ಜಸ್ಟ್ ಮಿಸ್: ಹೃದಯ ತೆಗೆಯಬೇಕು ಅನ್ನುವಷ್ಟರಲ್ಲಿ ಎದ್ದು ಕುಳಿತ ಬ್ರೈನ್‌ಡೆಡ್‌ ವ್ಯಕ್ತಿ

By Anusha KbFirst Published Oct 22, 2024, 3:35 PM IST
Highlights

ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರು ಆತನ ಹೃದಯವನ್ನು ಕಸಿ ಮಾಡಲು ತೆಗೆಯುವ ಮುನ್ನ ಎಚ್ಚರಗೊಂಡ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದೆ. ಈ ಘಟನೆ ವೈದ್ಯಕೀಯ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದ್ದು, ವ್ಯಕ್ತಿಯ ಕುಟುಂಬಸ್ಥರು ತನಿಖೆಗೆ ಮುಂದಾಗಿದ್ದಾರೆ.

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರು ಹಠಾತ್ ಆಗಿ ಎದ್ದು ಕುಳಿತ ಅಚ್ಚರಿಯ ಘಟನೆ ಅಮೆರಿಕಾದ ಕೆಂಟುಕಿಯಲ್ಲಿ ನಡೆದಿದ್ದು, ವೈದ್ಯಕೀಯ ಅಚ್ಚರಿಗೆ ಕಾರಣವಾಗಿದೆ. 

ಸಾಮಾನ್ಯವಾಗಿ ಮೆದುಳು ನಿಷ್ಕ್ರಿಯಗೊಂಡರೆ ವ್ಯಕ್ತಿ ಬಹುತೇಕ ಸತ್ತಂತೆ ಹೀಗಾಗಿ ವ್ಯಕ್ತಿಯ ಕುಟುಂಬದವರ ಒಪ್ಪಿಗೆ ಪಡೆದು ವೈದ್ಯರು ಮುಂದಿನ ಕ್ರಮಕೈಗೊಳ್ಳುತ್ತಾರೆ. ರೋಗಿಯ ದೇಹದಲ್ಲಿ ಕಾರ್ಯನಿರ್ವಹಿಸುವ ಅಂಗಗಳಿದ್ದರೆ, ಅವುಗಳನ್ನು ತೆಗೆದು ಇನ್ಯಾರದರು ಅಗತ್ಯವಿರುವ ವ್ಯಕ್ತಿಗಳಿಗೆ ಮರುಜನ್ಮ ನೀಡುತ್ತಾರೆ. ಕಣ್ಣುಗಳು, ಕಿಡ್ನಿ, ಲಿವರ್ ಹೃದಯ ಸೇರಿದಂತೆ ದೇಹದ ಬಹುತೇಕ ಅಂಗಗಳನ್ನು ದಾನ ಮಾಡುತ್ತಾರೆ. ಅದೇ ರೀತಿ ಇಲ್ಲಿ ವೈದ್ಯರು ಈ ಯುವಕನ ಹೃದಯವನ್ನು ಬೇರೆಯವರಿಗೆ ಕಸಿ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಈತನ ಹೃದಯವನ್ನು ಕತ್ತರಿಸಲು ಸಿದ್ಧತೆ ಮಾಡುತ್ತಿರುವಾಗಲೇ ಈತ ಕೈಕಾಲು ಬಡಿಯಲು ಶುರು ಮಾಡಿದ್ದು ವೈದ್ಯರಿಗೆ ಅಚ್ಚರಿ ಮೂಡಿಸಿದೆ. 

