ಹುಟ್ಟುತ್ತಲೇ ದಾಖಲೆ ಬರೆದ ಪುಟ್ಟ ಭೀಮ: 6.5 ಕೇಜಿ ತೂಗಿದ ನವಜಾತ ಶಿಶು

Published : Nov 11, 2023, 01:10 PM IST
ಹುಟ್ಟುತ್ತಲೇ ದಾಖಲೆ ಬರೆದ ಪುಟ್ಟ ಭೀಮ:  6.5 ಕೇಜಿ ತೂಗಿದ ನವಜಾತ ಶಿಶು

ಸಾರಾಂಶ

ಸಾಮಾನ್ಯವಾಗಿ ಆಗ ತಾನೇ ಹುಟ್ಟಿದ ಮಕ್ಕಳು ಎಷ್ಟು ತೂಕ ಹೊಂದಿರುತ್ತಾರೆ? ಹೆಚ್ಚೆಂದರೆ ಮೂರು ಕೇಜಿ ಅದಕ್ಕೂ ಹೆಚ್ಚೆಂದರೆ 4 ಕೇಜಿ. ಆದರೆ ಕೆನಡಾದಲ್ಲಿ ಆಗ ತಾನೆ ಹುಟ್ಟಿದ ಮಗುವೊಂದು 6. 5 ಕೆಜಿ ತೂಗುವ ಮೂಲಕ ದಾಖಲೆ ಬರೆದಿದೆ. 

ಸಾಮಾನ್ಯವಾಗಿ ಆಗ ತಾನೇ ಹುಟ್ಟಿದ ಮಕ್ಕಳು ಎಷ್ಟು ತೂಕ ಹೊಂದಿರುತ್ತಾರೆ? ಹೆಚ್ಚೆಂದರೆ ಮೂರು ಕೇಜಿ ಅದಕ್ಕೂ ಹೆಚ್ಚೆಂದರೆ 4 ಕೇಜಿ. ಆದರೆ ಕೆನಡಾದಲ್ಲಿ ಆಗ ತಾನೆ ಹುಟ್ಟಿದ ಮಗುವೊಂದು 6. 5 ಕೆಜಿ ತೂಗುವ ಮೂಲಕ ದಾಖಲೆ ಬರೆದಿದೆ. 

ಕೆನಡಾದಲ್ಲಿ (canada) ಮಹಿಳೆಯೊಬ್ಬರು 6.5 ಕೆಜಿ ತೂಗುವ ಮಗುವೊಂದಕ್ಕೆ ಸಿಸೇರಿಯನ್ ಮೂಲಕ ಜನ್ಮ ನೀಡಿದ್ದು, 13 ವರ್ಷಗಳಲ್ಲೇ ಇಷ್ಟು ತೂಕದ ಮಗುವೊಂದು ಜನಿಸಿದ್ದು ಇದೇ ಮೊದಲಾಗಿದೆ. ಕೆನಡಾ ದಂಪತಿಗಳಾದ ಬ್ರಿಟ್ನಿ ಐರಿ ಹಾಗೂ ಚಾನ್ಸ್‌ ಐರಿ ತಮ್ಮ 5ನೇ ಮಗುವಿಗೆ ಜನ್ಮ ನೀಡಿದ್ದು, ಮಗುವಿನ ತೂಕದಿಂದಾಗಿ ಈ ಮನೆಗೆ ಬಲಭೀಮ ಆಗಮಿಸಿದಂತಾಗಿದೆ. ಮಗುವಿನ ಆಗಮನದಿಂದ  ಫೋಷಕರು ಫುಲ್ ಖುಷ್ ಆಗಿದ್ದಾರೆ. ಮಗುವಿಗೆ ಸೋನಿ ಐರಿ ಎಂದು ಹೆಸರಿಡಲಾಗಿದೆ. 

