ಚೀನಾ ರಾಜಧಾನಿಯಲ್ಲಿ ಕೊರೋನಾ ಆತಂಕ, ಏನ್ ಮಾಡಿದ್ರೂ ಅಷ್ಟೆ!

By Suvarna NewsFirst Published Jun 16, 2020, 10:41 PM IST
Highlights

ಭಾರತದ ಮೇಲೆ ದಾಳಿ ಮಾಡುತ್ತಿರುವ ಚೀನಾದ ರಾಜಧಾನಿಯಲ್ಲೇ ಆತಂಕ/ ಕೊರೋನಾ ಮುಕ್ತವಾಗಿದ್ದ ನಗರದಲ್ಲಿ ಏರುತ್ತಲೇ ಇದೆ ಹೊಸ ಕೇಸ್‌ಗಳು/ ಕೊರೋನಾ ಸೋಂಕು ತಡೆಗೆ ಮುಂದಾದ ಅಧಿಕಾರಿಗಳು

ಬೀಜಿಂಗ್(ಜೂ. 16) ಕೊರೋನಾದ ಮೂಲ ಚೀನಾದ ರಾಜಧಾನಿ ಇದೀಗ ಆತಂಕಕ್ಕೆ ಸಿಲುಕಿದೆ. ಮಂಗಳವಾರದ ವರದಿ ಬೀಜಿಂಗ್ ನಲ್ಲಿ ನೂರು ಕೇಸುಗಳು ದಾಖಲಾಗಿರುವುದನ್ನು ದೃಢಪಡಿಸಿವೆ.

ಚೀನಾದ ವುಹಾನ್‌ನಲ್ಲಿ ಆರಂಭವಾದ ಕೊರೋನಾ ವೈರಸ್ ಇದೀಗ ಎಲ್ಲಾ ದೇಶಗಳಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಆದರೆ ಆಶ್ಚರ್ಯ ಎಂಬಂತೆ ವಿಶ್ವದೆಲ್ಲೆಡೆ ಕೊರೋನಾ ವೈರಸ್ ಹಬ್ಬಿದರೂ, ಚೀನಾ ರಾಜಧಾನಿ ಬೀಜಿಂಗ್‌ ಕೊರೋನಾ ವೈರಸ್‌ನಿಂದ ಮುಕ್ತವಾಗಿತ್ತು. 

ಇಂಡೋ-ಪಾಕ್ ಯುದ್ಧದ ಅಸಲಿ ಹೀರೋನ ಹೊತ್ತೊಯ್ದ ಕೊರೋನಾ

ಜೂನ್ 12 ರಂದು ಬೀಜಿಂಗ್‌ನ ಇಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತು. ಇಬ್ಬರನ್ನು ಐಸೋಲೇಶನ್ ವಾರ್ಡ್‌ಗೆ ಹಾಕಲಾಯಿತು. ಇತ್ತರ ಇವರ ಸಂಪರ್ಕಿದಲ್ಲಿದ್ದವರನ್ನು ಕ್ವಾರಂಟೈನ್ ಮಾಡಿ ಚೀನಾ ನಿಟ್ಟುಸಿರು ಬಿಟ್ಟಿತು. ಆದರೆ 4 ದಿನದಲ್ಲಿ ಬೀಜಿಂಗ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 100 ನ್ನೂ ದಾಟಿದೆ.

56 ದಿನಗಳ ಕಾಲ ಬೀಜಿಂಗ್ ನಲ್ಲಿ ಕೊರೋನಾದ ಸುದ್ದಿ ಇರಲಿಲ್ಲ. ಅಧಿಕಾರಿಗಳು ತೀವ್ರ ಕ್ರಮ ತೆಗೆದುಕೊಂಡಿದ್ದು ವೈರಸ್ ಅಟ್ಟಹಾಸಕ್ಕೆ ಬ್ರೇಕ್  ಹಾಕಲು ಸಕಲ ಕ್ರಮ ತೆಗೆದುಕೊಂಡಿದ್ದಾರೆ. ಇನ್ನೊಂದು ಕಡೆ ಚೀನಾ ಕಾರಣವಿಲ್ಲದೇ ಭಾರತದ ಮೇಲೆ ಗಡಿಯಲ್ಲಿ ದಾಳಿ ಮಾಡುತ್ತಿದೆ. 

 

click me!