ಅಮೆರಿಕ(ಫೆ.16): ಕೊಲೆರಾಡೋದ ವ್ಯಕ್ತಿಯೊಬ್ಬ ಕಾಡಿನಲ್ಲಿ ನರಿಗಾಗಿ ಬ್ಯಾಂಜೋ ನುಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 9 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಒಡೆದ ಹೃದಯಗಳನ್ನು ಗುಣಪಡಿಸುವ ಮತ್ತು ಸರಿಪಡಿಸುವ ಶಕ್ತಿಯನ್ನು ಸಂಗೀತ ಹೊಂದಿದೆ. ನಿಮ್ಮ ನೆಚ್ಚಿನ ಹಾಡಿನ ಮಸುಕಾದ ಟ್ಯೂನ್ ನಿಮಗೆ ಮತ್ತೆ ನಿಮಗೆ ಹೊಸ ಹುರುಪು ನೀಡಬಹುದು. ಆದರೆ ಈ ಸಂಗೀತಾ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಖುಷಿ ನೀಡುವುದು ಇದಕ್ಕೆ ಉತ್ತಮ ಉದಾಹರಣೆ ಈ ವಿಡಿಯೋ.ಕೊಲೊರಾಡೋದ ಕಾಡಿನಲ್ಲಿ ಬ್ಯಾಂಜೋ ವಾದಕನೋರ್ವ ನರಿಯೊಂದರ ಮುಂದೆ ಬ್ಯಾಂಜೋ ಸಂಗೀತ ನುಡಿಸುತ್ತಿದ್ದು ಈ ಸಂಗೀತಕ್ಕೆ ನರಿಯೂ ತಲೆದೂಗುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಗುಡ್ ನ್ಯೂಸ್ ಮೂವ್‌ಮೆಂಟ್ ಪೋಸ್ಟ್ ಮಾಡಿದ ಈ ವೈರಲ್ ವೀಡಿಯೊದಲ್ಲಿ, ಆಂಡಿ ಥಾರ್ನ್ ( Andy Thorn)ಎಂಬಾತ ತನ್ನ ಬ್ಯಾಂಜೋ ನುಡಿಸುತ್ತಿರುವುದನ್ನು ಕಾಣಬಹುದು. ಆತ ತನ್ನ ಒಂದು ರಮಣೀಯ ಸ್ಥಳದಲ್ಲಿ ಹಿತವಾದ ರಾಗವನ್ನು ನುಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ನರಿಯೊಂದು ಆತನಿಗೆ ಅಡ್ಡಲಾಗಿ ಬಂದು ಕುಳಿತುಕೊಳ್ಳುತ್ತದೆ. ಸಂಗೀತದ ಶಕ್ತಿ ಇದು ಎಂದು ಶೀರ್ಷಿಕೆ ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ವೀಡಿಯೊವನ್ನು 9.5 ಮಿಲಿಯನ್ ಜನ ವೀಕ್ಷಿಸಿದ್ದಾರೆ. ನೋಡುಗರು ಕೂಡ ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.
