ರಷ್ಯಾದ 2ನೇ ಕೊರೋನಾ ಲಸಿಕೆ ಪ್ರಯೋಗ ಯಶಸ್ವಿ!

By Suvarna NewsFirst Published Oct 2, 2020, 9:36 PM IST
Highlights
  • ಕೊರೋನಾ ವೈರಸ್ ನಿಯಂತ್ರಣಕ್ಕೆ ರಷ್ಯಾದಿಂದ ಮತ್ತೊಂದು ಲಸಿಕೆ
  • 2ನೇ ಲಸಿಕೆ ಪ್ರಯೋಗ ಯಶಸ್ವಿ
  • ಶೀಘ್ರದಲ್ಲೇ ಸಿಗಲಿದೆ ಅಂತಿಮ ರೂಪ

ರಷ್ಯಾ(ಅ.02): ಕೊರೋನಾ ವೈರಸ್ ವಿರುದ್ಧ ಹೋರಾಡಲು ಬಹುತೇಕ ರಾಷ್ಟ್ರಗಳು ಲಸಿಕೆ ಸಂಶೋಧನೆಯಲ್ಲಿ ಮುಳುಗಿದೆ. ಇದರಲ್ಲಿ ರಷ್ಯಾ ಈಗಾಗಲೇ ವಿಶ್ವದ ಮೊದಲ ಕೊರೋನಾ ಲಸಿಕೆ ಸಂಶೋಧಿಸಿರುವುದಾಗಿ ಹೇಳಿಕೊಂಡಿತ್ತು. ಪ್ರಯೋಗದಲ್ಲೂ ಇದು ಯಶಸ್ವಿಯಾಗಿದೆ ಎಂದಿತ್ತು. ಇದೀಗ ರಷ್ಯಾದಿಂದ ಮತ್ತೊಂದು ಕೊರೋನಾ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಪತ್ನಿ ಮೆಲೇನಿಯಾಗೆ ಕೊರೋನಾ ಪಾಸಿಟಿವ್..!.

ಎಪಿವ್ಯಾಕ್‌ಕೊರೋನಾ ಅನ್ನೋ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ಟಾಪ್ ಸೀಕ್ರೆಟ್ ವೈರೋಲಜಿಸ್ಟ್ ಸೆಂಟರ್ ವೆಕ್ಟರ್ ವರದಿ ಮಾಡಿದೆ. ಮೊದಲ ಹಂತದ 2 ಪ್ರಯೋಗಗಳು ಯಶಸ್ವಿಯಾಗಿದೆ.  ಅಂತಿಮಂ ಹಂತದ ಪ್ರಯೋಗ ನಡೆಯತ್ತಿದ್ದು, ಇದರ ಫಲಿತಾಂಶದ ವರದಿ ಆಧರಿಸಿ ರಷ್ಯಾದ 2ನೇ ಕರೋನಾ ವೈರಸ್ ಲಸಿಕೆ ಕುರಿತು ಸ್ಪಷ್ಟ ಮಾಹಿತಿ ಹೊರಬೀಳಲಿದೆ ಎಂದು ವೆಕ್ಟರ್ ಹೇಳಿದೆ.

ಸದ್ಯ ನಡೆಸಿರುವ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಕೊರೋನಾ ವೈರಸ್ ವಿರುದ್ಧ ಪರಿಣಾಮಕಾರಿಯಾದ ಲಸಿಕೆ ಇದಾಗಿದ್ದು, ಶೀಘ್ರದಲ್ಲೇ ಅಂತಿಮ ರೂಪ ಸಿಗುವ ವಿಶ್ವಾಸವಿದೆ ಎಂದು ವೆಕ್ಟರ್ ಹೇಳಿದೆ.

ಈ ವಾರದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದ ಸಮಿತಿ ನೂತನ ಎಪಿವ್ಯಾಕ್‌ಕೊರೋನಾ ಲಸಿಕೆಗೆ ಅನಮತಿ ನೀಡಲಿದ್ದಾರೆ ಎಂದು ರಷ್ಯಾ ಆರೋಗ್ಯ ಸಚಿವ ಮಿಖೈಲ್ ಮುರಾಶ್ಕೋ ಹೇಳಿದ್ದಾರೆ.

click me!