Covid 19 Variant: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ ದ್ವಿಗುಣ: ಒಮಿಕ್ರೋನ್‌ಗೆ ಯುವಜನತೆಯೇ ಟಾರ್ಗೆಟ್‌?

By Kannadaprabha News  |  First Published Dec 3, 2021, 7:02 AM IST

*ಕೆಲವು ವಾರಗಳ ನಂತರ ಲಕ್ಷಣ ಗೋಚರ
*ದಕ್ಷಿಣ ಆಫ್ರಿಕಾದಲ್ಲಿ ಒಂದೇ ದಿನದಲ್ಲಿ ಕೋವಿಡ್‌ ದ್ವಿಗುಣ 
*1963ರಲ್ಲೇ ಒಮಿಕ್ರೋನ್‌ ಹೆಸರಿನ ಸಿನಿಮಾ ಬಿಡುಗಡೆ


ಜೊಹಾನ್ಸ್‌ಬರ್ಗ್‌(ಡಿ. 02): ಅತ್ಯಂತ ಅಪಾಯಕಾರಿ ವೈರಸ್‌ ಎಂದು ಬಣ್ಣಿಸಲಾಗಿರುವ ಒಮಿಕ್ರೋನ್‌ ವೈರಸ್‌ನ (Omicron Variant) ಸ್ವರೂಪ ಮತ್ತು ಲಕ್ಷಣಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿರುವಾಗಲೇ ರೂಪಾಂತರಿ ತಳಿ ದಕ್ಷಿಣ ಆಫ್ರಿಕಾದಲ್ಲಿ (South Africa) ಯುವಜನತೆಯ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತಿದೆ. ವೈರಸ್‌ ವಿರುದ್ಧ ಹೋರಾಡುವ ಬಲ ಮತ್ತು ಆರೋಗ್ಯ ಇದ್ದವರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಅಲ್ಲದೆ ಸೋಂಕು ಹರಡಿದ ಕೆಲ ದಿನಗಳ ಬಳಿಕ ಲಕ್ಷಣ ಕಾಣಿಸಿಕೊಳ್ಳುತ್ತಿವೆ. ಯುವಜನರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿರುವುದರಿಂದ ರೂಪಾಂತರಿ ತಳಿ ಸೌಮ್ಯ ಲಕ್ಷಣಗಳನ್ನು ಮಾತ್ರ ಹೊಂದಿರುತ್ತದೆಂದು ಈಗಾಗಲೇ ಅಂದಾಜಿಸಲು ಸಾಧ್ಯವಿಲ್ಲ. 

ಭವಿಷ್ಯದಲ್ಲಿ ಇತರೆ ವಯೋಮಾನದವರಲ್ಲೂ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮತ್ತು ಕೆಲವು ವಾರಗಳ ನಂತರ ಸೋಂಕಿತರಲ್ಲಿ ಗಂಭೀರ ಪ್ರಮಾಣದ ಲಕ್ಷಣಗಳು (Symptoms) ಕಾಣಿಸಿಕೊಳ್ಳಬಹುದೆಂದು ಅಂದಾಜಿಸಲಾಗಿದೆ ಎಂದೂ ತಿಳಿಸಿದ್ದಾರೆ. ಹಾಗೆಯೇ ಲಸಿಕೆ ಸ್ವೀಕರಿಸಿದ ಜನರಲ್ಲಿಯೇ (Vaccinated People) ಹೆಚ್ಚಾಗಿ ಒಮಿಕ್ರೋನ್‌ ಕಾಣಿಸಿಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಗಿಂತ ದಕ್ಷಿಣ ಆಫ್ರಿಕಾದಲ್ಲಿ ಲಸಿಕಾಕರಣ ಪ್ರಮಾಣ ತೀವ್ರ ಕಡಿಮೆ ಇದೆ. ಜನಸಂಖ್ಯೆಯ ಕಾಲು ಭಾಗಕ್ಕೆ ಲಸಿಕೆ ನೀಡಲಾಗಿದೆ. ಇನ್ನು ಆಫ್ರಿಕಾ ಖಂಡದಾದ್ಯಂತ ಕೇವಲ 130 ಕೋಟಿ ಜನರು (6.7%)ಮಾತ್ರ ಲಸಿಕೆ ಸ್ವೀಕರಿಸಿದ್ದಾರೆ.

