ಹಿಂದೂ ಪ್ರಧಾನಿಯ ಯುಕೆ ವಿವಿಯಲ್ಲಿ ಭಾರತೀಯ ಹಿಂದೂಗಳಿಗೆ ಮಣೆ ಹಾಕಲ್ಲ: ಹರಿಯಾಣ ವಿದ್ಯಾರ್ಥಿ

Published : Apr 04, 2023, 04:04 PM ISTUpdated : Apr 04, 2023, 04:17 PM IST
ಹಿಂದೂ ಪ್ರಧಾನಿಯ ಯುಕೆ ವಿವಿಯಲ್ಲಿ ಭಾರತೀಯ ಹಿಂದೂಗಳಿಗೆ ಮಣೆ ಹಾಕಲ್ಲ:  ಹರಿಯಾಣ ವಿದ್ಯಾರ್ಥಿ

ಸಾರಾಂಶ

ಈ ದ್ವೇಷಪೂರಿತ ಅಭಿಯಾನವನ್ನು ಆರಂಭಿಸಿದ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ಬದಲು ಎಲ್‌ಎಸ್‌ಇಎಸ್‌ಯು ನನ್ನ ಪರ ವಾದವನ್ನು ಕೇಳದೆ ಅಥವಾ ನಾನು ಪಡೆದ ಮತಗಳನ್ನು ಬಹಿರಂಗಪಡಿಸದೆ ನನ್ನನ್ನು ಅನರ್ಹಗೊಳಿಸಿದೆ ಎಂದು ಭಾರತೀಯ ವಿದ್ಯಾರ್ಥಿ ಆರೋಪಿಸಿದ್ದಾರೆ. 

ಲಂಡನ್ (ಏಪ್ರಿಲ್‌ 4, 2023): ಯುಕೆಗೆ ಹಿಂದೂ ಮೂಲದ ರಿಷಿ ಸುನಕ್‌ ಪ್ರಧಾನಿಯಾಗಿದ್ದಾರೆ. ಅಲ್ಲದೆ, ಇನ್ಪೋಸಿಸ್‌ ಸಂಸ್ಥೆಯ ನಾರಾಯಣ ಮೂರ್ತಿ ಅವರ ಅಳಿಯ ಪ್ರಧಾನಿ ಅನ್ನೋದು ಹೆಮ್ಮೆಯ ವಿಚಾರ. ಆದರೆ, ಅದೇ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಭಾರತೀಯ ಮತ್ತು ಹಿಂದೂ ಗುರುತಿನ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ವಿದ್ಯಾರ್ಥಿ ಒಕ್ಕೂಟದ ಚುನಾವಣೆಗಳಿಂದ ಅನರ್ಹಗೊಂಡಿದ್ದೇನೆ ಎಂದು ಭಾರತೀಯ ವಿದ್ಯಾರ್ಥಿಯೊಬ್ಬರು ಹೇಳಿಕೊಂಡಿದ್ದಾರೆ. 
 
ಹರಿಯಾಣ ಮೂಲದ ಕರಣ್ ಕಟಾರಿಯಾ ಅವರು ಲಂಡನ್‌ನ ಪ್ರಮುಖ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಕಾನೂನು ಪದವಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಎಲ್‌ಎಸ್‌ಇ ವಿದ್ಯಾರ್ಥಿಗಳ ಒಕ್ಕೂಟದ (ಎಲ್‌ಎಸ್‌ಇಎಸ್‌ಯು) ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತನ್ನ ಗೆಳೆಯರ ಬೆಂಬಲದಿಂದ ಪ್ರೇರೇಪಿಸಲ್ಪಟ್ಟು ಸ್ಪರ್ಧೆ ಮಾಡಿದ್ದೆ. ಆದರೆ, ಆಧಾರ ರಹಿತ ಆರೋಪಗಳನ್ನು ಮಾಡಿ ಮತ್ತು ನನ್ನ ವಾದವನ್ನು ಸಂಪೂರ್ಣವಾಗಿ ಹೇಳಲು ಅವಕಾಶವನ್ನು ನೀಡದೆ ಕಳೆದ ವಾರ ನನ್ನನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ ಎಂದು ಭಾರತೀಯ ಮೂಲದ ವಿದ್ಯಾರ್ಥಿ ಆರೋಪಿಸಿದ್ದಾರೆ. 

ಬೈಡೆನ್ ಅಲ್ಲ.. ರಿಷಿ ಅಲ್ಲ.. ಮೋದಿಯೇ ನಂಬರ್ 1..! ಘಟಾನುಘಟಿಗಳನ್ನು ಹಿಂದೆ ತಳ್ಳಿ ವಿಶ್ವನಾಯಕ ಆಗಿದ್ದು ಹೇಗೆ?
 
