ಆನೆ ಹಾಗೂ ಘೆಂಡಾಮೃಗದ ಘೋರ ಕಾಳಗ : ವಿಡಿಯೋ ವೈರಲ್

By Anusha KbFirst Published Dec 27, 2022, 10:38 PM IST
Highlights

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ವಿವಿಧ ಪ್ರಾಣಿಗಳು ಪರಸ್ಪರ ಮುದ್ದಾಡುವ, ಸೌಹಾರ್ದತೆಯಿಂದ ಬಳುವ, ಪರಸ್ಪರ ಕಾದಾಡುವ ಅಪರೂಪವೆನಿಸಿದ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ. ಅದೇ ರೀತಿ ಈಗ ಕಾಡುಪ್ರಾಣಿಗಳ ಮತ್ತೊಂದು ಅಪರೂಪದ ವಿಡಿಯೋವೊಂದು ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಪ್ರಕೃತಿಯ ವೈಚಿತ್ರ ಹಾಗೂ ವೈವಿಧ್ಯದ ವಿವಿಧ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ವಿವಿಧ ಪ್ರಾಣಿಗಳು ಪರಸ್ಪರ ಮುದ್ದಾಡುವ, ಸೌಹಾರ್ದತೆಯಿಂದ ಬಳುವ, ಪರಸ್ಪರ ಕಾದಾಡುವ ಅಪರೂಪವೆನಿಸಿದ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ. ಅದೇ ರೀತಿ ಈಗ ಕಾಡುಪ್ರಾಣಿಗಳ ಮತ್ತೊಂದು ಅಪರೂಪದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಘೇಂಡಾಮೃಗ ಹಾಗೂ ಆನೆ ಪರಸ್ಪರ ಭಯಾನಕವಾಗಿ ಕಾದಾಡುವ ವಿಡಿಯೋ ಇದಾಗಿದೆ. ದೈತ್ಯ ಗಾತ್ರದ ಆನೆ ಹಾಗೂ ಒಂದು ಕೊಂಬಿನ ಘೇಂಡಾಮೃಗ ಪರಸ್ಪರ ಕಾದಾಡುತ್ತಿದ್ದು, ಇವುಗಳ ಕಾದಾಟಕ್ಕೆ ಸಮೀಪದಲ್ಲಿದ್ದ ಹಕ್ಕಿಗಳೆಲ್ಲಾ ಹಾರಿ ಹೋಗುತ್ತವೆ.

ppredator_wildlifevids ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಘೇಂಡಾಮೃಗ (Rhino) ತನ್ನ ಮರಿಯೊಂದಿಗೆ ಇದ್ದು, ಸಮೀಪದಲ್ಲೇ ನೀರಿನ ಮೂಲವೊಂದಿದೆ. ಕೆಸರು ಮಿಶ್ರಿತ ಆ ನೀರಿನಲ್ಲಿ ಹಕ್ಕಿಗಳು ವಿಹರಿಸುತ್ತಿರುತ್ತವೆ. ಇತ್ತ ಮರಿಯೊಂದಿಗೆ ಇದ್ದ ಘೇಂಡಾಮೃಗ ಆನೆಯನ್ನು (Elephant) ನೋಡಿದೆ ಅದರತ್ತ ದಾಳಿ ಮಾಡಲು ಹೋಗಿದೆ. ಆದರೆ ದೈತ್ಯ ಪ್ರಾಣಿ ಆನೆ ತನ್ನ ಕೆಣಕಿದವರ ಸುಮ್ಮನೆ ಬಿಡುವುದು ಸಾಧ್ಯವೇ? ತನ್ನ ಮೇಲೆ ದಾಳಿಗೆ ಬಂದ ಘೇಂಡಾಮೃಗವನ್ನು ತನ್ನ ಸೊಂಡಿಲಿನಿಂದಲೇ ದೂಡಿ ಹಾಕುತ್ತದೆ. ಆದರೂ ಸುಮ್ಮನಿರದ ಘೇಂಡಾಮೃಗ ಮುಂದೆ ಹೋದಾಗ ಮತ್ತೆ ಘೀಳಿಡುತ್ತಾ ಘೇಂಡಾಮೃಗವನ್ನು ಆನೆ ತಳ್ಳಿದ್ದು, ಇದರಿಂದ ಘೇಂಡಾಮೃಗದೊಂದಿಗೆ ಮರಿಯೂ ಕೂಡ  ಕೆಳಗೆ ಬೀಳುತ್ತದೆ. ಘೇಂಡಾಮೃಗ ಕೆಳಗೆ ಬಿದ್ದ ರಭಸಕ್ಕೆ ಅಲ್ಲಿ ನೀರಿನಲ್ಲಿದ್ದ ಹಕ್ಕಿಗಳೆಲ್ಲಾ ಹಾರಿ ದೂರ ಹೋಗುತ್ತವೆ. ಇತ್ತ ತಾಯಿ ಹಾಗೂ ಮರಿ ಎರಡೂ ಕೂಡ ಅಲ್ಲಿಂದ ದೂರ ಓಡುತ್ತವೆ. ಈ ವಿಡಿಯೋವನ್ನು ಸಾವಿರಾರು ಜನ ಲೈಕ್ ಮಾಡಿದ್ದಾರೆ. 

