ವರ್ಷಾಂತ್ಯದಲ್ಲಿ ಎಲ್ಲರಿಗೂ ಕೊರೋನಾ ಇಂಜೆಕ್ಷನ್; ಆಕ್ಸ್‌ಫರ್ಡ್ ಯುನಿವರ್ಸಿಟಿ!

Suvarna News   | Asianet News
Published : Jun 16, 2020, 07:52 PM ISTUpdated : Jun 16, 2020, 08:56 PM IST
ವರ್ಷಾಂತ್ಯದಲ್ಲಿ ಎಲ್ಲರಿಗೂ ಕೊರೋನಾ ಇಂಜೆಕ್ಷನ್; ಆಕ್ಸ್‌ಫರ್ಡ್ ಯುನಿವರ್ಸಿಟಿ!

ಸಾರಾಂಶ

ಕೊರೋನಾ ವೈರಸ್‌ನಿಂದ ತತ್ತರಿಸಿರುವ ಜನತೆಗೆ ಆಕ್ಸ್‌ಫರ್ಡ್ ಯುನಿವರ್ಸಿಟಿ ಸಂಸ್ಥೆ ಲಸಿಕೆ ತಯಾರು ಮಾಡಿದ್ದು, ಅಂತಿಮ ಹಂತದ ಪ್ರಯೋಗದಲ್ಲಿದೆ. ಇದೀಗ ಆಕ್ಸ್‌ಫರ್ಡ್ ಪ್ರೋಫೆಸರ್, ಕ್ರಿಸ್ಮಸ್ ವೇಳೆ ಎಲ್ಲರಿಗೂ ಕೊರೋನಾ ಲಸಿಕೆ ನೀಡುವುದಾಗಿ ಹೇಳಿದ್ದಾರೆ. ಪ್ರೋಫೆಸರ್ ಮಾತುಗಳ ವಿವರ ಇಲ್ಲಿದೆ.

ನವದೆಹಲಿ(ಜೂ.16): ಕೊರೋನಾ ವೈರಸ್‌ಗೆ ಲಂಡನ್ ತತ್ತರಿಸಿ ಹೋಗಿದೆ. ಇತ್ತ ಆಕ್ಸ್‌ಫರ್ಡ್ ಯುನಿವರ್ಸಿಟಿ ಕೊರೋನಾ ವೈರಸ್‌ಗೆ ಲಸಿಕೆಗೆ ಸಂಶೋಧನೆ ನಡೆಸುತ್ತಿದೆ. ಲಸಿಕೆ ಇದೀಗ ಅಂತಿಮ ಹಂತದ ಪ್ರಯೋಗದಲ್ಲಿದೆ. ಸೆಪ್ಟೆಂಬರ್ ವೇಳೆ ಕೊರೋನಾ ಲಸಿಕೆ ಲಭ್ಯವಾಗಲಿದೆ. ಹೀಗಾಗಿ ಈ ವರ್ಷದ ಅಂತ್ಯದಲ್ಲಿ ಎಲ್ಲ ಬ್ರಿಟಿಷ್ ಜನತೆಗೆ ಕೊರೋನಾ ಲಸಿಕೆ ಹಾಕಲಾಗುವುದು ಎಂದು ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೋಫೆಸರ್ ಸರ್ ಜಾನ್ ಬೆಲ್ ಹೇಳಿದ್ದಾರೆ.

ಕೊರೋನಾ ಸಾವಿನಿಂದ ಪಾರಾದ ವೃದ್ಧನಿಗೆ 181 ಪುಟದ ಹಾಸ್ಪಿಟಲ್ ಬಿಲ್..! ಮೊತ್ತ ನೋಡಿದ್ರೆ ತಲೆ ಸುತ್ತುತ್ತೆ..!.

ಆಕ್ಸ್‌ಫರ್ಡ್ ಹಾಗೂ ಅಸ್ಟ್ರಾಜೆನೆಕಾ ಜಂಟಿಯಾಗಿ ಕೊರೋನಾ ವೈರಸ್‌ಗೆ ಲಸಿಕೆ ಅಭಿವೃದ್ಧಿ ಮಾಡಿದೆ. ಈ ಲಸಿಕೆ  SARS-CoV-2 ವೈರಸ್ ಹಾಗೂ  AZD122 ವೈರಸ್ ವಿರುದ್ಧ ಹೋರಾಟ ನಡೆಸಲಿದೆ. ಸಾಮಾನ್ಯವಾಗಿ ಲಸಿಕೆ ಅಭಿವೃದ್ಧಿ ಪಡಿಸಲು ಹೆಚ್ಚಿನ ಸಮಯಾವಕಾಶ ಬೇಕಿದೆ. ಆದರೆ ಪರಿಸ್ಥಿತಿಯ ಗಂಭೀರತೆ ಅರಿತ ಸಂಶೋಧಕರು ತ್ವರಿತಗತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಜಾನ್ ಬೆಲ್ ಹೇಳಿದ್ದಾರೆ.

ಕೊರೋನಾ ಬ್ಲಂಡರ್‌: ತನಗೆ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಚೀನಾ

ಲಂಡನ್‌ನಲ್ಲಿ ಲಸಿಕೆ ಪ್ರಯೋಗ ಮಾಡಲಾಗಿದೆ. ಅಂತಿಮ ಹಂತದ ಪರೀಕ್ಷೆ ಹಾಗೂ ಅಡ್ಡ ಪರಿಣಾಮ ಕುರಿತು ಸಂಶೋಧನೆ ನಡೆಯುತ್ತಿದೆ. ಇದೇ ಲಸಿಕೆ ಜುಲೈ ತಿಂಗಳಲ್ಲಿ ಬ್ರೆಜಿಲ್‌ನಲ್ಲಿ ಪ್ರಯೋಗ ಮಾಡಲಾಗುವುದು. ಎಲ್ಲವೂ ನಮ್ಮ ಪ್ಲಾನ್ ಪ್ರಕಾರ ನಡೆದರೆ ಸೆಪ್ಟೆಂಬರ್‌ನಲ್ಲಿ ಕೊರೋನಾ ವೈರಸ್ ಲಸಿಕೆ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಜಾನ್ ಬೆಲ್ ಹೇಳಿದ್ದಾರೆ.

2020ರ ಡಿಸೆಂಬರ್ ಒಳಗೆ 100 ಮಿಲಿಯನ್ ಡೋಸ್ ತಯಾರಿಸಲು ಆಕ್ಸ್‌ಫರ್ಡ್ ಹಾಗೂ ಅಸ್ಟ್ರಾಜೆನೆಕಾ ಒಪ್ಪಂದ ಮಾಡಿಕೊಂಡಿದೆ. ಇದೀಗ ಬ್ರಿಟೀಷ್ ಡ್ರಗ್ ಸಹಭಾಗಿತ್ವದಲ್ಲಿ 400 ಮಿಲಿಯನ್ ಡೊಸ್ ತಯಾರಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಹಲವು ಸಂಸ್ಥೆಗಳು ಕೊರೋನಾ ವೈರಸ್‌ಗೆ ಔಷದಿ ಕಂಡು ಹಿಡಿಯುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