
ಕ್ಯಾಲಿಫೋರ್ನಿಯಾ: ನೀವು ಜಿಮೇಲ್ ಖಾತೆ ಹೊಂದಿದ್ದೀರಾ? ಅದನ್ನು ಕಳೆದ ಎರಡು ವರ್ಷಗಳಲ್ಲಿ ಒಮ್ಮೆಯೂ ಬಳಸಿಲ್ವಾ ಹಾಗಿದ್ದರೆ ಮುಂದಿನ ತಿಂಗಳು ಅದು ಡಿಲೀಟ್ ಆಗಬಹುದು. ಗೂಗಲ್ ಕಂಪನಿಯು ತನ್ನ ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳಿನಲ್ಲಿ ಅಪ್‌ಡೇಟ್ ಮಾಡಿದೆ. ಆಗಲೇ ಅದರ ಉಪಾಧ್ಯಕ್ಷೆ ರೂತ್ ಕ್ರಿಚೇಲಿ, ‘ಮುಂಬರುವ ಡಿಸೆಂಬರ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಒಮ್ಮೆಯೂ ಲಾಗಿನ್ ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡಲು ಆರಂಭಿಸುತ್ತೇವೆ. ಇನ್ನುಮುಂದೆ ಕನಿಷ್ಠ ಎರಡು ವರ್ಷಗಳಿಂದ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ’ ಎಂದು ಹೇಳಿದ್ದರು. ಅದು ಸದ್ಯದಲ್ಲೇ ಜಾರಿಗೆ ಬರಲಿದೆ.
ಈ ನಿಯಮದ ಪ್ರಕಾರ ವೈಯಕ್ತಿಕ ಗೂಗಲ್ ಖಾತೆಗಳು (ಜಿಮೇಲ್, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್, ಗೂಗಲ್ ಫೋಟೋಸ್ ಇತ್ಯಾದಿ) ಮಾತ್ರ ಡಿಲೀಟ್ ಆಗಲಿವೆ. ಸಾಂಸ್ಥಿಕ, ಅಂದರೆ ಕಂಪನಿಗಳು ಅಥವಾ ಶಾಲೆ ಇತ್ಯಾದಿ ಸಂಸ್ಥೆಗಳು ಹೊಂದಿರುವ ಗೂಗಲ್ ಖಾತೆಗಳು ಡಿಲೀಟ್ ಆಗುವುದಿಲ್ಲ. ಮರೆತ ಅಥವಾ ಬಳಸದ ಇ-ಮೇಲ್ ಅಕೌಂಟ್‌ಗಳು ಗೂಗಲ್‌ಗೆ ಅಥವಾ ಖಾತೆದಾರರಿಗೆ ಅಪಾಯ ತಂದೊಡ್ಡಬಹುದು ಎಂಬ ಕಾರಣಕ್ಕೆ ಖಾತೆಗಳನ್ನು ರದ್ದುಪಡಿಸಲು ಗೂಗಲ್ ಮುಂದಾಗಿದೆ. ‘ನಿಮ್ಮ ಗೂಗಲ್ ಅಕೌಂಟ್ ಡಿಸೆಂಬರ್‌ನಲ್ಲಿ ಡಿಲೀಟ್ ಆಗಬಾರದು ಅಂದರೆ ನೀವು ಕಳೆದ ಎರಡು ವರ್ಷಗಳಿಂದ ಖಾತೆ ಬಳಸದಿದ್ದರೆ ಈಗಲೇ ಒಮ್ಮೆ ಲಾಗಿನ್ ಮಾಡಿ’ ಎಂದು ಗೂಗಲ್ ತಿಳಿಸಿದೆ.
ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಲಕ್ಷಾಧಿಪತಿಯಾದ ಪಾಕಿಸ್ತಾನದ ಮೀನುಗಾರ
ನಿರ್ಗತಿಕನ ಬದುಕು ಬದಲಿಸಿದ ಕುದುರೆ ರೇಸ್: 5 ಡಾಲರ್ ಬೆಟ್ ಕಟ್ಟಿದವನಿಗೆ ಒಲಿಯಿತು 1 ಲಕ್ಷ ಡಾಲರ್
ವಿಮಾನದಲ್ಲಿ ವ್ಯಕ್ತಿಗೆ ಲೈಂಗಿಕ ಕಿರುಕುಳ: ಹಾಡು ಹಾಡಿ ಹಿಂಭಾಗ ಮುಟ್ಟಿ ಮಹಿಳೆಯಿಂದ ಕುಚೇಷ್ಟೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