Chikkamagaluru: ಮತ್ತೆ ಮೂವರ ಮೇಲೆ ಒಂಟಿ ಕೊಂಬಿನ ಆನೆ ದಾಳಿ: ಗಂಭೀರ ಗಾಯ

ಕೊಡಗಿನ ದುಬಾರೆ ಸಾಕಾನೆ ಶಿಬಿರದಿಂದ ಮಧ್ಯಪ್ರದೇಶಕ್ಕೆ ಐದು ಆನೆಗಳ ಸ್ಥಳಾಂತರ, ಗೋಳಾಡುತ್ತಲೇ ಲಾರಿ ಏರಿದ ಸಾಕಾನೆಗಳು

ಸಿಂಹದ ದಾಳಿಯಿಂದ ಕಂದನ ರಕ್ಷಿಸಿದ ಎಮ್ಮೆ

ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋ ವೈರಲ್ ಆಗಿವೆ. ತಾಯಿ ಪ್ರೀತಿಗೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ ತನ್ನ ಕಂದನ ರಕ್ಷಣೆಗಾಗಿ ಎಂತಹಾ ಸಂಕಷ್ಟ, ಅಡೆತಡೆಗಳನ್ನು ಧೃಡವಾಗಿ ಎದುರಿಸಬಲ್ಲಳು. ತಾಯಿ ಪ್ರೀತಿಗೆ ಸರಿಸಾಟಿ ಬೇರೆ ಯಾವುದು ಇಲ್ಲ ಎಂದು ಹೇಳುವುದಕ್ಕೆ ನಮ್ಮ ಸಮಾಜದಲ್ಲಿ ಈಗಾಗಲೇ ಹಲವು ನಿದರ್ಶನಗಳು ನಡೆದು ಹೋಗಿವೆ. ಪ್ರಾಣಿಗಳು ಕೂಡ ತಮ್ಮ ಕಂದನ ರಕ್ಷಣೆಗಾಗಿ ಎಂತಹ ಅನಾಹುತವನ್ನು ಎದುರಿಸಲು ಸಿದ್ಧವಾಗಿರುತ್ತವೆ. ಅದೇ ರೀತಿ ಇಲ್ಲಿ ಪ್ರಾಣಿಗಳ ವಿಡಿಯೋವೊಂದು ವೈರಲ್ ಆಗಿದ್ದು, ತಾಯಿ ಪ್ರೀತಿ ಎಲ್ಲರಿಗೂ ಒಂದೇ ಮನುಷ್ಯರು ಪ್ರಾಣಿಗಳು ಎಂಬ ಬೇಧವಿಲ್ಲ ಎಂಬುದನ್ನು ಸಾಬೀತುಪಡಿಸಿವೆ.

ವಿಡಿಯೋದಲ್ಲಿ ಕಾಣಿಸುವಂತೆ ಸಿಂಹವೊಂದು ಎಮ್ಮೆಯೊಂದರ ಕರುವಿನ ಮೇಲೆ ದಾಳಿ ಮಾಡಿ ಬೇಟೆಯಾಡಲು (Hunting) ಮುಂದಾಗಿದೆ. ಈ ವೇಳೆ ಎಮ್ಮೆಯ ಕರುವಿನ ಜೊತೆ ತಾಯಿಯೂ ಇದ್ದು, ಸಿಂಹ ತನ್ನ ಕಂದನ ಮೇಲೆ ಕಣ್ಣು ಹಾಕಿದೆ ಎಂಬುದು ಗೊತ್ತಾಗುತ್ತಿದ್ದಂತೆ ಎಮ್ಮೆ ತನ್ನ ಪ್ರಾಣದ ಹಂಗು ತೊರೆದು ಸಿಂಹದ ಮೇಲೆ ದಾಳಿ ಮಾಡಲು ಮುಂದಾಗಿ ಅದನ್ನು ಆ ಜಾಗದಿಂದ ದೂರ ಓಡಿಸುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದ್ದು, ತಾಯಿಯ ಮಮತೆಗೆ ಸರಿಸಾಟಿ ಬೇರೇನು ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 

 

click me!