ತು ಇನ್ನುಳಿದ ಹಣ ನಿಮಗೆ ಸಿಗುತ್ತದೆ. ಹೀಗೆ ಲೆಕ್ಕಾಚಾರದ ಮಾಹಿತಿ ನೀಡಿ ಸೇಲ್ಸ್ ಮ್ಯಾನ್ ಮನವರಿಕೆ ಮಾಡಿದ್ದನ ಎಂದು ಜಿನ್ ಹೇಳಿದ್ದಾರೆ.
ಸೇಲ್ಸ್‌ಮ್ಯಾನ್ ಆಫರ್ ನಂಬಿದ ಜಿನ್, 8,70,000 ಯುವಾನ್ (1,06,16,262 ರೂಪಾಯಿ) ಪಾವತಿಸಿ ಸದಸ್ಯತ್ವ ಪಡೆದುಕೊಂಡಿದ್ದಾನೆ. ಹೀಗೆ ಜಿನ್‌ನಿಂದ ಜಿಮ್ ಬೇರೆ ಬೇರೆ ರೀತಿಯಲ್ಲಿ ಹಣ ಪಡೆದಿದೆ ಅಂತ ಆರೋಪಿಸಲಾಗಿದೆ. ಹೂಡಿಕೆ ಮಾಡಿದ ಹಣಕ್ಕೆ ಲಾಭ ಬರುತ್ತೆ ಅಂತ ಜಿನ್ ಕಾಯ್ತಿದ್ದ. ಆದ್ರೆ ಕೆಲವು ದಿನಗಳ ನಂತರ ಜಿಮ್ ಮ್ಯಾನೇಜ್‌ಮೆಂಟ್ ಪರಾರಿಯಾಗಿದೆ ಎಂದು ಗೊತ್ತಾಗಿದೆ. ಮೋಸ ಹೋಗಿರೋದು ತಿಳಿಯುತ್ತಿದ್ದಂತೆ ಜಿಮ್ ಮ್ಯಾನೇಜ್‌ಮೆಂಟ್ ವಿರುದ್ಧ ದೂರು ದಾಖಲಿಸಿ, ಸ್ಥಳೀಯ ಮಾಧ್ಯಮಕ್ಕೂ ಸಂದರ್ಶನ ನೀಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