1993ರ ಮುಂಬೈ ದಾಳಿ ರೂವಾರಿಗಳಿಗೆ ಪಾಕಿಸ್ತಾನ ಆತಿಥ್ಯ: India

By Kannadaprabha News  |  First Published Jan 20, 2022, 2:35 AM IST

1993ರ ಮುಂಬೈ ಸರಣಿ ಬಾಂಬ್‌ ದಾಳಿಗಳ ರೂವಾರಿಯ ಅಪರಾಧದ ಸಿಂಡಿಕೇಟ್‌ಗೆ ಪಾಕಿಸ್ತಾನ ರಕ್ಷಣೆಯಷ್ಟೇ ಅಲ್ಲದೆ ಪಂಚತಾರಾ ಹೋಟೆಲ್‌ನ ಸೇವಾ ಸೌಲಭ್ಯವನ್ನು ಸಹ ನೀಡಿತ್ತು ಎಂದು ಭಾರತ ಹೇಳಿದೆ. 


ನ್ಯೂಯಾರ್ಕ್ (ಜ.20): 1993ರ ಮುಂಬೈ ಸರಣಿ ಬಾಂಬ್‌ ದಾಳಿಗಳ (Mumbai Bomb Blast) ರೂವಾರಿಯ ಅಪರಾಧದ ಸಿಂಡಿಕೇಟ್‌ಗೆ ಪಾಕಿಸ್ತಾನ (Pakistan) ರಕ್ಷಣೆಯಷ್ಟೇ ಅಲ್ಲದೆ ಪಂಚತಾರಾ ಹೋಟೆಲ್‌ನ ಸೇವಾ ಸೌಲಭ್ಯವನ್ನು ಸಹ ನೀಡಿತ್ತು ಎಂದು ಭಾರತ ಹೇಳಿದೆ. ತನ್ಮೂಲಕ ಈ ಬಾಂಬ್‌ ದಾಳಿಯ ರೂವಾರಿ ಮತ್ತು ಭಾರತಕ್ಕೆ ಬೇಕಿರುವ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಡಿ ಕಂಪನಿ ಮುಖ್ಯಸ್ಥ ದಾವೂದ್‌ ಇಬ್ರಾಹಿಂಗೆ (Davud Ibrahim) ಪಾಕಿಸ್ತಾನ ಭದ್ರ ನೆಲೆ ಕಲ್ಪಿಸಿತ್ತು ಎಂದು ಪರೋಕ್ಷವಾಗಿ ಭಾರತ (India) ಹೇಳಿದೆ.

ಜಾಗತಿಕ ಭಯೋತ್ಪಾದನೆ ನಿಗ್ರಹ ಕೌನ್ಸಿಲ್‌ನಿಂದ ಆಯೋಜಿಸಲಾದ 2022ರ ಅಂತಾರಾಷ್ಟ್ರೀಯ ಉಗ್ರ ನಿಗ್ರಹ ಸಮಾವೇಶದಲ್ಲಿ ವಿಶ್ವಸಂಸ್ಥೆ (United Nations) ದೂತವಾಸಕ್ಕೆ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಟಿ.ಎಸ್‌ ತಿರುಮೂರ್ತಿ (TS Tirumurti) ಅವರು ಮಂಗಳವಾರ ಮಾತನಾಡಿ, 1993ರ ಮುಂಬೈ ಬಾಂಬ್‌ ದಾಳಿಗಳನ್ನು ಎಸಗಿದ ಉಗ್ರ ಸಿಂಡಿಕೇಟ್‌ಗೆ ಕೇವಲ ಬೆಂಬಲವಷ್ಟೇ ಅಲ್ಲದೆ ಪಂಚತಾರಾ ಹೋಟೆಲ್‌ ಸೌಲಭ್ಯವನ್ನು ನೀಡಿದ ದೇಶವನ್ನು ನಾವು ಕಂಡಿದ್ದೇವೆ ಎಂದು ಹೇಳಿದರು.

