ಮನುಷ್ಯ ಮಾಂಸದ ರುಚಿ ಹೇಗಿತ್ತು? ನರಭಕ್ಷಕ ಹಿನ್ನೆಲೆಯ ಟ್ರೈಬಲ್‌ಗಳ ಭೇಟಿಯಾದ ಯೂಟ್ಯೂಬರ್‌

By Anusha Kb  |  First Published Oct 22, 2024, 12:30 PM IST

ರು. ಭಾರತದ ಟ್ರಾವೆಲ್ ವ್ಲಾಗರ್ ಒಬ್ಬರು ಇತ್ತೀಚೆಗೆ ನರಭಕ್ಷಕ ಹಿನ್ನೆಲೆ ಇರುವ ಇಂಡೋನೇಷ್ಯಾದ ಕೊರೊವೈ ಬುಡಕಟ್ಟು ಸಮುದಾಯ ವಾಸ ಮಾಡುವ ದಟ್ಟ ಕಾಡಿಗೆ ಭೇಟಿ ನೀಡಿ ಅವರನ್ನು ಮಾತನಾಡಿಸಿದ್ದು, ಅವರ ಬದುಕಿನ ಕೆಲ ಚಿತ್ರಣವನ್ನು ನಾಗರಿಕ ಸಮಾಜಕ್ಕೆ ತೆರೆದಿಟ್ಟಿದ್ದಾರೆ.


ಸಾಮಾನ್ಯವಾಗಿ ಕತೆ ಕಾಮಿಕ್‌ಗಳಲ್ಲಿ ನೀವು ನರಭಕ್ಷಕ ಕಾಡು ಮನುಷ್ಯರ ಬಗ್ಗೆ ಕೇಳಿರುತ್ತೀರಿ ಆದರೆ ನಿಜವಾಗಿಯೂ ನರಭಕ್ಷಕ ಕಾಡು ಮನುಷ್ಯರು ಈಗಲೂ ಇದ್ದಾರಾ ಹೌದು ಅಂತಿದ್ದಾರೆ ಟ್ರಾವೆಲ್ ಯೂಟ್ಯೂಬರ್‌ ಒಬ್ಬರು. ಭಾರತದ ಟ್ರಾವೆಲ್ ವ್ಲಾಗರ್ ಒಬ್ಬರು ಇತ್ತೀಚೆಗೆ ನರಭಕ್ಷಕ ಹಿನ್ನೆಲೆ ಇರುವ ಇಂಡೋನೇಷ್ಯಾದ ಕೊರೊವೈ ಬುಡಕಟ್ಟು ಸಮುದಾಯ ವಾಸ ಮಾಡುವ ದಟ್ಟ ಕಾಡಿಗೆ ಭೇಟಿ ನೀಡಿ ಅವರನ್ನು ಮಾತನಾಡಿಸಿದ್ದು, ಅವರ ಬದುಕಿನ ಕೆಲ ಚಿತ್ರಣವನ್ನು ನಾಗರಿಕ ಸಮಾಜಕ್ಕೆ ತೆರೆದಿಟ್ಟಿದ್ದಾರೆ. 

