ಅಮೆರಿಕಾದಲ್ಲಿ ಅಪಘಾತದ ಬಳಿಕ ಬೆಂಕಿಗಾಹುತಿಯಾದ ಕಾರು: ನಾಲ್ವರು ಭಾರತೀಯರು ಸಾವು

By Anusha Kb  |  First Published Sep 4, 2024, 12:20 PM IST

ವೇಗವಾಗಿ ಬಂದ ಟ್ರಕೊಂದು ಭಾರತೀಯರಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಕೂಡಲೇ ಕಾರಿನಲ್ಲಿ ಬೆಂಕಿ ಆವರಿಸಿದ್ದು, ಕಾರಿನಲ್ಲಿದ್ದ ನಾಲ್ವರು ಭಾತೀಯರು ಸುಟ್ಟು ಕರಕಲಾಗಿದ್ದಾರೆ. ಇವರೆಲ್ಲರೂ ಕಾರು ಪೂಲಿಂಗ್ ಅಪ್ಲಿಕೇಶನ್‌ ಸಹಾಯದಿಂದ ಕಾರು ಬುಕ್ ಮಾಡಿಕೊಂಡು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.


ನ್ಯೂಯಾರ್ಕ್‌: ಅಮೆರಿಕಾದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಒಬ್ಬರು ಯುವತಿ ಸೇರಿದಂತೆ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ.  ಐದು ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಟ್ರಕೊಂದು ಭಾರತೀಯರಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಕೂಡಲೇ ಕಾರಿನಲ್ಲಿ ಬೆಂಕಿ ಆವರಿಸಿದ್ದು, ಕಾರಿನಲ್ಲಿದ್ದ ನಾಲ್ವರು ಭಾತೀಯರು ಸುಟ್ಟು ಕರಕಲಾಗಿದ್ದಾರೆ. ಇವರೆಲ್ಲರೂ ಕಾರು ಪೂಲಿಂಗ್ ಅಪ್ಲಿಕೇಶನ್‌ ಸಹಾಯದಿಂದ ಕಾರು ಬುಕ್ ಮಾಡಿಕೊಂಡು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದ ನಂತರ ಇವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಾರು ಪೂಲಿಂಗ್‌ನಲ್ಲಿ ಇವರು ಮೊದಲೇ ಬುಕ್ ಮಾಡಿದ್ದರಿಂದಾಗಿ ಮೃತಪಟ್ಟಿರುವುದೇ ಇವರೇ ನಾಲ್ವರು ಎಂಬುದು ಗೊತ್ತಾಗಿದೆ. ಆದರೆ ಮೃತರ ದೇಹಗಳನ್ನು ಗುರುತಿಸಲು ಅಧಿಕಾರಿಗಳು ಡಿಎನ್‌ಒ ಮೊರೆ ಹೋಗಿದ್ದಾರೆ. ಅಮೆರಿಕಾದ ಅರ್ಕಾನ್ಸಾಸ್‌ನ ಬೆಂಟನ್‌ವಿಲ್ಲೆಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. 

ಈ ದುರಂತದಲ್ಲಿ ಮೃತಪಟ್ಟವರನ್ನು ಆರ್ಯನ್ ರಘುನಾಥ್ ಓರಂಪಾಟಿ, ಫಾರೂಕ್ ಶೇಕ್, ಲೋಕೇಶ್ ಪಾಲಾಚಾರ್ಲ ಮತ್ತು ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ. ಇವರಲ್ಲಿ ಓರಂಪತಿ ಮತ್ತು ಅವರ ಸ್ನೇಹಿತ ಫಾರೂಕ್‌ ಶೇಕ್ ಡಲ್ಲಾಸ್‌ನಲ್ಲಿರುವ ತನ್ನ ಸೋದರ ಸಂಬಂಧಿಯೊಬ್ಬನನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದರು. ಹಾಗೆಯೇ ಲೋಕೇಶ್ ಪಾಲಾಚಾರ್ಲ ಅವರು ಬೆಂಟನ್‌ವಿಲ್ಲೆಯಲ್ಲಿರುವ ತಮ್ಮ  ಪತ್ನಿಯನ್ನು ಭೇಟಿಯಾಗಲು ಹೋಗುತ್ತಿದ್ದರು.  ಹಾಗೆಯೇ ಮೃತ ಯುವತಿ ದರ್ಶಿನಿ ವಾಸುದೇವನ್ ಅವರು ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದು ಬೆಂಟನ್‌ವಿಲ್ಲೆಯಲ್ಲಿರುವ  ತನ್ನ ಚಿಕ್ಕಪ್ಪನ ಬಳಿಗೆ ಹೋಗುತ್ತಿದ್ದರು. ಇವರೆಲ್ಲರೂ ಕಾರ್‌ಪೂಲಿಂಗ್ ಅಪ್ಲಿಕೇಷನ್ ಮೂಲಕ ಕಾರು ಬುಕ್ ಮಾಡಿದ್ದರಿಂದ ಅಧಿಕಾರಿಗಳಿಗೆ ಇವರನ್ನು ಗುರುತಿಸಲು ಸುಲಭವಾಗಿದೆ ಎಂದು ವರದಿಯಾಗಿದೆ. 

