ಬಾಂಗ್ಲಾದಲ್ಲಿ ಹಿಂದೂಗಳ ಟಾರ್ಗೆಟ್‌: 49 ಅಲ್ಪಸಂಖ್ಯಾತ ಶಿಕ್ಷಕರಿಂದ ಬಲವಂತದ ರಾಜೀನಾಮೆ

Published : Sep 02, 2024, 11:15 AM ISTUpdated : Sep 02, 2024, 11:16 AM IST
ಬಾಂಗ್ಲಾದಲ್ಲಿ ಹಿಂದೂಗಳ ಟಾರ್ಗೆಟ್‌:  49 ಅಲ್ಪಸಂಖ್ಯಾತ ಶಿಕ್ಷಕರಿಂದ ಬಲವಂತದ ರಾಜೀನಾಮೆ

ಸಾರಾಂಶ

ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ, ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಸುಮಾರು 49 ಅಲ್ಪಸಂಖ್ಯಾತ ಶಿಕ್ಷಕರಿಂದ ಬಲವಂತವಾಗಿ ರಾಜೀನಾಮೆ ತೆಗೆದುಕೊಳ್ಳಲಾಗಿದೆ ಬಾಂಗ್ಲಾದ ಅಲ್ಪಸಂಖ್ಯಾತ ಸಂಘಟನೆಗಳು ಆರೋಪಿಸಿವೆ.

ಢಾಕಾ: ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ, ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಸುಮಾರು 49 ಅಲ್ಪಸಂಖ್ಯಾತ ಶಿಕ್ಷಕರಿಂದ ಬಲವಂತವಾಗಿ ರಾಜೀನಾಮೆ ತೆಗೆದುಕೊಳ್ಳಲಾಗಿದೆ ಬಾಂಗ್ಲಾದ ಅಲ್ಪಸಂಖ್ಯಾತ ಸಂಘಟನೆಗಳು ಆರೋಪಿಸಿವೆ. ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿ ಸಂಘಟನೆಯಾಗಿರುವ ಛತ್ರ ಒಕಿಯಾ ಪರಿಷತ್‌ ಈ ಕುರಿತು ಆರೋಪ ಮಾಡಿದೆ. ‘ವಿದ್ಯಾರ್ಥಿಗಳ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಿಕ್ಷಕರ ಮೇಲೆ ದೈಹಿಕವಾಗಿಯೂ ಹಲ್ಲೆ ಮಾಡಲಾಗಿದೆ’ ಎಂದು ಹೇಳಿದೆ. ಹಸೀನಾ ರಾಜೀನಾಮೆ ಬಳಿಕ ಹಿಂದೂ ದೇಗುಲ, ಹಿಂದೂಗಳು, ಹಿಂದೂಗಳ ಮನೆ ಮೇಲೆ ದಾಳಿ ನಡೆಸಲಾಗಿತ್ತು.

ಉಗ್ರಸಂಘಟನೆ ಜಮಾತ್‌ ಇಸ್ಲಾಮಿ ಮೇಲೆ ಹಸೀನಾ ಹೇರಿದ್ದ ನಿಷೇಧ ತೆರವು

ಢಾಕಾ: ಉಗ್ರಸಂಘಟನೆ ಎಂಬ ಪಟ್ಟಕಟ್ಟಿ ಹಸೀನಾ ಸರ್ಕಾರದಿಂದ ನಿಷೇಧಕ್ಕೊಳಗಾಗಿದ್ದ ಜಮಾತ್‌ ಎ ಇಸ್ಲಾಮಿ ಸಂಘಟನೆ ಮೇಲಿನ ನಿಷೇಧವನ್ನು ಬಾಂಗ್ಲಾದೇಶದ ಮುಹಮ್ಮದ್‌ ಯೂನಸ್‌ ಅವರ ಮಧ್ಯಂತರ ಸರ್ಕಾರ ತೆರವುಗೊಳಿಸಿದೆ. ಜಮಾತ್‌ ಮೇಲಿದ್ದ ಭಯೋತ್ಪಾದನೆ ಕೃತ್ಯ ಆರೋಪಗಳಿಗೆ ಯಾವುದೇ ಸಾಕ್ಷಿಗಳು ಇಲ್ಲದ ಕಾರಣ ತೆರವು ಮಾಡಲಾಗಿದೆ ಎಂದು ಬಾಂಗ್ಲಾದೇಶದ ಗೃಹ ಇಲಾಖೆ ಹೇಳಿದೆ. ಆ.1ರಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷ ಭಯೋತ್ಪಾದನೆ ಮತ್ತು ಉಗ್ರವಾದ ಆರೋಪ ಹೊರಿಸಿ ಜಮಾತ್‌ ಸಂಘಟನೆಯನ್ನು ನಿಷೇಧಗೊಳಿಸಿತ್ತು.