ಕಳೆದ ತಿಂಗಳು ಪಾರ್ಕ್‌ನಲ್ಲಿ ಪ್ರಾಣಿಗಳಿಗಾಗಿ ಮಹಿಳೆಯೊಬ್ಬರು ಸಂಗೀತಾ ನುಡಿಸುತ್ತಿದ್ದು, ಇದರ ಧ್ವನಿಗೆ ಜಿಂಕೆಗಳು ತಲೆದೂಗಿ ಹತ್ತಿರ ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ವಿಡಿಯೋಗೆ ನೆಟ್ಟಿಗರು ವಾಹ್ ಎಂದಿದ್ದರು. ಸಂಗೀತವು ದಣಿದ ಆತ್ಮಕ್ಕೆ ಔಷಧಿ ಇದ್ದಂತೆ ಮತ್ತು ಅದರಲ್ಲಿ ಯಾವುದೇ ಸಂದೇಹವಿಲ್ಲ. ಉತ್ತಮ ಸಂಗೀತವು ಅತ್ಯಂತ ದುಃಖಕರವಾದ ಚಿತ್ತಸ್ಥಿತಿಗಳನ್ನು ಮೇಲಕ್ಕೆತ್ತಬಲ್ಲದು ಮತ್ತು ಮನಸ್ಸು ಮತ್ತು ಆತ್ಮ ಎರಡನ್ನೂ ಮೋಡಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಮನುಷ್ಯರಿಗೆ ಖಂಡಿತವಾಗಿಯೂ ಒಳ್ಳೆಯದ್ದು, ಆದರೆ ಪ್ರಾಣಿಗಳು ಕೂಡ ಸಂಗೀತದ ಮೋಡಿಗೆ ಒಳಗಾಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲೊಂದು ವಿಡಿಯೋದಲ್ಲಿ ಮಹಿಳೆಯೊಬ್ಬರು ಪಾರ್ಕ್‌ನ ಮಧ್ಯದಲ್ಲಿ ಕುಳಿತು ಸಂಗೀತಾ ನುಡಿಸುತ್ತಿದ್ದು, ಇದನ್ನು ಕೇಳುವ ಜಿಂಕೆಗಳು ನಿಧಾನಕ್ಕೆ ಸ್ವಲ್ಪ ಸ್ವಲ್ಪವೇ ಮಹಿಳೆಯ ಹತ್ತಿರ ಹತ್ತಿರ ಬರಲು ಶುರು ಮಾಡುತ್ತವೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Fact Check: ಕಾಳ್ಗಿಚ್ಚಲ್ಲಿ ತಾಯಿ ಕಳೆದುಕೊಂಡ ಕರಡಿ ಮರಿಗಳಿಗೆ ಹಾಲುಣಿಸಿದ ನರಿ!
ವೈರಲ್ ಕ್ಲಿಪ್ ಅನ್ನು ಡಯಾನಾ( Diana) ಎಂಬ ಸ್ಪ್ಯಾನಿಷ್ (Spanish) ಸೆಲ್ಲೋಯಿಸ್ಟ್( ಸೆಲ್ಲೋ ಎಂದರೆ ಗಿಟಾರ್ ರೀತಿಯ ಸಂಗೀತಾ ಸಾಧನ) ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಅವಳು ತನ್ಮಯಳಾಗಿ ವಾದ್ಯವನ್ನು ಅತ್ಯಂತ ಸುಂದರವಾಗಿ ನುಡಿಸುವುದನ್ನು ಕಾಣಬಹುದು. ಈ ಸಂಗೀತಾವನ್ನು ನುಡಿಸುತ್ತಿರುವಾಗಲೇ ಅತ್ತ ಕಣ್ಣಾಡಿಸಿದ ಆಕೆ ಎರಡು ಜಿಂಕೆಗಳು ತನ್ನತ್ತ ಬರುವುದನ್ನು ಕಂಡಳು. ಆಶ್ಚರ್ಯವೆಂದರೆ ಹೆದರಿ ಓಡಿ ಹೋಗುವ ಬದಲು ಈ ಪ್ರಾಣಿಗಳು ನಿಂತು ಸಂಗೀತವನ್ನು ತದೇಕಚಿತ್ತದಿಂದ ಆಲಿಸಿದವು.
ನಾಯಿ ಮರಿ ಅಂದಕೊಂಡು ಮನೆಗೆ ತಂದರು : ಬಾತುಕೋಳಿ ತಿಂದಾಗಲೇ ಗೊತ್ತಾಗಿದ್ದು ನರಿ ಎಂದು!
ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎರಡು ಜಿಂಕೆಗಳಿಗಾಗಿ ಸಂಗೀತಾ ಕಚೇರಿ ಎಂದು ಶೀರ್ಷಿಕೆ ಬರೆದು ಈ ವಿಡಿಯೋವನ್ನು ಡಯಾನಾ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಕೂಡ ಫುಲ್ ಖುಷಿಯಾಗಿದ್ದಾರೆ. ನಿಸರ್ಗ ನಿಮ್ಮ ಸಂಗೀತವನ್ನು ಒಪ್ಪುತ್ತದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಅದ್ಭುತವಾಗಿದೆ, ಸಂಗೀತ, ಜಿಂಕೆ ಮತ್ತು ಈ ದೃಶ್ಯಾವಳಿಗಳು ನನ್ನನ್ನು ಸಂತೋಷದ ಸ್ಥಳಕ್ಕೆ ಕರೆದೊಯ್ದವು ಎಂದು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