ಸಿಕ್ ಲೀವ್ ಪಡೆದಿದ್ದಕ್ಕೆ ಕೆಲಸದಿಂದ ವಜಾ: ಕಂಪನಿ ವಿರುದ್ಧ ಕೇಸ್ ದಾಖಲಿಸಿ ಗೆದ್ದ ಉದ್ಯೋಗಿ

Published : Nov 12, 2025, 03:42 PM IST
judgement on sick leave

ಸಾರಾಂಶ

employee fired for walking on sick leave: ಅನಾರೋಗ್ಯದ ರಜೆ ಪಡೆದು 16,000 ಹೆಜ್ಜೆ ನಡೆದಿದ್ದಕ್ಕೆ ಚೀನಾದಲ್ಲಿ ಉದ್ಯೋಗಿಯೊಬ್ಬರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಕಂಪನಿ ವಿರುದ್ಧ ಕೇಸು ಹಾಕಿ ಗೆದ್ದ ಆತನಿಗೆ 14  ಲಕ್ಷ ರೂ ಹಣ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಅನಾರೋಗ್ಯದ ರಜೆ ಪಡೆದವನಿಗೆ ಕೆಲಸದಿಂದ ವಜಾ ಶಿಕ್ಷೆ:

ಹುಷಾರಿಲ್ಲ ಎಂದು ಸಿಕ್‌ ಲೀವ್(ಅನಾರೋಗ್ಯದ ರಜೆ) ಪಡೆದು 16 ಸಾವಿರ ಸ್ಟೆಪ್ ವಾಕ್ ಮಾಡಿದ ವ್ಯಕ್ತಿಯನ್ನು ಸಂಸ್ಥೆಯೊಂದು ಕೆಲಸದಿಂದ ತೆಗೆದು ಹಾಕಿದೆ. ಈ ಘಟನೆ ಚೀನಾದ ಜಿಯಾಂಗ್ಸು ಎಂಬಲ್ಲಿ ಈ ಘಟನೆ ನಡೆದಿದೆ. ಚೇನ್ ಎಂಬ ಹೆಸರಿನ ಉದ್ಯೋಗಿ ತಾನು ಕೆಲಸ ಮಾಡುವ ಸಂಸ್ಥೆಗೆ ತನಗೆ ಅನಾರೋಗ್ಯ ಎಂದು ರಜೆ ಹಾಕಿದ್ದ. ತನ್ನ ಅನಾರೋಗ್ಯಕ್ಕೆ ವೈದ್ಯಕೀಯ ಪ್ರಮಾಣಪತ್ರವನ್ನು ನೀಡಿಯೇ ಆತ ರಜೆ ಪಡೆದಿದ್ದ, ವೈದ್ಯರು ಆತನಿಗೆ ಕಾಲು ನೋವು ಹಾಗೂ ಬೆನ್ನು ನೋವಿನ ಕಾರಣಕ್ಕೆ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಬರೆದಿದ್ದರು. ಆದರೆ ಮೊದಲಿಗೆ ಹಾಕಿದ ರಜೆಯ ಸಮಯದಲ್ಲಿ ಆತನ ಸಮಸ್ಯೆ ಸಂಪೂರ್ಣವಾಗಿ ಗುಣಮುಖವಾಗಿರಲಿಲ್ಲ, ಹೀಗಾಗಿ ಆತ ತನ್ನ ರಜೆಯನ್ನ ಇನ್ನಷ್ಟು ದಿನ ಮುಂದುವರಿಸುವಂತೆ ತಾನು ಕೆಲಸ ಮಾಡುವ ಸಂಸ್ಥೆಗೆ ಕೇಳಿದ್ದ.