"ದುರದೃಷ್ಟವಶಾತ್, ಕೆಲವು ವ್ಯಕ್ತಿಗಳು ಭಾರತೀಯ - ಹಿಂದೂ ಎಲ್‌ಎಸ್‌ಇಎಸ್‌ಯು ಅನ್ನು ಮುನ್ನಡೆಸುವುದನ್ನು ನೋಡಲು ಸಹಿಸಲಿಲ್ಲ. ಮತ್ತು ನಮ್ಮ ಸಾಮಾಜಿಕ ಸಮುದಾಯಗಳನ್ನು ಬೇರುಸಹಿತ ಕಿತ್ತುಹಾಕುವ ಆತಂಕಕಾರಿ ರದ್ದತಿ ಸಂಸ್ಕೃತಿಗೆ ಸ್ಪಷ್ಟವಾಗಿ ಅನುಗುಣವಾಗಿ ನನ್ನ ಗುರುತನ್ನು ನಿಂದಿಸಲು ಆಶ್ರಯಿಸಿದರು" ಎಂದು ಕರಣ್ ಕಟಾರಿಯಾ ಹೇಳಿದರು. ಹಾಗೂ, "ನಾನು ಎಲ್‌ಎಸ್‌ಇಯಲ್ಲಿ ನನ್ನ ಸ್ನಾತಕೋತ್ತರ ಅಧ್ಯಯನವನ್ನು ಪ್ರಾರಂಭಿಸಿದಾಗ, ವಿದ್ಯಾರ್ಥಿ ಕಲ್ಯಾಣಕ್ಕಾಗಿ ನನ್ನ ಉತ್ಸಾಹವನ್ನು ಮತ್ತಷ್ಟು ಪೂರೈಸಲು ನಾನು ಪ್ರಾಮಾಣಿಕವಾಗಿ ಆಶಿಸಿದ್ದೆ. ಆದರೆ ನನ್ನ ಭಾರತೀಯ ಮತ್ತು ಹಿಂದೂ ಗುರುತಿನ ಕಾರಣದಿಂದ ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಸಂಘಟಿತವಾದ ಕೊಳಕು ಅಭಿಯಾನವನ್ನು ಪ್ರಾರಂಭಿಸಿದಾಗ ನನ್ನ ಕನಸುಗಳು ಭಗ್ನಗೊಂಡವು" ಎಂದೂ ಅವರು ಹೇಳಿದರು.

22 ವರ್ಷದ ವಿದ್ಯಾರ್ಥಿ ತಾನು ಮಧ್ಯಮ ವರ್ಗದ ಕೃಷಿ ಹಿನ್ನೆಲೆಯಿಂದ ಬಂದಿದ್ದು ಮತ್ತು ತನ್ನ ಕುಟುಂಬದಲ್ಲಿ ಮೊದಲ ತಲೆಮಾರಿನ ವಿಶ್ವವಿದ್ಯಾನಿಲಯ ಮಟ್ಟದ ಪದವೀಧರ ಎಂದು ಹೇಳಿದ್ದಾನೆ. ಕಳೆದ ವರ್ಷ ಎಲ್‌ಎಸ್‌ಇ ಕಾನೂನು ಶಾಲೆಯಿಂದ ಸ್ನಾತಕೋತ್ತರ ಪದವಿಗಾಗಿ ಯುಕೆಗೆ ಆಗಮಿಸಿದ ನಂತರ, ಅವರು ತಮ್ಮ ತಂಡದ ಶೈಕ್ಷಣಿಕ ಪ್ರತಿನಿಧಿಯಾಗಿ ಆಯ್ಕೆಯಾದರು ಮತ್ತು ಯುಕೆಯ ವಿದ್ಯಾರ್ಥಿಗಳ ರಾಷ್ಟ್ರೀಯ ಒಕ್ಕೂಟಕ್ಕೆ (ಎನ್‌ಯುಎಸ್) ಪ್ರತಿನಿಧಿಯಾಗಿ ಆಯ್ಕೆಯಾದರು ಎಂದೂ ತಿಳಿಸಿದ್ದಾರೆ.

ಇದನ್ನು ಓದಿ: ಪತಿ ನಾರಾಯಣ ಮೂರ್ತಿ, ಮಗಳು ಮತ್ತು ಅಳಿಯ ರಿಷಿ ಸುನಕ್‌ಗೆ 4 ಅಂಶಗಳ ಸಲಹೆ ನೀಡಿದ ಸುಧಾಮೂರ್ತಿ..

