
ಚೆನ್ನೈ(ಜೂ.06): ಸಮಾಜಸೇವೆ ಮಾಡುತ್ತಿರುವ ತಮಿಳುನಾಡಿನ ಮದುರೈನ ಕ್ಷೌರಿಕರೊಬ್ಬರ 13 ವರ್ಷದ ಮಗಳು ಬಡವರಿಗಾಗಿ ‘ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿ’ ಆಗಿ ನೇಮಕಗೊಂಡಿದ್ದಾಳೆ.
ಕ್ಷೌರಿಕ ಸಿ. ಮೋಹನ್ ಅವರ ಪುತ್ರಿ ಎಂ. ನೇತ್ರಾ ಈ ಸಾಧನೆ ಮಾಡಿದಾಕೆ. ಈಕೆಯನ್ನು ವಿಶ್ವಸಂಸ್ಥೆಯ ವಿಭಾಗವಾದ ‘ಶಾಂತಿ ಹಾಗೂ ಅಭಿವೃದ್ಧಿ ಕುರಿತಾದ ವಿಸ್ವಸಂಸ್ಥೆ ಅಸೋಸಿಯೇಷನ್’, ಗುರುತಿಸಿ ಆಯ್ಕೆ ಮಾಡಿದೆ. ಇದರೊಂದಿಗೆ ವಿಶ್ವಸಂಸ್ಥೆ ನ್ಯೂಯಾರ್ಕ್ ಹಾಗೂ ಜಿನೇವಾದಲ್ಲಿ ನಡೆಸಲಿರುವ ಸಮ್ಮೇಳನದಲ್ಲಿ ವಿಶ್ವನಾಯಕರ ಮುಂದೆ ಈಕೆ ಭಾಷಣ ಮಾಡುವ ಅವಕಾಶವನ್ನೂ ಪಡೆದುಕೊಂಡಿದ್ದಾಳೆ. ಈಕೆಗೆ 1 ಲಕ್ಷ ರು. ಶಿಷ್ಯವೇತನ ಸಿಗಲಿದೆ.
ಕೊರೋನಾ ಕಾಟಕ್ಕೆ ಬಳಲಿ ಬೆಂಡಾದ ಕ್ಷೌರಿಕರು: ಸಲೂನ್‌ನತ್ತ ಮುಖಮಾಡದ ಜನ..!
ಈಕೆಯ ಸೇವೆ ಏನು?:
ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದವರ ನೆರವಿಗೆ ಬಂದಿದ್ದ ನೇತ್ರಾ ಧಾವಿಸಿದ್ದಳು. ಈಕೆಯ ತಂದೆ ಮೋಹನ್ ತಮ್ಮ ಪುತ್ರಿಗಾಗಿ ಕೂಡಿಟ್ಟಿದ್ದ 5 ಲಕ್ಷ ರು. ಉಳಿತಾಯ ಹಣವನ್ನು 600 ಕುಟುಂಬಗಳಿಗೆ ದಿನಸಿ ಹಂಚಲು ಬಳಸಿದ್ದರು. ಇದನ್ನು ತಮ್ಮ ಮನ್ ಕೀ ಬಾತ್ ರೇಡಿಯೋ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