ನಾಯಿಯ ಗಾತ್ರದ ಬೆಕ್ಕು ನೋಡಿ ಜನರ ಗೊಂದಲ.... ಇದು ಬೆಕ್ಕೋ ನಾಯೋ... ನೀವೇ ಹೇಳಿ

By Suvarna NewsFirst Published Jan 19, 2022, 7:20 PM IST
Highlights
  • ನಾಯಿಯ ಗಾತ್ರದ ಬೆಕ್ಕು ನೋಡಿ ಜನರ ಗೊಂದಲ
  • ಎರಡು ವರ್ಷದ ಹಿಂದೆ ಬೆಕ್ಕು ಖರೀದಿಸಿದ್ದ ಮಹಿಳೆ
  • ಗಾತ್ರದಲ್ಲಿ ಎಲ್ಲರನ್ನು ಬೆಚ್ಚಿ ಬೀಳಿಸುವ ಬೆಕ್ಕು

ರಷ್ಯಾ(ಜ. 19): ಬೆಕ್ಕೊಂದು ನಾಯಿ ಗಾತ್ರದಷ್ಟು ದೊಡ್ಡದಾಗಿ ಬೆಳೆದಿದ್ದು ಇದನ್ನು ನೋಡಿ ಜನ ಇದ್ದು ಬೆಕ್ಕೋ ಅಥವಾ ನಾಯಿಯೊ ಎಂದು ಗೊಂದಲಕ್ಕೀಡಾಗುತ್ತಿದ್ದಾರೆ. ರಷ್ಯಾದ (Russia) ಓಸ್ಕೋಲ್‌ (Oskol)ನಲ್ಲಿ ವಾಸಿಸುವ ಯೂಲಿಯಾ ಮಿನಿನಾ (Yulia Minina) ಅವರು ಕೆಫೀರ್(Kefir)ಎಂಬ ಬೆಕ್ಕನ್ನು ಹೊಂದಿದ್ದಾರೆ. ಅದನ್ನು 'ವಿಶ್ವದ ಅತಿದೊಡ್ಡ ಬೆಕ್ಕು' ಎಂದು ಕರೆಯಲಾಗುತ್ತಿದೆ. ಅವರು ಎರಡು ವರ್ಷಗಳ ಹಿಂದೆ ಈ ಬೆಕ್ಕನ್ನು ಖರೀದಿಸಿದ್ದರಂತೆ. ಆದರೆ ಹೆಚ್ಚಿನ ಜನ ಈಗ ಇದನ್ನು ನಾಯಿ ಎಂದು ಭಾವಿಸುತ್ತಾರಂತೆ.

ಇದಕ್ಕೆ ಕೇವಲ ಎರಡು ವರ್ಷವಾಗಿದ್ದು, ಬಹುಶಃ ಅದು ಬೆಳೆಯುವುದನ್ನು ನಿಲ್ಲಿಸಲು ಇನ್ನೂ ವರ್ಷಗಳಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಬೆಕ್ಕಿನ ನಿಜವಾದ ಉದ್ದ ತಿಳಿದಿಲ್ಲವಾದರೂ ಇದು ಮನೆಗಳಲ್ಲಿರುವ ಸರಾಸರಿ ಮನೆಯ ಬೆಕ್ಕಿಗಿಂತ ಉದ್ದವಾಗಿದೆ ಎಂಬುದು ಚಿತ್ರಗಳಿಂದ ಸ್ಪಷ್ಟವಾಗಿದೆ. ಸಾಮಾನ್ಯ ಮರಿ ಇಷ್ಟು ದೊಡ್ಡದಾಗಬಹುದೆಂದು ನಾನು ಯೋಚಿಸಲು ಸಹ ಸಾಧ್ಯವಾಗಲಿಲ್ಲ. ಅದು ನೋಡುವುದಕ್ಕಷ್ಟೇ ದೊಡ್ಡದಾಗಿ ಬೆಳೆದಿದೆ ಮಾತ್ರವಲ್ಲ, ಅದು ತುಂಬಾ ಸ್ಮಾರ್ಟ್ ಮತ್ತು ಯಾವಾಗಲೂ ಶಾಂತವಾಗಿ ವರ್ತಿಸುತ್ತದೆ ಎಂದು ಯೂಲಿಯಾ ಹೇಳಿದ್ದಾರೆ.