ಆದರೆ, ಎಲ್ಲ ರಾಷ್ಟ್ರೀಯತೆಗಳ ವಿದ್ಯಾರ್ಥಿಗಳಿಂದ ಅಪಾರ ಬೆಂಬಲ ಪಡೆದಿದ್ದರೂ, ಎಲ್‌ಎಸ್‌ಇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚುನಾವಣೆಯಿಂದ ನನ್ನನ್ನು ಅನರ್ಹಗೊಳಿಸಲಾಯಿತು. ನನ್ನ ವಿರುದ್ಧ ಹೋಮೋಫೋಬಿಕ್, ಇಸ್ಲಾಮೋಫೋಬಿಕ್, ಕ್ವೀರ್‌ಫೋಬಿಕ್ ಮತ್ತು ಹಿಂದೂ ರಾಷ್ಟ್ರೀಯತಾವಾದಿ ಎಂಬ ಆರೋಪಗಳನ್ನು ಮಾಡಲಾಯ್ತು.

ಇನ್ನು, ಈ ದ್ವೇಷಪೂರಿತ ಅಭಿಯಾನವನ್ನು ಆರಂಭಿಸಿದ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ಬದಲು ಎಲ್‌ಎಸ್‌ಇಎಸ್‌ಯು ನನ್ನ ಪರ ವಾದವನ್ನು ಕೇಳದೆ ಅಥವಾ ನಾನು ಪಡೆದ ಮತಗಳನ್ನು ಬಹಿರಂಗಪಡಿಸದೆ ನನ್ನನ್ನು ಅನರ್ಹಗೊಳಿಸಿದೆ" ಎಂದೂ ಕರಣ್ ಕಟಾರಿಯಾ ಹೇಳಿಕೊಂಡಿದ್ದಾರೆ. ಇದಲ್ಲದೆ, ಮತದಾನದ ಕಡೆಯ ದಿನ, ಭಾರತೀಯ ವಿದ್ಯಾರ್ಥಿಗಳನ್ನು ಅವರ ರಾಷ್ಟ್ರೀಯ ಮತ್ತು ಹಿಂದೂ ಧಾರ್ಮಿಕ ಗುರುತಿಗಾಗಿ ಬೆದರಿಸಲಾಯಿತು ಮತ್ತು ಗುರಿಯಾಗಿಸಲಾಯಿತು. ವಿದ್ಯಾರ್ಥಿಗಳು ಈ ವಿಷಯವನ್ನು ಪ್ರಸ್ತಾಪಿಸಿದರು, ಆದರೆ ಅವರ ವಿರುದ್ಧ ಕ್ರಮ ಕೈಗೊಳ್ಳದೆ LSESU ಅದನ್ನು ತಳ್ಳಿಹಾಕಿತು. ಈ ಹಿನ್ನೆಲೆ ಅಂತಹ ಸ್ವೀಕಾರಾರ್ಹವಲ್ಲದ ನಡವಳಿಕೆಯ ವಿರುದ್ಧ ವಿದ್ಯಾರ್ಥಿಗಳ ದೂರುಗಳು ನೀಡಿದ್ರೂ ಮೌನವಾಗಿರುವುದು ಎಲ್‌ಎಸ್‌ಇಎಸ್‌ಯು ಹಿಂದೂ ವಿರೋಧಿ ಎಂಬ ಆರೋಪವನ್ನು ಸಮರ್ಥಿಸುತ್ತದೆ" ಎಂದೂ ಹರ್ಯಾಣ ಮೂಲದ ಕರಣ್‌ ಕಟಾರಿಯಾ ಹೇಳಿದರು.

ಇದನ್ನೂ ಓದಿ: ಸೀಟ್‌ ಬೆಲ್ಟ್‌ ಧರಿಸದೇ ಕಾರು ಚಾಲನೆ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ಗೆ ದಂಡ

ಆದರೆ, ಈ ಆರೋಪ ತಳ್ಳಿ ಹಾಕಿದ LSESU ಸೋಮವಾರ ಹೇಳಿಕೆಯೊಂದನ್ನು ನೀಡಿದ್ದು, ನ್ಯಾಯಯುತ ಮತ್ತು ಪ್ರಜಾಪ್ರಭುತ್ವದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ ಮತ್ತು ಯಾವುದೇ ರೀತಿಯ ಕಿರುಕುಳ ಹಾಗೂ ಬೆದರಿಸುವಿಕೆಯ ಕಡೆಗೆ ದೃಢವಾದ ಶೂನ್ಯ-ಸಹಿಷ್ಣು ನಿಲುವನ್ನು ಹೊಂದಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ. 

ಇದನ್ನೂ ಓದಿ: ವಿವಾದಿತ ಮೋದಿ ಸಾಕ್ಷ್ಯಚಿತ್ರಕ್ಕೆ ಬಿಬಿಸಿ ಸಂಸ್ಥೆ ಸಮರ್ಥನೆ: ಭಾರತ, ರಿಷಿ ಸುನಕ್‌ ಟೀಕೆಗೆ ಸ್ಪಷ್ಟನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