ಬಾಂಗ್ಲಾದೇಶದಲ್ಲಿ ಖ್ಯಾತ ಪತ್ರಕರ್ತೆ ಶವವಾಗಿ ಪತ್ತೆ

ಹಸೀನಾ ಸೇರಿ ಸಂಪುಟ ಸಚಿವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದು!

ಢಾಕಾ: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಸೇರಿದಂತೆ ಅವರ ಮಂತ್ರಿಮಂಡಲದ ಎಲ್ಲಾ ಸಚಿವರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಗುರುವಾರ ರದ್ದುಗೊಳಿಸಿದೆ. ಸರ್ಕಾರ ಪತನಗೊಂಡ ನಂತರ ಶೇಖ್‌ ಹಸೀನಾ ಹಾಗೂ ಆಕೆಯ ಸಚಿವ ಸಂಪುಟದ ಸಚಿವರಿಗೆ ಯಾವುದೇ ರೀತಿಯ ಅಧಿಕಾರ ಇರುವುದಿಲ್ಲ. ಆದ ಕಾರಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಮಧ್ಯಂತರ ಸರ್ಕಾರ ತಿಳಿಸಿದೆ.

ಯೂನಸ್‌ರಿಂದ ಜನ್ಮಾಷ್ಟಮಿ ಶುಭಾಶಯ: ಬಾಂಗ್ಲಾದಲ್ಲಿ ಸಾಮರಸ್ಯದ ಭರವಸೆ
ಈ ಮಧ್ಯೆ ಮೊನ್ನೆ ನಡೆದ ಕೃಷ್ಣ ಜನ್ಮಾಷ್ಟಮಿಯಂದು ಬಾಂಗ್ಲಾದ ಹಿಂದೂಗಳನ್ನು ಭೇಟಿಯಾಗಿ ಶುಭಾಶಯ ಕೋರಿರುವ ಮಧ್ಯಂತರ ಸರ್ಕಾರದ ಅಧ್ಯಕ್ಷ ಮುಹಮ್ಮದ್ ಯೂನಸ್ ದೇಶದಲ್ಲಿ ಸಾಮರಸ್ಯವನ್ನು ಕಾಪಾಡುವ ಭರವಸೆ ನೀಡಿದ್ದಾರೆ. ನಮ್ಮ ದೇಶದ ಜನರ ನಡುವೆ ಯಾವುದೇ ಒಡಕಿರಲು ಸಾಧ್ಯವಿಲ್ಲ. ನಾವೆಲ್ಲರೂ ಸಮಾನರು. ಮಧ್ಯಂತರ ಸರ್ಕಾರವು ಪ್ರತಿಯೊಬ್ಬ ಪ್ರಜೆಯ ಹಕ್ಕನ್ನು ಕಾಪಾಡಲು ಬದ್ಧವಾಗಿದೆ. ದೇವಸ್ಥಾನಗಳಿಗೆ ಭದ್ರತೆ ಒದಗಿಸುವ ಪರಿಸ್ಥಿತಿ ತೊಲಗಿ, ಜನರು ನಿರ್ಭೀತರಾಗಿ ತಮ್ಮ ನಂಬಿಕೆ, ಆಚರಣೆಗಳನ್ನು ಅನುಸರಿಸಬಹುದಾದ ದೇಶವನ್ನು ಕಟ್ಟುವುದೇ ನನ್ನ ಕನಸು ಎಂದು ಯೂನಸ್‌ ಹೇಳಿದ್ದಾರೆ.

ನಾವು ಒಗ್ಗಟ್ಟಾಗದಿದ್ದರೆ ನಮ್ಮನ್ನ ಕತ್ತರಿಸಲಾಗುತ್ತೆ: ದೇಶದ ಜನತೆಗೆ ಯೋಗಿ ಸಂದೇಶ

ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಪಲಾಯನದ ನಂತರ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚಾಗಿದ್ದು, ಅವರ ಆಸ್ತಿ, ಮನೆ, ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!