ಫೇಸ್‌ಬುಕ್‌ನಲ್ಲಿ 23,000+ ನಕಲಿ ಖಾತೆಗಳು ಡಿಲೀಟ್ ಮಾಡಿದ ಮೆಟಾ; ನಿಮ್ಮ ಖಾತೆ ಇದೆಯಾ ಚೆಕ್ ಮಾಡಿ!

Published : May 11, 2025, 04:37 PM ISTUpdated : May 11, 2025, 04:53 PM IST
ಫೇಸ್‌ಬುಕ್‌ನಲ್ಲಿ 23,000+ ನಕಲಿ ಖಾತೆಗಳು ಡಿಲೀಟ್ ಮಾಡಿದ ಮೆಟಾ; ನಿಮ್ಮ ಖಾತೆ ಇದೆಯಾ ಚೆಕ್ ಮಾಡಿ!

ಸಾರಾಂಶ

ಭಾರತ-ಬ್ರೆಜಿಲ್‌ನಲ್ಲಿ ನಡೆಯುತ್ತಿದ್ದ ಸೈಬರ್ ವಂಚನೆ ತಡೆಗೆ ಮೆಟಾ ೨೩,೦೦೦ಕ್ಕೂ ಹೆಚ್ಚು ನಕಲಿ ಫೇಸ್‌ಬುಕ್ ಖಾತೆಗಳನ್ನು ತೆಗೆದುಹಾಕಿದೆ. ಡೀಪ್‌ಫೇಕ್ ವೀಡಿಯೋಗಳ ಮೂಲಕ ಹೂಡಿಕೆ ಸಲಹೆ ನೀಡಿ ವಂಚಿಸಲಾಗುತ್ತಿತ್ತು. ಮೆಟಾ ಸುರಕ್ಷತೆ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಸರ್ಕಾರದೊಂದಿಗೆ ಸಹಕರಿಸುತ್ತಿದೆ. ಜನರಲ್ಲಿ ಡಿಜಿಟಲ್ ಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಿದೆ.

ದೆಹಲಿ (ಮೇ 11): ಭಾರತ ಮತ್ತು ಬ್ರೆಜಿಲ್‌ನ ಲಕ್ಷಾಂತರ ಬಳಕೆದಾರರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ವ್ಯಾಪಕ ಸೈಬರ್ ವಂಚನೆ ಚಟುವಟಿಕೆಗಳ ವಿರುದ್ಧ ಮೆಟಾ ತೀವ್ರ ಕ್ರಮ ಕೈಗೊಂಡಿದ್ದು, 23,000 ಕ್ಕೂ ಹೆಚ್ಚು ನಕಲಿ ಫೇಸ್‌ಬುಕ್ ಪುಟಗಳು ಮತ್ತು ಖಾತೆಗಳನ್ನು ತೆಗೆದುಹಾಕಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಂಚನೆ ಚಟುವಟಿಕೆಯಲ್ಲಿ ಪ್ರಸಿದ್ಧ ಯೂಟ್ಯೂಬರ್‌ಗಳು, ಕ್ರಿಕೆಟ್ ತಾರೆಯರು ಮತ್ತು ಉದ್ಯಮಿಗಳ ಡೀಪ್‌ಫೇಕ್ ವೀಡಿಯೋಗಳನ್ನು ಬಳಸಿ, ಹೂಡಿಕೆ ಸಲಹೆಗಳ ನೆಪದಲ್ಲಿ ಜನರನ್ನು ಮೋಸಗೊಳಿಸಲಾಗುತ್ತಿತ್ತು. ಬಳಕೆದಾರರನ್ನು ವಾಟ್ಸಾಪ್ ಅಥವಾ ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಕರೆದ ಬಳಿಕ, ನಕಲಿ ವೆಬ್‌ಸೈಟ್‌ಗಳಿಗೆ ಕಳುಹಿಸಿ ಹಣ ವಂಚಿಸಲಾಗುತ್ತಿತ್ತು.

ನಕಲಿ ವೀಡಿಯೋ, ಡೀಪ್‌ಫೇಕ್‌ಗಳ ಮೂಲಕ ವಂಚನೆ: ವಂಚಕರು ಜನಪ್ರಿಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ವೀಡಿಯೋಗಳನ್ನು ತಯಾರಿಸಿ ಹೂಡಿಕೆಗೆ ಆಹ್ವಾನಿಸುತ್ತಿದ್ದರು. ಈ ಮೂಲಕ ಜನರಲ್ಲಿ ನಂಬಿಕೆ ಉಂಟುಮಾಡಿ ಅವರ ಹಣವನ್ನು ಎತ್ತಿಹಾಕುತ್ತಿದ್ದರು. ಈ ರೀತಿಯ ವಂಚನೆಗಳಲ್ಲಿ ನಿರಂತರವಾಗಿ ಹೊಸ ತಂತ್ರಗಳನ್ನು ಬಳಸಲಾಗುತ್ತಿತ್ತು.

