ಪಾಕಿಸ್ತಾನದ ಮೇಲೆ ಒಂದು ಅಣು ಬಾಂಬ್‌ ಬಿದ್ದರೆ.... ಏನಾಗುತ್ತದೆ?

Published : May 11, 2025, 04:50 PM ISTUpdated : May 12, 2025, 09:49 AM IST
ಪಾಕಿಸ್ತಾನದ ಮೇಲೆ ಒಂದು ಅಣು ಬಾಂಬ್‌ ಬಿದ್ದರೆ.... ಏನಾಗುತ್ತದೆ?

ಸಾರಾಂಶ

ಲಾಹೋರ್‌ನಂತಹ ನಗರದ ಮೇಲೆ ಪರಮಾಣು ಬಾಂಬ್ ದಾಳಿಯ ಪರಿಣಾಮ ಏನು ಗೊತ್ತೆ? ಲಕ್ಷಾಂತರ ಜನರ ಸಾವು, ವ್ಯಾಪಕ ವಿನಾಶ ಮತ್ತು ದೀರ್ಘಕಾಲೀನ ಪರಿಸರ ಹಾನಿ ಸೇರಿದಂತೆ ಭೀಕರ ಪರಿಣಾಮಗಳನ್ನು ಕಾಣಬಹುದು. ಇದರ ಪರಿಣಾಮ ಪಾಕಿಸ್ತಾನದ ಗಡಿ ದಾಟಿಯೂ ಹರಡಬಹುದು.

ಭಾರತ ಮತ್ತು ಪಾಕಿಸ್ತಾನದ ನಡುವೆ ತಲೆದೋರಿದ್ದ ಉದ್ವಿಗ್ನ ಪರಿಸ್ಥಿತಿ ಸ್ವಲ್ಪ ಶಮನಗೊಂಡಿದೆ. ಆದರೆ ಪೂರ್ತಿ ತಿಳಿಯಾಗಿಲ್ಲ. ಪ್ರಧಾನಿಯ ಮಾತು ಕೇಳದ, ತಲೆ ಕೆಟ್ಟ ಸೈನ್ಯಾಧಿಕಾರಿಗಳೇ ಅಲ್ಲಿರುವುದರಿಂದ, ಯಾವಾಗ ಬೇಕಿದ್ದರೂ ಅವರು ತಲೆಹರಟೆ ಮುಂದುವರಿಸಬಹುದು. ಎರಡೂ ದೇಶಗಳ ನಡುವೆ ಯುದ್ಧ ನಡೆದರೆ, ಪರಮಾಣು ಬಾಂಬ್‌ ದಾಳಿ ಕೂಡ ನಡೆಸಬೇಕಾಗಬಹುದು. ತಿಳಿಯಬೇಕಾದ ವಿಷಯ ಎಂದರೆ, ಈಗಾಗಲೇ ಬ್ರಹ್ಮೋಸ್‌ ಕ್ಷಿಪಣಿ ಪ್ರಯೋಗವನ್ನು ಪಾಕ್‌ ಮೇಲೆ ಭಾರತ ಮಾಡಿದೆ. ಈ ಬ್ರಹ್ಮೋಸ್‌ ಕ್ಷಣಾರ್ಧದಲ್ಲಿ ಪರಮಾಣು ಬಾಂಬ್‌ ಅನ್ನು ಪಾಕ್‌ನ ರಾಜಧಾನಿಯೊಳಗೆ ತಂದು ಸುರಿಯಬಲ್ಲುದು. ಹಾಗಾದರೆ, ಉದಾಹರಣೆಗೆ, ಲಾಹೋರ್‌ ನಗರದ ಮೇಲೆ  ನಾವು ಒಂದು ನ್ಯೂಕ್ಲಿಯರ್‌ ಬಾಂಬ್‌ ಹಾಕಿದೆವು ಎಂದಿಟ್ಟುಕೊಳ್ಳಿ. ಆಗ ಏನಾಗುತ್ತದೆ?
 