Tap to resize

Latest Videos

ದಕ್ಷಿಣ ಆಫ್ರಿಕಾದಲ್ಲಿ ಒಂದೇ ದಿನದಲ್ಲಿ ಕೋವಿಡ್‌ ದ್ವಿಗುಣ 

ಅತಿ ಅಪಾಯಕಾರಿ ಒಮಿಕ್ರೋನ್‌ ರೂಪಾಂತರಿ ತಳಿ ಮೊದಲು ಪತ್ತೆಯಾದ ದಕ್ಷಿಣ ಆಪ್ರಿಕಾದಲ್ಲಿ ಸೋಂಕು ಅತಿ ವೇಗವಾಗಿ ಹಬ್ಬುತ್ತಿದ್ದು ಗುರುವಾರ ಒಂದೇ ದಿನ 8561 ಕೇಸ್‌ ದೃಢಪಟ್ಟಿವೆ. ಈ ಮೂಲಕ ಬುಧವಾರಕ್ಕೆ ಹೋಲಿಸಿದರೆ ಕೋವಿಡ್‌ ಸೋಂಕಿತರ ಸಂಖ್ಯೆ (Covid 19) ಒಂದೇ ದಿನದಲ್ಲಿ ದ್ವಿಗುಣವಾಗಿದೆ. ಬುಧವಾರ 4373 ಕೇಸ್‌ ದೃಢಪಟ್ಟಿದ್ದವು. ಒಮಿಕ್ರೋನ್‌ ಭೀತಿಯ ನಡುವೆ ಏಕಾಏಕಿ ಸೋಂಕು ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಸೋಂಕಿತರ ಸಂಖ್ಯೆ ಎರಡು ಪಟ್ಟು, ಮೂರು ಪಟ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ಒಮಿಕ್ರೋನ್‌ ಕಾರಣ ಎಂದು ತತ್‌ಕ್ಷಣಕ್ಕೆ ಹೇಳಲಾಗಲ್ಲ. ಆದರೆ ಆ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವೈರಾಣು ತಜ್ಞರು ಎಚ್ಚರಿಸಿದ್ದಾರೆ.

Covid 19 Variant: ಪೋಷಕರೇ ಹುಷಾರ್‌: 'ಮಕ್ಕಳ ಮೇಲೆಯೇ Omicron ಹೆಚ್ಚು ಪರಿಣಾಮ'

ನವೆಂಬರ್‌ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದಿನಕ್ಕೆ ಕೇವಲ ಸರಾಸರಿ 200 ಕೇಸ್‌ ಪತ್ತೆಯಾಗುತ್ತಿದ್ದವು. ಆದರೆ ನವೆಂಬರ್‌ ಮಧ್ಯಭಾಗದಿಂದ ಕೋವಿಡ್‌ ಸೋಂಕಿತರ ಪ್ರಮಾಣ ನಿರಂತರ ಏರುಮುಖದಲ್ಲಿದೆ. ಜೂನ್‌ ಮತ್ತು ಜುಲೈನಲ್ಲಿ ಡೆಲ್ಟಾರೂಪಾಂತರಿ (Delta Variant) ಕಾಣಿಸಿಕೊಂಡಾಗ ದಕ್ಷಿಣ ಆಫ್ರಿಕಾದಲ್ಲಿ ನಿತ್ಯ 20,000 ಕೇಸ್‌ ಪತ್ತೆಯಾಗಿತ್ತು.

1963ರಲ್ಲೇ ಒಮಿಕ್ರೋನ್‌ ಹೆಸರಿನ ಸಿನಿಮಾ ಬಿಡುಗಡೆ

ಹೊಸ ಕೋವಿಡ್‌ ರೂಪಾಂತರಿ ‘ಒಮಿಕ್ರೋನ್‌’ ಸದ್ಯ ಇಡೀ ಜಗತ್ತಿನ ಗಮನ ಸೆಳೆದಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಅತ್ಯಂತ ಅಪಾಯಕಾರಿ ವೈರಸ್ಸಿಗೆ ವಿಶ್ವ ಆರೋಗ್ಯ ಸಂಸ್ಥೆ ಗ್ರೀಕ್‌ ಹೆಸರಿನ ‘ಒಮಿಕ್ರೋನ್‌’ಎಂದು ಹೆಸರಿಟ್ಟಿದೆ. ಆದರೆ ಒಮಿಕ್ರೋನ್‌ ಹೊಸ ಪದವೇನೂ ಅಲ್ಲ. 1963ರಲ್ಲಿಯೇ ವಿಜ್ಞಾನ ಆಧಾರಿತ ಸಿನಿಮಾ ‘ಒಮಿಕ್ರೋನ್‌’ (Omicron Movie) ಬಿಡುಗಡೆಯಾಗಿದೆ. 

Covid 19 Variant: ಅಪಾಯಕಾರಿ ದೇಶಗಳಿಂದ ಬಂದ 10 ಜನರಿಗೆ ಕೋವಿಡ್‌ ಸೋಂಕು!

ಉಫೋ ಗ್ರೆಗೋರೆಟ್ಟಿನಿರ್ಮಾಣದ ಈ ಸಿನಿಮಾವು ವ್ಯಕ್ತಿಯೊಬ್ಬನ ದೇಹದಲ್ಲಿ ಸೇರಿ ಭೂಮಿಯನ್ನು ಸುತ್ತುವರೆಯುವ ಏಲಿಯನ್‌ ಕುರಿತ ಕಥಾಹಂದರವನ್ನು ಒಳಗೊಂಡಿದೆ. ಸಿನಿಮಾ ವೆನ್ನೀಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನಾಮನಿರ್ದೇಶನಗೊಂಡಿತ್ತು. ಇದೊಂದೇ ಅಲ್ಲ 2013ರಲ್ಲಿಯೂ ‘ದ ವಿಸಿಟರ್‌ ಫ್ರಂಟ್‌ ಪ್ಲಾನೆಟ್‌ ಒಮಿಕ್ರೋನ್‌’ ಹೆಸರಿನ ಚಿತ್ರ ಬಿಡುಗಡೆಯಾಗಿದೆ. 1999ರಲ್ಲಿ ಒಮಿಕ್ರೋನ್‌ ಹೆಸರಿನ ವಿಡಿಯೋ ಗೇಮ್‌ ಕೂಡ ಅಭಿವೃದ್ಧಿಪಡಿಸಲಾಗಿತ್ತು.

click me!