ಎರಡಲ್ಲ..ಮೂರಲ್ಲ,ಬ್ರೆಜಿಲ್‌ನಲ್ಲಿ ಬರೋಬ್ಬರಿ 7.3 ಕೆಜಿ ತೂಕದ ದೈತ್ಯ ಮಗು ಜನನ

ಸೋನಿ ಐರಿ ಸಾಮಾನ್ಯ ಮಕ್ಕಳಿಗಿಂತ ಎರಡು ಪಟ್ಟು ಹೆಚ್ಚು ತೂಗುತ್ತಿದ್ದು, ಲಡ್ಡುವಿನಂತಿದ್ದ ಮಗುವನ್ನು ನೋಡಿ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಕೂಡ ಸಂತೋಷ ವ್ಯಕ್ತಪಡಿಸಿದ್ದರೆ. ಪೌಂಡ್‌ಗಳ ಲೆಕ್ಕದಲ್ಲಿ  ಹೇಳುವುದಾದರೆ ಈ ಮಗು 14 ಪೌಂಡ್ 8 ಔನ್ಸ್‌ (ಅಂದಾಜು 6 ಕೆಜಿ 500 ಗ್ರಾಂ) ತೂಗುತ್ತಿತ್ತು.  ಅಕ್ಟೋಬರ್ 23 ರಂದು ಕೇಂಬ್ರಿಡ್ಜ್‌ನ ಮೆಮೋರಿಯಲ್ ಆಸ್ಪತ್ರೆಯಲ್ಲಿ  ಸೋನಿ ಐರಿ (Sonny Ayres) ಹುಟ್ಟಿದ್ದಾನೆ.  ಅಮ್ಮ ಬ್ರಿಟ್ನಿಗೆ ಸಿಸೇರಿಯನ್  ಆಗುವ ಮೂಲಕ ಈ ಬಲಭೀಮ ಸೋನಿ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾನೆ. 

ಮಗು ಆಗಮಿಸುತ್ತಿದ್ದಂತೆ ಪೋಷಕರು ಸಂಬಂಧಿಗಳು ಮಾತ್ರವಲ್ಲದೇ ವೈದ್ಯಕೀಯ ತಂಡದವರು ಕೂಡ ನವಜಾತ ಶಿಶುವನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ವೈದ್ಯರು ಸೋನಿ
ಅಕ್ಟೋಬರ್ 31 ರಂದು ಜನಿಸಬಹುದು ಎಂದು ತಾಯಿ ಬ್ರಿಟ್ನಿಗೆ (Britteney) ಹೆರಿಗೆ ದಿನಾಂಕ ನೀಡಿದ್ದರು. ಆದರೆ ನಿಗದಿಕ್ಕಿಂತ ವಾರ ಮೊದಲೇ ಈ ಭಾರಿ ಗಾತ್ರದ ಮಗು ಹುಟ್ಟಿದೆ. ಮಗುವನ್ನು ತೂಕದ ಸ್ಕೇಲ್ ಮೇಲೆ ಇಡುತ್ತಲೇ ಅದನ್ನು ನೋಡಿ ಎಲ್ಲರೂ ಅಚ್ಚರಿಗೊಂಡರು ಎಂದು ಮಗುವಿನ ತಂದೆ ಫಾಕ್ಸ್ ನ್ಯೂಸ್‌ಗೆ ಹೇಳಿದ್ದಾರೆ. 

ಬೆಂಗಳೂರಲ್ಲಿ 5.9 ಕೆಜಿ ತೂಕದ ಮಗು ಜನನ!

ಮಗು ಜನಿಸಿದ ಕೇಂಬ್ರಿಡ್ಜ್ ಆಸ್ಪತ್ರೆಯ ಪಾಲಿಗೂ ಇದೊಂದು ದಾಖಲೆ ಎನಿಸಿದೆ.  ಇದಕ್ಕೂ ಮೊದಲು ಈ ದಂಪತಿಗೆ ಮೂರು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು ಈ ದಂಪತಿಗೆ ಜನಿಸಿವೆ. ಚಾನ್ಸ್ ಜೂನಿಯರ್‌, ಇವರಿಟಿ, ಲಕ್ಕಿ, ಹಾಗೂ ಇವರೆಲ್ಲರಿಗಿಂತ ದೊಡ್ಡವಳಾದ ಸೋದರಿ ಮಾರಿಗೋಲ್ಡ್, ಇವರಲ್ಲಿ ಮಾರಿಗೋಲ್ಡ್ ಹುಟ್ಟುತ್ತಲೇ 13 ಪೌಂಡ್ 14 ಔನ್ಸ್‌  ತೂಗುತ್ತಿದ್ದಳು. ಇದಾದ ನಂತರ ಲಕ್ಕಿ13 ಪೌಂಡ್ 11 ಔನ್ಸ್ ತೂಗುತ್ತಿದ್ದ. ಹೀಗಾಗಿ ಇವರ ಕುಟುಂಬದಲ್ಲಿ ಭಾರಿ ಗಾತ್ರ ಮಕ್ಕಳು ಜನಿಸಿದ ಪ್ರಕರಣ ಹೊಸದೇನು ಅಲ್ಲ. ಆದರೆ ಈ ಸೋನಿ ಇವರೆಲ್ಲರ ತೂಕದ ದಾಖಲೆ ಮುರಿದಿದ್ದು, 14 ಪೌಂಡ್ ತೂಗುತ್ತಿದ್ದಾನೆ.

ಹೂವಿನ ವ್ಯಾಪಾರಿ ಪತ್ನಿಗೆ 5 ಕೆಜಿ ತೂಕದ ಮಗು ಜನನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