Tap to resize

Latest Videos

undefined

1267 ಅಲ್‌ಖೈದಾ ನಿರ್ಬಂಧಗಳ ಸಮಿತಿ ಸೇರಿದಂತೆ ವಿಶ್ವಸಂಸ್ಥೆಯ ನಿರ್ಬಂಧದ ಕ್ರಮಗಳು ಭಯೋತ್ಪಾದನೆಗೆ ಹಣ ಪೂರೈಕೆ, ಉಗ್ರರ ಚಲನವಲನಗಳು ಮತ್ತು ಭಯೋತ್ಪಾದನೆ ಸಂಘಟನೆಗಳು ಶಸ್ತ್ರಾಸ್ತ್ರ ಪಡೆಯದಂತೆ ನಿಯಂತ್ರಿಸಲು ಬಹುಮುಖ್ಯ ಪಾತ್ರ ವಹಿಸಲಿವೆ. ಆದಾಗ್ಯೂ, ಈ ಕ್ರಮಗಳ ಜಾರಿಯು ಎದುರಾಗಿರುವ ಸವಾಲುಗಳು ಕಳವಳಕಾರಿಯಾಗಿವೆ ಎಂದು ಹೇಳಿದರು. ಕೌನ್ಸಿಲ್‌ನ ಎಲ್ಲಾ ನಿರ್ಬಂಧಗಳ ಆಡಳಿತಗಳು ಸರಿಯಾದ ಪ್ರಕ್ರಿಯೆಯಲ್ಲಿ ತಮ್ಮ ಕೆಲಸ ನಿರ್ವಹಿಸುವುದು ನಿರ್ಣಾಯಕವಾಗಿದೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ, ವಸ್ತುನಿಷ್ಠ, ತ್ವರಿತ, ವಿಶ್ವಾಸಾರ್ಹ, ಸಾಕ್ಷ್ಯ ಆಧಾರಿತ ಮತ್ತು ಪಾರದರ್ಶಕವಾಗಿರಬೇಕೇ ಹೊರತು ರಾಜಕೀಯ ಮತ್ತು ಧಾರ್ಮಿಕವಾಗಿರಬಾರದು ಎಂದು ತಿಳಿಸಿದರು.

ಮೋದೀಜಿ ನಮಗೆ ಸಹಾಯ ಮಾಡಿ, ಅಳಲು ತೋಡಿಕೊಂಡ POK ವ್ಯಕ್ತಿ!

ಎಲ್‌ಇಟಿ, ಜೆಇಎಂ ಉಗ್ರಸಂಘಟನೆಗಳಿಗೆ ಪಾಕ್‌ ಬಲ: ವಿಶ್ವಸಂಸ್ಥೆಯಿಂದ ನಿರ್ಬಂಧಕ್ಕೊಳಗಾಗಿರುವ ಪಾಕಿಸ್ತಾನದ ಲಷ್ಕರ್‌-ಎ-ತೊಯ್ಬಾ ಮತ್ತು ಜೈಷ್‌-ಎ-ಮೊಹಮ್ಮದ್‌ ರೀತಿಯ ಭಯೋತ್ಪಾದಕ ಸಂಘಟನೆಗಳು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳುತ್ತಿವೆ. ಅಲ್ಲದೆ ಐಸಿಸ್‌ ಉಗ್ರಗಾಮಿ ಸಂಘಟನೆಯು ತನ್ನ ಕಾರ್ಯವಿಧಾನವನ್ನು ಬದಲಿಸಿಕೊಂಡಿದ್ದು, ಅದು ಸಿರಿಯಾ ಮತ್ತು ಇರಾಕ್‌ನಲ್ಲಿ ತನ್ನ ಪಾರಮ್ಯ ಸಾಧಿಸಲು ಯತ್ನಿಸುತ್ತಿದೆ. ವಿಶೇಷವಾಗಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಸ್ಥಳೀಯವಾಗಿ ವ್ಯಾಪಿಸುವತ್ತ ಗಮನ ಹರಿಸಿದೆ ಎಂದು ವಿಶ್ವಸಂಸ್ಥೆಗೆ ಭಾರತದ ಶಾಶ್ವತ ರಾಯಭಾರಿ ತಿರುಮೂರ್ತಿ ಅವರು ಹೇಳಿದ್ದಾರೆ.

