ವಿಮಾನದ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ ಪ್ರಯಾಣಿಕನ ಮೇಲೆ ಕಾಫಿ ಪಾತ್ರೆಯಿಂದ ಹಲ್ಲೆ

Suvarna News   | Asianet News
Published : Feb 16, 2022, 01:10 PM IST
ವಿಮಾನದ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ ಪ್ರಯಾಣಿಕನ ಮೇಲೆ ಕಾಫಿ ಪಾತ್ರೆಯಿಂದ ಹಲ್ಲೆ

ಸಾರಾಂಶ

ವಿಮಾನದ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ ಪ್ರಯಾಣಿಕ ಕಾಫಿ ಪಾಟ್‌ನಲ್ಲಿ ಬಾರಿಸಿದ ವಿಮಾನದ ಸಿಬ್ಬಂದಿ ಲಾಸ್ ಏಂಜಲೀಸ್‌ನಿಂದ ವಾಷಿಂಗ್ಟನ್ ಡಿಸಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ

ನ್ಯೂಯಾರ್ಕ್(ಫೆ16): ವಿಮಾನದ ಕಾಕ್‌ಪಿಟ್‌ಗೆ ಪ್ರವೇಶಿಸಲು ಪ್ರಯಾಣಿಕರಿಗೆ ಅನುಮತಿ ಇಲ್ಲ. ಆದಾಗ್ಯೂ ಕಾಕ್‌ಪಿಟ್‌ ಒಳಗೆ ಪ್ರವೇಶಿಸಲು ಯತ್ನಿಸಿದ್ದ ಪ್ರಯಾಣಿಕನೋರ್ವನನ್ನು ತಡೆಯುವ ಸಲುವಾಗಿ ವಿಮಾನದ ಸಿಬ್ಬಂದಿ ಆತನಿಗೆ ಕಾಫಿಪಾತ್ರೆಯಿಂದ ಬಾರಿಸಿದ್ದಾರೆ. ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ವಿಮಾನ ಲ್ಯಾಂಡ್ ಆದ ಬಳಿಕ ಬಂಧಿಸಲಾಗಿದೆ.  ಅಮೆರಿಕಾದಲ್ಲಿ ಪ್ರಯಾಣಿಕರಿಂದ ತುಂಬಿರುವ ವಾಣಿಜ್ಯ ವಿಮಾನದಲ್ಲಿ ಈ ಘಟನೆ ನಡೆದಿದೆ. ಕಾಕ್‌ಪಿಟ್‌ ತೆರೆಯಲು ಯತ್ನಿಸಿದ  50 ವರ್ಷ ವಯಸ್ಸಿನ ವ್ಯಕ್ತಿಗೆ ವಿಮಾನದ ಸಿಬ್ಬಂದಿ ಸುಮ್ಮನೆ ಹೋಗಿ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಆದರೆ ಸುಮ್ಮನಿರದ ಆತ ವಿಲಕ್ಷಣವಾಗಿ ವರ್ತಿಸಲು ಶುರು ಮಾಡಿದ್ದಾನೆ.

ಅಲ್ಲದೇ ಆತ ಆಕ್ರಮಣಕಾರಿಯಾಗಿ ವಿಮಾನದ ಕಾಕ್‌ಪಿಟ್‌ ಒಳಗೆ ನುಗ್ಗಲು ಯತ್ನಿಸಿದಾಗ ಸಿಬ್ಬಂದಿಯೊಬ್ಬರು ಆತನನ್ನು ನಿಗ್ರಹಿಸಲು ಹತಾಶ ಪ್ರಯತ್ನದಲ್ಲಿ ಕಾಫಿ ಪಾತ್ರೆಯಿಂದ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಪೊಲೀಸರು ಬರುವವರೆಗೂ ಈತನನ್ನು ಇತರ ಪ್ರಯಾಣಿಕರು ತಡೆದು ನಿಲ್ಲಿಸಬೇಕಾಯಿತು. ವರದಿಗಳ ಪ್ರಕಾರ, ಫೆಬ್ರವರಿ 13 ರಂದು ಲಾಸ್ ಏಂಜಲೀಸ್‌ನಿಂದ (Los Angeles) ವಾಷಿಂಗ್ಟನ್ ಡಿಸಿಗೆ ( Washington DC) ಬರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್‌ ಆಗಿದ್ದು, ಅದರಲ್ಲಿ ಈ ಕುಪಿತಗೊಂಡ ಪ್ರಯಾಣಿಕನನ್ನು ನಿಯಂತ್ರಿಸಲು ಆತನನ್ನು ವಿಮಾನದೊಳಗೆ ಕೆಳಗೆ ಬೀಳಿಸಿ ಇತರ ಪ್ರಯಾಣಿಕರು ಹಿಡಿದುಕೊಂಡಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

 

