ಉಗಾಂಡ: ಹಲವು ರಾಷ್ಟ್ರಗಳು ಆರ್ಥಿಕ ಹಿಂಜರಿತದಿಂದ ತೀರಾ ಸಂಕಷ್ಟಕ್ಕೀಡಾಗಿದ್ದು, ಬಡ ರಾಷ್ಟ್ರಗಳಿಗೆ ಇದು ಭಾರಿ ಹೊಡೆತ ನೀಡಿದೆ. ಈ ಮಧ್ಯೆ ಉಗಾಂಡದ ವ್ಯಕ್ತಿಯೊಬ್ಬ ಈ ಆರ್ಥಿಕ ಹಿಂಜರಿತದ ಕಾರಣಕ್ಕೆ ಇನ್ನು ಮುಂದೆ ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ ಸಾಕಲು ಕಷ್ಟವಾಗುತ್ತದೆ ಎಂದು ಹೇಳಿಕೊಂಡಿದ್ದಾನೆ. ಹಾಗಂತ ಇವನಿಗಿರುವ ಮಕ್ಕಳೆಷ್ಟು ಎಂದು ತಿಳಿದರೆ ನೀವು ಗಾಬರಿ ಬೀಳುವುದು ಗ್ಯಾರಂಟಿ. ಏಕೆಂದರೆ ಈತ ಈಗಾಗಲೇ ಬರೋಬರಿ 102 ಮಕ್ಕಳನ್ನು ಹೊಂದಿದ್ದಾನೆ. ಈತನಿಗೆ ಒಟ್ಟು 12 ಹೆಂಡತಿಯರಿದ್ದು, 568 ಜನ ಮೊಮ್ಮಕ್ಕಳಿದ್ದಾರೆ.
ಇಷ್ಟೊಂದು ಮಕ್ಕಳನ್ನು ಮಾಡಿ ಈಗ ಆರ್ಥಿಕ ಹಿಂಜರಿತದ ಕಾರಣ ನೀಡಿ ತಾನು ಇನ್ನು ಮುಂದೆ ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ ಎಂಬ ಈತನ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಉಗಾಂಡದ 67 ವರ್ಷದ ಮುಸ ಹಸಹ್ಯ (Musa Hasahya) ಎಂಬಾತನೇ ಹೀಗೆ ಹೇಳಿಕೆ ನೀಡಿ ಸುದ್ದಿಯಲ್ಲಿರುವ 102 ಮಕ್ಕಳ ತಂದೆ. ಈತನ ಪತ್ನಿಯರು ಗರ್ಭ ನಿರೋಧಕ ಮಾತ್ರೆಗಳನ್ನು (birth control pill) ಸೇವಿಸಲು ಶುರು ಮಾಡಿದ್ದಾರೆ ಎಂದು ಈತ ಹೇಳಿಕೆ ನೀಡಿದ್ದಾನೆ. ಉಗಾಂಡದ(Uganda) ಲುಸಕಾದಲ್ಲಿ (Lusaka) ಇವರು ವಾಸ ಮಾಡುತ್ತಿದ್ದು, ಅಲ್ಲಿ ಬಹುಪತ್ನಿತ್ವಕ್ಕೆ ಕಾನೂನಿನ ಮಾನ್ಯತೆ ಇದೆ.