ಉದ್ಯೋಗಿ ಚಲನವಲನದ ಮೇಲೆ ಕಣ್ಣಿಟ್ಟ ಸಂಸ್ಥೆ

ಈ ವೇಳೆ ಆತ ಕೆಲಸ ಮಾಡುತ್ತಿದ್ದ ಸಂಸ್ಥೆಯ ಬಗ್ಗೆ ಆತನ ಬಗ್ಗೆ ಅನುಮಾನ ಮೂಡಿದ್ದು, ಆತನ ಬಗ್ಗೆ ತನಿಖೆ ಮಾಡುವುದಕ್ಕೆ ಶುರು ಮಾಡಿದೆ. ಈ ವೇಳೆ ಸಂಸ್ಥೆ ಆತನ ಎಲ್ಲಾ ಚಲನವಲನಗಳು ಆತನ ಡಿಜಿಟಲ್ ದಾಖಲೆಗಳ ಮೇಲೆ ಕಣ್ಣಿಟ್ಟಿತ್ತು. ಇದರಿಂದ ಆತ ತನ್ನ ಕಾಲು ನೋವಿಗೆ ರಜೆ ತೆಗೆದುಕೊಂಡ ಸಮಯದಲ್ಲೇ ದಿನಾ 16 ಸಾವಿರ ಸ್ಟೆಪ್ ವಾಕ್ ಮಾಡಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ. ಅಲ್ಲದೇ ಆತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಸಂಸ್ಥೆ ಆತ ಸಿಸಿಟಿವಿ ದೃಶ್ಯದಲ್ಲಿ ಒಂದು ಕಡೆ ಓಡುತ್ತಿರುವುದನ್ನು ಗಮನಿಸಿದೆ.

ಹೀಗಾಗಿ ಈತ ಸುಳ್ಳು ರಜೆಗಳನ್ನು ಹಾಕಿ ಎಂಜಾಯ್ ಮಾಡ್ತಿದ್ದಾನೆ ಎಂದು ಭಾವಿಸಿದ ಆತನ ಸಂಸ್ಥೆ ಆತನನ್ನು ಕೆಲಸದಿಂದ ವಜಾಗೊಳಿಸಿತ್ತು. ಇತ್ತ ಇದರ ಬಗ್ಗೆ ಅರಿವಿಲ್ಲದ ಚೇನ್ ಕಚೇರಿಗೆ ಹೋದಾಗ ಗೇಟ್‌ನಲ್ಲೇ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಪ್ರಶ್ನಿಸಿದಾಗ ಕೆಲಸದಿಂದ ತೆಗೆದು ಹಾಕಿರುವುದಾಗಿ ಸಂಸ್ಥೆ ಹೇಳಿದ್ದು, ಇದರ ವಿರುದ್ಧ ಚೇನ್ ಕೋರ್ಟ್‌ ಮೆಟ್ಟಿಲೇರಿ ಗೆದ್ದು ಬಂದಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವೂ ಕಂಪನಿಗೆ ದಂಡ ವಿಧಿಸಿದೆ. ಚೇನ್‌ ಅವರನ್ನು ಕೆಲಸದಿಂದ ಇದ್ದಕ್ಕಿದ್ದಂತೆ ತೆಗೆದು ಹಾಕಿದ್ದಕ್ಕೆ 14 ಲಕ್ಷ ರೂಪಾಯಿ(118799ಯುವಾನ್) ದಂಡ ವಿಧಿಸುವಂತೆ ಆದೇಶಿಸಿದೆ.

ಕಂಪನಿ ನೀಡಿದ ಸಾಕ್ಷ್ಯ ಏನು? ಚೇನ್ ವಾದಿಸಿ ಗೆದ್ದಿದ್ದು ಹೇಗೆ?

ಕಾಲು ನೋವಿನ ಸಮಸ್ಯೆ ಹೇಳಿ ರಜೆ ಹಾಕಿದ್ದ ಚೇನ್ ಅವರನ್ನು ಕೆಲಸದಿಂದ ತೆಗೆದು ಹಾಕಿದ ಕಂಪನಿ ಈ ಬಗ್ಗೆ ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಆತ ಓಡುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನು ಹಂಚಿಕೊಂಡಿತ್ತು. ಅಲ್ಲದೇ ಆ ದಿನ ಆತ 16 ಸಾವಿರ ಹೆಜ್ಜೆ ಹಾಕಿದ್ದಾರೆ ಎಂದು ತೋರಿಸುವ ಅಪ್ಲಿಕೇಷನ್‌ನ ದಾಖಲೆಗಳನ್ನು ನೀಡಿತ್ತು. ಆದರೆ ಕಂಪನಿಯ ಆ ಸಾಕ್ಷ್ಯಗಳು ವಿಸ್ವಾಸಾರ್ಹ ಅಲ್ಲ ಎಂದು ಚೇನ್ ವಾದಿಸಿದರು. ತಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ತಮ್ಮ ಸೊಂಟ ಹಾಗೂ ಪಾದದ ವೈದ್ಯಕೀಯ ಸ್ಕ್ಯಾನ್‌ಗಳು ಸೇರಿದಂತೆ ಸಂಪೂರ್ಣ ಆಸ್ಪತ್ರೆ ದಾಖಲೆಗಳನ್ನು ಅವರು ನೀಡಿದರು.