ಭಾರತದ ಯೂಟ್ಯೂಬರ್ ಧೀರಜ್ ಮೀನಾ ಅವರು ಮಾಡಿರುವ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಸ್ಥಳೀಯ ಕೊರೊವೈ ಬುಡಕಟ್ಟು ಸಮುದಾಯವೂ ಹಲವು ಶತಮಾನಗಳಿಂದಲೂ ನಿರ್ಜನ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು, ಕಾಡುಪ್ರಾಣಿಗಳ ಬೇಟೆ, ಸಂಗ್ರಹಣೆ ಮತ್ತು ಮೀನುಗಾರಿಕೆಯನ್ನೇ ಜೀವನಕ್ಕೆ ಅವಲಂಬಿಸಿದೆ. ನಾಗರಿಕ ಸಮಾಜದಿಂದ ಪ್ರತ್ಯೇಕವಾಗಿ ವಾಸ ಮಾಡುವ ಈ ಸಮುದಾಯ ನರಭಕ್ಷಕರು ಎಂಬ ಕುಖ್ಯಾತಿ ಪಡೆದಿದೆ. ಇಂದಿಗೂ ಇವರು ನರಹತ್ಯೆ ಮಾಡಿ ತಿನ್ನುತ್ತಾರೆ ಎಂಬ ಅಪನಂಬಿಕೆ ಜನರಲ್ಲಿದೆ. ಆದರೆ ಈಗ ಈ ಯೂಟ್ಯೂಬರ್‌ ಅವರ ಸ್ಥಳಕ್ಕೆ ಹೋಗಿ ಅವರ ಸಂಪ್ರದಾಯ ಬದುಕಿನ ಬಗ್ಗೆ ಬೆಳಕು ಚೆಲ್ಲಿದ್ದು, ಅವರ ಬಗೆಗಿನ ಜನರ ಕೆಲ ನಂಬಿಕೆಗಳು ಸುಳ್ಳು ಎಂಬುದನ್ನು ಸಾಬೀತು ಮಾಡಿದೆ. ಅಲ್ಲದೇ ಇವರ ಹಿಂದಿನ ತಲೆಮಾರುಗಳು ನರಭಕ್ಷಕರೇ ಆಗಿದ್ದಿದ್ದು, ಹೌದಾದರು ಕಾಲಕ್ರಮೇಣ ಮನುಷ್ಯರ ತಿನ್ನುವ ಆ ಸಂಸ್ಕೃತಿ ನಶಿಸಿದೆ ಎನ್ನುತ್ತಾರೆ ಈ ಸಮುದಾಯ ಜನ ಎಂದು ಯೂಟ್ಯೂಬರ್ ಹೇಳಿಕೊಂಡಿದ್ದಾರೆ. 

Tap to resize

Latest Videos

undefined

ಹೀಗೆ ದಟ್ಟ ಕಾಡಲ್ಲಿ ನೆಲೆ ಕಂಡಿರುವ ಈ ಬುಡಕಟ್ಟು ಸಮುದಾಯದ ಜನರನ್ನು ತಲುಪಲು ವ್ಲಾಗರ್ ಧೀರಜ್ ಮೀನಾ ವಿಮಾನ, ಕಾಲುದಾರಿ ದೋಣಿಯಲ್ಲಿ ಪಯಣ ಸೇರಿದಂತೆ ಹಲವು ಸಂಚಾರ ಮಾರ್ಗಗಳನ್ನು ಅನುಸರಿಸಿದ್ದಾರೆ. ದಟ್ಟಕಾನನದಲ್ಲಿ 4 ಗಂಟೆಗಳ ಸುಧೀರ್ಘ ಪ್ರಯಾಣದ ನಂತರ ಅವರು ಕೊರೊವೈ ಸಮುದಾಯದ ಜನ ವಾಸ ಮಾಡುವ ಕಾಡು ಪ್ರದೇಶವನ್ನು ತಲುಪಿದ್ದಾರೆ.  ಸಂಪ್ರದಾಯಿಕ ಜೀವನಶೈಲಿಯನ್ನು ನಡೆಸುವ ಇವರು ಇಂದಿಗೂ ಎತ್ತರದ ಮರದ ಮನೆಗಳಲ್ಲಿ ವಾಸ ಮಾಡುತ್ತಾರೆ. ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕವಾಗಿ ವಾಸ ಮಾಡುತ್ತ ಅಲ್ಲಿನ ಪರಿಸರದ ಕಾರಣಕ್ಕೆ ಕನಿಷ್ಟ ಬಟ್ಟೆ ಧರಿಸುತ್ತಾರೆ ಎಂಬುದನ್ನು ಯೂಟ್ಯೂಬರ್ ವಿವರಿಸಿದ್ದಾರೆ. 