ಪರಮಾಣು ಬಾಂಬ್‌ನ ಸಾಮರ್ಥ್ಯದ ಬಗ್ಗೆ ನೀವು ತಿಳಿದಿದ್ದರೆ ನಿಮಗೆ ಗೊತ್ತಿರುತ್ತದೆ- ಒಂದೇ ಪರಮಾಣು ಬಾಂಬ್ ಇಡೀ ನಗರವನ್ನು ನಾಶಮಾಡುವ ಮತ್ತು ಅಲ್ಲಿರುವ ಜನರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಲಾಹೋರ್ ನಗರದಲ್ಲಿ ಕೇವಲ ಒಂದು ಪರಮಾಣು ಬಾಂಬ್ ಸ್ಫೋಟಗೊಂಡರೆ ಸಾಕು, ಇಡೀ ಲಾಹೋರ್ ನಗರ ಬೂದಿಯಾಗುತ್ತದೆ. ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಈ ಬಾಂಬ್ ಕುರಿತು ಸಂಶೋಧನಾ ವರದಿಯನ್ನು ಪ್ರಕಟಿಸಿದರು. ಇದರಲ್ಲಿ, 10 ಕಿಲೋಟನ್ ಪರಮಾಣು ಸ್ಫೋಟಗೊಂಡರೆ ಆಗುವ ಪರಿಣಾಮವನ್ನು ವಿಶ್ಲೇಷಿಸಲಾಗಿದೆ. ಬಾಂಬ್‌ನ ಗಾತ್ರ ಹಿರೋಷಿಮಾದ ಮೇಲೆ ಅಮೆರಿಕ ಎಸೆದ ಬಾಂಬ್‌ನಷ್ಟೇ. ಅದರಲ್ಲಿ 1,50,000 ಜನರು ಸತ್ತಿದ್ದರು. ಹಿರೋಷಿಮಾ ಮತ್ತು ನಾಗಾಸಾಕಿ ಬಾಂಬ್‌ಗಳ ಗಾತ್ರಕ್ಕೆ ಸಮಾನವಾದ 10 ಕಿಲೋಟನ್ ಪರಮಾಣು ಬಾಂಬ್‌, ನೆಲದ ಸ್ಫೋಟದ 2-ಮೈಲಿ (3.2 ಕಿಮೀ) ವ್ಯಾಪ್ತಿಯೊಳಗೆ ಇರುವ ಸುಮಾರು 50% ಜನರನ್ನು ತಕ್ಷಣವೇ ಕೊಲ್ಲುತ್ತದೆ. ಈಗ ಜನದಟ್ಟಣೆ ಮೊದಲಿಗಿಂತ ಹೆಚ್ಚಿರುವುದರಿಂದ, ತಕ್ಷಣವೇ ಸಾಯುವ ಜನರ ಸಂಖ್ಯೆ ಇನ್ನೂ ಹೆಚ್ಚಿರಬಹುದು. 

ಈ 15 ಕಿಲೋಟನ್ ಪರಮಾಣು ಬಾಂಬ್ ಸ್ಫೋಟಗೊಂಡರೆ, ಅತಿ ಹೆಚ್ಚಿನ ತಾಪಮಾನದ ಬೆಂಕಿ ಸೆಕೆಂಡ್‌ನಲ್ಲಿ ಆವರಿಸಿ (ಲಕ್ಷಾಂತರ ಡಿಗ್ರಿ ಸೆಲ್ಸಿಯಸ್ ಶಾಖ) ಎಲ್ಲವನ್ನೂ ಆವಿಯಾಗಿಸಬಹುದು. ದೂರದಲ್ಲಿರುವವರಲ್ಲಿ ತೀವ್ರವಾದ ಸುಟ್ಟಗಾಯ ಆಗಬಹುದು. ಶಕ್ತಿಶಾಲಿ ಸ್ಫೋಟದ ತರಂಗಗಳು ಗಾಯಗಳು ಮತ್ತು ಸಾವಿಗೆ ಕಾರಣವಾಗಬಹುದು. ಸ್ಫೋಟದ ಸಮಯದಲ್ಲಿ ಗಾಮಾ ಮತ್ತು ನ್ಯೂಟ್ರಾನ್ ವಿಕಿರಣ ಬಿಡುಗಡೆಯಾಗುತ್ತದೆ. ಬದುಕುಳಿದವರಲ್ಲಿ ಇದು ವಿಕಿರಣ ಕಾಯಿಲೆಯಂತಹ ತಕ್ಷಣದ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಸ್ಫೋಟವೇ ತಕ್ಷಣದ 1.6 ಲಕ್ಷದಿಂದ 8.6 ಲಕ್ಷ ಸಾವುಗಳಿಗೆ ಕಾರಣವಾಗಬಹುದು. ಇನ್ನು ಗಾಯ, ಶಾಕ್‌, ಕಾಯಿಲೆಗಳಿಂದ ಸಾಯುವವರ ಪ್ರಮಾಣ ಇದರ ಎರಡರಷ್ಟಿರಬಹುದು. ಲಾಹೋರ್‌ನಲ್ಲಿಯೂ ಅದೇ ಸಂಖ್ಯೆಯ ಸಾವುಗಳು ಸಂಭವಿಸಬಹುದು. ಪರಮಾಣು ಬಾಂಬ್‌ನ ಗಾತ್ರ ಇನ್ನಷ್ಟು ದೊಡ್ಡದಾಗಿದ್ದರೆ ಮತ್ತು ಅದರ ಸಾಮರ್ಥ್ಯ ಹೆಚ್ಚಿದ್ದರೆ, ಲಾಹೋರ್ ನಗರವನ್ನೇ ಅದು ನಾಶಪಡಿಸಬಹುದು. ಇದು ಲಾಹೋರ್‌ಗೆ ಮಾತ್ರವಲ್ಲದೆ ಲಾಹೋರ್ ಸುತ್ತಮುತ್ತಲಿನ ಪ್ರದೇಶಗಳಿಗೂ ಸಾಕಷ್ಟು ಹಾನಿಯನ್ನುಂಟುಮಾಡಬಹುದು.