ಚೇನ್ ಪರ ತೀರ್ಪು ನೀಡಿದ ನ್ಯಾಯಾಲಯ

ನಂತರ ಇಬ್ಬರ ದೂರುಗಳನ್ನು ಪರಿಗಣಿಸಿದ ನ್ಯಾಯಾಲಯವೂ ಚೇನ್ ಪರ ತೀರ್ಪು ನೀಡಿದೆ. ಚೇನ್ ಅವರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ನ್ಯಾಯಾಲಯವೂ ಕಂಪನಿಗೆ 118,779 ಯುವಾನ್ ಎಂದರೆ 16,700 ಯುಎಸ್ ಡಾಲರ್‌ನಷ್ಟು ಪರಿಹಾರವನ್ನು ಚೇನ್‌ಗೆ ನೀಡುವಂತೆ ಆದೇಶಿಸಿದೆ.ಚೇನ್ ಅವರ ಅನಾರೋಗ್ಯದ ರಜೆ ಸರಿಯಾಗಿಯೇ ಇದೆ ಹಾಗೂ ಅವರ ವಜಾವೂ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಆದರೆ ಈ ವಿಚಾರದಲ್ಲಿ ಉದ್ಯೋಗಿಯ ಮೇಲೆ ಕಣ್ಣಿಡುವುದಕ್ಕೆ ಕಂಪನಿ ಬಳಸಿದ ತಂತ್ರಗಳ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗಿದೆ. ಕೆಲಸದ ಸ್ಥಳಕ್ಕೆ ಗೌಪ್ಯತೆ ಹಾಗೂ ಸಿಬ್ಬಂದಿ ಮೇಲೆ ಕಣ್ಣಿಡುವ ತಂತ್ರಜ್ಞಾನದ ಬಳಕೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಸ್ಮಾರ್ಟ್‌ಫೋನ್‌ಗಳು, ಫಿಟ್‌ನೆಸ್ ಟ್ರ್ಯಾಕರ್‌ಗಳು ಮತ್ತು ಇತರ ಸ್ಮಾರ್ಟ್‌ ಫೋನ್ ಸಾಧನಗಳೊಂದಿಗೆ ಕಂಪನಿಗಳು ತಮ್ಮ ಉದ್ಯೋಗಿಗಳು ಎಷ್ಟು ಸಕ್ರಿಯರಾಗಿದ್ದಾರೆ ಎಂಬುದನ್ನು ಅವರ ಕೆಲಸದ ಅವಧಿಯ ನಂತರವೂ ನೋಡುವುದು ವೈಯಕ್ತಿಕ ಹಕ್ಕಿನ ಉಲ್ಲಂಘನೆಯಾಗಿದೆ.

ಇದನ್ನೂ ಓದಿ: ಮದುವೆ ಮನೆಯಲ್ಲಿ ಮಸಣದ ಪ್ಲಾನ್: ಮಸೂದ್ ಅಜರ್ ಸೋದರಿ ಜೊತೆ ನೇರ ಸಂಪರ್ಕ ಹೊಂದಿದ್ದ ಶಾಹೀನ್

ಇದನ್ನೂ ಓದಿ: ದೆಹಲಿ ಸ್ಫೋಟದ ನಂತರ ತೀವ್ರಗೊಂಡ ವಾಹನ ತಪಾಸಣೆ: ಕಾರಲ್ಲಿ 1 ಕೋಟಿ ಮೊತ್ತದ ದಾಖಲೆ ಇಲ್ಲದ ನಗದು ಪತ್ತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!