ದೃಷ್ಟಿಹೀನ ಬಾಲಕಿಯೊಬ್ಬಳು ಸೊಗಸಾಗಿ ಪಿಯಾನೋ ನುಡಿಸುತ್ತಿರುವ ಭಾವಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಣ್ಣು ಕಾಣಿಸದೇ ಇದ್ದರೂ ಪಿಯಾನೋದಲ್ಲಿ ಭಾವಪೂರ್ಣವಾದ ರಾಗಗಳನ್ನು ನುಡಿಸುವ ಬಾಲಕಿಯ ಪ್ರತಿಭೆ ನೋಡಿ ಜನ ಭಾವುಕರಾದರು. Buitengebieden ಟ್ಟಿಟ್ಟರ್ ಖಾತೆಯಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು, ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ದೃಷ್ಟಿಹೀನ ಹುಡುಗಿಯೊಬ್ಬಳು ಪಿಯಾನೋದಲ್ಲಿ ಭಾವಪೂರ್ಣವಾದ ರಾಗಗಳನ್ನು ನುಡಿಸುವ ವೀಡಿಯೊವನ್ನು ನೋಡಿದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾವುಕರಾದರ. Buitengebieden ನಿಂದ Twitter ಗೆ ಪೋಸ್ಟ್ ಮಾಡಿದ ಈ ಸಣ್ಣ ವಿಡಿಯೋವನ್ನ ಈಗಾಗಲೇ ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ವೀಡಿಯೊದಲ್ಲಿ, ಕೇವಲ 7 ವರ್ಷದ ಇಪೆಕ್ ನಿಸಾ ಗೋಕರ್ (Ipek Nisa Goker) ಎಂಬ ಬಾಲಕಿ ಅವರು ಪಿಯಾನೋದಲ್ಲಿ ಸೊಗಸಾದ ಹಾಡನ್ನು ನುಡಿಸುವುದನ್ನು ಕೇಳಬಹುದು. ಉತ್ತಮವಾದ ಟ್ಯೂನ್‌ನಿಂದಾಗಿ ಇದು ಮತ್ತೆ ಮತ್ತೆ ಹಾಡನ್ನು ಕೇಳುವಂತೆ ಮಾಡುತ್ತಿದೆ.
ಈ ಬಾಲಕಿ ಇಪೆಕ್ ನಿಸಾ ಗೋಕರ್, 7 ವರ್ಷ ವಯಸ್ಸು, ಈಕೆಗೆ ಕಣ್ಣು ಕಾಣಿಸದೇ ಇರುವುದರಿಂದ ಆಕೆ ನೋಡಲಾಗದು ಕೇಳಲು ಮಾತ್ರ ಸಾಧ್ಯ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಅನೇಕ ಟ್ವಿಟ್ಟರ್ ಬಳಕೆದಾರರು ರಿಟ್ವಿಟ್ ಮಾಡಿದ್ದು, ಚಿಕ್ಕ ಅಂಧತ್ವವನ್ನು ಮೀರಿದ ಚಿಕ್ಕ ಹುಡುಗಿಯ ಕೌಶಲ್ಯವನ್ನು ಶ್ಲಾಘಿಸಿದರು.
ದೃಷ್ಟಿಹೀನ ಬಾಲಕಿ ಕೊಟ್ಟ ಪಂಚ್‌ಗೆ ರೈಲು ಕಾಮಣ್ಣ ಪಂಚರ್! ಮಾದರಿ ಹೆಣ್ಣುಮಗಳು
ನೀವು ತುಂಬಾ ಸುಂದರವಾಗಿದ್ದೀರಾ. ಮತ್ತು ನಿಮ್ಮ ನಗು ತುಂಬಾ ಭಾವನಾತ್ಮಕವಾಗಿದೆ. ನನಗೆ ಒಳ್ಳೆಯ ಕಣ್ಣುಗಳಿವೆ ಆದರೆ ನೀನು ಮಾಡುವುದನ್ನು ನಾನು ಮಾಡಲಾರೆ. ನಾನು ಮಾನಸಿಕವಾಗಿ ಕುಸಿಯುವ ಪ್ರತಿ ಕ್ಷಣದಲ್ಲಿ ಈ ವಿಡಿಯೋವನ್ನು ನೋಡಿ ಸ್ಪೂರ್ತಿ ಪಡೆಯುವುದಕ್ಕಾಗಿ ಇದನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವೆ ಎಂದು ನೋಡುಗರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
Gujarat Rape Case: ಧ್ವನಿ ಮೂಲಕ ಅತ್ಯಾಚಾರಿಯನ್ನು ಗುರುತಿಸಿದ ದೃಷ್ಟಿಹೀನ ಮಹಿಳೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