ಪಾಕಿಸ್ತಾನವನ್ನು 4 ರಾಷ್ಟ್ರವಾಗಿ ಚಿಂದಿ ಚಿಂದಿ ಮಾಡಬೇಕಿತ್ತು: ವಿಂಗ್‌ ಕಮಾಂಡರ್‌ ಸುದರ್ಶನ್‌

ಬರೀ ಲಾಹೋರ್‌ ಮೇಲೆ ಮೇಲೆ ಪರಮಾಣು ಬಾಂಬ್ ದಾಳಿ ಮಾಡಿದರೂ, ಇಡೀ ಪಾಕಿಸ್ತಾನ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಗಾಳಿಯ ಗುಣಮಟ್ಟದಲ್ಲಿ ಭಾರಿ ಬದಲಾವಣೆ ಉಂಟಾಗುತ್ತದೆ. ಎಲ್ಲ ಬಗೆಯ ವಿಕಿರಣ ಹರಡುತ್ತದೆ. ಚರ್ಮರೋಗದಿಂದ ಹಿಡಿದು ಕ್ಯಾನ್ಸರ್‌ವರೆಗೆ ಹಲವು ರೋಗಗಳು ವಿಕಿರಣಶೀಲತೆಯಿಂದ ಕಾಣಿಸಿಕೊಳ್ಳುತ್ತವೆ. ಉರಿಯೂತ ಮತ್ತು ಫಲವತ್ತತೆಯಲ್ಲಿ ಇಳಿಕೆ ದೀರ್ಘಾವಧಿಯಲ್ಲಿ ಕಂಡುಬರುತ್ತದೆ. ಇದರ ದುಷ್ಪರಿಣಾಮಗಳು ಸುಮಾರು 10,000 ಚದರ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳಬಹುದು. ಅಂದರೆ ಇದರ ಪರಿಣಾಮ ಪಂಜಾಬ್‌, ಕಾಶ್ಮೀರಗಳಿಗೂ ಆಗಬಹುದು. 

ಪರಮಾಣು ಯುದ್ಧದ ಸಮಯದಲ್ಲಿ ವಾತಾವರಣಕ್ಕೆ ಹೋದ ಬೂದಿ ಮತ್ತು ಮಸಿ ಆಕಾಶವನ್ನು ಕವಿದು, ಸೂರ್ಯನ ಶಾಖವನ್ನು ನೆಲಕ್ಕೆ ಬೀಳದಂತೆ ತಡೆಗಟ್ಟಿ  ಹವಾಮಾನ ಇದ್ದಕ್ಕಿದ್ದಂತೆ ತಂಪಾಗುವ ಗಂಭೀರ ಪರಿಣಾಮವನ್ನು ಬೀರಬಹುದು. ಇಂಥ ಹಲವು ಸ್ಫೋಟಗಳು ಆದರೆ ಜಾಗತಿಕ ತಾಪಮಾನವೇ ಹಿಮಯುಗದ ತಾಪಮಾನದ ಕಡೆ ಸರಿಯಬಹುದು. ಇದು ಜಾಗತಿಕ ಕೃಷಿಯ ಮೇಲೆ ದೊಡ್ಡ ದುಷ್ಪರಿಣಾಮ ಬೀರಿ, ಕೋಟ್ಯಂತರ ಜನ ಊಟಕ್ಕಿಲ್ಲದೆ ಸಾಯಬಹುದು. 

ಭಾರತದ ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ; ಪಾಕ್‌ಗೆ ಎಚ್ಚರಿಕೆ ಕೊಟ್ಟ ವಾಯುಪಡೆ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!