ಅಂಟಾರ್ಟಿಕ್‌ನಲ್ಲಿ ಪತ್ತೆಯಾಯ್ತು 5000 ವರ್ಷ ಹಳೆಯ ಪೆಂಗ್ವಿನ್ ಅವಶೇಷ

By Suvarna NewsFirst Published Oct 3, 2020, 1:25 PM IST
Highlights

ಅಂಟಾರ್ಟಿಕದಲ್ಲಿ ಪೆಂಗ್ವಿನ್ ಇರೋಲ್ಲ. ಇದ್ದಿದ್ದು ಗೊತ್ತಿಲ್ಲ. ಆದರೀಗ ಪೆಂಗ್ವಿನ್ ಇದ್ದ ಕುರುಹುಗಳು ಪತ್ತೆಯಾಗಿದ್ದು, ಸಂಶೋಧಕರ ಅಚ್ಚರಿಗೆ ಇದು ಕಾರಣವಾಗಿದೆ. ಇಲ್ಲಿ ಸಿಕ್ಕ ಅವಶೇಷಗಳಿಂದ ಅಂಟಾರ್ಟಿಕದಲ್ಲಿ ಸುಮಾರು 5 ಸಾವಿರ ವರ್ಷಗಳ ಹಿಂದೆ ಪೆಂಗ್ವಿನ್ ಗಳು ಜೀವಿಸುತ್ತಿದ್ದವು ಎನ್ನಲು ಪುರಾವೆ ಸಿಕ್ಕಂತಾಗಿದೆ.

ಅಂಟಾರ್ಟಿಕದಲ್ಲಿ ಪೆಂಗ್ವಿನ್ ಇದ್ದ ಕುರುಹುಗಳು ಪತ್ತೆಯಾಗಿದ್ದು, ಸಂಶೋಧಕರ ಅಚ್ಚರಿಗೆ ಇದು ಕಾರಣವಾಗಿದೆ. ಇಲ್ಲಿ ಸಿಕ್ಕ ಅವಶೇಷಗಳಿಂದ ಅಂಟಾರ್ಟಿಕದಲ್ಲಿ ಸುಮಾರು 5 ಸಾವಿರ ವರ್ಷಗಳ ಹಿಂದೆ ಪೆಂಗ್ವಿನ್ ಗಳು ಜೀವಿಸುತ್ತಿದ್ದವು ಎನ್ನಲು ಪುರಾವೆ ಸಿಕ್ಕಂತಾಗಿದೆ.

2016ರಲ್ಲಿ ಉತ್ತರ ಕೆರೋಲಿನಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಸ್ಟೀವನ್ ಎಂಸೈಲ್ ಒಂದು ಅನಿರೀಕ್ಷಿತ ವಿಚಾರ ಕಂಡುಹಿಡಿದರು. ಸ್ಕಾಟ್ ತೀರದಲ್ಲಿ ಕಲ್ಲುಗಳು ತುಂಬಿದ್ದ ಜಾಗದಲ್ಲಿ ಪ್ರೊಫೆಸರ್ ಸತ್ತು ಬಿದ್ದಿದ್ದ ಪೆಂಗ್ವಿನ್‌ಗಳನ್ನು ನೋಡಿದರು. ಅಲ್ಲಿ ಇತ್ತೀಚೆಗೆ ಮತ್ತು ತುಂಬಾ ಹಿಂದೆ ಸತ್ತು ಬಿದ್ದ ಪೆಂಗ್ವಿನ್‌ಗಳ ದೇಹಗಳೂ ಇದ್ದವು.

ಅಲ್ಲಿ ಕಂಡು ಬಂದವುಗಳಲ್ಲಿ ಅಡೆಲೀ ಪೆಂಗ್ವಿನ್‌ಗಳ ಮರಿಗಳೇ ಹೆಚ್ಚಾಗಿದ್ದವು. ಅವುಗಳಲ್ಲಿ ಮರಣ ಪ್ರಮಾಣ ಹೆಚ್ಚಾಗಿದೆ. ಇನ್ನೂ ವಿಶೇಷವೆಂದರೆ ಅಲ್ಲಿ ಮಂಜುಗಡ್ಡೆಯ ಮೇಲೆ ಕೆಲವೇ ದಿನ ಹಿಂದಿನದಾಗಿರಬಹುದಾದ ಮಲದ ಕಲೆಗಳೂ ಇದ್ದವು. ಆದರೆ ಅಲ್ಲಿ ಪೆಂಗ್ವಿನ್‌ಗಳು ವಾಸಿಸಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ. 

