
ಉಸಿರಾಟ ಸಂಬಂಧಿ ಅನಾರೋಗ್ಯದಿಂದ ನಾನಿನ್ನು ಹೆಚ್ಚು ಕಾಲ ಬದುಕೋದಿಲ್ಲ : ಪೋಪ್ ಫ್ರಾನ್ಸಿಸ್
ರೋಮ್: ಉಸಿರಾಟ ಸಂಬಂಧಿ ವ್ಯಾಧಿಯಾದ ನ್ಯುಮೋನಿಯಾದಿಂದ ಬಳಲುತ್ತಿರುವ ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್, ತಾವಿನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದು ತಮ್ಮ ಆಪ್ತ ಸಹಾಯಕರಿಗೆ ಹೇಳಿರುವುದಾಗಿ ವರದಿಯಾಗಿದೆ.
88 ವರ್ಷದ ಇವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡೂ ಶ್ವಾಶಕೋಶಗಳಲ್ಲಿ ನ್ಯುಮೋನಿಯಾ ಇರುವುದು ಪತ್ತೆಯಾಗಿತ್ತು. ಬಳಿಕ ಸೋಮವಾರ ಅವರ ಆರೋಗ್ಯ ಸ್ಥಿರವಾಗಿರುವುದಾಗಿ ವ್ಯಾಟಿಕನ್ ತಿಳಿಸಿತ್ತು. ಬುಧವಾರ ಕೂಡ ಅವರು ಸುಖನಿದ್ರೆಯ ಬಳಿಕ ಬೆಳಗಿನ ಉಪಹಾರ ಸೇವಿಸಿದ್ದರು ಎನ್ನಲಾಗಿತ್ತು. ಇದರ ಬೆನ್ನಲ್ಲೇ ತಮ್ಮ ಚೇತರಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಪ್, ತಮ್ಮ ಉತ್ತರಾಧಿಕಾರಿಯ ಆಯ್ಕೆಯತ್ತ ಗಮನ ಹರಿಸಿದ್ದಾರೆ. ಮೊದಲೇ ಬ್ರಾಂಕೈಟಿಸ್‌ನಿಂದ ಬಳಲುತ್ತಿದ್ದ ಪೋಪ್ ಯುವಕರಾಗಿದ್ದಾಗ ಅವರ ಬಲ ಶ್ವಾಸಕೋಶದ ಒಂದು ಭಾಗವನ್ನು ತೆಗೆಯಲಾಗಿತ್ತು. ಬಳಿಕ ನಿಯಮಿತ ಪರೀಕ್ಷೆಗಳಿಗೆ ಅವರು ಒಳಗಾಗುತ್ತಿದ್ದರು.
ಅದಾನಿ ವಿರುದ್ಧ ತನಿಖೆಗೆ ಸಹಾಯ: ಭಾರತಕ್ಕೆ ಅಮೆರಿಕ ಕೋರಿಕೆ
ಪಿಟಿಐ ನ್ಯೂಯಾರ್ಕ್‌ಅದಾನಿ ಸಮೂಹದ ಉದ್ಯಮಿಗಳಾದ ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಅವರ ಮೇಲಿನ ಸೌರ ವಿದ್ಯುತ್ ಗುತ್ತಿಗೆ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಮೆರಿಕ ಷೇರುಪೇಟೆ ಆಯೋಗ, ‘ನಾವು ಹಾಕಿರುವ ಕೇಸಿನ ವಿಷಯವನ್ನು ಅದಾನಿ ಜತೆ ಹಂಚಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ’ ಎಂದು ಹೇಳಿದೆ. ಅಲ್ಲದೆ, ಇದಕ್ಕೆ ಸಹಕಾರ ಬೇಕು ಎಂದು ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದಿದೆ. ಅಮೆರಿಕದ ನ್ಯೂಯಾರ್ಕ್ ಕೋರ್ಟ್‌ಗೆ ಸಲ್ಲಿಸಲಾದ ವಸ್ತುಸ್ಥಿತಿ ವರದಿಯಲ್ಲಿ ಅದು ಈ ಮಾಹಿತಿ ನೀಡಿದೆ.
ಕಾಂಗ್ರೆಸ್ ಟಾಂಗ್:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ‘ಅದಾನಿ ವಿರುದ್ಧದ ಅಮೆರಿಕದಲ್ಲಿನ ಕೇಸನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ ವಿಚಾರ ಎಂದು ಕರೆದರು. ಈಗ ಅಮೆರಿಕ ಷೇರುಪೇಟೆ ಆಯೋಗವು ಭಾರತ ಸರ್ಕಾರದಿಂದ ತನಿಖೆಗೆ ಸಹಾಯ ಬಯಸಿದೆ. ಇದಕ್ಕಾದರೂ ಮೋದಿ ಒಪ್ಪುತ್ತಾರಾ?’ ಎಂದು ಪ್ರಶ್ನಿಸಿದೆ.ಅದಾನಿ ಭಾರತದಲ್ಲಿ ಸೌರ ವಿದ್ಯುತ್ ಗುತ್ತಿಗೆ ಪಡೆಯಲು ಲಂಚ ನೀಡಿದ್ದರು. ಆದರೆ ಈ ವಿಷಯ ಮುಚ್ಚಿಟ್ಟು ಅಮೆರಿಕ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರು ಎಂಬ ತನಿಖೆಯನ್ನು ಅಮೆರಿಕ ಷೇರುಪೇಟೆ ಆಯೋಗ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