
ಬೀಜಿಂಗ್ (ಮೇ.12): ತಮ್ಮ ದೇಶದ ಪಿಎಸ್15 ಕ್ಷಿಪಣಿ, ಜೆ17 ಫೈಟರ್ ಜೆಟ್‌ಗಳನ್ನು ಯುದ್ಧಕ್ಕೆ ಬಳಸಬಾರದು ಎನ್ನುವ ಷರತ್ತನ್ನು ಹಾಕಿದ್ದರೂ ಅದನ್ನು ಧಿಕ್ಕರಿಸಿದ ಪಾಕ್‌ಗೆ ಚೀನಾ ಸಮನ್ಸ್ ನೀಡಿದೆ. ಮತ್ತೊಂದೆಡೆ ಎಫ್-16 ವಿಮಾನ ಬಳಕೆಯಲ್ಲಿಯೂ ಪಾಕ್ ಅಮೆರಿಕದ ನಿಯಮ ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ. ಪಾಕಿಸ್ತಾನದ ಹಾರಿಸಿಬಿಟ್ಟ ಪಿಎಸ್15 ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿತ್ತು. ಜೊತೆಗೆ ಜೆ17 ಯುದ್ಧ ವಿಮಾನಗಳು, ಪಿಎಲ್15 ಕ್ಷಿಪಣಿಗಳು, ಜೆ 17 ವಿಮಾನಗಳನ್ನು ಭಾರತ ಹೊಡೆದುರುಳಿಸಿತ್ತು. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಚೀನಾದ ಶಸ್ತ್ರಾಸ್ತ್ರಗಳ ಘನತೆಗೆ ಧಕ್ಕೆ ಬಂಧಿದೆ. ಆಫ್ರಿಕಾ ದೇಶಗಳು ಈಗಾಗಲೇ ಮಾಡಿಕೊಂಡಿದ್ದ ಖರೀದಿ ಒಪ್ಪಂದದಿಂದ ಹಿಂದೆ ಸರಿಯಬಹುದು ಎಂಬ ಆತಂಕ ಹಿನ್ನೆಲೆಯಲ್ಲಿ, ಪಾಕ್‌ಗೆ ಚೀನಾ ಸಮ್ಸನ್ ನೀಡಿದೆ ಎನ್ನಲಾಗಿದೆ
ಅಮೆರಿಕ ನಿಯಮ ಉಲ್ಲಂಘನೆ: ಭಾರತದ ವಿರುದ್ಧ ಎಫ್ 16 ವಿಮಾನ ಬಳಕೆ ಮೂಲಕ ಅಮೆರಿಕದ ಪೂರೈಕೆ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿದೆ. ಈ ವಿಮಾನ ಪೂರೈಕೆ ವೇಳೆ ಅದನ್ನು ಉಗ್ರರ ವಿರುದ್ಧ ಮಾತ್ರ ಬಳಸಬೇಕು, ತಾನು ಎಫ್ 16 ಪೂರೈಸಿರುವ ಮತ್ತೊಂದು ದೇಶದ ವಿರುದ್ಧ ಅದನ್ನು ಬಳಸಬಾರದು, ಅನಿವಾರ್ಯವಾಗಿ ಬಳಸುವುದೇ ಆದಲ್ಲಿ ತನ್ನ ಪೂರ್ವಾನುಮತಿ ಪಡೆಯಬೇಕು ಎಂಬ ಷರತ್ತನ್ನು ಅಮೆರಿಕ ವಿಧಿಸಿತ್ತು. ಆದರೆ ಇದ್ಯಾವುದನ್ನೂ ಪಾಕಿಸ್ತಾನ ಪೂರೈಸದೇ ಇರುವುದು ಅಮೆರಿಕವನ್ನು ಸಿಟ್ಟಿಗೆಬ್ಬಿಸಿದೆ ಎನ್ನಲಾಗಿದೆ.
ಚೀನಿ ನಿರ್ಮಿತ ಕ್ಷಿಪಣಿ ಅವಶೇಷ ಪತ್ತೆ: ಭಾರತ- ಪಾಕ್ ಪರಿಸ್ಥಿತಿ ಉದ್ವಿಗ್ನ ನಡುವೆಯೇ ಪಂಜಾಬ್‌ನ ಹೋಶಿಯಾರ್‌ಪುರದ ಗ್ರಾಮವೊಂದರಲ್ಲಿ ಪಾಕಿಸ್ತಾನ ಹಾರಿಬಿಟ್ಟ ಚೀನಿ ನಿರ್ಮಿತ ಪಿಲ್-15 ಕ್ಷಿಪಣಿಯ ಅವಶೇಷ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಬಠಿಂಡಾದಲ್ಲೂ ಕೂಡ ಪಾಕ್ ನಿರ್ಮಿತ ಕ್ಷಿಪಣಿ ಅವಶೇಷ ಸಿಕ್ಕಿದೆ. ಇದರಿಂದಾಗಿ ಪಾಕ್‌ಗೆ ಚೀನಾ ಸೇನಾ ನೆರವು ಮತ್ತೊಮ್ಮೆ ಸಾಬೀತಾಗಿದೆ. ಹೋಶಿಯಾರ್‌ಪುರದ ಕಾಮಾಹಿ ದೇವಿ ಗ್ರಾಮದಲ್ಲಿ ಕ್ಷಿಪಣಿ ಅವಶೇಷಗಳು ಪತ್ತೆಯಾಗಿದೆ. ವಾಯುಪಡೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ . ಇದು ಚೀನಾ ನಿರ್ಮಿತ ಪಿಲ್-15 ಕ್ಷಿಪಣಿ ಆಗಿದ್ದು, ಇದನ್ನು ಪಾಕ್ ಹಾರಿಸಿ ಬಿಟ್ಟಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಅಣು ದಾಳಿ ಭೀತಿಗೆ ಅಮೆರಿಕದ ಮಧ್ಯ ಪ್ರವೇಶ?: ಭಾರತ ದಿಢೀರ್ ಕದನ ವಿರಾಮಕ್ಕೆ ಒಪ್ಪಿದ್ದೇಕೆ?
ಈ ನಡುವೆ ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್ ಮಾಳವೀಯ ‘ಇದು ಚೀನಿ ನಿರ್ಮಿತ ಪಿಎಲ್-15 ಕ್ಷಿಪಣಿ ಆಗಿದ್ದು ಅದು ಸಂಪೂರ್ಣ ಹಾನಿಗೊಳಗಾದ ಸ್ಥಿತಿಯಲ್ಲಿದೆ’ ಎಂದಿದ್ದಾರೆ. ಭಾರತವು ಈ ಕ್ಷಿಪಣಿಯನ್ನು ಅಧ್ಯಯನಕ್ಕೆ ಒಳಪಡಿಸುವ ಸಾಧ್ಯತೆಯಿದೆ. ಇದರ ಅಧ್ಯಯನದಿಂದ ಭಾರತೀಯ ರಕ್ಷಣಾ ವಿಜ್ಞಾನಿಗಳು ಮತ್ತು ಅಧಿಕಾರಿಗಳಿಗೆ ಆಂತರಿಕ ವ್ಯವಸ್ಥೆಗಳನ್ನು ವಿಶ್ಲೇಷಿಸಲು ಅನುವು ಮಾಡಿಕೊಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