
ಬೀಜಿಂಗ್ (ಫೆ.20): ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಕಂಪನಿಗಳು ಉದ್ಯೋಗಿಗಳೊಂದಿಗೆ ಮಾನವೀಯವಲ್ಲದ ವರ್ತನೆ ತೋರುತ್ತವೆ. ಅದೇ ರೀತಿ ಚೀನಾದ ಕಂಪನಿಯೊಂದು ಈಗ ದೊಡ್ಡ ಟೀಕೆಗಳನ್ನು ಎದುರಿಸುತ್ತಿದೆ. ಟಾಯ್ಲೆಟ್ ಬಳಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಂಪನಿಯು ತಂದ ಹೊಸ ನಿಯಮ ಟೀಕೆಗೆ ಕಾರಣವಾಗಿದೆ. ಫೆಬ್ರವರಿ 11 ರಿಂದ ಈ ನಿಯಮಗಳು ಜಾರಿಗೆ ಬಂದಿವೆ ಎಂದು ವರದಿಯಾಗಿದೆ. ಈ ಹೊಸ ನಿಯಮದ ಪ್ರಕಾರ, ಇಲ್ಲಿನ ಉದ್ಯೋಗಿಗಳಿಗೆ ನಿಗದಿಪಡಿಸಿದ ಸಮಯದಲ್ಲಿ ಮಾತ್ರ ಟಾಯ್ಲೆಟ್ ಬಳಸಲು ಅನುಮತಿ ಇದೆ. ಅದು ಮಾತ್ರವಲ್ಲ, ಟಾಯ್ಲೆಟ್ಗೆ ಹೋಗಲು ಕೇವಲ ಎರಡು ನಿಮಿಷ ಮಾತ್ರ ಅವಕಾಶ ನೀಡಲಾಗಿದೆ.
ಈ ಎರಡು ನಿಮಿಷಗಳಲ್ಲಿ ಟಾಯ್ಲೆಟ್‌ಗೆ ಹೋಗಿ ವಾಪಸ್ ಬಂದು ಕೆಲಸ ಶುರು ಮಾಡಬೇಕು. ಗ್ವಾಂಗ್ಡಾಂಗ್‌ನ ಫೋಶನ್ನಲ್ಲಿರುವ ತ್ರೀ ಬ್ರದರ್ಸ್ ಮೆಷಿನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು ಈ ಕಾರ್ಮಿಕ ವಿರೋಧಿ ನೀತಿಗಾಗಿ ಟೀಕೆಗೆ ಗುರಿಯಾಗಿದೆ. ಉದ್ಯೋಗಿಗಳ ಕೆಲಸದ ಸ್ಥಳದಲ್ಲಿ ಶಿಸ್ತು ಮತ್ತು ನಡವಳಿಕೆಯನ್ನು ಸುಧಾರಿಸಲು ಈ ನಿಯಮವನ್ನು ತರಲಾಗಿದೆ ಎಂದು ಕಂಪನಿ ವಾದಿಸಿದೆ.
ಹೊಸ ನಿಯಮದ ಪ್ರಕಾರ, ಟಾಯ್ಲೆಟ್ ಬಳಸಲು ಉದ್ಯೋಗಿಗಳಿಗೆ ಈ ಕೆಳಗಿನ ಸಮಯವನ್ನು ನಿಗದಿಪಡಿಸಲಾಗಿದೆ: ಬೆಳಿಗ್ಗೆ 8 ಗಂಟೆಗೆ ಮೊದಲು, ಬೆಳಿಗ್ಗೆ 10.30 ರಿಂದ 10.40 ರವರೆಗೆ, ಮಧ್ಯಾಹ್ನ 12 ರಿಂದ 1.30 ರವರೆಗೆ, ಸಂಜೆ 3.30 ರಿಂದ 3.40 ರವರೆಗೆ, ಮತ್ತು ಸಂಜೆ 5.30 ರಿಂದ 6 ಗಂಟೆಯವರೆಗೆ ಈ ಅವಧಿಯಲ್ಲಿ ಮಾತ್ರವೇ ಉದ್ಯೋಗಿಗಳು ಟಾಯ್ಲೆಟ್‌ಗೆ ಹೋಗಬೇಕು ಎಂದು ತಿಳಿಸಲಾಗಿದೆ.
Viral Video: 15 ನಿಮಿಷದಲ್ಲಿ ಬಾಚಿಕೊಂಡಷ್ಟು ಹಣ ಬೋನಸ್ ಕೊಟ್ಟ ಕಂಪನಿಯ ಮಾಲೀಕ
ತುಂಬಾ ಅಗತ್ಯವಿದ್ದಾಗ ಮಾತ್ರ ಇದರ ನಡುವೆ ಟಾಯ್ಲೆಟ್ ಬಳಸಲು ಅನುಮತಿ ಇದೆ. ಅದಕ್ಕೂ ಎರಡು ನಿಮಿಷ ಮಾತ್ರ ಬಳಸಬೇಕು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಹೊಸ ನಿಯಮದ ವಿರುದ್ಧ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಟೀಕೆ ವ್ಯಕ್ತವಾಗುತ್ತಿದೆ.
700 ರೂ ಲಿಪ್ ಸ್ಟಡ್ ಖರೀದಿದಿಗೆ 1.2 ಕೋಟಿ ರೂ ಕೈಚೆಲ್ಲಿದ ಪುತ್ರಿ, ಪ್ರಜ್ಞೆ ತಪ್ಪಿ ಬಿದ್ದ ತಾಯಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