ಕೋಳ ತೊಟ್ಟ ಅಕ್ರಮ ವಲಸಿಗರ ನೋಡಿ ವಾವ್ ಎಂದ ಎಲಾನ್ ಮಸ್ಕ್

Published : Feb 20, 2025, 06:32 AM ISTUpdated : Feb 20, 2025, 06:58 AM IST
ಕೋಳ ತೊಟ್ಟ ಅಕ್ರಮ ವಲಸಿಗರ ನೋಡಿ ವಾವ್ ಎಂದ ಎಲಾನ್ ಮಸ್ಕ್

ಸಾರಾಂಶ

ಅಮೆರಿಕದ ಟ್ರಂಪ್‌ ಸರ್ಕಾರ ಅಕ್ರಮ ವಲಸಿಗರ ಕೈಗೆ ಕೋಳ ಮತ್ತು ಕಾಲಿಗೆ ಸರಪಳಿ ತೊಡಿಸಿ ಅಮೆರಿಕದಿಂದ ಹೊರದಬ್ಬುತ್ತಿರುವ ವಿಡಿಯೋವನ್ನು ಶ್ವೇತಭವನ ಮಂಗಳವಾರ ಬಿಡುಗಡೆ ಮಾಡಿದೆ. ಸಾಲದ್ದಕ್ಕೆ ಇದಕ್ಕೆ ಟ್ರಂಪ್‌ ಆಪ್ತ ಎಲಾನ್‌ ಮಸ್ಕ್‌ ಅವರು ‘ವಾವ್‌’ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ಟ್ರಂಪ್‌ ಸರ್ಕಾರ ಅಕ್ರಮ ವಲಸಿಗರ ಕೈಗೆ ಕೋಳ ಮತ್ತು ಕಾಲಿಗೆ ಸರಪಳಿ ತೊಡಿಸಿ ಅಮೆರಿಕದಿಂದ ಹೊರದಬ್ಬುತ್ತಿರುವ ವಿಡಿಯೋವನ್ನು ಶ್ವೇತಭವನ ಮಂಗಳವಾರ ಬಿಡುಗಡೆ ಮಾಡಿದೆ. ಸಾಲದ್ದಕ್ಕೆ ಇದಕ್ಕೆ ಟ್ರಂಪ್‌ ಆಪ್ತ ಎಲಾನ್‌ ಮಸ್ಕ್‌ ಅವರು ‘ವಾವ್‌’ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕ ನಡೆಸಿಕೊಂಡ ರೀತಿಗೆ ಭಾರತದಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ ಈ ವೀಡಿಯೊ ಹೊರಬಂದಿದ್ದು, ವಿವಾದ ಮತ್ತಷ್ಟು ಹೆಚ್ಚಿಸಿದೆ. 41 ಸೆಕೆಂಡ್‌ಗಳ ವೀಡಿಯೊದಲ್ಲಿ, ಅಧಿಕಾರಿಯೊಬ್ಬರು ಕೈಕೋಳ ಹಾಕಿ ಬಂಧಿಸಿದ ವ್ಯಕ್ತಿಯನ್ನು ವಿಮಾನ ಹತ್ತಿಸುತ್ತಾರೆ. ಬುಟ್ಟಿಯಲ್ಲಿ ಒಂದಷ್ಟು ಕೈಕೋಳ ಮತ್ತು ಸರಪಳಿಗಳನ್ನು ಇಟ್ಟಿರುವುದೂ ಕಂಡುಬರುತ್ತದೆ.

ಮುಖಕ್ಕೆ ಮಾಸ್ಕ್ ಹಾಕಿಕೊಂಡ ವಲಸಿಗನೊಬ್ಬ ಕೈಗೆ ಕೋಳ, ಕಾಲಿಗೆ ಸರಪಳಿ ಕಟ್ಟಿಕೊಂಡು ಅಧಿಕಾರಿಯೊಬ್ಬರ ಹಿಂದೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮತ್ತೊಂದು ದೃಶ್ಯದಲ್ಲಿ, ಎರಡೂ ಕೈಗಳಿಗೆ ಕೋಳ ಹಾಕಿದ, ಕಾಲಿಗೆ ಸರಪಳಿ ಬಿಗಿದ ವ್ಯಕ್ತಿಯೊಬ್ಬ ವಿಮಾನದ ಮೆಟ್ಟಿಲು ಹತ್ತುವುದು ಕಂಡುಬರುತ್ತದೆ. ವಿಡಿಯೋದಲ್ಲಿ ಯಾವ ವಲಸಿಗರ ಮುಖವೂ ಗೋಚರಿಸುತ್ತಿಲ್ಲ.

ವಾವ್‌ ಎಂದ ಮಸ್ಕ್:

ಈ ವಿಡಿಯೋವನ್ನು ಟೆಸ್ಲಾ ಸಿಇಒ ಮತ್ತು ಟ್ರಂಪ್ ಸರ್ಕಾರದ ಮುಖ್ಯ ಸಲಹೆಗಾರ ಎಲಾನ್ ಮಸ್ಕ್ ರೀಪೋಸ್ಟ್ ಮಾಡಿ, ‘ಹಹ.. ವಾವ್’ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆಯೂ ಭಾರತೀಯ ಅಕ್ರಮ ವಲಸಿಗರನ್ನು ಕೈಕೋಳ, ಸರಪಳಿ ಹಾಕಿ ಸೇನಾ ವಿಮಾನದಲ್ಲಿ ಭಾರತಕ್ಕೆ ಕಳಿಸಲಾಗಿತ್ತು. ಈ ಅಮಾನವೀಯ ಕ್ರಮದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