ಈ ಶಾಪ್‌ಗೆ ಮನುಷ್ಯರಂತೆ ವಿಸಿಟ್‌ ಕೊಡ್ತವೆ ಸಾಲು ಸಾಲು ಬೆಕ್ಕು ನಾಯಿಗಳು

ಈ ಬೆಕ್ಕು ಅಸಾಧಾರಣ ನೋಟವನ್ನು ಹೊಂದಿದೆ. ಆದರೆ ಅದು ತುಂಬಾ ಪ್ರೀತಿ ಹೊಂದಿರುವ ಸಾಧಾರಣ ಮಗು, ಸ್ನೇಹಿತರು ಮತ್ತು ಪರಿಚಯಸ್ಥರು ಮನೆಗೆ ಬಂದಾಗ  ಎಲ್ಲರ ಗಮನವು ಅದರ ಮೇಲಿರುತ್ತದೆ  ಎಂದು ಅವರು ಹೇಳಿದರು. ಅದರ ಗಾತ್ರವು ಹೆದರಿಕೆ ಹುಟ್ಟುವಂತೆ ಇದ್ದು, ಅದನ್ನು ಹಿಂದೆಂದೂ ನೋಡದ ಅಪರಿಚಿತರು ಮನೆಗೆ ಬಂದಾಗ, ಬೆಕ್ಕು ರಾಜಠೀವಿಯಿಂದ ಬಾಗಿಲಲ್ಲಿ ನಿಂತು ಅವರನ್ನು ಸ್ವಾಗತಿಸುವುದರಿಂದ ಅವರು ಭಯಗೊಳ್ಳುತ್ತಾರೆ. ಅಲ್ಲದೇ ಅದು ನಾಯಿ ಇರಬೇಕು ಎಂದು ಗೊಂದಲಕ್ಕೊಳಗಾಗುತ್ತಾರೆ ಎಂದು ಬೆಕ್ಕಿನ ಮಾಲಕಿ ಯೂಲಿಯಾ ಹೇಳಿದರು. 

ಅಲ್ಲದೇ ಈ ಬೆಕ್ಕಿಗೆ ಇನ್ನೊಂದು ಅಭ್ಯಾಸವಿದೆಯಂತೆ ರಾತ್ರಿಯಲ್ಲಿ ಅದು ಇವರ ಮೇಲೆ ಹತ್ತಿ ಮಲಗಲು ಇಷ್ಟಪಡುತ್ತದಂತೆ. ಆದರೆ ಅದು ಚಿಕ್ಕ ಮರಿ ಇದ್ದಾಗ ಮಾಲಕಿಗೆ ಬೆಕ್ಕು ಆಕೆಯ ಮೇಲೆ ಹತ್ತಿ ಮಲಗುತ್ತಿದ್ದುದರಿಂದ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲವಂತೆ ಆದರೆ ಈಗ ಅದು ದೊಡ್ಡದಾಗಿದ್ದು, ತುಂಬಾ ಭಾರವಿದ್ದು, ನನಗೆ ಕಷ್ಟವಾಗುತ್ತಿದೆ ಎಂದು ಮಾಲಕಿ ಯೂಲಿಯಾ ಹೇಳುತ್ತಾರೆ. 

Baby Shower For Cat : ಗರ್ಭಿಣಿ ಬೆಕ್ಕಿಗೆ ಸೀಮಂತ ಮಾಡಿದ ತಮಿಳುನಾಡಿನ ಕುಟುಂಬ

ಮೈನೆ ಕೂನ್ ತಳಿಯ ಬೆಕ್ಕುಗಳು ಗಾತ್ರದಲ್ಲಿ ದೊಡ್ಡದಾಗಿ ಬೆಳೆಯುತ್ತವೆ. ಇದನ್ನು ಸಾಮಾನ್ಯವಾಗಿ ದೇಶಿಯ ತಳಿ ಎಂದು ಹೇಳಲಾಗುತ್ತದೆ. ಅದರ ಹೆಸರೇ ಸೂಚಿಸುವಂತೆ, ಈ ತಳಿಯು ಮೈನೆ ರಾಜ್ಯದಿಂದ ಬಂದಿದ್ದು, ಉತ್ತರ ಅಮೆರಿಕಾದಲ್ಲಿನ ಅತ್ಯಂತ ಹಳೆಯ ಸ್ವದೇಶಿ ತಳಿಗಳಲ್ಲಿ ಇದು ಒಂದಾಗಿದೆಯಂತೆ.

click me!