ಸ್ಥಳೀಯ ಯುವತಿಯನ್ನು ಮದುವೆಯಾದ ಅಮೆರಿಕಾದ ಯೂಟ್ಯೂಬರ್‌ಗೆ ಗುಂಡಿಕ್ಕಿ, ಅಪಹರಣ

By Anusha Kb  |  First Published Oct 22, 2024, 1:48 PM IST

ಸ್ಥಳೀಯ ಯುವತಿ ಜೊತೆ ಪ್ರೀತಿಯಲ್ಲಿ ಬಿದ್ದು, ಆಕೆಯನ್ನೇ ಮದುವೆಯಾದ ಅಮೆರಿಕನ್ ಯೂಟ್ಯೂಬರ್ ಒಬ್ಬನಿಗೆ ಗುಂಡಿಕ್ಕಿ ಅಪಹರಣ ಮಾಡಿರುವ ಆಘಾತಕಾರಿ ಘಟನೆ ಫಿಲಿಫೈನ್ಸ್‌ನಲ್ಲಿ ನಡೆದಿದೆ 


ಸ್ಥಳೀಯ ಯುವತಿ ಜೊತೆ ಪ್ರೀತಿಯಲ್ಲಿ ಬಿದ್ದು, ಆಕೆಯನ್ನೇ ಮದುವೆಯಾದ ಅಮೆರಿಕನ್ ಯೂಟ್ಯೂಬರ್ ಒಬ್ಬನಿಗೆ ಗುಂಡಿಕ್ಕಿ ಅಪಹರಣ ಮಾಡಿರುವ ಆಘಾತಕಾರಿ ಘಟನೆ ಫಿಲಿಫೈನ್ಸ್‌ನಲ್ಲಿ ನಡೆದಿದೆ ಅಮೆರಿಕನ್ ಮೂಲದ ಯೂಟ್ಯೂಬರ್ ಇಲಿಯಟ್‌ ಒನಿಲ್ ಇಸ್ಟ್‌ಮ್ಯಾನ್‌  ಎಂಬಾತನೇ ಸ್ಥಳೀಯ ಫಿಲಿಫೈನ್ಸ್ ಜನರಿಂದ ಅಪಹರಣಕ್ಕೊಳಗಾಗಿ ಕಿಡ್ನ್ಯಾಪ್ ಆದಾತ.  ಫಿಲಿಫೈನ್ಸ್‌ನ ದಕ್ಷಿಣ ಭಾಗಕ್ಕೆ ಈತ ಭೇಟಿ ನೀಡಿದ್ದ ವೇಳೆ ಆತನ ಕಾಲಿಗೆ ಗುಂಡಿಕ್ಕಿದ ದುಷ್ಕರ್ಮಿಗಳು ಬಳಿಕ ಆತನನ್ನು ಕಿಡ್ನ್ಯಾಪ್ ಮಾಡಿದ್ದಾರೆ. 

ಕಿಡ್ನಾಪ್ ಆದ ಯೂಟ್ಯೂಬರ್ ಅಮೆರಿಕಾದ ವೆರ್ಮೌಂಟ್ ನಿವಾಸಿಯಾಗಿದ್ದರು, ಈತನಿಗಾಗಿ ಈಗ ಫಿಲಿಫೈನ್ಸ್ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಮೆರಿಕನ್ ಪ್ರಜೆಯೊಬ್ಬನ ಅಪಹರಣವಾಗಿರುವುದು ನಿಜ ಎಂದು ನಾವು ದೃಢೀಕರಿಸುತ್ತೇವೆ, ತನಿಖೆ ನಡೆಯುತ್ತಿದೆ. ನಾವು ಸಾರ್ವಜನಿಕರಿಗೆ, ವಿಶೇಷವಾಗಿ ಸಿಬುಕೊ ಸಮುದಾಯಕ್ಕೆ ಭರವಸೆ ನೀಡಲು ಬಯಸುತ್ತೇವೆ, ಆತನ ಸುರಕ್ಷಿತ ಚೇತರಿಕೆಗೆ ನಾವು ನಮ್ಮ ಶಕ್ತಿಯಿಂದಾದ ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ನಾಲ್ವರು ಎಂ16 ರೈಫಲ್ ಹಿಡಿದುಕೊಂಡಿದ್ದ ಬಂಧೂಕುದಾರಿಗಳು ಈ ಕೃತ್ಯವೆಸಗಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 

Tap to resize

Latest Videos

undefined

ನಾಪತ್ತೆಯಾಗಿದ್ದ ಎರಡು ಮಕ್ಕಳ ಅಮ್ಮ ಗೋವಾ ಬೀಚ್‌ನಲ್ಲಿ ಕ್ಯಾಬ್ ಡ್ರೈವರ್‌ ಜೊತೆ ಪತ್ತೆ!