ಇಮ್ರಾನ್ ಖಾನ್ ಸರ್ಕಾರದ ಬಹುದೊಡ್ಡ ಸುಳ್ಳು ಅನಾವರಣ: ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಸುಳ್ಳು ಮತ್ತೊಮ್ಮೆ ಎಲ್ಲರ ಮುಂದೆ ಬಂದಿದೆ. ಕಾಶ್ಮೀರದ ಕುರಿತು ಪಾಕಿಸ್ತಾನ ಪ್ರಾಯೋಜಿತ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಇಮ್ರಾನ್ ಖಾನ್ ಸರ್ಕಾರ ಹೇಳಿಕೊಂಡಿದೆ. ಈ ನಿರ್ಣಯವು ಭಾರತದಲ್ಲಿ ಕಾಶ್ಮೀರಿಗಳ ಸ್ವಯಂ ನಿರ್ಣಯದ ಹಕ್ಕನ್ನು ಬೆಂಬಲಿಸುತ್ತದೆ ಎಂದು ಪಾಕಿಸ್ತಾನ ಹೇಳಿತ್ತು. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ನಿರ್ಣಯದಲ್ಲಿ ಕಾಶ್ಮೀರದ ಬಗ್ಗೆ ಅಥವಾ ಕಾಶ್ಮೀರದ ಸ್ಥಿತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಅಬುಧಾಬಿಯಲ್ಲಿ ಡ್ರೋಣ್ ದಾಳಿ, ಟ್ಯಾಂಕರ್ ಸ್ಫೋಟ,  ಇಬ್ಬರು ಭಾರತೀಯರ ಸಾವು

ಪಾಕಿಸ್ತಾನ ಸ್ವಾರ್ಥಕ್ಕಾಗಿ ಇಂತಹ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ: ವಿಶ್ವಸಂಸ್ಥೆಯ ನಿರ್ಣಯದಲ್ಲಿ ಕಾಶ್ಮೀರದ ಬಗ್ಗೆ ಏನನ್ನೂ ಹೇಳಿಲ್ಲ. ಕಳೆದ ದಶಕದಿಂದ ಅಂಗೀಕರಿಸಲ್ಪಟ್ಟ ವಿಶ್ವಸಂಸ್ಥೆಯಲ್ಲಿನ ಇಂತಹ ನಿರ್ಣಯಗಳು ಮೂಲತಃ ಪ್ಯಾಲೆಸ್ತೀನ್ ಸಂದರ್ಭದಲ್ಲಿ ತಯಾರಾದವು ಎಂದು ಈ ವಿಷಯದ ತಜ್ಞರು ಹೇಳುತ್ತಾರೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಂತಹ ಯಾವುದೇ ಪ್ರಸ್ತಾಪವನ್ನು ಸಿದ್ಧಪಡಿಸಲಾಗಿಲ್ಲ ಎಂದು ತಜ್ಞರು ಹೇಳುತ್ತಾರೆ. ವಿಶ್ವಸಂಸ್ಥೆಯ ನಿರ್ಣಯದ ಬಗ್ಗೆ ತಿಳಿದಿರುವ ಅಧಿಕಾರಿಗಳು ದಿ ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದ್ದು, ನಿರ್ಣಯದಲ್ಲಿ ಯಾವುದೇ ರೂಪದಲ್ಲಿ ಕಾಶ್ಮೀರದ ಉಲ್ಲೇಖವಿಲ್ಲ. ಪಾಕಿಸ್ತಾನ ತನ್ನ ಪಟ್ಟಭದ್ರ ಹಿತಾಸಕ್ತಿಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದೆ.

click me!