ಆನಂದ್ ಮಹೀಂದ್ರ ಹೃದಯ ಗೆದ್ದ ಫೋಟೋ ಇದು, ಗಡ್ಕರಿಗೆ ವಿಶೇಷ ಮನವಿ!

ಮೊದಲ ಎಕ್ಸ್‌ಪ್ಲೋರರ್‌ಗಳಾದ ರಾಬರ್ಟ್ ಫಾಲ್ಕನ್ ಸ್ಕಾಟ್ 1901-1903ರ ನಡುವೆ ರೋಸ್ ಸೀಗೆ ಬಂದಾಗಿನಿಂದಲೂ ಅಲ್ಲಿ ಪೆಂಗ್ವಿನಗ ಇತ್ತೆಂಬುದರ ಉಲ್ಲೇಖ ಎಲ್ಲೂ ಇಲ್ಲ. ಅದೇ ಪ್ರದೇಶಕ್ಕೆ 1907-1909ರ ಅವಧಿಯಲ್ಲಿ ದಂಡಯಾತ್ರೆ ಮಾಡಿದ್ದ ಅರ್ನೆಸ್ಟ್ ಶಾಕ್ಲೆಟನ್ ಕೂಡಾ ಅಲ್ಲಿ ಅಡೆಲಿ ಪೆಂಗ್ವಿನ್‌ಗಳು ವಾಸವಿದ್ದ ಬಗ್ಗೆ ಉಲ್ಲೇಖಿಸಿಲ್ಲ.

ಆದರೆ ಪ್ರೊಫೆಸರ್‌ಗೆ ಇದೆಲ್ಲವೂ ಕಾಣಸಿಕ್ಕಿದೆ. ಬಹಳಷ್ಟು ಎಲುಬುಗಳು, ಗರಿಗಳು, ಮಲದ ಅವಶೇಷ ಕಂಡು ಬಂದಿದೆ. ಇನ್ನು ಅಡೆಲಿ ಪೆಂಗ್ವಿನ್‌ಗಳು ಗೂಡು ಕಟ್ಟಲು ಬಳಸುವ ಪುಟ್ಟ ಕಲ್ಲುಗಳೂ ಈ ಪ್ರದೇಶದಲ್ಲಿ ಕಂಡು ಬಂದಿವೆ.

ಯುದ್ಧಗಳೆಲ್ಲವೂ ನಡೆದಿದ್ದು ಹೆಣ್ಣಿಗಾಗಿ, ಈ ಪೆಂಗ್ವಿನ್ ಸೆಣಸಿದ್ದು ಪತ್ನಿಗಾಗಿ: ಸೋತು ಗೆಲ್ಲುವ ಪೆಂಗ್ವಿನ್ ಯುದ್ಧ ವೈರಲ್ ವಿಡಿಯೋ..!

ಆರ್ಕಿಯಾಲಜಿಸ್ಟ್‌ಗಳು ಬಳಸುವ ರೀತಿಯಲ್ಲೇ ಇಲ್ಲಿ ಉತ್ಖನನ ಮಾಡಿದೆವು. ಇಲ್ಲಿ ಪೆಂಗ್ವಿನ್ ಗರಿಗಳು, ಎಲುಬು, ಮೊಟ್ಟೆಯ ಚಿಪ್ಪು, ಮೀನುಗಳ ಎಲುಬುಗಳೂ ಇದ್ದವು. ಅಲ್ಲಿನ ಮಣ್ಣು ತುಂಬಾ ಒಣಗಿದ್ದು, ಧೂಳುಮಯವಾಗಿತ್ತು. ಬೇರೆ ಹಳೆಯ ಜಾಗಗಳಲ್ಲಿರುವಂತೆಯೇ ಇತ್ತು. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೆಂಗ್ವಿನ್ ಅವಶೇಷಗಳಿದ್ದವು ಎಂದಿದ್ದಾರೆ ಪ್ರಫೆಸರ್ ಎಮ್‌ಸ್ಲಿ.

