ಕೊರೋನಾಗೆ ಸಿಕ್ಕಿತು ಜೀವರಕ್ಷಕ ಔಷಧ!

Suvarna News   | Asianet News
Published : Jun 16, 2020, 08:26 PM ISTUpdated : Jun 17, 2020, 07:31 AM IST
ಕೊರೋನಾಗೆ ಸಿಕ್ಕಿತು ಜೀವರಕ್ಷಕ ಔಷಧ!

ಸಾರಾಂಶ

ಕೊರೋನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ಅವಿರತ ಪ್ರಯತ್ನಗಳು ನಡೆಯುತ್ತಿದೆ. ಇದರ ನಡುವೆ ಕೊರೋನಾದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವರನ್ನು ಉಳಿಸುತ್ತಿದೆ ಡೆಕ್ಸಾಮೆಥಾಸೊನ್ ಔಷದಿ. ವಿಶೇಷ ಅಂದರೆ ಈ ಔಷದಿ ಅತೀ ಕಡಿಮೆ ದರದಲ್ಲಿ ಲಭ್ಯವಿದೆ.

ಲಂಡನ್(ಜೂ.16); ಕೊರೋನಾ ವೈರಸ್ ಇದೀಗ ಜಾಗತಿಗ ಸಮಸ್ಯೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳನ್ನು ಪಾಲಿಸಿದರೂ ಕೊರೋನಾ ಮುಕ್ತವಾಗಿಲ್ಲ. ಹೀಗಾಗಿ ಪ್ರತಿ ದೇಶಗಳು ಲಸಿಕೆ ಪ್ರಯತ್ನ ಮಾಡುತ್ತಿದೆ. ಆದರೆ ಬಹುತೇಕ ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಇದೀಗ ಕೊರೋನಾ ವೈರಸ್‌ನಿಂದ ಗಂಭೀರ ಸ್ಥಿತಿ ತಲುಪಿದ ಸೋಂಕಿತರಿಗೆ ಡೆಕ್ಸಾಮೆಥಾಸೊನ್ ಔಷದಿ ರಾಮಬಾಣವಾಗಿ ಪರಿಣಮಿಸಿದೆ.

ವರ್ಷಾಂತ್ಯದಲ್ಲಿ ಎಲ್ಲರಿಗೂ ಕೊರೋನಾ ಇಂಜೆಕ್ಷನ್; ಆಕ್ಸ್‌ಫರ್ಡ್ ಯುನಿವರ್ಸಿಟಿ!...

ಕಡಿಮೆ ಪ್ರಮಾಣ ಹೊಂದಿರು ಡೆಕ್ಸಾಮೆಥಾಸೊನ್ ಡೋಸ್ ಲಂಡನ್‌ನಲ್ಲಿ ಪ್ರಯೋಗಿಸಲಾಗಿದೆ. ಕೊರೋನಾದಿಂದ ವೆಂಟಿಲೇಟರ್ ಬಳಸಿ ಉಸಿರಾಡುತ್ತಿದ್ದ ಮಂದಿಯೂ ಈ ಔಷದಿಯಿಂದ ಗುಣಮುಖರಾಗಿದ್ದಾರೆ ಎಂದು ಲಂಡನ್ ತಜ್ಞ ವೈದ್ಯರು ಹೇಳಿದ್ದಾರೆ.

ಡೆಕ್ಸಾಮೆಥಾಸೊನ್ ಔಷದಿಯಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಈ ಔಷದಿ ನೀಡಿದ ಬಳಿಕ ನಿಧಾನವಾಗಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದುವರೆಗೆ 5,000 ಕೊರೋನಾ ಸೋಂಕಿತರು ಡೆಕ್ಸಾಮೆಥಾಸೊನ್ ಔಷದಿಯಿಂದ ಚೇತರಿಸಿಕೊಂಡಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ. 

ಭಾರತೀಯ ವಿಜ್ಞಾನಿಗಳಿಂದ ಕೊರೋನಾ ಮಹಾಮಾರಿಗೆ ಲಸಿಕೆ; ನಿತಿನ್ ಗಡ್ಕರಿ!.

ಡೆಕ್ಸಾಮೆಥಾಸೊನ್ ಔಷದಿ ಕಡಿಮೆ ಬೆಲೆಯ ಕಾರಣ ಬಡ ರಾಷ್ಟ್ರಗಳಲ್ಲಿ ಈ ಔಷದಿಯನ್ನು ಕೊರೋನಾ ವಿರುದ್ಧ ಬಳಕೆ ಮಾಡಬುಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಕೊರೋನಾ ವೈರಸ್‌ಗಾಗಿ ಕಂಡು ಹಿಡಿದ ಔಷದಿಯಲ್ಲ. ಆದರೆ ಕೊರೋನಾ ವೈರಸ್‌ನಿಂದ ಮುಕ್ತರಾಗಲು ಔಷದಿ ಸಹಕಾರಿಯಾಗಿದೆ ಎಂದು ಲಂಡನ್ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!