ಉಗಾಂಡಾದಲ್ಲಿ ಮಾಮ್ತಾಜ್ ಬರ್ತ್‌ಡೇ: ಬೆಂಜ್ ಕಾರು, ಆಭರಣ ಗಿಫ್ಟ್ ಕೊಟ್ಟ ಪತಿ
ಜೀವನಕ್ಕೆ ತಗಲುವ ವೆಚ್ಚ (cost of living) ಹಾಗೂ ಕುಟುಂಬವೂ ವರ್ಷದಿಂದ ವರ್ಷಕ್ಕೆ ಬೆಳಯುತ್ತಾ ಸಾಗಿದ್ದರಿಂದ ವರ್ಷದಿಂದ ವರ್ಷಕ್ಕೆ ನನ್ನ ಆದಾಯ ಕುಸಿಯುತ್ತಾ ಬಂದಿದೆ. ನಾನು ಒಂದಾದ ಮೇಲೆ ಒಂದು ಮಹಿಳೆಯನ್ನು ಮದುವೆಯಾಗುತ್ತಾ ಹೋದೆ ಎಂದು ಹೇಳಿದ ಆತ ಹೇಗೆ ಕೇವಲ ಒಂದು ಹೆಣ್ಣಿನಿಂದ ತೃಪ್ತಿ ಪಡೆಯಲು ಸಾಧ್ಯ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಈತನ ಕೊನೆಯ ಹೆಂಡತಿ ಈತನ ಹಿರಿಯ ಮಗನಿಗಿಂತ 21 ವರ್ಷ ಚಿಕ್ಕವಳಾಗಿದ್ದಾಳೆ. ಈತ ತನ್ನ ಎಲ್ಲಾ ಪತ್ನಿಯರನ್ನು ಒಂದೇ ಮನೆಯಲ್ಲಿ ಇಟ್ಟಿದ್ದು, ಅವರನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಹಾಗೂ ಅವರು ಬೇರೆಯವರೊಂದಿಗೆ ಓಡಿ ಹೋಗದಂತೆ ತಡೆಯಲು ಸುಲಭವಾಗುತ್ತದೆ ಎಂದು ಈ ಯೋಜನೆ ರೂಪಿಸಿದ್ದಾನಂತೆ.
ಪಿಎಚ್‌ಡಿ ಮಾಡ್ತಿದ್ದ ಉಗಾಂಡ ವಿದ್ಯಾರ್ಥಿ ನಾಪತ್ತೆ!
ನನಗೆ ಇಷ್ಟು ಮಕ್ಕಳು ಸಾಕು, ಇದಕ್ಕಿಂತ ಹೆಚ್ಚು ಮಕ್ಕಳನ್ನು ನಾವು ಇನ್ನು ಪಡೆಯುವುದಿಲ್ಲ. ಎಂದು ಈತನ ಅತೀ ಕಿರಿಯ ಪತ್ನಿ ಝುಲೈಕಾ (Zulaika) ಹೇಳಿದ್ದಾಳೆ. ನಾನು ಗರ್ಭ ನಿರೋಧಕ ಮಾತ್ರೆಗಳನ್ನು (birth control pill) ತೆಗೆದುಕೊಳ್ಳುತ್ತಿದ್ದೇನೆ. ಏಕೆಂದರೆ ನಾನು ಸಾಕಷ್ಟು ಹಣಕಾಸಿನ ದುಸ್ಥಿತಿಯನ್ನು (financial situation) ನೋಡಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಹಸಯಹನಿಗೆ ಇರುವ ಭೂಮಿಯಲ್ಲೇ ಈತನ ಎಲ್ಲಾ ಮಕ್ಕಳು ಬದುಕು ಕಂಡು ಕೊಂಡಿದ್ದಾರೆ. ಇಲ್ಲಿ 51 ವರ್ಷದವರಿಂದ ಹಿಡಿದು ಆರು ವರ್ಷದವರೆಗಿನ ಮಕ್ಕಳು ಈತನಿಗೆ ಇದ್ದಾರೆ. ಅದೇನೆ ಇರಲಿ ಇಷ್ಟೊಂದು ಮಕ್ಕಳನ್ನು ಮಾಡಿಕೊಂಡು 67ನೇ ವಯಸ್ಸಿನಲ್ಲಿ ಈತನ ಈ ಹೇಳಿಕೆ ನೋಡಿ ಜನ ದಂಗಾಗಿರುವುದಂತು ಸುಳ್ಳಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈತನ ಹೇಳಿಕೆ ಹಾಗೂ ಈತನ ತಾಕತ್ತಿನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
44 ಮಕ್ಕಳನ್ನು ಹೆತ್ತ ತಾಯಿಗೆ ವಿಚಿತ್ರ ಕಾಯಿಲೆ, ಮಕ್ಕಳನ್ನು ಹೆರದಿದ್ರೆ ಜೀವಕ್ಕೇ ಅಪಾಯ !
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