ನಾವು ತೆಗೆದ ಮಾದರಿಯಲ್ಲಿ ಹಳೆಯ ಮತ್ತ ಇತ್ತೀಚಿನ ಪೆಂಗ್ವಿನ್ ಅವಶೇಷಗಳಿದ್ದವು. ಬಹಳಷ್ಟು ವರ್ಷಗಳಿಂದ ನಾನು ಅಂಟಾರ್ಟಿಕಾದಲ್ಲಿ ಸಂಶೋಧನೆ ಮಾಡುತ್ತಿದ್ದರೂ ಇದೇ ಮೊದಲ ಬಾರಿ ಈ ರೀತಿ ಪತ್ತೆಯಾಗಿದೆ ಎಂದಿದ್ದಾರೆ.

ಅಳಿವಿನಂಚಿನಲ್ಲಿರುವ ಫೆಸಿಫಿಕ್ ರಿಟ್ಲೆ ಪ್ರಬೇಧದ ಕಡಲಾಮೆ ಪತ್ತೆ

ಇಲ್ಲಿ ಸಿಕ್ಕಿರುವ ಮಾದರಿಗಳು ರೇಡಿಯೋ ಕಾರ್ಬನ್ ಅನಾಲಿಸಿಸ್‌ಗೆ ಒಳಪಡಿಸಲಾಗಿದೆ. ಅದರಲ್ಲಿ ಫ್ರೆಶ್ ಆಗಿ ಕಂಡುಬಂದಿದ್ದ ಅವಶೇಷಗಳು ಅತ್ಯಂತ ಹಳೆಯದೆಂದು ತಿಳಿದುಬಂದಿದೆ. ಇವೆಲ್ಲವೂ ಕಳೆದ 800 ವರ್ಷದಿಂದ ಮಂಜುಗಡ್ಡೆ ಮತ್ತು ಹಿಮದಿಂದಾಗಿ ಹಾಗೆಯೇ ಉಳಿದುಕೊಂಡಿದೆ. ಇತ್ತೀಚಿನ ತಾಪಮಾನ ಏರಿಕೆಯಿಂದ ಹಿಮ ಕರಗುವ ತನಕ ಈ ಅವಶೇಷ ಭದ್ರವಾಗಿತ್ತು.

ರೇಡಿಯೋ ಕಾರ್ಬನ್ ಪರೀಕ್ಷೆಯ ಪ್ರಕಾರ 5 ಸಾವಿರ ವರ್ಷದ ಹಿಂದೆ ಅಲ್ಲಿ ಪೆಂಗ್ವಿನ್‌ಗಳಿತ್ತು ಎನ್ನಲಾಗಿದೆ. ಮೊದಲ ಹಂತದಲ್ಲಿ 5135ರಿಂದ 2750 ವರ್ಷ ಹಳೆಯದು , ನಂತರದ್ದು 2340ರಿಂದ 1375 ವರ್ಷ ಹಳೆಯದು, ಉಳಿದವಯ 1100ರಿಂದ 800 ವರ್ಷ ಹಳೆಯವು.

ನೋಡಿರದಿದ್ದರೆ ನೋಡ್ಕೊಂಡ್ ಬಿಡಿ: ಕಾರ್ ಸೈಜ್‌ನ ಆಮೆಯ ಪಳೆಯುಳಿಕೆ ಬಗ್ಗೆ ತಿಳ್ಕೊಂಡ್ ಬಿಡಿ

ಇತ್ತೀಚೆಗೆ ಹಿಮ ಕರಗುವುದರಿಂದ ಹಿಂದೆ ಪೆಂಗ್ವಿನ್‌ಗಳು ವಾಸವಿದ್ದಿದ್ದು ತಿಳಿದುಬಂದಿದೆ. ಬೇರೆ ಬೇರೆ ಕಾಲಘಟ್ಟದ;್;ಒ ಪೆಂಗ್ವಿನ್‌ಗಳಿದ್ದವು ಎಂಬುದಕ್ಕೆ ಸಾಕ್ಷಿ ದೊರೆತಂತಾಗಿದೆ.

click me!