ಮೆಟಾದ ತಕ್ಷಣದ ಪ್ರತಿಕ್ರಿಯೆ
ಮಾರ್ಚ್ ತಿಂಗಳಲ್ಲಿ ಇಂತಹ 23,000 ಕ್ಕೂ ಹೆಚ್ಚು ನಕಲಿ ಖಾತೆಗಳನ್ನು ಮತ್ತು ಪುಟಗಳನ್ನು ತೆಗೆದುಹಾಕಲಾಗಿದೆ. ಮೆಟಾ ತನ್ನ ವೇದಿಕೆಗಳಲ್ಲಿ ಸುರಕ್ಷತೆಯ ಮಟ್ಟ ಹೆಚ್ಚಿಸಲು ತಂತ್ರಜ್ಞಾನ, ನಿಯಮಗಳು ಮತ್ತು ಸಾರ್ವಜನಿಕ ಜಾಗೃತಿಗೆ ಒತ್ತು ನೀಡುತ್ತಿದೆ ಎಂದು ತಿಳಿಸಿದೆ.

ಸರ್ಕಾರದ ಸಹಕಾರ: 
ಮೆಟಾ ಭಾರತ ಸರ್ಕಾರದ DoT (ದೂರಸಂಪರ್ಕ ಇಲಾಖೆ), DoCA (ಗ್ರಾಹಕ ವ್ಯವಹಾರಗಳ ಇಲಾಖೆ), ಹಾಗೂ ಭಾರತೀಯ ಸೈಬರ್ ಅಪರಾಧ ಕೇಂದ್ರ (I4C) ಇತ್ಯಾದಿ ಸಂಸ್ಥೆಗಳೊಂದಿಗೆ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ರಾಜ್ಯ ಪೊಲೀಸ್ ಇಲಾಖೆ ಮತ್ತು ಇತರ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರಗಳನ್ನೂ ಆಯೋಜಿಸಿದೆ.

ಕೋಟ್ಯಂತರ ಫೇಸ್‌ಬುಕ್ ಬಳಕೆದಾರರ ದೇಶ ಭಾರತ: ಭಾರತದಲ್ಲಿ ಮಾತ್ರ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 375 ಮಿಲಿಯನ್ (37.5 ಕೋಟಿ) ಕ್ಕೂ ಅಧಿಕವಾಗಿದೆ. ಈ ಪ್ರಮಾಣದಲ್ಲಿ ಬಳಕೆದಾರರು ಇರುವುದರಿಂದ ಈ ರೀತಿಯ ಸೈಬರ್ ವಂಚನೆಗಳು ಭಾರತಕ್ಕೆ ದೊಡ್ಡ ಆತಂಕವಾಗಿದೆ. ಕೆಲವರು ತಮ್ಮ ಖಾತೆಗಳು ಡಿಲೀಟ್ ಆಗಿರುವುದಕ್ಕೆ ಬೇಸರ ವ್ಯಕ್ತಪಡಿಸುವವರೂ ಇದ್ದಾರೆ. ಇನ್ನು ಕೆಲವು ಖಾತೆಗಳಿಗೆ ಆದಾಯ ಬರುತ್ತಿದ್ದಲ್ಲಿ ಅಂತಹ ಖಾತೆಗಳನ್ನು ಡಿಲೀಟ್ ಮಾಡಿದಲ್ಲಿ ಸಾರ್ವಜನಿಕ ಜೀವನದಲ್ಲಿ ಸಾಮಾಜಿಕ ಜಾಲತಾಣದ ಆದಾಯದ ಮೂಲವನ್ನು ಕಡಿತ ಮಾಡಿದಂತಾಗುತ್ತದೆ ಎಂಬ ಆತಂಕ ಕೂಡ ಎದುರಾಗಿದೆ.

ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ: ಮೆಟಾ ಈಗ ಆನ್‌ಲೈನ್ ಹೂಡಿಕೆ ವಂಚನೆಗಳನ್ನು ತಡೆಗಟ್ಟಲು ಮತ್ತು ಜನರಲ್ಲಿ ಡಿಜಿಟಲ್ ಜಾಗೃತಿ ಮೂಡಿಸಲು ಹಲವಾರು ಮಾಹಿತಿಪೂರ್ಣ ಅಭಿಯಾನಗಳನ್ನು ಕೈಗೊಂಡಿದೆ. ಇದರಲ್ಲಿ ಸುರಕ್ಷಿತ ಹೂಡಿಕೆ, ನಕಲಿ ಲಿಂಕ್‌ಗಳನ್ನು ಗುರುತಿಸುವ ವಿಧಾನ, ಮತ್ತು ಡೀಪ್‌ಫೇಕ್ ವೀಡಿಯೋಗಳನ್ನು ತಕ್ಷಣ ಪತ್ತೆಹಚ್ಚುವ ತಂತ್ರಜ್ಞಾನಗಳೂ ಸೇರಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