ಇದೇ ವೇಳ ನರಭಕ್ಷಕತೆಯ ಬಗ್ಗೆ ಯೂಟ್ಯೂಬರ್‌ ಅಲ್ಲಿನ ಕೊರೊವೈ ಸಮುದಾಯದ ಜೊತೆ ಪ್ರಶ್ನಿಸಿದ್ದು, ಈ ವೇಳೆ ಅವರು ತಮ್ಮ ತಂದೆಯ ತಲೆಮಾರಿನ ಜನರು ಮನುಷ್ಯ ಮಾಂಸದ ರುಚಿ ನೋಡಿದ್ದಾರೆ. 16 ವರ್ಷಗಳ ಹಿಂದಷ್ಟೇ ಅವರು ಕೊನೆಯದಾಗಿ ಮನುಷ್ಯ ಮಾಂಸವನ್ನು ತಿಂದಿದ್ದಾರೆ. ಆದರೆ ಈ ಪದ್ಧತಿ ಈಗ ಜಾರಿಯಲ್ಲಿ ಇಲ್ಲ, ನರಭಕ್ಷಕತೆಯು ಬುಡಕಟ್ಟು ಜನಾಂಗದ ಯುದ್ಧದ ಸಮಯದಲ್ಲಿ ಹೆಚ್ಚಾಗಿ ಸಂಭವಿಸುತ್ತದೆ, ವಿಶೇಷವಾಗಿ ಒಂದು ಗುಂಪು ಮತ್ತೊಂದು ಗುಂಪಿನ ಮಹಿಳೆಯರನ್ನು ವಶಪಡಿಸಿಕೊಂಡಾಗ ಎಂದು ಅವರು ವಿವರಿಸಿದ್ದಾರೆ.

 

ತಮಗಿರುವ ಈ ಭಯಾನಕ ಇತಿಹಾಸದ ಹೊರತಾಗಿಯೂ ಈ ಸಮುದಾಯದ ಜನ ನನ್ನನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಅವರ ಆಚಾರ ವಿಚಾರ ಸಂಪ್ರದಾಯಗಳನ್ನು ತಿಳಿದುಕೊಳ್ಳುತ್ತಾ ಅವರ ಜೀವನ ಕ್ರಮದಲ್ಲಿ ಮುಳುಗಿ ಹಲವಾರು ದಿನಗಳನ್ನು ಅಲ್ಲಿ ನಾನು ಕಳೆದೆ ಎಂದು ಟ್ರಾವೆಲ್ ವ್ಲಾಗರ್ ಮೀನಾ ಹೇಳಿಕೊಂಡಿದ್ದಾರೆ. ಅಲ್ಲದೇ ಅವರ ಜೊತೆಗಿನ ಮಾತುಕತೆ ವೇಳೆ ಯೂಟ್ಯೂಬರ್ ಮಾನವ ಮಾಂಸದ ರುಚಿ ಹೇಗಿರುತ್ತದೆ ಎಂದು ಕೇಳಿದ್ದು? ಇದಕ್ಕೆ ಉತ್ತರಿಸಿದ ಅವರು ನಾವು ಮಾನವ ಮಾಂಸ ತಿಂದಿಲ್ಲ, ನಮ್ಮ ತಂದೆಯ ತಲೆಮಾರಿನವರು ತಿಂದಿದ್ದಾರೆ ಎಂದು ಉತ್ತರಿಸಿದ್ದಾರೆ. ಆದರೆ ಮಾನವಶಾಸ್ತ್ರಜ್ಞರು ಮತ್ತು ಐತಿಹಾಸಿಕ ಮೂಲಗಳ ಸಂಶೋಧನೆಯ ಪ್ರಕಾರ ಮಾನವನ ಮಾಂಸದ ರುಚಿಯೂ ಹಂದಿ ಮಾಂಸ ಹಾಗೂ ಕರುವಿನ ಮಾಂಸದ ರುಚಿಯನ್ನು ಹೋಲುತ್ತದೆ ಎಂದು ಬಣ್ಣಿಸಲಾಗಿದೆ.

 

click me!