ಸುರಂಗದೊಳಗೆ ಹೋಗ್ತಿದ್ದಂತೆ ಕಣ್ಮರೆಯಾದ 104 ಜನರನ್ನು ಹೊತ್ತ ರೈಲು; 71 ವರ್ಷದ ಹಿಂದೆ ಹೋಯ್ತಾ ಟ್ರೈನ್?

By Mahmad Rafik  |  First Published Sep 3, 2024, 12:08 PM IST

1911 ರಲ್ಲಿ, 106 ಪ್ರಯಾಣಿಕರೊಂದಿಗೆ ರೋಮ್‌ನಿಂದ ಹೊರಟ ರೈಲು ಸುರಂಗದೊಳಗೆ ಕಣ್ಮರೆಯಾಯಿತು. ಈ ಘಟನೆಯ ಬಗ್ಗೆ ಹಲವು ಕಥೆಗಳು ಹುಟ್ಟಿಕೊಂಡವು, ಕೆಲವರು ಇದು ಮೆಕ್ಸಿಕೋದಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ, ಆದರೆ ಈ ರೈಲಿನ ನಿಜವಾದ ಭವಿಷ್ಯ ಇನ್ನೂ ನಿಗೂಢವಾಗಿದೆ.


ರೋಮ್: ಭೂಮಿ ಮೇಲೆ ಅದೆಷ್ಟೋ ನಿಗೂಢ ಘಟನೆಗಳು ನಡೆಯುತ್ತವೆ. ಆದ್ರೆ ಈ ಘಟನೆಗಳು ಹೇಗೆ ಮತ್ತು ಯಾಕೆ ನಡೆದಿದೆ ಎಂಬುದರ ಬಗ್ಗೆ ಎಲ್ಲವೂ ಅಸ್ಪಷ್ಟ. ಉತ್ತರ ಹುಡುಕುತ್ತಾ ಹೋದಂತೆ ಎಲ್ಲವೂ ಗೊಂದಲದಲ್ಲಿಯೇ ಉಳಿಯೋದರಿಂದ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಂತಹ ರಹಸ್ಯಗಳ ನಿಗೂಢತೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅಂತಿಮವಾಗಿ ಯಾವುದೇ ಥಿಯೇರಿ ಬಂದರೂ ಅದು ಸಹ ಗೊಂದಲದಲ್ಲಿಯೇ ಇರುತ್ತದೆ. ನಿಗೂಢ ಘಟನೆಗಳಿಗೆ ಸಂಬಂಧಿಸಿದ ರಹಸ್ಯದ ಬಗ್ಗೆ ನಾವಿಂದು ಹೇಳುತ್ತಿದ್ದೇವೆ. ವಿಜ್ಞಾನಿಗಳು ಈ ರಹಸ್ಯವನ್ನು ಬಿಚ್ಚಿಡಲು ಪ್ರಯತ್ನಿಸಿದ್ದರು. ಆದರೆ ಈ ಘಟನೆ ಹಿಂದಿನ ನಿಗೂಢತೆ ಅಸಲಿ ಕಥೆ ಹೊರ ಬಂದಿಲ್ಲ. ಈ ಘಟನೆಗಳು ಯಾವಾಗಲೂ ಜನರಿಗೆ ಕುತೂಹಲದ ವಿಷಯವಾಗಿ ಉಳಿಯುತ್ತವೆ. ಉತ್ತರವಿಲ್ಲದೇ ಅಂತಹವುದೇ ಒಂದು ಘಟನೆ 1911ರಲ್ಲಿ ನಡೆದಿತ್ತು.