ಅಮೆರಿಕನ್ ಯುವಕನನ್ನು ಕಿಡ್ನ್ಯಾಪ್ ಮಾಡುವ ಮೊದಲು ಅವರು ತಾವು ಪೊಲೀಸ್ ಅಧಿಕಾರಿಗಳೆಂದು ಸುಳ್ಳು ಹೇಳಿದ್ದಾರೆ.  ಆದರೆ ಅಪಹರಣಕ್ಕೆ ಅಮೆರಿಕನ್ ಯೂಟ್ಯೂಬರ್ ವಿರೋಧ ವ್ಯಕ್ತಪಡಿಸಿದಾಗ ಆತನ ಕಾಲಿಗೆ ಗುಂಡಿಕ್ಕಿ ಆತನನ್ನು ಸ್ಪೀಡ್‌ಬೋಟ್‌ಗೆ ಎಳೆದುಕೊಂಡು ಬಂದು ಕಿಡ್ನಾಪ್ ಮಾಡಿದ್ದಾರೆ. ನಂತರ ಅಪಹರಣಕಾರರು ನೀರಿನಿಂದ ಅವೃತವಾದ ಬಸಿಲನ್ ಪ್ರದೇಶಕ್ಕೆ ಎಸ್ಕೇಪ್ ಆಗಿದ್ದಾರೆ. ಈ ಪ್ರದೇಶವು ಇಲ್ಲಿ ಬಂಡಾಯ ಚಟುವಟಿಕೆಗೆ ಹೆಸರುವಾಸಿಯಾಗಿದೆ. ಈಗ ಸ್ಥಳೀಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಆತನ ಪತ್ತೆಗೆ ನೆರವಾಗುವಂತೆ ಮನವಿ ಮಾಡಿದ್ದು, ಶೀಘ್ರದಲ್ಲೇ ಯೂಟ್ಯೂಬರ್‌ನನ್ನು ಸುರಕ್ಷಿತವಾಗಿ ಕರೆತರುವ ಭರವಸೆ ನೀಡಿದ್ದಾರೆ. 

7 ವರ್ಷವಿದ್ದಾಗ ಕಿಡ್ನಾಪ್, 17 ವರ್ಷದ ಬಳಿಕ ವಕೀಲನಾಗಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿ!

ಫಿಲಿಪೈನ್ ಅಧಿಕಾರಿಗಳು ಈ ಯೂಟ್ಯೂಬರ್ ಬಗ್ಗೆ ಅಧಿಕೃತ ವಿವರ ನೀಡದೇ ಇದ್ದರು, ಅಲ್ಲಿನ ಸ್ಥಳೀಯ ಮೂಲಗಳ ಪ್ರಕಾರ ಈ ಅಮೆರಿಕನ್ ಯೂಟ್ಯೂಬರ್‌ ಎಲಿಯಟ್ ಈಸ್ಟ್‌ಮನ್ ಎಂಬ ವ್ಯಕ್ತಿ, ಈ ಪ್ರದೇಶದಲ್ಲಿನ ತನ್ನ ಜೀವನದ ಕುರಿತು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿಆಗಾಗ ವೀಡಿಯೋ ಪೋಸ್ಟ್ ಮಾಡುತ್ತಿದ್ದ. ಆತ ಸಿಬುಕೊದಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿರುವುದಾಗಿ ಹೇಳಿಕೊಂಡಿದ ಹಾಗೂ ಸುಮಾರು ಐದು ತಿಂಗಳಿನಿಂದ ಜಾಂಬೊಂಗಾ ಡೆಲ್ ನಾರ್ಟೆಯ ದೂರದ ಪರ್ವತ ಪ್ರದೇಶದಲ್ಲಿ ವಾಸಿಸುತ್ತಿದ್ದ. ನಮಗೆ ಸಿಕ್ಕ ಆರಂಭಿಕ ಮಾಹಿತಿ ಪ್ರಕಾರ, ಆತ ಸ್ಥಳೀಯ ಯುವತಿಯನ್ನು ವಿವಾಹವಾಗಿದ್ದು, ಸುಮಾರು ಐದು ತಿಂಗಳಿನಿಂದ ಆತ ಅಲ್ಲಿ ವಾಸವಿದ್ದ ಎಂದು  ಸ್ಥಳೀಯ ಅಧಿಕಾರಿಯೊಬ್ಬರು ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

click me!