'ಎಂಥಾ ಕೆಟ್ಟ ಗಿಫ್ಟ್ ಕೊಟ್ರಿ'..! ಚೀನಾ ವಿರುದ್ಧ ಟ್ರಂಪ್‌ ಕಿಡಿ

By Suvarna News  |  First Published Jun 6, 2020, 3:03 PM IST

ಕೊರೋನಾ ವೈರಸ್‌ ಚೀನಾ ಕೊಟ್ಟ ಕೆಟ್ಟ ಗಿಫ್ಟ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. ಈ ವೈರಸ್‌ನ್ನು ಅದು ಆರಂಭವಾದ ಮೂಲ ಸ್ಥಳದಲ್ಲಿಯೇ ನಿಲ್ಲಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ವಾಷಿಂಗ್ಟನ್(ಜೂ.06): ಕೊರೋನಾ ವೈರಸ್‌ ಚೀನಾ ಕೊಟ್ಟ ಕೆಟ್ಟ ಗಿಫ್ಟ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. ಈ ವೈರಸ್‌ನ್ನು ಅದು ಆರಂಭವಾದ ಮೂಲ ಸ್ಥಳದಲ್ಲಿಯೇ ನಿಲ್ಲಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೋನಾ ವೈರಸ್‌ ಚೀನಾ ಕೊಟ್ಟ ಕೆಟ್ಟ ಗಿಫ್ಟ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. ಈ ವೈರಸ್‌ನ್ನು ಅದು ಆರಂಭವಾದ ಮೂಲ ಸ್ಥಳದಲ್ಲಿಯೇ ನಿಲ್ಲಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Latest Videos

undefined

ಬಡ ರಾಷ್ಟ್ರಗಳಿಗೆ ಉಚಿತ ಕೊರೋನಾ ಲಸಿಕೆ; $10 ಬಿಲಿಯನ್ ಹೂಡಿಕೆ ಮಾಡಿದ ಬಿಲ್ ಗೇಟ್ಸ್!

ಶುಕ್ರವಾರ ಮಾತನಾಡಿದ ಅವರು, ಕೊರೋನಾ ಚೀನಾ ಕೊಟ್ಟ ಗಿಫ್ಟ್. ಇದು ಒಳ್ಳೆ ಉಡುಗೊರೆಯಲ್ಲ, ಇದನ್ನು ಆರಂಭದಲ್ಲಿಯೇ ನಿಲ್ಲಿಸಬಹುದಿತ್ತು. ಇದು ಕೆಟ್ಟ ಗಿಫ್ಟ್ ಎಂದಿದ್ದಾರೆ. ವುಹಾನ್‌ನಿಂದ ಆರಂಭವಾದಾಗ ಅಲ್ಲಿಯೇ ಕೊನೆಗೊಳಿಸಬೇಕಿತ್ತು. ಬೇರೆ ಸ್ಥಳಗಳಿಗೆ ಹೋಗಬಾರದಿತ್ತು ಎಂದಿದ್ದಾರೆ.

ಈ ನಡುವೆ ಚೀನಾ ತನ್ನಿಂದ ತೆಗೆದುಕೊಳ್ಳುತ್ತಿರುವ ನೆರವಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಚೀನಾವನ್ನು ಕಟ್ಟಲು ನಾವು ನೆರವಾಗಿದ್ದೇವೆ. 500 ಬಿಲಿಯನ್ ಡಾಲರ್ ಪ್ರತಿ ವರ್ಷ ನೆರವು ನೀಡುತ್ತೇವೆ.ಆದರೆ ಈಗ ಎಲ್ಲ ಬದಲಾಗುತ್ತಿದೆ ಎಂದಿದ್ದಾರೆ.

ಚೀನಾ ಸೊಕ್ಕು ಮುರಿಯಲು ಮೋದಿ-ಟ್ರಂಪ್ 7+4 ಸೂತ್ರ; ಡ್ರ್ಯಾಗನ್‌ಗೆ ಶುರುವಾಗಿದೆ ಢವಢವ

ನಾವು ಜಗತ್ತಿನೊಂದಿಗೆ ಕೆಲಸ ಮಾಡುತ್ತೇವೆ. ಚೀನಾದೊಂದಿಗೂ ಕೆಲಸ ಮಾಡುತ್ತೇವೆ. ನಾವು ಎಲ್ಲರೊಂದಿಗೂ ಕೆಲಸ ಮಾಡುತ್ತೇವೆ. ಆದರೆ ಈಗಾಗಿರುವಂತಹ ದುರಂತ ಆಗಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

click me!