1911ರಲ್ಲಿ ಸುರಂಗದೊಳಗೆ ಹೋದ ಪ್ರಯಾಣಿಕರ ರೈಲು ನಿಗೂಢವಾಗಿ ಕಣ್ಮರೆಯಾಗಿತ್ತು. ಕಣ್ಮರೆಯಾದ ಈ ರೈಲಿನಲ್ಲಿ ಬರೋಬ್ಬರಿ 106 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅಂದು ಸುರಂಗದಲ್ಲಿ ಕಣ್ಮರೆಯಾದ 106 ಪ್ರಯಾಣಿಕರನ್ನು ಹೊತ್ತ ರೈಲು ಎಲ್ಲಿ ಹೋಯ್ತು ಎಂಬುವುದು ಇದುವರೆಗೂ ತಿಳಿದು ಬಂದಿಲ್ಲ. ರೈಲು ಕಣ್ಮರೆ ಬಗ್ಗೆ ಹಲವರು ಹಲವು ಕಥೆಗಳನ್ನು ಹೇಳುತ್ತಾರೆ. 

Tap to resize

Latest Videos

undefined

ಇಟಲಿಯ ರಾಜಧಾನಿ ರೋಮ್‌ನಲ್ಲಿ ಈ ಆಶ್ವರ್ಯಕರ ಘಟನೆ ನಡೆದಿದೆ. 1911ರಲ್ಲಿ 106 ಪ್ರಯಾಣಿಕರನ್ನು ಹೊತ್ತ ರೈಲು ರೋಮ್ ನಗರದಿಂದ ತನ್ನ ಪ್ರಯಾಣ ಆರಂಭಿಸಿತ್ತು. ಸುರಂಗ ದಾಟಿದ ಬಳಿಕ ಮತ್ತೊಂದು ನಿಲ್ದಾಣವಿತ್ತು. ಆದ್ರೆ ಸುರಂಗ ಪ್ರವೇಶಿಸಿದ ರೈಲು ಹೊರಗಡೆ ಬರಲೇ ಇಲ್ಲ. ಕಾಣೆಯಾದ ರೈಲಿನ ಬಗ್ಗೆ ತೀವ್ರ ಹುಡುಕಾಟ ನಡೆಸಲಾಯ್ತು. ಎಷ್ಟು ಹುಡುಕಿದರೂ ಈ ರೈಲು ಮಾತ್ರ ಪತ್ತೆಯಾಗಲೇ ಇಲ್ಲ. ನಂತರ ರೈಲು ಕಣ್ಮರೆಯಾಗಿದೆ ಅಂತಾನೇ ಘೋಷಿಸಲಾಯ್ತು.

ರೈಲು ಕಣ್ಮರೆಯಾದ ಸುರಂಗದ ಹೊರಗೆ ಗಾಯಗೊಂಡ ಪ್ರಯಾಣಿಕರು ಸಿಕ್ಕಿದ್ದರು. ಈ ಇಬ್ಬರು ಕಾಣೆಯಾದ ರೈಲಿನಲ್ಲಿಯೇ ಪ್ರಯಾಣಿಸುತ್ತಿದ್ದರು. ಇವರಿಬ್ಬರ ಹೇಳಿಕೆಯ ಪ್ರಕಾರ, ರೈಲು ಸುರಂಗದ ಬಳಿ ಸಮೀಪಿಸುತ್ತಿದ್ದಂತೆ ದಟ್ಟವಾದ ಹೊಗೆ ಕಾಣಿಸಿಕೊಳ್ಳಲು ಆರಂಭಿಸಿತು. ಎಲ್ಲಾ ಪ್ರಯಾಣಿಕರಿಂದ ಭಯಗೊಂಡರು. ನಂತರ ನಾವಿರಬ್ಬರೂ ಚಲಿಸುತ್ತಿದ್ದ ರೈಲಿನಿಂದ ಜಿಗಿದೆವು. ನಂತರ ರೈಲು ಹೊಗೆ ತುಂಬಿದ ಸುರಂಗದೊಳಗೆ ಕಣ್ಮರೆಯಾಯ್ತು ಎಂದು ಹೇಳಿದ್ದಾರೆ. 106 ಜನರ ಪೈಕಿ 104 ಜನರು ರೈಲಿನಲ್ಲಿದ್ದರು.