ಪ್ರಯಾಣಿಕರು ವ್ಯಕ್ತಿಯನ್ನು ಹಿಡಿದುಕೊಂಡರು ಮತ್ತು ವಿಮಾನವು ವೇಗವಾಗಿ ಕೆಳಗಿಳಿಯುತ್ತಿದ್ದಂತೆ ಫ್ಲೈಟ್ ಅಟೆಂಡೆಂಟ್ ಕಾಫಿ ಪಾಟ್‌ನಲ್ಲಿ ಆತನಿಗೆ ಬಾರಿಸಿದರು. ಹೊಡೆದ ಏಟಿಗೆ ಆತನಿಗೆ ರಕ್ತಸ್ರಾವವಾಗುತ್ತಿತ್ತು ಬಳಿಕ ವಿಮಾನ ಕನ್ಸಾಸ್‌ನಲ್ಲಿ ಲ್ಯಾಂಡಿಂಗ್‌ ಆದಾಗ  ಪೊಲೀಸರು ಆತನನ್ನು ಕರೆದೊಯ್ದರು ಎಂದು  ಮೌವಾಜ್ ಮೌಸ್ತಫಾ (Mouaz Moustafa) ಎಂಬುವವರು ಟ್ವೀಟ್ ಮಾಡಿದ್ದಾರೆ. 

50 ವರ್ಷ ವಯಸ್ಸಿನ ಈ ಪ್ರಯಾಣಿಕ ಪ್ರಯಾಣದ ಆರಂಭದಿಂದಲೂ ವಿಚಿತ್ರವಾಗಿ ವರ್ತಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಅಮೆರಿಕದ ಸಿಎನ್‌ಎನ್‌ ವರದಿಯ ಪ್ರಕಾರ, ವಿಮಾನದಲ್ಲಿದ್ದ ಜನರು ತನಗೆ ಮತ್ತು ತನ್ನ ಕುಟುಂಬಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆತ ವಿಮಾನದ ಸಹಾಯಕರಿಗೆ ಹೇಳಿದ್ದ ಎಂದು ತಿಳಿದು ಬಂದಿದೆ.

ವಿಮಾನದಲ್ಲಿ ಮೃತಪಟ್ಟವರನ್ನೇನು ಮಾಡ್ತಾರೆ? Flight Attendant ಬಿಚ್ಚಿಟ್ಟ ರಹಸ್ಯ!

ಇದೇ ವೇಳೆ ವ್ಯಕ್ತಿ ತನ್ನ ಶರ್ಟ್‌ನ ತೋಳಿನಲ್ಲಿ ಬಾಟಲಿ ಮತ್ತು ಬೆಳ್ಳಿಯ ಕವಚದ ಪ್ಲಾಸ್ಟಿಕ್‌  ಚಾಕು ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಆತ ಸಣ್ಣ ಶಾಂಪೇನ್ ಬಾಟಲಿಯನ್ನು ಹಿಡಿದು ಅದನ್ನು ಕೌಂಟರ್‌ನಲ್ಲಿ ಒಡೆಯಲು ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದಾಗ ಫ್ಲೈಟ್ ಅಟೆಂಡೆಂಟ್ ಕಾಫಿ ಪಾಟ್‌ನಿಂದ ವ್ಯಕ್ತಿಯ ತಲೆಗೆ ಎರಡು ಬಾರಿ ಹೊಡೆದರು. ಆ ಸಮಯದಲ್ಲಿ, ಇತರ ಪ್ರಯಾಣಿಕರು ಮತ್ತು ಸಿಬ್ಬಂದಿ ಅವನನ್ನು ನಿಗ್ರಹಿಸಲು ಸಾಧ್ಯವಾಯಿತು ಎಂದು ತಿಳಿದು ಬಂದಿದೆ. ಘಟನೆಯ ನಂತರ, ಅಮೆರಿಕನ್ ಏರ್‌ಲೈನ್ಸ್ ಹೇಳಿಕೆ ನೀಡಿದ್ದು, ತಮ್ಮ ಸಿಬ್ಬಂದಿ ಸದಸ್ಯರು ನಮ್ಮ ಗ್ರಾಹಕರ ಸುರಕ್ಷತೆ ಮತ್ತು ಕಾಳಜಿಗೆ ಸತತವಾಗಿ ಸಮರ್ಪಿತರಾಗಿದ್ದಾರೆ ಎಂದು ಹೇಳಿದರು.

ವಿಮಾನದಲ್ಲೇ ಗಗನ ಸಖಿಗೆ ಬಾಯ್ ಫ್ರೆಂಡ್ ಪ್ರಪೋಸ್ : ಮುಂದೇನಾಯ್ತು..?

ವಾಣಿಜ್ಯ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಗಲಾಟೆ ಮಾಡುವುದು ಕಾನೂನು ತೊಂದರೆ ಮತ್ತು ಇತರ ಸಮಸ್ಯೆಗಳನ್ನು ಆಹ್ವಾನಿಸುತ್ತದೆ. ಕಳೆದ ವರ್ಷ, ಫಿಲಡೆಲ್ಫಿಯಾದಿಂದ ಒಬ್ಬ ಪ್ರಯಾಣಿಕನು ವಿಮಾನದಲ್ಲಿ ಪುರುಷ ಅಟೆಂಡೆಂಟ್‌ಗೆ ಗುದ್ದಿದ ಮತ್ತು ಮಹಿಳಾ ಸಿಬ್ಬಂದಿ ಮೇಲೆ ಕೈ ಹಾಕಿದ್ದ ಬಳಿಕ ಆತನನ್ನು ತಡೆಯಲು ಅವನು ಕುಳಿತಿದ್ದ ಸೀಟಿಗೆ ಡಕ್ಟ್-ಟೇಪ್ ಅಳವಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