Tap to resize

Latest Videos

undefined

ಸೂಡಾನ್‌ ಹಿಂಸಾಚಾರಕ್ಕೆ ಭಾರತೀಯ ಸೇರಿ 56 ನಾಗರಿಕರು ಬಲಿ

ಮೃತ ಯುವತಿ ದರ್ಶಿನಿ ವಾಸುದೇವನ್ ಅವರ ತಂದೆ ಮೂರು ದಿನಗಳ ಹಿಂದೆ ಟ್ವಿಟರನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಸಂಪರ್ಕಿಸಿದ್ದು, ಪುತ್ರಿಯ ಪತ್ತೆಗೆ ನೆರವಾಗುವಂತೆ ಮನವಿ ಮಾಡಿದ್ದರು.  ' ಸರ್, ನನ್ನ ಮಗಳು ದರ್ಶಿನಿ ವಾಸುದೇವನ್, ಭಾರತೀಯ ಪಾಸ್‌ಪೋರ್ಟ್ ನಂ ಟಿ 6215559 ಅನ್ನು ಹೊಂದಿದ್ದು, ಕಳೆದ 3 ವರ್ಷಗಳಿಂದ ಅಮೆರಿಕಾದಲ್ಲಿದ್ದಾರೆ,  2 ವರ್ಷಗಳ ಎಂಎಸ್ ಅಧ್ಯಯನದ ನಂತರ ಅವರು ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದು, ಟೆಕ್ಸಾಸ್‌ನಲ್ಲಿ ನೆಲೆಸಿದ್ದಾರೆ ಎಂದು ಮಾಹಿತಿ ನೀಡಿ ಅವರು ನೆರವು ಕೋರಿದ್ದರು. 

ಇತ್ತ ಈ ದುರಂತದಲ್ಲಿ ಮೃತರಾದ ಮತ್ತೊಬ್ಬ ವ್ಯಕ್ತಿ ಆರ್ಯನ್ ರಘುನಾಥ್ ಓರಂಪಾಟಿ ಅವರು ಹೈದರಾಬಾದ್ ಮೂಲದವರಾಗಿದ್ದು, ಅವರ ತಂದೆ ಸುಭಾಷ್ ಚಂದ್ರ ರೆಡ್ಡಿ ಅವರು ಹೈದರಾಬಾದ್‌ನಲ್ಲಿ ಮ್ಯಾಕ್ಸ್ ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಆರ್ಯನ್ ರಘುನಾಥ್‌ ಅವರು ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದರು. ನಂತರ ಟೆಕ್ಸಾಸ್‌ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದರು. ಕಳೆದ ಮೇ ತಿಂಗಳಲ್ಲಿ ಅವರ ಪೋಷಕರು ಮಗನ ಕಾಲೇಜಿನ ಘಟಿಕೋತ್ಸವದ ಕಾರಣಕ್ಕೆ ಅಮೆರಿಕಾಗೆ ತೆರಳಿದ್ದರು. ಕಾನ್ವೋಕೇಷನ್‌ನ ನಂತರ ಭಾರತಕ್ಕೆ ಮರಳುವಂತೆ ಮಗನಿಗೆ ಪೋಷಕರು ಹೇಳಿದ್ದರು. ಆದರ ಆತ ಇನ್ನೆರಡು ವರ್ಷ ಅಮೆರಿಕಾದಲ್ಲೇ ಕೆಲಸ ಮಾಡುವುದಾಗಿ ಹೇಳಿದ್ದ. ಆದರೆ ಅಷ್ಟರಲ್ಲೇ ಈ ದುರಂತ ಸಂಭವಿಸಿದೆ ಎಂದು ಆತನ ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ. 

ಓಮಾನ್‌ನಲ್ಲಿ ಭೀಕರ ಕಾರು ಅಪಘಾತ: ಬೆಳಗಾವಿ ಮೂಲದ ನಾಲ್ವರು ಸಜೀವ ದಹನ!

ಆರ್ಯನ್ ರಘುನಾತ್ ಅವರ ಸ್ನೇಹಿತ ಫಾರೂಕ್ ಶೇಕ್ ಕೂಡ ಹೈದರಬಾದ್ ಮೂಲದವರಾಗಿದ್ದು, ಬೆಂಟನ್‌ವಿಲ್ಲೆಯಲ್ಲಿ ವಾಸ ಮಾಡುತ್ತಿದ್ದರು. ಹಾಗೆಯೇ ತಮಿಳುನಾಡು ಮೂಲದ ದರ್ಶಿನಿ ವಾಸೋದೇವನ್ ಟೆಕ್ಸಾಸ್ನ ಫ್ರಿಸ್ಕೋದಲ್ಲಿ ನೆಲೆಸಿದ್ದರು. ಮೂಲಗಳ ಪ್ರಕಾರ ವೇಗವಾಗಿ ಬಂದ ಟ್ರಕ್ ಇವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ದೇಹ ಸಂಪೂರ್ಣ ಸುಟ್ಟು ಹೋಗಿರುವುದರಿಂದ ಗುರುತು ಖಚಿತಪಡಿಸು ಹಲ್ಲುಗಳು ಹಾಗೂ ಮೂಳೆಯ ಅವಶೇಷಗಳಿಂದ ಡಿಎನ್ಎ ಪರೀಕ್ಷೆ ನಡೆಸಿ ಮಾದರಿಯನ್ನು ಪೋಷಕರೊಂದಿಗೆ ಸರಿ ಹೊಂದಿಸಲಾಗುವುದು ಎಂದು ಸ್ಥಳೀಯ ಆಡಳಿತವೂ ಹೇಳಿದೆ. 

click me!