ಪ್ರಯಾಣದ ವೇಳೆ ದಿಢೀರ್ ಮಾಯವಾಗಿದ್ದ ಭಾರತೀಯ ರೈಲು, ಮೂರು ವರ್ಷದ ನಂತರ ಸ್ಟೇಶನ್‌ಗೆ ಬಂತು!

ಈ ನಿಗೂಢ ರೈಲಿನ ಆಶ್ಚರ್ಯಕರ ಸುದ್ದಿ ಇನ್ನು ಮುಗಿದಿಲ್ಲ. ಕೆಲ ವರದಿಗಳ ಪ್ರಕಾರ, ಕಣ್ಮರೆಯಾದ ರೈಲು 71 ವರ್ಷದ ಹಿಂದೆ ಹೋಗಿತ್ತು. ರೋಮ್ ಸುರಂಗದಲ್ಲಿ ನಾಪತ್ತೆಯಾದ ರೈಲು ಮೆಕ್ಸಿಕೋ ನಗರವನ್ನು ಸೇರಿತ್ತು. ಹಾಗಾಗಿ ಇದನ್ನು ಭೂತದ ರೈಲು ಎಂದು ಕರೆಯಲಾಗುತ್ತದೆ. 1911ರಿಂದ 1840 ಇಸವಿಗೆ ರೈಲು ಹಿಂದಕ್ಕೆ ಚಲಿಸಿತ್ತು.

ಮೆಕ್ಸಿಕೋನ್ ವೈದ್ಯರೊಬ್ಬರು, 104 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಈ ಎಲ್ಲಾ 104 ಜನರು ಹುಚ್ಚರಾಗಿದ್ದರು. ಈ 104 ಜನರು ಇಲ್ಲಿಗೆ ಹೇಗೆ ಬಂದರು, ಇವರೆಲ್ಲಾ ಯಾರು? ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಆದ್ರೆ ಅಂದಿನ ಕಾಲದಲ್ಲಿ ರೋಮ್ ನಗರದಿಂದ ಮೆಕ್ಸಿಕೊಗೆ ಯಾವುದೇ ಸಂಪರ್ಕ ಇರಲಿಲ್ಲ. ಹಾಗಾದ್ರೆ ಸುರಂಗದೊಳಗೆ ಹೋದ ರೈಲು  ಮೆಕ್ಸಿಕೋ ತಲುಪಿದ್ದೇಗೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.

ಸುರಂಗದಲ್ಲಿ ನಿಗೂಢವಾಗಿ ಕಣ್ಮರೆಯಾದ ಭೂತದ ರೈಲು ಇಟಲಿ, ರಷ್ಯಾ, ಜರ್ಮನಿ ಮತ್ತು ರೊಮೇನಿಯಾದ ಹಲವು ಪ್ರದೇಶಗಳಲ್ಲಿ ಕಂಡುಬಂದಿದೆ  ಎಂದು ಹೇಳುವದಂಟು. ಆದ್ರೆ ಇದನ್ನು ಕಾಣೆಯಾದ ರೈಲು ಎಂದು ಯಾರೂ ಖಚಿತಪಡಿಸಿಲ್ಲ.  1911 ರಲ್ಲಿ ಕಣ್ಮರೆಯಾದ ರೈಲನ್ನು ಹೋಲುವ ರೈಲನ್ನು ನೋಡಿದ್ದೇವೆ ಎಂದು ಹಲವರು ಹೇಳಿಕೊಂಡಿದ್ದರು.

ಒಮ್ಮೆ ಕೆಂಪು, ಮತ್ತೊಮ್ಮೆ ನೀಲಿ , ಹಸಿರು - ರೈಲುಗಳ ಬಣ್ಣದ ಹಿಂದಿನ ಅರ್ಥ ಏನು?

click me!