Latest Videos

ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿದ ಪೋಷಕರು

ಕೆಂಟುಕಿಯ ಬಾಪಿಸ್ಟ್‌ ಹೆಲ್ತ್ ರಿಚ್ಮಂಡ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆತನಿಖೆ ನಡೆಸಲು ಆ ವ್ಯಕ್ತಿಯ ಕುಟುಂಬದವರು ನಿರ್ಧರಿಸಿದ್ದಾರೆ. 36 ವರ್ಷದ ಥಾಮಸ್ ಟಿಜೆ ಹೂವರ್ II ಎಂಬಾತನೇ ಹೀಗೆ ಪವಾಡ ಸದೃಶವಾಗಿ ಪಾರಾಗಿ ಬಂದ ವ್ಯಕ್ತಿ. 2021ರ ಆಕ್ಟೋಬರ್‌ನಲ್ಲಿ ಡ್ರಗ್ ಓವರ್‌ಡೋಸ್ ಆದ ಕಾರಣ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆತನ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದ್ದರು.  

ಮಿದುಳು ಡೆಡ್ ಆದವರೂ ಬಹುತೇಕ ಸತ್ತಂತೆಯೇ ಹೀಗಾಗಿ ಈತ ಹೇಗೂ ಇನ್ನು ಮೇಲೇಳುವುದಿಲ್ಲ ಎಂದು ಭಾವಿಸಿದ ವೈದ್ಯರು ಈತನಿಂದ ಇತರ ಯಾವುದಾದರೂ ನತದೃಷ್ಟ ಜೀವಗಳು ಉಳಿಯುವುದಾದರೆ ಉಳಿಯಲಿ ಎಂದು ಕುಟುಂಬದವರ ಒಪ್ಪಿಗೆ ಪಡೆದು ಆತನ ಹೃದಯಕ್ಕೆ ಕತ್ತರಿ ಹಾಕಬೇಕು ಎನ್ನುವಷ್ಟರಲ್ಲಿ ಆತ ಎದ್ದು ಕುಳಿತಿದ್ದಾನೆ. ಈ ಪ್ರಕರಣದ ಕೇಸ್ ಸ್ಟಡಿ ಪರಿಶೀಲಿಸುತ್ತಿದ್ದ ಕೆಂಟುಕಿ ಆರ್ಗನ್ ಡೋನರ್ ಅಫಿಲಿಯೇಟ್ಸ್‌ನ ಮಾಜಿ ಉದ್ಯೋಗಿ ನೈಕೊಲೆಟ್ಟಾ ಮಾರ್ಟಿನ್ ಅವರು ಬ್ರೈನ್ ಡೆಡ್ ಆದ ಥಾಮಸ್‌ ಮೇಜಿನ ಮೇಲೆ ಬಡಿಯುತ್ತಿರುವುದನ್ನು ಗಮನಿಸಿದ್ದಾಗಿ ಹೇಳಿದ್ದಾರೆ. 

3 ವರ್ಷದ ಬಾಲಕ ಬ್ರೈನ್‌ ಡೆಡ್‌: ಅಂಗಾಂಗ ದಾನ ಮೂಲಕ ನಾಲ್ವರ ಜೀವ ಉಳಿಸಿದ ಪೋಷಕರು

ಇನ್ನು ಹೀಗೆ ಪವಾಡಸದೃಶವಾಗಿ ಪಾರಾಗಿ ಬಂದ ಥಾಮಸ್ ಹೂವರ್ ಅವರ ಆರೋಗ್ಯಕ್ಕೆ ದೊಡ್ಡ ತೊಂದರೆ ಇಲ್ಲದೇ ಇದ್ದರೂ ಕೂಡ ಅವರು ನೆನಪಿನ ಶಕ್ತಿ, ನಡಿಗೆ ಹಾಗೂ ಮಾತನಾಡುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ತನ್ನ ಸೋದರಿ ಡೊನ್ನಾ ರೊರರ್ ಜೊತೆ ವಾಸ ಮಾಡುತ್ತಿರುವ ಥಾಮಸ್‌ಗೆ ಈಗ ಆಕೆಯೇ ಕಾನೂನಾತ್ಮಕ ಗಾರ್ಡಿಯನ್ ಆಗಿದ್ದಾಳೆ.

click me!